26 Oct 2014

ಬರೆದೆನು ನಾನು ಕವಿತೆಯನು..!

ನಿನನ್ನು ಕಂಡು,
ನಿನನ್ನು ನೆನೆದು,
ನಾನಾದೆ ಅಂದು ಕವಿಯು!

ನಿನನ್ನು ಪ್ರೀತಿಸಿ,
ನಿನನ್ನು ಭ್ರಮಿಸಿ,
ಬರೆದೆ ನಾನು ಕವಿತೆಯನು!

ನಿನನ್ನು ನೆನೆದು,
ನಿನಗಾಗಿ ಬರೆದು,
ಕೊಡುವೆನು ನನ್ನ ಕವಿತೆಯನು!

ನಿನನ್ನು ನೋಡಿ,
ನಿನನ್ನು ಕೂಡಿ,
ಬರೆಯುವೆನು ನಾನು ಪ್ರೇಮ ಗೀತೆಯನು!

ನಿನನ್ನು ಕಾಡಿ,
ನಿನನ್ನು ಬೇಡಿ,
ಆಗುವೆನು ನಾನು ಪ್ರೇಮಿಯು!!
                                                    -ಮಂಜುನಾಥ್

ಅವಳ ನೆನಪಲ್ಲಿ - 9

ನನ್ನ ಕವಿತೆಗಳಿಗೆ ಸ್ಪೂರ್ತಿಯು ನೀ..
ನನ್ನ ಮನಸ್ಸಿಗೆ ರಾಣಿಯೂ ನೀ..
ನಿನಗಾಗಿ ಬರೆಯಲೇ ನಾಲ್ಕು ಸಾಲು
ನನ್ನದೆಯಲಿ ಮುಡಿನಿಂತ ಪ್ರತಿ ಸಾವಲು!!

ನೀನು ನನಗೆ ಮರೆಯಾಲಗದ ಹೂವು
ಬಣ್ಣಿಸಲಾಗದ ನೋವು
ಕಾಣಿಸಿದ್ದು ವರ್ಷದ ಹಿಂದೆ
ಮುಗ್ನಗೆ ಸುಸುತ್ತಾ ನನ್ನ ಮುಂದೆ!!

ಕವಿತೆಯೊಳಗು ನಿನ್ನ ಛಾಯೆ
ನಿನ್ನ ಪ್ರೀತಿ ಬರೀಮಾಯೆ..
ಬರೆಯಲಾಗುತ್ತಿಲ್ಲ ಕವಿತೆಯ ಸಾಲು
ಬಣ್ಣಿಸಲಾಗಿಲ್ಲ ನನ್ನ ಸಾವಲು!!

ಪ್ರೀತಿಯಿಲ್ಲದ ಕರಿದರೆ ಹೇಗಾದರು ಬಂದೀತೆ ಕವಿತೆ
ಪ್ರೀತಿಯಿಲ್ಲದೆ ಬರಿದರೆ ಅದು ಅದೀತೆ ಕವಿತೆ
ಬರೀ ಭಾವನೆಗಳನ್ನು ಎದೆಯೊಳಗೆ ಬಚ್ಚಿಟ್ಟು ಕಾಯುತ್ತಿದ್ದೆನೆ ಹುಡುಗಿ.....
                                                                              ನಿನಗಾಗಿ...ನಿನ್ನ ಪ್ರೀತಿಗಾಗಿ..!

25 Oct 2014

ಮನಸ್ಸು ಗಾಂಧಿಬಜಾರು - Manassu Gandhibazaru !!

ಮನಸ್ಸು ಗಾಂಧಿಬಜಾರು
ಅಲ್ಲಿ ಯೋಚನೆಗಳು ನೂರು , ಬ್ರೇಕಿರದ ಕಾರು
.

ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ
ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ !!
ಗಾಂಧಿಬಜಾರ್‌ನ ಸಂಜೆ ಚುಮು ಚುಮು ಚಳಿ,
ಬಿಸಿ ಬಿಸಿ ಕಾಫಿ , ಗಿಜಿ ಗಿಜಿ ಟ್ರಾಫಿಕ್ಕು , ಲೈಬ್ರರಿಯ ಕಳ್ಳ ನೋಟ .

ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ
ಅದು ಕಾಲೇಜು ಹುಡುಗಿಯ ಇಣುಕು ನೋಟ ,
ವಿದ್ಯಾರ್ಥಿ ಭವನ್‌ನ ದೋಸೆ , ರೋಟಿ ಘರ್‌ನ
ಇಡ್ಲಿ , ಕೋಟ್ರೆಶ್ವರನ ಬೆಣ್ಣೆ ಮಸಾಲೆ ; ಪ್ರೇಮಿಗಳ
ಊಸಿ ಊಸಿ ನಗೆ!!

ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ
ಅದು ಡಿವಿಜಿ ರಸ್ತೆಯ ಬಿಸ್‌ನೆಸ್ಸು , ಬಿಬಿಸಿಯ ಬ್ಯೂಝಿನೆಸ್ಸು !!
ಗಾಂಧಿಬಜಾರು ನ್ಯಾ‍‍ಷನಲ್ ಕಾಲೇಜು ಹುಡುಗಿಯರನ್ನು
ಕದ್ದು ನೋಡಿದ್ದು , ಬ್ಯೂಗಲ್ ರಾಕ್ ಮೇಲೆ ನಿಂತು ಕೂಗಿದ್ದು !!

ಮನಸ್ಸು ಗಾಂಧಿಬಜಾರು
ಅಲ್ಲಿ ಯೋಚನೆಗಳು ನೂರು , ಬ್ರೇಕಿರದ ಕಾರು  ಮತ್ತು ಅವಳ ನೆನಪು.. !!

24 Oct 2014

ಅವಳ ನೆನಪಿನಲ್ಲಿ - 8

ಅವಳ ನೆನಪಿನಲ್ಲಿ ಬರೆಯಲು ಕೂತೆ ,
ಈ ವಾರದ ಕವಿತೆಗಳ ಕಂತನ್ನ;
ಅವಳ ನೆನಪಿಗೆ ಅಕ್ಷರ ರೂಪ
ಕೊಡುವುದು ಕಷ್ಟವೆನಿಸಲಿಲ್ಲ ;
ಆದರೆ ಅವಳ ನೆನಪೇ ಇಂದು ಭಾರವಾಗಿತ್ತು .

ದೀಪಾವಳಿಯ ಹಣತೆ ಉರಿಯುತ್ತಿತ್ತು ;
ನೆನಪು ಕೆರಳುತ್ತಿತ್ತು ;
ಈ ಜುಮು ಜುಮುಚಳಿಯಲ್ಲಿ
ಅವಳಿದಿದ್ದರೆ ಹೇಗೆ ?! ವಿರಹದಲ್ಲೆ ಮಿಂದೆದ್ದೆ !!

ಅವಳ ನೆನಪಿನಲ್ಲೆ ದಣಿಯುತ್ತಾ
ಬರದೇ ಬಿಟ್ಟೆ ಈ ವಾರದ
ಕವಿತೆ ; ಓದಲು ಅವಳಿಲ್ಲ
ಬರೆದದ್ದನೆಲ್ಲ , ನಾನೇ ಗುನುಗಬೇಕಷ್ಟೆ .
ನಿನ್ನ ಜೊತೆ ಕಳೆದ ದೀಪಾವಳಿಯ ನೆನಪಿನಲ್ಲೆ ಕಾಯುತ್ತಿದ್ದೆನೆ ಹುಡುಗಿ.....
                                                                       ನಿನಗಾಗಿ....ನಿನ್ನ ಪ್ರೀತಿಗಾಗಿ
                                                                                                                          -ಮಂಜುನಾಥ್

                                           **   **  **

ಹಣತೆ ಹಚ್ಚುತ್ತೇನೆ ನಾನೂ,
ಕತ್ತಲೆಯನ್ನು ದಾಟುತ್ತೇನೆ ಎಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು ನಿನ್ನ ಮುಖ ನಾನು , ನನ್ನ ಮುಖ ನೀನು
ನೋಡಬಹುದೆಂಬ ಓಂದೇ ಓಂದು ಆಸೆಯಿಂದ ,
ಹಣತೆ ಆರಿದ ಮೇಲೆ , ನೀನು ಯಾರೋ , ಮತ್ತೆ ನಾನು ಯಾರೋ .!

