ಮೂಕಧಾತು
To get the book click here: ಮೂಕಧಾತು
ವೈರಸ್ ಬಗೆಗಿನ ಚರ್ಚೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಇಂಥಾದ್ದೊಂದು ದುರಂತ ಸಂಭವಿಸಲಿದೆ ಎಂದು ಕೆಲವು ಕತೆಗಾರರು ಮೊದಲೇ ಊಹಿಸಿದ್ದರು!
ಹೌದು, ಡಾ. ಕೆ. ಎನ್. ಗಣೇಶಯ್ಯ ಅವರು ಬರೆದಿರುವ ಮೂಕಧಾತು ಕಾದಂಬರಿಯಲ್ಲಿ ಇಂತಹುದೇ ಒಂದು ವೈರಸ್ ನ ಕತೆ.
ಸೈಕೊಟಿಕ್ ಎನ್ನುವ ಒಂದು ಚೀನಾ ಮೂಲದ ಕಂಪೆನಿಯು ಮಾನವನ ಸ್ವಾರ್ಥ ಧಾತುಗಳಿಂದ ಮಾನವನ ಭವಿಷ್ಯತ್ತನ್ನೇ ಬದಲಾಯಿಸುವ ಬೃಹತ್ ಕಾರ್ಯಕ್ಕೆ ಕೈ ಹಾಕಿರುತ್ತದೆ.
ವೈರಸ್ ಗಳನ್ನು ಉಪಯೋಗಿಸಿ ಸಂಪೂರ್ಣ ಮಾನವ ಕುಲದ ಆಸೆಯ ಮತ್ತು ಸ್ವಾರ್ಥದ ವಂಶಧಾತುಗಳನ್ನೇ ನಿಷ್ಕ್ರಿಯಗೊಳಿಸುವ ಯೋಜನೆಯನ್ನು ಅವರು ಹೆಣೆದಿರುತ್ತಾರೆ.
ಆ ಯೋಜನೆ ಅಷ್ಟು ಸುಲಭವಲ್ಲ. ಅದಕ್ಕಾಗಿ ಅವರು ಭಾರತ, ಜರ್ಮನಿ ದೇಶಗಳ ವಿಜ್ಞಾನಿಗಳನ್ನು ಕಿಡ್ನಾಪ್ ಮಾಡಿ ಅವರ ಕೆಲಸಕ್ಕೆ ಉಪಯೋಗಿಸುತ್ತಾರೆ.
ಇಡೀ ಪ್ರಪಂಚಕ್ಕೆ ಆ ವೈರಸ್ ಅನ್ನು ಹರಡಿ, ತಮಗೆ ಮಾತ್ರ ವೈರಸ್ ಗೆ ನಿರೋಧಕ ಅಂದರೆ resistant ಚುಚ್ಚಿಕೊಂಡು ನಂತರ ಇಡೀ ಜಗತ್ತನ್ನು ಆಳುವ ಉದ್ದೇಶ ಹೊಂದಿರುತ್ತಾರೆ.
ಅಲ್ಲಿ ಇರುವ ಭಾರತೀಯ ವಿಜ್ಞಾನಿಗಳಿಗೆ ಅದು ತಿಳಿದು ಅವರ ಯೋಜನೆಯನ್ನು ನಿಷ್ಕ್ರಿಯಗೊಳಿಸುತ್ತಾರೆ. ಇದು ಕಥೆ.
Download the PDF here: ಮೂಕಧಾತು
ಪೂರ್ತಿ ಪುಸ್ತಕ ಓದಿದರೆ ಸಾಕು, ಕಲಾ ವಿಭಾಗದ ವಿದ್ಯಾರ್ಥಿ ಆದರೂ ಕೂಡಾ ಧಾತುಗಳು, ಮಾನವನ ವಿಕಾಸ, ಇವೆಲ್ಲಾ ವಿಷಯಗಳು ಸುಲಭವಾಗಿ ಅರ್ಥವಾಗುತ್ತದೆ.
ಕಥೆಯ ಜೊತೆಗೆ ಅನೇಕ ಹೊಸ ವಿಷಯಗಳನ್ನು ತಿಳಿಸುವ ಈ ಪುಸ್ತಕ ಒಂದು ಒಳ್ಳೆಯ ಓದಿಗೆ ಸಹಕಾರಿ.
ಓದಿದವರೆಲ್ಲಾ ಮೆಲುಕು ಹಾಕಿಕೊಳ್ಳಿ. ಓದದೆ ಇದ್ದವರು ಸಾಧ್ಯ ಆದರೆ ಓದಿ. ಓದಿದ ನಂತರ ಒಂದು ಒಳ್ಳೆಯ ಪುಸ್ತಕ ಓದಿದ ಅನುಭವ ನೀಡುತ್ತದೆ.
Click the image to get the book
Download the PDF here: ಮೂಕಧಾತು
To get the Print book click here: ಮೂಕಧಾತು
DO BUY THE BOOK FROM AMAZON AND HELP TO GROW THE KANNADA MARKET.
PS: This book is available freely on the internet. Please let me know if you want to take this book down. I will do it immediately. I haven't uploaded any books. I have just shared the link.