‘ದಿ ಲಾಸ್ಟ್ ಲೆಕ್ಚರ್’ ಕೇವಲ ವ್ಯಕ್ತಿಯೊಬ್ಬನ ಕಥೆಯಲ್ಲ. ಬದುಕಿನ ದಿನಚರಿಯಲ್ಲಿ ಕೊನೆಯ
ಪುಟವನ್ನು ಬರೆಯುತ್ತಿರುವ ವಿಜ್ಞಾನಿಯೊಬ್ಬನ ಭಾವನಾತ್ಮಕ ಅನುಭವಗಳ ಸಂಪುಟ. ಯಾವುದಾದರೊಂದು
ರಂಗದಲ್ಲಿ ದೊಡ್ಡ ಹೆಸರು ಮಾಡಿದ ವ್ಯಕ್ತಿಯೊಬ್ಬ ಸಾವಿನ ಮನೆಯ ಕದ ತಟ್ಟುತ್ತಿದ್ದಾನೆ ಎಂದು
ಗೊತ್ತಾದರೆ, ಆತ ಸಾಯುವ ಮೊದಲು ಸಮಾನಮನಸ್ಕರ ಮುಂದೆ ನಿಂತು ಮಾತನಾಡುವ ಅಥವಾ ಅವರೊಂದಿಗೆ
ಬದುಕುವ ಅವಕಾಶವನ್ನು ಅಮೆರಿಕದಲ್ಲಿ ಮಾಡಿಕೊಡಲಾಗುತ್ತದೆ. ರ‍್ಯಾಂಡಿ ಪಾಶ್ ನೀಡಿದ
ಉಪನ್ಯಾಸದ ಭಾವಾನುವಾದವೇ ಈ ಪುಸ್ತಕ.
"ಸಾಯುವುದು ಗ್ಯಾರಂಟಿ ಎನಿಸಿದ ಮೇಲೆ ತಾನು ಇಲ್ಲದ ಜಗತ್ತಿನಲ್ಲಿ ಬದುಕುವುದು ಹೇಗೆಂದು
ಹೆಂಡತಿಗೆ ಹೇಳಿಕೊಟ್ಟ. ಯಾರಿಗೆ ಯಾರು ಅನಿವಾರ್ಯವಲ್ಲವೆಂದು ಮನವರಿಕೆ ಮಾಡಿಕೊಟ್ಟ' ಇಂಬ
ಸಾಲುಗಳನ್ನು ಓದುತ್ತಲೇ ನನ್ನ ಗತ ದಿನಗಳು ನೆನಪಾಗುತ್ತಲೇ ಸಾಗಿದವು.
ಕಳೆದ ನಾಲ್ಕು ವರ್ಷಗಳಲ್ಲಿ ಹಲವು ಬಾರಿ ಓದಿಸಿಕೊಂಡಿರುವ 'ದಿ ಲಾಸ್ಟ್ ಲೆಕ್ಚರ್' ಕನಸಿನ, ಬದುಕಿನ, ನನಸಿನ ಹೊಸ ಆಯಾಮವನ್ನೇ ತೆರೆಯುತ್ತಾ ಸಾಗಿದೆ.
ಕಂಪ್ಯೂಟರ್ ವಿಜ್ಞಾನದ ಪ್ರಾದ್ಯಾಪಕ Ryandy ಪಾಶ್ ಅಮೆರಿಕಾದ ಕಾರ್ನಿಗಿ ಮೆಲನ್ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವಾಗಲೇ, ತಮ್ಮ 41ನೇ ವಯಸ್ಸಿನಲ್ಲಿ ವಾಸಿಯಾಗದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಗೆ ಗುರಿಯಾಗಿ, ಸಾವಿನ ಮನೆಯ ಬಾಗಿಲು ತಟ್ಟುತ್ತಿದ್ದ Ryandy ತನ್ನ ಬದುಕನ್ನು, ಕನಸನ್ನು ನೋಡಿದ ಪರಿ ಅನನ್ಯ.