                                                                                               

21 Oct 2014

ಅವಳ ನೆನಪಲ್ಲಿ - 7

ಹೇಳದೇ ಉಳಿದ ಮಾತುಗಳು 
ಬರೆಯದೇ ಉಳಿದ ಪದಗಳು 
ಜೋಡಿಸಿ ಬರೆಯಲೇ ನಾಕು ಸಾಲು 
ವರ್ಣಿಸಿ ಗೆಜ್ಜೆ ಧರಿಸಿದ ನಿನ್ನ ಕಾಲು 

ಬರೆದು ಬಿಟ್ಟ ಕವಿತೆ ಇದು..
ಹೇಗೆ ನಿಡಲಿ ನಿನಗೆ!!
ಎಲ್ಲಿ ಮರೆಯಾಗಿದ್ದಿ ಹುಡುಗಿ ನನ್ನ ಬಿಟ್ಟು..
ನನ್ನೀ ಕವಿತೆಗಳ ಬಿಟ್ಟು!!

ಕಾಡೋ ಚಳಿಗೂ ಅರೆಪಾವು
ಹೆಚ್ಚು ಕಾಡುವ ನಿನ್ನ ನೆನಪುಗಳಿಗೆ
ರೂಪ ನೀಡಿ ಬರೆಯುತ್ತಿದ್ದೆನೆ ಈ ಕವಿತೆಗಳನ್ನು...
ನಿನ್ನ ನೆನಪಿನ ಕವಿತೆಗಳನ್ನು ಕೈಲಿಡಿದು ಕಾಯುತ್ತಿದ್ದೆನೆ ಹುಡುಗಿ....
                                              ನಿನಗಾಗಿ...... ನಿನ್ನ ಪ್ರೀತಿಗಾಗಿ!!
                  -ಮಂಜುನಾ

18 Oct 2014

ಹುಣ್ಣಿಮೆಯ ನಿಶಬ್ಧ ಭಾಗ - ೫

          ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ನಡೆಯುತ್ತಿದ್ದ ಸರಣಿ ಕೊಲೆಗಳ ರಹಸ್ಯ ಭೇದಿಸಲು ಸ್ಥಾಪಿಸಿದ special task force ಕೇವಲ ಹತ್ತು ದಿನಗಳಲ್ಲೆ ಮೊದಲ ಯಶಸ್ಸು ಪಡೆದಿತ್ತು , ಹುಣ್ಣಮೆಯ ದಿನದಂದು ನಡೆಯುತ್ತಿದ್ದ ಕೊಲೆಗಳಿಗೆ ಸಂಭದಿಸಿದಂತೆ ನಾಲ್ಕರು ಸಕ್ಷಿ ಸಿಕ್ಕಿತ್ತು.. ಅದಕ್ಕಿಂತ್ತ ಹೆಚ್ಚಾಗಿ ಅವರಿಗೆ ಸಿಸಿಟಿವಿ ದೃಶ್ಯವಳಿಗಳು ಸಿಕ್ಕಿತ್ತು! ಕೂಡಲೇ ಮುಖ್ಯಮಂತ್ರಿ , ಗೃಹಸಚಿವ ಮತ್ತು DGPಗೆ ವರದಿ ಒಪ್ಪಿಸಿ 'operation railroad killer' ಕಾರ್ಯಚರಣೆ ಆರಂಭಿಸಿದರು ಟೈಗರ್‍  ಪ್ರತಾಪ್‌ಕುಮಾರ್‍್ನೇತೃತ್ವದ STF ತಂಡ..
                                                           *  *  *

  ಹಿಮಾಂಶು ಕೊಟ್ಟಿದ್ದ ಪತ್ರವನ್ನು ಮೂರು ನಿಮಿಷದಲ್ಲಿ ಹತ್ತು ಬಾರಿ ಓದಿಕೊಂಡಿದ್ದಳು , ಆ ಪತ್ರದಲ್ಲಿ ಬರೆದ ಪ್ರತಿ ಪದಗಳಿಂದೆ ಅಡಗಿದ್ದ ಭಾವ ಅರಿತಿದ್ದಳು ಶಾಲಿನಿ , ಆಗ ರಾತ್ರಿ ೧೦:೪೫ ನಿಮಿಷ ಆ ನಿರ್ಜನ ನಲ್ಲಮಲ ಅರಣ್ಯ ಪ್ರದೇಶದ ನಡುವೆ ಇದ್ದ ಅಧ್ಯಯನ ಕೇಂದ್ರಲ್ಲಿದ್ದದ್ದು ೧೩ ಮಂದಿ ಮಾತ್ರ . ಆ ಭಯಂಕರ ಕತ್ತಲ ರಾತ್ರಿಯಲ್ಲಿ ಹಿಮಾಂಶು ರೂಮಿಗೆ ನಡೆದು ಹೋದವಳೆ ಬಾಗಿಲು ತಟ್ಟಿದ್ದಳು . ಜಗತ್ತಿನ ಅರಿವಿಲ್ಲದ ಹಾಗೆ ಗೋಪಲ ಕೃಷ್ಣ ಅಡಿಗರ ಕವಿತೆ ಓದಿ ಕುಳಿತ್ತಿದ್ದ ಹಿಮಾಂಶು...
            " ಒಡೆದು ಬಿದ್ದ ಕೊಳಲು ನಾನು
         ನಾದ ಬರದು ನನ್ನಲ್ಲಿ!!"

                                                                                                ಎರಡು ಸಾಲಿನಲ್ಲಿ ಅದೆಷ್ಟು ಅರ್ಥ!!
ಬಾಗಿಲು ತಟ್ಟಿದ ಶಬ್ದ ಕೇಳಿದವನೆ ಪುನಃ ವಾಸ್ತವ ಜಗತ್ತಿಗೆ ಇಳಿದ , ಶಾಲಿನಿ ಬಾಗಿಲಲ್ಲಿ ನಿಂತದ್ದು ನೋಡಿ ಸಂತೋಷದೊಡನೆ ಅಚ್ಚರಿಪಟ್ಟ ಹಿಮಾಂಶು !!!
  " Himu , Shall we go for a walk " ಅಂದಿದ್ದ ಶಾಲಿನಿಯ ಕಣ್ಣುಗಳಲ್ಲಿ ವಿನಂತಿಯಿತ್ತು.
ತಲೆಯಾಡಿಸಿದವನೆ ಅ ನೀರವ ರಾತ್ರಿಯಲ್ಲಿ ಮುದ್ದು ಮುದ್ದು ಹುಡಿಗಿ ಶಾಲಿನಿಯೊಂದಿಗೆ ಹೆಜ್ಜೆ ಇಡುತ್ತ ಹೊರಟ ಹಿಮಾಂಶು.. ೧೦ ನಿಮಿಷ ಯಾವುದೇ ಮಾತಿಲ್ಲದೆ ನಡೆಯುತ್ತಾ ಹೋಗುತ್ತಿದವರಲ್ಲಿ ಶಾಲಿನಿಯು ಹಾಡಿದ ಹಾಡು ಮೌನ ಮುರಿದಿತ್ತು..  "ಓಲವೇ ಜೀವನ ಸಾ‍ಷತ್‌ಕಾರ , ಓಲವೇ ಮರೆಯಾದ ಮಮಾಕರ "
ಶಾಲಿನಿಯೊಂದಿಗೆ ನಲ್ಲಮಲ ಅರಣ್ಯದಲ್ಲಿ ರಾತ್ರಿ ೧೧.೦೦ ಗಂಟೆಗೆ ಆ ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರನನ್ನು ಹುಡುಕುತ್ತಾ ಹೋಗುತ್ತಿದ್ದ ಹಿಮಾಂಶುವಿಗೆ ಈ ಹಾಡು ೧೪ ವರ್ಷಗಳ ಹಿಂದಕ್ಕೆ ಕರೆದೊಯ್ತು !! ಅದು ಇಂತಹುದೆ ಒಂದು ಹುಣ್ಣಿಮೆಯ ರಾತ್ರಿ ಚಂದ್ರನೇಕೊ ಮರೆಯಾಗಿದ್ದ.. ಸದಾಶಿವನಗರದ ಎರಡನೇ ಕ್ರಾಸಿನ ಮನೆಮೇಲಿನ Terraceನಲ್ಲಿ ಕುತ್ತಿದ್ದ ಹಿಮಾಂಶು ಮತ್ತು ಅವನ ತಾಯಿ ಪ್ರಶಾಂತಿನಿ ಮೌನದಿಂದಲೇ ಈ ಹಾಡು ಕೇಳಿಸಿಕೊಂಡಿದ್ದರು...

      ಓಲವೇ ಜೀವನ ಸಾಷತ್‌ಕಾರ....ಓಲವೇ ಮರೆಯಾದ ಮಮಾಕರ...!!

  ಐದು ವರ್ಷದ ಪುಟ್ಟ ಹಿಮಾಂಶು , ಅಮ್ಮನಿಗೆ ಕೇಳುತ್ತಾನೆ , " ಅಮ್ಮ , ಅಪ್ಪ ಏಲ್ಲಿಗ್‌ಗೊಗಿದ್ದಾನೆ... ನಂಗೆ , ಅಪ್ಪ ಬೇಕು " ಅಂತ ಭಾವಪೂರ್ವಕಾವಾಗಿ ಕೇಳಿದ್ದ.... ಅಪ್ಪ !! ಮರೆತುಹೋಗಿದ್ದ ಪ್ರೋಫೆಸರ್‌ ಪ್ರಶಾಂತಿನಿಗೆ ನೆನಪಾದ , ಅತನ ಪ್ರತಿಯೊಂದು ಭಾವಗಳು ನೆನಪಾಗಿದ್ದವು ನಿಷ್ಕಲಮಶವಾಗಿದ್ದ ತನ್ನ ಅಕ್ಕನ ಮೇಲಾದ ದೌರ್ಜನ್ಯಗಳು ನೆನಪದವು , ಮೋಸ ನೆನಪಾದವು , ನಿವೇಧಿತಾ ನೆನಪದಳು !!!! ಎಲ್ಲದಿಕ್ಕಿಂತ ಮಿಗಿಲಾಗಿ ಮರೆತುಹೋಗಿದ್ದ ತನ್ನ ದ್ವೇಷ ನೆನಪಾಯ್ತು , REVENGE ಎಂಬ ಪದ ನೆನಪಾಗಿತ್ತು...
      ಮೂಡಬಿದರೆಯ ಅಳ್ವಸ್ ಕಾಲೇಜಿನಲ್ಲಿ ಮೊದಲ ಬಿಎ ಓದುತ್ತಿದ್ದ ಹುಡುಗಿ ನಿವೇಧಿತಾ , ಕಪ್ಪು ಕಾಡಿಗೆಗೆ ರೆಪ್ಪೆಯೊಡ್ಡಿ ಇಣಕು ನೋಡುತ್ತಿದ್ದ ಕಣ್ಣುಗಳು ಬೆಳಗಿನ ಜಾವದ ಮೊದಲ ಸೂರ್ಯಕಿರಣಗಳು ಕಿಟಕಿಯ ಮೂಲಕ ಇಣುಕಿ ನೋಡುತ್ತಿದ್ದ ಹಾಗೆ ಕಾಣಿಸಿತು , ಎತ್ತರವಾದ ನಿಲುವು , ಹಾಲು ಬಿಳುಪು ಬಣ್ಣದ ಕೆನ್ನೆ , ಕಾಲೇಜಿನಲ್ಲಿ ಅತೀ ಮುದ್ದು ಮುದ್ದುಗಿದ್ದ ಹುಡುಗಿ ನಿವೇಧಿತಾ... ಬಿಎ ಓದುತ್ತಿದ್ದ ಅವಳು ಅದೇಕೊ ವಾಮಚಾರದ ಬಗ್ಗೆ ಆಸಕ್ತಿ , ಮಾಟಗಾತಿ ಸುಬ್ಬಮ್ಮನ ಬಗ್ಗೆ ಆಸಕ್ತಿ . ಪ್ರತಿ ಅಮಾವಾಸೆ , ಹುಣ್ಣಿಮೆಯ ದಿನ ಸುಬ್ಬಮ್ಮ ಮಾರ್ಕಂಡಿಯನ್ನು ಓಲಿಸಿಕೊಳ್ಳುತ್ತಿದ್ದ ಬಗ್ಗೆ ವಿಪರೀತ ಆಸಕ್ತಿ ತೋರುತ್ತಿದ್ದಳು .. ಯಾರನ್ನು ನಂಬುತ್ತಿರದ , ಭಾವನೆಗಳೇ ಇಲ್ಲದ , ಸೆಂಟಿಮೆಂಟ್ ಅವಳ ಭ್ರೂ ಮಧ್ಯದ ರಕ್ತಕುಂಕುಮದಲ್ಲೂ ಜಾಗವಿಲ್ಲದ ಸುಬ್ಬಮ್ಮ ನಿವೇಧಿತಾಳನ್ನು ಅಚ್ಚುಕೊಂಡಿದ್ದಳು . ಆಕೆಗೆ ಪ್ರತಿವಿದ್ಯಯ ಬಗ್ಗೆಯೂ ಮಾಹಿತಿ ನೀಡುತ್ತಿದ್ದಳು... ಅಷ್ಟು Ruthless ಅಗಿದ್ದ ಮಾಟಗಾತಿ ಸುಬ್ಬಮ್ಮ ಆಕೆಯ ಬದುಕಿನ ಕಟ್ಟಕಡೆಯ ಗುರಿಯನ್ನು ನಿವೇಧಿತಾಗೆ ತಿಳಿಸಿದ್ದಳು.. ಅದು ಮಾರ್ಕಂಡಿಯನ್ನು ಒಲಿಸಿಕೊಳ್ಳುವುದು , ಕ್ಷುದ್ರವಿದ್ಯಯಲ್ಲಿ ಪರಂಗತವಾಗುವುದು , ಕಾಮ ಪಿಶಾಚಿಯನ್ನು ಪ್ರತ್ಯಕ್ಷಿಸುವುದು . ಇದೆಲ್ಲ ನೋಡುತ್ತಿದ್ದ ನಿವೇಧಿತಾಗೆ ಭಯವಾಗಲಿ , ಅಳುಕಗಲಿ ಇರಲಿಲ್ಲ ಅದರೆ ಅವಳಿಗೆ ಮತ್ತಷ್ಟು ಅಸಕ್ತಿ ಹೆಚ್ಚುತ್ತಿತ್ತು...
       ತನ್ನ ಓದು , ಮನೆ , ಮಾಟದ ಬಗ್ಗೆ ಆಸಕ್ತಿಯಿದ್ದ ನಿವೇಧಿತಾಗೆ ಹುಡುಗನೊಬ್ಬ ಪ್ರೀತಿಯ ಬಯಕೆಯಿಟ್ಟ ತುಂಬಾ ಸ್ಪುರದೃಪಿಯಾದ ಯುವಕನನ್ನು ನಿವೇಧಿತಾ ಮರುಪ್ರೀತಿಸದೆ ಇರಲಿಲ್ಲ... ಇದು ತನ್ನ ಬದುಕಿಗೆ Brutal ಅಗಬಹುದು , ನನ್ನ destroy ಮಾಡಬಹುದೆಂದು ಊಹೇ ಕೂಡ ಮಾಡಿರಲಿಲ್ಲ ಅವಳು!!
ಪ್ರೀತಿ ಎರಡು ವರ್ಷಗಳ ಕಾಲ ಮುಂದುವರೆದಿತ್ತು , ಮರಗಳನ್ನು ಸುತ್ತಿಯಾಗಿತ್ತು , ಸಿನಿಮಾ long ride ಹೀಗೆ ಎಂಜಾಯ್‌ ಮಾಡಿದ್ದರು... ನಿವೇಧಿತಾ ಅವನನ್ನು ತುಂಬಾ ನಂಬಿದ್ದಳು , ಪ್ರೀತಿಸಿದಳು , ಅರದಿಸಿದ್ದಳು .... ಎರಡು ಧರ್ಮದ ದಂಪತಿಗಳ ಮಗನಗಿದ್ದರಿಂದ ನಿವೇಧಿತಾಳನ್ನು ಅವನೊಂದಿಗೆ ಮದುವೆ ಮಾಡಿಕೊಳ್ಳಲು ಅವಳ ತಂದೆ ಓಪ್ಪಿಕೊಂಡಿರಲಿಲ್ಲ... ಅದರೆ ಶ್ರೀಮಂತರ ಮಗಳಳಾಗಿದ್ದ ನಿವೇಧಿತಾ ಓಡಿ ಹೋಗಿ ಮದುವೆಯಾಗಿದ್ದರು.. ಅದರೆ..?? ಅದರೆ ನಿವೇಧಿತಾಳ ಅಸ್ತಿಯನ್ನು ನೋಡಿ ಪ್ರೀತಿಸಿದ್ದ ಅತ ಅವಳನ್ನ ಜಸ್ಟ್ ಯೂಸ್ ಮಾಡಿ ಎಸೆದಿದ್ದ.. ಕಷ್ಟ ಕೊಟ್ಟ , ಬರುಬರುತ್ತಾ ತುಂಬಾ brutalಅಗಿ behave ಮಾಡಿದ್ದ ಆತ ಅವಳನ್ನ ಕೊಲೆಮಾಡಿಬಿಟ್ಟಿದ್ದ... ಅವನು  Alexander ರಾಜನಾಥ ಚಟರ್ಜಿ...  