"ಇದು ನಾನು ಪ್ರೀತಿಸಿದ ಜನರು ಜೀವಂತವಾಗಿ ನನ್ನನ್ನು ನೋಡುವ ಮತ್ತು ಮುಂದಿನ ಪೀಳಿಗೆಯವರು ಹೇಗೆ ನನ್ನನ್ನು ನೆನಪಿಸಿಕೊಳ್ಳಬೇಕು ಎಂಬುದಕ್ಕೆ ಸ್ಪಷ್ಟ ರೂಪ ಕೊಡುವ ಸದವಕಾಶ ಈ "ದಿ ಲಾಸ್ಟ್ ಲೆಕ್ಚರ್' ಎಂದು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ತನ್ನ ಅಂತ್ಯವಾಗಲಿದೆ ಎನ್ನುವುದನ್ನು ನಿಖರವಾಗಿ ಅರಿತಿದ್ದ ವಿಜ್ಞಾನಿ Ryandy ಬದುಕನ್ನು ಬದುಕುವ ರೀತಿಯನ್ನು ವಿವರಿಸಿದ ರೀತಿ ನಿಜಕ್ಕೂ ಅಮೋಘ.
"ದಿ ಲಾಸ್ಟ್ ಲೆಕ್ಚರ್' Randy ಯ ಜೀವಮಾನದ ಸಾಧನೆಯೆಲ್ಲವೂ ಬಾಲ್ಯದ ಕನಸು ಮತ್ತು ಗುರಿಯಾಗಿತ್ತು, ಈ ಎಲ್ಲಾ ಕನಸಿಂದು ನನಸಾಗಿದೆ ಎಂದು ಹೇಳುತ್ತಾ ಸಾಗುವ ಕೃತಿ ಸಾಧಕನೊಬ್ಬನ ಜೀವನದ ಹಲವು ಮಜಲುಗಳನ್ನು ತೆರೆದಿಡುತ್ತಾ ಸಾಗುತ್ತದೆ. ಅಂತೆಯೇ ಕೃತಿಯಲ್ಲಿನ ಹಲವು ಪ್ರಸಂಗಗಳು ಮನಮಿಡಿಯುವಂತಿವೆ.
Ryandy ಹೊಟೆಲೊಂದರಲ್ಲಿ ತಂಗಿದ್ದಾಗ ಗರ್ಭಿಣಿ ಪರಿಚಾರಿಕೆಯೊಬ್ಬಳು ರ್ಯಾಂಡಿ ಮಕ್ಕಳ ಫೋಟೋ ನೋಡಿ, ಮಕ್ಕಳೆಷ್ಟು ಮುದ್ದಾಗಿವೆ ಎಂದಾಗ, "ಆಕಸ್ಮಿಕವಾಗಿ' ವಾಗಿ ಜನ್ಮ ಪಡೆಯುವ ಮಕ್ಕಳಿಗೆ ಪ್ರೀತಿ ತೋರಲು ಇಲ್ಲೊಬ್ಬಳು ತಯಾರಾಗಿದ್ದಾಳೆ, ಆದರೆ ನನಗೆ ಬಂದ ಕ್ಯಾನ್ಸರ್ ನಿಂದಾಗಿ ನನ್ನ ಮಕ್ಕಳು ಪ್ರೀತಿ ವಂಚಿತರಾಗಿ ಬೆಳೆಯ ಬೇಕಿದೆ, ಇದಲ್ಲವೇ ವಿಪರ್ಯಾಸ ಎಂಬ ಚಿಂತನೆ Ryandy ಮನಸ್ಸಿನಲ್ಲಿ ಮೂಡಿದ್ದು ಓದುಗರಲ್ಲಿ ಕಣ್ಣೀರುಕ್ಕಿಸಬಲ್ಲದು.
ಜೀವನದಲ್ಲಿನ ಕಷ್ಟ-ಸುಖಗಳನ್ನು ವಿಶ್ಲೇಷಿಸುತ್ತಾ "ಇಸ್ಪೀಟ್ ಆಟದಲ್ಲಿ ಯಾವ ಕಾರ್ಡ್ ನಮ್ಮ ಕೈ ಸೇರುತ್ತದೆ ಎನ್ನುವುದಕ್ಕಿಂತ ಬಂದ card ಗಳಲ್ಲಿ ನಾವು ಹೇಗೆ ಆಡುತ್ತೇವೆ ಎನ್ನುವುದಷ್ಟೇ ಮುಖ್ಯ' ಎನ್ನುವ Ryandy ಯ ತತ್ವ ನಿಜಕ್ಕೂ ಮನಸೆಳೆಯುತ್ತದೆ.