  ಆಗ ತಾನೇ national ಕಾಲೇಜಿನಲ್ಲಿ  I pu ಓದುತ್ತಿದ್ದ ಮುಗ್ದ ಹುಡುಗಿ ಪ್ರಶಾಂತಿನಿಗೆ ಈ ವಿಷಯ ತಿಳಿಯದೆ ಇರಲಿಲ್ಲ !! ಅಕ್ಕನನ್ನು ಕೊಂದವನ ಬಗ್ಗೆ ಉಗ್ರ ಕೋಪ ಮಾಡಿಕೊಂಡಳು . ಮನೆಯಲ್ಲಿ ವಿಷಯ ತಿಳಿಸಿದರೆ ಏನು ಆಗದು ಎಂದು ಅರೆತ ಪ್ರಶಾಂತಿನಿ ಮಾಟಗಾತಿ ಸುಬ್ಬಮ್ಮನಿಗೆ ವಿಷಯ ತಿಳಿಸಿಲು ಅಣಿಯದಳು...
   ಅದು ಮೆಜೆಸ್ಟಿಕ್ಕಿನ ಎದುರು , ಆಯುರ್ವೇದದ ಆಸತ್ರೆಯ ಪಕ್ಕ ರಾಜ್‌ಮಹಲ್ ಹೊಟೇಲೆಂಬ ಮುಗಿಲೆತ್ತರದ ಕಟ್ಟಡದ ಮುಂದೆಯೇ , ಮೆಜೆಸ್ಟಿಕ್ಕಿನಿಂದ ಮಲ್ಲೇಸ್ವರಕ್ಕೆ ಹೋಗುವ ಅಂಡರ್‍್ಬ್ರಿಡ್ಜ್ ರಸ್ತೆಯ ಒಂದು ಪಾರ್ಶದ ಮೇಲೆ ಹರಡಿಕೊಂಡಿರುವ ಮಹಾ ಕೊಳಕು ಸ್ಲಮ್ಮೇ ಲಕ್ಷಣಪುರಿ!! ಅದು ಇವತ್ತಿಗೂ ಇದೆ. ಮೆಜೆಸ್ಟಿಕ್ಕಿನ ಎಲ್ಲ ಪಾಪವೂ ಘನೀಭವಗೊಂಡು ಈ ಲಕ್ಷಣಪುರಿ ಸೃಷ್ಟಿಯಾದಂತಿದೆ . ಅಂತಹ ಕೆಟ್ಟಾಕೊಳಕು ಸ್ಲಮ್ಮೆನಲ್ಲಿ ಒಂದೇ ಒಂದು ಬ್ರಾಹ್ಮಣರ ಮನೆ!
   ಅದು ಮಾಟಗಾತಿ ಸುಬ್ಬಮ್ಮನದು !!
 ಜಗತ್ತಿನಲ್ಲಿ ತಾನು ಪ್ರೀತಿಸಿದ , ಗೌರವಿಸಿ , ನಂಬಿದ್ದ ಹುಡುಗಿ ನಿವೇಧಿತಾ ಸಾವು ಮಾಟಗಾತಿ ಸುಬ್ಬಮ್ಮನಿಗೆ ವಿಚಲಿತಗೊಳಿಸಿತು . ಭಾವನೆಗಳೇ ಮರೆತುಹೋಗಿದ್ದ ಸುಬ್ಬಮ್ಮ ಒಂದು ಕ್ಷಣ ನಿವೇಧಿತಾಳಿ ಗೋಸ್ಕರ ಮರುಗಿದ್ದಳು . ತನ್ನ ಬದುಕಿನ ಗುರಿ ಒಂದಲ್ಲ ಎರಡು!! ಎಂದು ತೀರ್ಮಾನ ಮಾಡಿದಳು... ಒಂದು ಕರ್ಣ ಪಿಶಾಚಿ-ಮಾರ್ಕಂಡಿಯನ್ನು ಒಲಿಸಿಕೊಳ್ಳುವುದು ಎರಡನೇಯದು alexander ರಾಜನಾಥ ಚಟರ್ಜಿಯನ್ನು ತನ್ನ ದಿವ್ಯ ಶಕ್ತಿಯಿಂದಲೆ ಸಾಯುಸುವುದು.... ಅದು ಮಾರ್ಕಂಡಿಗೆ ಬಲಿ ನಿಡುವುದು!!
     ಹೀಗೆ ೧೪ ವರ್ಷದ ಹಿಂದಿನ ನೆನಪಿಗೆ ಹೋಗಿದ್ದ ಹಿಮಾಂಶು ವಾಸ್ತವಕ್ಕೆ ಇಳಿದಿದ್ದ , ಮಾಟಗಾತಿ ಸುಬ್ಬಮ್ಮ ಈಗಗಲೇ  ಕರ್ಣಪಿಶಾಚಿ *ಯನ್ನು ಒಲಿಸಿಕೊಳ್ಳಲು ದೊಡ್ಡ ಮಾರಣ ಹೋಮ ಶುರುಮಾಡಿ ೮ ತಿಂಗಳಾಗಿತ್ತು.. ೮ ತಿಂಗಳಲ್ಲಿ ೧೬ ಬಲಿ ; ಇನ್ನು ಕೇವಲ ೪ ತಿಂಗಳಲ್ಲಿ ಭಾರತದ ಕೇಲವೆ ಕ್ಷುದ್ರಸಾಧಕರು ಸಾಧಿಸಿಕೊಂಡಿರುವ ಉಗ್ರ ವಿದ್ಯಾಯನ್ನು ಸಾಧಿಸಿಕೊಳ್ಳಲಿದ್ದಳೆ ಮಾಟಗಾತಿ ಸುಬ್ಬಮ್ಮ... ಅವಳ ೨೪ ಬಲಿ alexander ರಾಜನಾಥ ಚಟರ್ಜಿನ......??
                                                                          (ಮುಂದುವರೆಯುತ್ತದೆ-to be continued)
( ವಿ.ಸೂ - * ಕರ್ಣಪಿಶಾಚಿ : ಇದೊಂದು ದೊಡ್ಡ ಗಾತ್ರದ ಶಕ್ತಿಯುಳ್ಳ ಕ್ಷುದ್ರ ದೇವತೆ. ಜನ ಸರಿಯಾದೆ ಹೆಸರು ಗೊತ್ತಿಲ್ಲದೆ ಕರ್ಣಪಿಶಾಚಿ ಎನ್ನುತ್ತಾರೆ . ಅದರೆ ಆಕೆಯ ನಿಜವಾದ ಹೆಸರು ಕಾಮಕರ್ಣ ಪಿಶಾಚಿ . ವಾಮಾಚಾರದ ಆಳ-ಗಲ ಬಲ್ಲವರಿಗೆ ಅವಳ ತಾಕತ್ತು-ಅಪಾಯಗಳೆರಡೂ ಗೊತ್ತು . ಕ್ಷುದ್ರ ಔಪಸನೇಯ ನಂಬಲಿಕ್ಕಾಗದ ವಾಸ್ತವವೋ ಗೊತ್ತಿಲ್ಲ . ಪ್ರತ್ಯಕ್ಷವಾಗುವಕೆ nude goddess !! ಆಕೆ ಬಟ್ಟೆ ಧರಿಸುವುದಿಲ್ಲ . ಆದರೆ ಅವಳ ಶಕ್ತಿ ಊಹೆಗಿಂತಲು ತುಂಬಾ ಹೆಚ್ಚು.. ಕರ್ಣ ಪಿಶಾಚಿನಿಯೆದುರು ಮಗುವಾಗಬೇಕು . ಕೊಂಚ ಆಯತಪ್ಪದರು ಆಕೆ ರಕ್ತ ಕುಡಿಯುತ್ತಾಳೆ.... ನನ್ನ ಮುಂಬರುವ ವಾಮಾಚಾರದ ಭಾಗದಲ್ಲಿ ಇದರ ಬಗ್ಗೆ ಹೆಚ್ಚು ವಿವರಿಸಲು ಪ್ರಯತ್ನಿಸುತ್ತೆನೆ.. ಕರ್ಣ ಪಿಶಾಚಿನಿಯ ಬಗ್ಗೆ ಹೆಚ್ಚು ತಿಳಿಯಲು ೧೯೦೬ರಲ್ಲಿ ಪ್ರಕಟವಾಗಿರುವ ತಮಿಳು ಗ್ರಂಥವೊಂದನ್ನು ಓದಬಹುದು ಅಥವಾ ಅಂಥ್ರದ ಪಶ್ಚಿಮ ಗೋದವರಿಯ ಚುಂಗುರಿ ಮತ್ತು ನರ‍್ಮಿ ಹಳ್ಳಿಗಳಿಗೆ ಬೇಟಿನಿಡಬಹುದು - ಮಂಜುನಾಥ್ )

17 Oct 2014

ಅವಳ ನೆನಪಲ್ಲಿ - 6

ಕಾಡುತ್ತಿರುವುದು ನಿನ್ನ ಕಣ್ಣು
ಕಾಡಿಗೆ ಹಚ್ಚಿದ ಮುದ್ದು ಕಣ್ಣು!
ಕಾಡುತ್ತಿರುವುದು ನಿನ್ನ ಮುಂಗುರುಳು
ಗಾಳಿಗೆ ಹಾರಿ ಹಾರಿ ಮುತ್ತಿಡುತ್ತಿದ್ದ ಮುಂಗುರುಳು!!

ನೆನಪಾಗುತ್ತಿದೆ ನಿನ್ನ ಗುಳಿಕೆನ್ನೆ
ಅ ನಿನ್ನ ಮುದ್ದು ಮದ್ದು ನಗು ನೋಡಲು!
ನೆನಪಾಗುತ್ತಿದೆ ನಿನ್ನ ಪುಟ್ಟ ಕೈಗಳು
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಜೊತೆಯಲ್ಲಿಡಿದು ನಡೆಯಲು!!

ಬರೆದು ಬಿಟ್ಟ ಕವಿತೆಯ ಸಾಲುಗಳಿವು
ಹೇಗೆ ನಿಡಲಿ ನನ್ನೊಲವಿನ ಹುಡುಗಿ ನಿನಗೆ!
ನೀನು ನನ್ನ ಜೊತೆಯಿಲ್ಲ;ನೀನು ಬಿಟ್ಟು ಹೋದ ನೆನಪಿದೆ
ಕಾಯುತ್ತಿರುವೆ ಹುಡುಗಿ ಕವಿತೆಯ ಬರೆದಿಟ್ಟುಕೊಂಡು!!
                                    ನಿನಗಾಗಿ..... ನಿನ್ನ ಪ್ರೀತಿಗಾಗಿ!!
                                                          -ಮಂಜುನಾಥ್

ಅವಳ ನೆನಪಲ್ಲಿ - 5

 ಬಸ್ಸಿನ ಮರೆಯಲ್ಲಿ ಮರೆಯಾಲಾಗದ
ನೆನಪುಗಳ ಮೆಲಕು ಹಾಕುತ್ತಿದ್ದೆ,
ನನ್ನ ಕಣ್ಣಿಗೆ ಕಂಡದ್ದು; ನೀನು
ಕುಳಿತ್ತಿದ್ದ ಅದೇ ಸೀಟು..

ನಾವು ಇಳಿದಿದ್ದ ಅ ಸ್ಟಾಪಿಗೆ,
ಬಸ್ಸು ಬಂದು ನಿಂತಿತ್ತು;
ದೇವಾಸ್ಥಾನದ ಪಕ್ಕವಿದ್ದ ಪಾರ್ಕ್ ಹಾಗೇ ಇದೆ,
ಅದರೆ ನನ್ನ ಪಕ್ಕವಿದ್ದ ನೀನು ಮರೆಯಾಗಿದ್ದೆ!

ನಾವಿಬ್ಬರು ನಡೆದು ಹೋಗುತ್ತಿದ್ದ ರಸ್ತೆಕೇಳಿತ್ತು ,
ಎಲ್ಲಿ ನಿನ್ನ ಹೂ ಹುಡುಗಿ ?!
ಈಗ ಅವಳು ನನ್ನ ಜೊತೆಯಿಲ್ಲ ; ಅದರೆ ,
ಬರುತ್ತಾಳೆ , ಬಂದೆ ಬರುತ್ತಾಳೆ ನನ್ನ ಹೂ ಹುಡುಗಿ ; ಎಂದೆ !!
ಕಾಡುವ ಪ್ರಶ್ನೆಗಳನ್ನು ಮನದಲಿಟ್ಟು ಕಾಯುತ್ತಿದ್ದೆನೆ ಹುಡುಗಿ.....
                                               ನಿನಗಾಗಿ....ನಿನ್ನ ಪ್ರೀತಿಗಾಗಿ !!!!
                         -ಮಂಜುನಾಥ್

14 Oct 2014

Working life. Life working!!

This is my 50th post in this blog.. I just wanted to share an e-mail content which i recieved from my friend about life.. Life is really an art!!

"Don't just have career or academic goals. Set goals to give you a balanced, Successful life. I use the word balanced before successful. Balanced means ensuring your health, relationships, mental peace are all in good order. there is no point of getting a promotion on the day of your break up. There is no fun in driving a car if your back hurts. Shopping is not enjoyable if your mind is full of tensions.

Life is one of those races in nursery school where you have to run with a marble in a spoon kept in your mouth. If the marble falls, there is no point coming first. Same is with life where health and relationships are the marble. Your striving is only worth it if there is harmony in your life. Else, You may achieve the success, but this spark, this feeling of being excited and alive, will start to die.

One thing about nurturing the spark - Don't take life seriously. Life is not meant to be taken seriously, as we are temporary here. We are like a pre-paid card with limited validity. If we are lucky, we may last another 50 years. And 50 years is just 2,500 weekends. Do we really need to get so worked up?

It's ok, bunk a few classes, scoring low in couple of papers, goof up a few interviews, take leave from work, Enjoy with your friends, fall in love, little fights with your loved ones - we are people, not programmed devices.

Don't be serious, Be sincere.