ಪತ್ನಿ "ಜೈ'ಳ ಧೈರ್ಯ, ಶ್ರಮ, ಸಹಕಾರ, ಸಹಾಯ ಎಲ್ಲವನ್ನೂ ಕಣ್ಮೂಂದೆ ತಂದುಕೊಂಡ Ryandy ತನ್ನ ಪತ್ನಿ ದಿಟ್ಟತನವನ್ನು ಕೊಂಡಾಡುತ್ತಾ "ಜೈ'ಳನ್ನು ಸದೃಢ ಗೋಡೆ (ದಿ ವಾಲ್) ಎಂಬ ರೂಪಕಕ್ಕೆ ಹೋಲಿಸಿರುವುದು ಆಕೆಗೆ ನೀಡಿದ ಪ್ರಶಸ್ತಿಯಂತಿದೆ.
Ryandy ಜೀವನದಲ್ಲಿನ ಸಾಧನೆಯ ಬಗ್ಗೆ ಹೇಳುತ್ತಾ, "ಸದಾ ಸಮಸ್ಯೆಗಳನ್ನೇ ಬಣ್ಣಿಸುತ್ತಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾರಿರಿ. ಅದು ಎಂದಿಗೂ ಕಾರ್ಯ ನಿರ್ವಹಿಸುವ ವೈಖರಿಯಾಗಲಾರದು. ನಮ್ಮೆಲ್ಲರಿಗೂ ಇರುವುದು ಅತ್ಯಂತ ಕಡಿಮೆ ಅವಧಿ ಮತ್ತು ಪರಿಮಿತ ಶಕ್ತಿ. ಸಮಸ್ಯೆಯನ್ನು ದೂಷಿಸಲು ಬಳಸುವ ಯಾವ ಸಮಯವೂ ಗುರಿಯನ್ನು ಮುಟ್ಟಲು ಸಹಾಯ ಮಾಡುವುದಿಲ್ಲ. ಅದು ಎಂದಿಗೂ ಆನಂದದಿಂದಿರಲು ಬೆಡದು ಎನ್ನುವ ಮೂಲಕ ಸಾಧನೆ, ಸಾಧಿಸುವ ಮಾರ್ಗದ ಕುರಿತಂತೆ ಮಾರ್ಮಿಕವಾಗಿ ಹೇಳಿರುವ.
ಅಂತೆಯೇ ಇನ್ನೊಂದೆಡೆ Ryandy, ನಾನು ನೋಡಿದಂತೆ ನಮ್ಮಲ್ಲಿ ಅನೇಕರು ಪ್ರತಿದಿನ ತಮ್ಮ ಬಗ್ಗೆ ಯೋಚಿಸುವುದನ್ನು ಬಿಟ್ಟು ಮತ್ತೂಬ್ಬರು ನಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂಬುದರ ಬಗ್ಗೆ ಚಿಂತೆಗೀಡಾ ಗುತ್ತಾರೆ. ಹೀಗೆ ಚಿಂತಿಸುವುದನ್ನು ಬಿಟ್ಟು ನಿಜಕ್ಕೂ ಜೀವನದ ಅಮೂಲ್ಯ ಸಮಯ ಮತ್ತು ಶಕ್ತಿಯನ್ನು ಉತ್ತಮ ಕೆಲಸ ಮಾಡಲು ವಿನಿಯೋಗಿಸಿದ್ದೇ ಆದರೆ ನೀವು ಇತರರಿಗಿಂತ ಶೇ.33ರಷ್ಟು ಹೆಚ್ಚು ಸಮರ್ಥರಾಗಬಲ್ಲಿರಿ ಎಂದು ಸಾಧನೆಯ ಹಾದಿ ಪರಿಚಯಿಸುತ್ತಾ ಸಾಗುತ್ತಾರೆ ರ್ ಯಾಂಡಿ.
ಜೀವನದ ಕಷ್ಟ-ಕಾರ್ಪಣ್ಯಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬದರ ಕುರಿತಂತೆ Ryandy, ಜೀವನದಲ್ಲಿ ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಅಗತ್ಯವಾಗಿ ಪೂರ್ವ ಸಿದ್ಧತೆ ಮಾಡಿಕೊಂಡಾಗ ಮಾತ್ರ ಆಶಾವಾದಿಯಾಗಿ ಬಾಳಲು ಸಾಧ್ಯವೆಂದು ಹೇಳುವ ಮೂಲಕ ಬದುಕಿಗೊಂದು ಹೊಸ ಅರ್ಥ ಕಲ್ಪಿಸಿರುವರು.
"ದಿ ಲಾಸ್ಟ್ ಲೆಕ್ಚರ್' ಅನ್ನು ಕನ್ನಡೀಕರಿಸಿದ ಮೈಸೂರಿನ ಎಸ್. ಉಮೇಶ್ ರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.