-Chetan Bhagat"

11 Oct 2014

ಹುಣ್ಣಿಮೆಯ ನಿಶಬ್ದ ಭಾಗ-೪

    (Romantic thriller ಹುಣ್ಣಿಮೆಯ ನಿಶಬ್ದದ ಹಿಂದಿನ ಮೂರು ಭಾಗವನ್ನು ಓದಲು ಇಲ್ಲಿ click ಮಾಡಿ)

        ಭಾಗ-೪

  ಆಶ್ಚರ್ಯವಾಗಬಹುದು! ಸಹಸ್ರಾರು ಚದರಮೈಲಿ ವಿಸ್ತಾರದ ಕಾಡಿನ ನಟ್ಟನಡುವೆ ಯಾವುದೇ ದಾರಿಯಿಲ್ಲದ ಈ  ಸ್ಥಳದಲ್ಲಿ ಯಾರು ಈ ಅಧ್ಯಯನ ಕೇಂದ್ರವನ್ನು ಕಟ್ಟಿರಬಹುದೆಂದು??   ಹಿಂದೆ ತಿರುಗಿದರೆ ಭೊರ್ಗರೆಯಿತ್ತಿರುವ ಕೃಷ್ಣೆ ಮುಂದೆ ಕತ್ತಲಿಗು ಬೆಚ್ಚಿಬಿಳಿಸಿವ ಕಾಡು. ನಲ್ಲಮಲ ಅರಣ್ಯಪ್ರದೇಶ ತನ್ನ ಬೆರನ್ನ ಅಂಧ್ರದ ಉದ್ದಗಲಕ್ಕು ಚಾಚಿ ತಮಿಳುನಾಡು ತಲುಪಿತ್ತು , ಶ್ರೀಶೈಲಂ ಡ್ಯಾಮ್ನಲ್ಲಿ ಕೃಷ್ಣೆ ರೌದ್ರರಮಣೀಯವಾಗಿ ತನ್ನ ಶಕ್ತಿಯನ್ನು ತೋರಿಸುತ್ತಿದ್ದಳೆ , ದೂರದಲ್ಲೆಲ್ಲೊ ಹುಲಿಗಳ ಗರ್ಜನೆ ಆನೆಯ ಕೂಗು ಅವುಗಳಿಗೆ ಪೈಪೋಟಿ ನಿಡುವಂತೆ ಶಬ್ದಮಾಡುತ್ತ ಹರಿಯುತ್ತಿರುವ ಕೃಷ್ಣ ನದಿ , ಪ್ರಕೃತಿಯ ಸೋಬಗನ್ನು ಸಾರಿ ಸಾರಿ ಹೇಳುತ್ತಿತ್ತು . ನಲ್ಲಮಲ ಅರಣ್ಯದ ಆ ಭೀಕರ ಸೌಂದರ್ಯ ಕಂಡ ಬೆಂಗಲೂರಿನ ಸೆಂಟ್ ಡೇವಿಡ್ ಕಾಲೇಜಿನ ವಿದ್ಯಾರ್ಥಿಗಳ ಕಣ್ಣು ಆಶ್ಚರ್ಯಪಟ್ಟಿತ್ತು . ಪ್ರಕೃತಿಯ ಸೌಂದರ್ಯ , ಕಣ್ಣುಹಯಿಸಿದಷ್ಟು ದೂರ ಡಟ್ಟವಾಗಿ ಬೆಳದಿದ್ದ ದೊಡ್ಡ ದೊಡ್ಡ ಮರಗಳು , ಅದರೊಳಗೆ ಹಾಸುಹೊಕ್ಕಗಿದ್ದ ಪ್ರಾಣಗಳ ದಂಡು , ಕೃಷ್ಣನದಿಯ ಭೊರ್ಗರೆತ... ಇದರ ಸೌಂದರ್ಯ ಕಂಡು ಅವರ ಮನಸಲಿದ್ದ ಸಂತೋಷ , ಸಂಭ್ರಮ ಮತ್ತಷ್ಟು ಹೆಚ್ಚಿಸಿತು , ನಲ್ಲಮಲ ಹುಲಿ ಸಂರಕ್ಷಣ ಹಾಗೂ ಶ್ರೀಶೈಲಂ ಡ್ಯಾಮ್ನ Hydroelectric power station ಬಗ್ಗೆ ಅಧ್ಯಯನ ಮಾಡಲು ಬಂದಿದ್ದೆವೆ ಎನ್ನುವುದು ಮರೆತುಹೋಗುವಷ್ಟು ಸುಂದರವಾಗಿತ್ತು ಆ ನೋಟ...
    ಎಲ್ಲರೂ ಆ ಸೌಂದರ್ಯವನ್ನು ಒಂದು split secondನಷ್ಟು ಹೊತ್ತು ಮಿಸ್ ಮಾಡದೆ ನೋಡುತ್ತಿದ್ದರೆ ಇತ್ತ ಶಾಲಿನಿಗೇನೊ ತಳಮಳ . ಹಿಮಾಂಶು ತಾನು ನೀಡಿದ್ದ ಪತ್ರಕ್ಕೆ ಇನ್ನ ಉತ್ತರಿಸಿಲ್ಲವೆಂದು!!  ಪ್ರತಿ ನಿಮಿಷ , ಪ್ರತಿ ಕ್ಷಣ ಶಾಲಿನಿ ಅದರ ಬಗ್ಗೆಯೆ ಯೋಚಿಸುತ್ತಿದ್ದಳು . ಹಿಮಾಂಶು ಇದಾವುದರ ಬಗ್ಗೆಯು ಅರಿವಿಲ್ಲದೆ ಪೂ.ತೇಜಸ್ವಿಯ ಕಾಡಿನ Romantic thriller 'ಜುಗಾರಿ ಕ್ರಾಸ್ ' ಕಾದಂಬರಿಯನ್ನು ಓದುತ್ತ ಪ್ರತಿ ನಿಮಿಷವನ್ನು ಆ ಅರಣ್ಯದಲ್ಲಿ enjoy ಮಾಡ್ತಿದ್ದ...

                      *  *  *

      ACP ಲೂಹಿಸ್ ವಿನ್ಸೆಂಟ್ ತನ್ನ ಇಡೀ ಜೀವಮಾನದ ದೊಡ್ಡ ಮೀಷನ್ ಆಗಿದ್ದ ರೈಲ್ವೆ ಹಂತಕನ ಸೇರೆಯಲ್ಲಿ ವಿಫಲವಾಗಿದ್ದರು . ಮಾಧ್ಯಮಗಳಲ್ಲಿ ಸಾಲು ಸಾಲು ವರದಿಗಳು ಬರುತ್ತಾ ಇದ್ದವು .   ವಿನ್ಸೆಂಟ್ನ ಕಾರ್ಯಶಮತೆಯ ಬಗ್ಗೆಯು ಪ್ರಶ್ನಿಸತೋಡಗಿದವು , ಅಂಧ್ರದ ಪೋಲಿಸ್ ಕಾಮಿಷ್ನರ್‍್ತಲೆಯತ್ತಿ ಮಾತನಾಡದಂತಾಯ್ತು . ಇತ್ತ ಬೆಂಗಳೂರಿನಲ್ಲಿ ಒತ್ತಡ ಹೆಚ್ಚುತ್ತಿತ್ತು... ಇದಕ್ಕೆ ಪುಷ್ಟಿನೀಡುವಂತೆ ಅಂದು ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಕಾರ್ಯಚರಣೆ ನಡೆಸಿದ ದಿನ ಧರ್ಮವರಂ-ಅನಂತಪುರ ಜಂಕ್ಷನ್ ಅದರೂ ಕೊಲೆಯಾಗದನ್ನು ಕಂಡು , ಕೊಲೆಗಾರ ಸಿಕ್ಕಿಲದ ಕಂಡು ಪೋಲಿಸರು ಕಾರ್ಯಚರಣೆ ಸ್ಥಗಿತಗೊಳಿಸಿದರು ಆದರೆ ಅಲ್ಲಿ ಅವರ ಊಹೆಗೆ ನಿಲುಕದ ಘಟನೆ ನಡೆದಿತ್ತು . ಅನಂತಪುರ ಕೇಂದ್ರ ರೈಲ್ವೆ ಸ್ಟೆಷನಿಂದ ನಿದಾನವಾಗಿ ಹೊರಡುತ್ತಿದ್ದ    ಪ್ರಶಾಂತಿ ಎಕ್ಸಪ್ರೇಸ್ನಲ್ಲಿ  ಯಾರಿಗೂ ತಿಳಿಯದೆ ಕೊಲೆನಡೆದು ಹೋಗಿತ್ತು . ಆ ಕೊಲೆಯಲ್ಲಿದದ್ದು ಕೂಡ ಅದೇ ಭೀಕರತೆಯಲ್ಲಿ ಕರ್ನೂಲ್ ಜಿಲ್ಲೆಯ ಮಧ್ಯ ವಯಸ್ಸಿನ ಹೆಣ್ಣುಮಗಳ ಗಂಟಲನ್ನು ಕುಯ್ದು ಹೊತ್ತುಹೋಗಿದ್ದರು ಹಂತಕರು . ರಕ್ತ ಅ ಬೋಗಿಯಲ್ಲಿ ನೀರು ಹರಿದಂತೆ ಹರಿದಿತ್ತು .  ಪ್ರಶಾಂತಿ ಎಕ್ಸಪ್ರೇಸ್ನ ೧೬ನೇ ಬೋಗಿ ಸ್ತಬ್ದವಾಗಿತ್ತು , ಅ ಹುಣ್ಣಿಮೆಯ ರಾತ್ರಿಯಲ್ಲಿ ಅನಂತಪುರದಿಂದ ೪೦ ಕೀಲೊ ದೂರದಲ್ಲಿ  ಪ್ರಶಾಂತಿ ಎಕ್ಸಪ್ರೇಸ್ ನಿಶಬ್ದವಾಗಿತ್ತು . ಅಂದು  ಪ್ರಶಾಂತಿ ಎಕ್ಸಪ್ರೇಸ್ ೧೫ನೇ ಹತ್ಯೆಕಂಡಿತ್ತು . ಒಂದಿಡಿ ರೈಲ್ವೆ ಸಿಬಂದಿ ಬೆಚ್ಚಿಬಿದ್ದರು ! ಪತ್ರಿಕೆಗಳಲ್ಲಿ ೩-೪ ಪುಟ ಈ ಸರಣಿ ಹತ್ಯಗಳ ವರದಿ ಇರುತ್ತಿತ್ತು . ಹಿರಿಯ ಪರ್ತಕರ್ತರು ಸಂಪಾದಕೀಯ ಬರೆದರು . ಗಂಟೆಗಟ್ಟಲೆ ಟಿವಿಗಳಲ್ಲಿ , ರಸ್ತೆಯಲ್ಲಿ , ಸರ್ಕಾರಿ ಕಚೇರಿಯಲ್ಲಿ ಚರ್ಚೆ ನಡೆಯಿತ್ತು...  ಕರ್ನಾಟಕ-ಅಂಧ್ರ ವಿಧಾನಸಭೆಗಳಲ್ಲಿ ಅಲ್ಲೊಲ-ಕಲ್ಲೊಲ . ಪರೆದ್ತಿಯ ಭೀಕರತೆ ಮರೆತು ಅಡಲಿತ ರೂಡ ಪಕ್ಷಕ್ಕೆ ಹೀಯಳಿಸುತ್ತಿತ್ತು ಪ್ರತಿಪಕ್ಷಗಳು!!
    ಸಾಲು ಸಾಲು ಕೊಲೆಗಳು ಭೀಕರತೆ , ಕೇಸಿನ ಗಾಂಬಿರ‍್ಯವರೆತ ಎರೆಡು ರಾಜ್ಯದ ಮುಖ್ಯಮಂತ್ರಿಗಳು ಒಟ್ಟಾಗಿ , ಒಮ್ಮತವಾಗಿ ಒಂದು ನಿರ್ಧಾರ ಕೈಗೊಂಡರು , ಅದೇ special task forceನ ರಚನೆ ....."Operation Railroad Killer "  ಜಂಟಿಯಾಗಿ  ಪ್ರಾರಂಭವಾಗೇ ಬಿಟ್ಟಿತ್ತು..
   ಕರ್ನಾಟಕ-ಅಂಧ್ರದ ಪ್ರಮುಖ ಹಿರಿಯ ಪೋಲಿಸ್ ಅಧಿಕಾರಿಗಳು ಒಂದಾಗಿ Special Task Forceನ ರಚನೆಯಾಯಿತು... ಇದರ ನೇತೃತ್ವ ವಯಿಸಿದ್ದು.... ಹೆಸರು ಕೇಳಿದರೆ ಭೂಗತ ಲೋಕವೆ ನಡುಗುವ ಹಾಗೆ ಮಾಡುತ್ತಿದ್ದ ಕರ್ನಾಟಕದ Daring ಅಧಿಕಾರಿ tiger ಪ್ರತಪ್... ೧೬ ಜನರಿದ್ದ ಹಿರಿಯ ಪೋಲಿಸ್ ತಂಡ , ಜೊತೆಗೆ ೧೨ ACP , ೧೦ DCP , ೪೫ SI , ೧೫೦ PCಗಳು.. "Operation Rail Road Killer " ಕಾರ್ಯಚರಣೆಗೆ ಇಳಿದಿತ್ತು ದೊಡ್ಡ ಪೋಲಿಸ್ ತಂಡ.
                 *  *  *

       ಶಾಲಿನಿ ,
            ನನ್ನ ಜೀವನದಲ್ಲಿ ಅತೀ ಸಂತೋಷದದಿಂದ ಮಾತನಾಡಿಸಿದ ಹುಡುಗಿಯಂದರೆ ಅದು ನೀನೆ . ಎಲ್ಲ ನನ್ನನ್ನ ಹೊರಗಿನವನು , ನಿಗೂಢವಾಗಿ ಏನೋ ಮಾಡುತ್ತಿದ್ದನೆ ಎಂದು ದೂರ ತಳ್ಳಿದರು . ಅದರೆ ನೀನು ನನ್ನನ್ನ ಅಚ್ಚಿಕೊಂಡೆ , ಕಾಫಿ ಕುಡಿಸಿದೆ , ನನ್ನ ಜೊತೆಯಿದ್ದ ಆ ಕ್ಷಣ ನಿನ್ನ ಕಣ್ಣಗಳಲಿದ್ದ ಗೆಲುವುಕಂಡಿದ್ದೆ .. ಸ್ಯಾಂಕಿ ರೋಡ್ನಲ್ಲಿ ನಡೆದು ಹೋಗಿತ್ತಿರುವಾಗ ನಿನ್ನ ಆ ಕಿರುನಗೆ ಪ್ರೀತಿಬಿರಿದ್ದನ್ನು ಗಮನಿಸಿದ್ದೆ... I'm greatfull to you , ಅದರೆ ಶಾಲಿನಿ ನನ್ನ ಬಗ್ಗೆ ನೀನು ತಿಳಿದುಕೊಂಡಿಲ್ಲ ಅನಿಸುತ್ತೆ , I'm not a nice man to know.. ನಾನು ತುಂಬಾ ಮನುಷ್ಯನಲ್ಲ...ನಾನು ದೊಡ್ಡ ಕನಸನ್ನ ಹೊತ್ತಿದ್ದೆನೆ , ಸಾಧಿಸುವುದು ಬಹಳಷ್ಟಿವೆ..
   What do you know about me , ನನ್ನ ಬಗ್ಗೆ ಏನು ಗೊತ್ತು..ನನ್ನ ಕುಟುಂಬವೇ ವಿಚಿತ್ರ , ನಿನ್ನಂತ ಶ್ರೀಮಂತರ ಮಗಳು ಈ ಬೀಕರಿಯನ್ನು ಪ್ರೀತಿಸುವುದೆ , NO ಸಮಾಜ ಒಪಲ್ಲ.. ಸಮಾಜ ಏಕೆ ನಾನೇ ಒಪ್ಪುವುದಿಲ್ಲ..
              ಕ್ಷಮೆ ಇರಲಿ,                                   
                                                                                                     
                                                                                                                 - ನಿನ್ನ ಹಿಮು

   ಯಾವುದೆ ಎರಡನೇ ಯೋಚನೆ ಇಲ್ಲದೆ ಕೇವಲ ೩೦ secondನಲ್ಲಿ ಪತ್ರ ಬರೆದು ಮುಗಿಸಿ ಎರಡನೇ ಬಾರಿಯು ಹೋದದೆ ಸ್ವತಃ ಶಾಲಿನಿಗೆ ಕೊಟ್ಟುಬಂದಿದ್ದ ಹಿಮಾಂಶುವಿನ ಮನಸ್ಸಿನಲ್ಲಿ ಒಂದು ಚಿಂತೆ. "ನಿನ್ನ ಹಿಮು" ಅಂತ ನನಗೆ ತಿಳಿಯದೆ ಬರೆದುಬಿಟ್ಟೆನಲ್ಲ! , ಆ ಪದ ಮನಸ್ಸಿನಿಂದ ನೆರವಾಗಿ ಅಕ್ಷರ ರೂಪದಲ್ಲಿ ಪೇಪರ್‍್ಮೇಲೆ ಇಳಿದಿತ್ತು . ಹಿಮಾಂಶು ಮತ್ತಷ್ಟು ಯೋಚಿಸ ತೊಡಗಿದ . ಶಾಲಿನಿಯ ಆ ನಗು , ಅವಳ ಮುಂಗುರುಳು ಈಗ ತಾನೆ ಹಚ್ಚಿದ ದೀಪದಂತೆ ಕನುತ್ತಿದ್ದ ಕಣ್ಣುಗಳು ಹಿಮಾಂಶುವನ್ನು ಕಾಡತೋಡಗಿದವು , ಒಂದು ಕ್ಷಣ ತಾನೆ ಏನು ಮಾಡುತ್ತಿದೆನೆಂದು ಅರಿವು ಕೂಡ ಬಂದಿರಲಿಲ್ಲ ಶಾಲಿನಿಯ ಹಿಮುವುಗೆ!!
                                             *   *   *  *

       ಅತ್ತ ಬೆಂಗಳೂರಿನಿಂದ ಭಬನೆಶ್ವರಕ್ಕೆ ತಲುಪುತ್ತಿದ್ದ ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಕಾರ್ಯಚರಣೆ ತಿರ್ವಗೊಂಡಿತ್ತು..   ಕರ್ನಾಟಕ-ಅಂಧ್ರದ ಅಷ್ಟು ರೈಲ್ವೆ ರೂಟುಗಳಲ್ಲು ಭೀಗಿ ಬಂದೊಬಸ್ತ್. ಅಷ್ಟು ಗಿಜಿಗುಡುತ್ತಿದ್ದ  ಪ್ರಶಾಂತಿ ಎಕ್ಸಪ್ರೇಸ್ನಲ್ಲಿ  ಪೋಲಿಸ್ ಬೂಟುಗಳ ಶಬ್ದ ಹೊರತುಪಡಿಸಿದರೆ ನೀರವ ಮೌನ . ನಿಶ್ದವಲ್ಲಿ ಜೀವ ಪಡೆದಿತ್ತು . special task forceನ Operation Rail Road Killer ಕಾರ್ಯಚರಣೆ ಶುರುವಾದಗಲಿಂದ ಯಾವುದೆ ಹತ್ಯೆಯಾಗಿರಲಿಲ್ಲ , ಇತ್ತ Investigation ಟೀಮ್ ಮೈಕೊಡವಿ  ನಿಂತಿತ್ತು . ಕಳೆದ ನಾಲ್ಕು ತಿಂಗಳಿಂದ record ಆದ CC  cameraಗಳ ದೃಶ್ಯ , mobile phone network ಮತ್ತು ಟ್ರೇನ್ನಲ್ಲಿ ಸಿಕ್ಕಿದ್ದ ಕೆಲವು ದೃಶ್ಯಗಳ ಬಗ್ಗೆ ವಿಸ್ತೃತವಾದ ಅಧ್ಯಯನ ಮಾಡ ತೊಡಗಿತ್ತು . Especially ಹುನ್ನಿಮೆಯ ಹಿಂದು ಮುಂದು  ಮೂರು ದಿನಗಳ ದೃಶ್ಯ ಮತ್ತು ಟೀಕೆಟ್ ಗಳ details ಪ್ರತಿಯೊಂದನ್ನು ಕಲೆಯಾಕಲಾಗಿತ್ತು ಹತ್ತು ದಿನಗಳ ನಂತರ investigation team ವರದಿಯನ್ನು tiger ಪ್ರತಪ್ ಗೆ ನೀಡಲಾಗಿತ್ತು . They had a first susscess in this operation... they got a hint.. the big hint ...ಹಂತಕರ ಬಗ್ಗೆ ಸಕ್ಷಿಗಳ ಜೊತೆ ಕೆಲವು ದೃಶ್ಯಗಳು ಸಿಕ್ಕಿಬಿಡ್ತು. ಹುಣ್ಣಿಮೆಯ ಕೊಲೆಗಳ ರಹಸ್ಯ ಭೇದಿಸಲು ಅಣಿಯಾದರು STF ತಂಡ!!
                                                                           (ಮುಂದುವರೆಯುತ್ತದೆ-to be continued)

10 Oct 2014

ಅವಳ ನೆನಪಲ್ಲಿ ೩!!

ಶಬ್ದಗಳಿಲ್ಲಿದೆ ನಿಶಬ್ದವಾದೆ
ಮಾತುಗಳಿಲ್ಲದೆ ರೋಮಾಚನವಾದೆ
ಕನಸುಗಳಿಲ್ಲದೆ ಕತ್ತಲಾದೆ
ನೀನಿಲ್ಲದೆ ನಾ! ಬರಿದಾದೆ!!

ಗಾಡಕತ್ತಲೆಯಲ್ಲಿ ಕನಸಕಂಡೆ
ನನ್ನೊಲವಿನ ಹುಡುಗಿ ಎಲ್ಲಿದಳೆಂದು?!;
ಸುತ್ತಲೂ ಮುತ್ತಲೂ ಎಲ್ಲೆಲ್ಲೂ ಕತ್ತಲು
ನೀನೆ ನನ್ನ ಮನದೊಳಗೆ ದೀಪ ಹಚ್ಚಿದಂತಾಯ್ತು!!

ಅಂದು ಏಕೆ ಸಿಕ್ಕೆಯೊ ಬಸ್ಸಿನಲ್ಲಿ
ಇಂದು ಏಕೆ ಮಾಯವಾದೆ ಮರೆಯಲ್ಲಿ
ನಿನಗಾಗಿ ಕಾಯುತ್ತಿರುವೆ ನನಿಲ್ಲಿ
ಎಲ್ಲಿರುವೆ ಹುಡುಗಿ ಬಾ ನನ್ನ ಬಳಿ ಇಲ್ಲಿ!
 ಹಣತೆಯನ್ನು ಕೈಲಿಡಿದು ಕಾಯುತ್ತಿರುವೆ  ಹುಡುಗಿ.....
                            ನಿನಗಾಗಿ.. ನಿನ್ನ ಪ್ರೀತಿಗಾಗಿ...!!
                                                                            -ಮಂಜುನಾಥ್

9 Oct 2014

ಅವಳ ನೆನಪಲ್ಲಿ!!-೨

ರಾತ್ರಿಯ ಕಗ್ಗತ್ತಲು ಭಯವಾಗಿತ್ತು
ಯಾವುದೋ ನೆನಪಲ್ಲಿ ನಿದ್ದೆಮಾಡಿದ್ದೆ;
ಬೆಳಗಿನ ಜಾವದ ಸವಿಗನಸು ಸಿಹಿಯಾಗಿತ್ತು
ನಿನ್ನ ನೆನಪಲ್ಲೆ ಹಾಸಿಗೆಬಿಟ್ಟಿದ್ದೆ!!

ಸಾವಿರ ಕನಸನ್ನು ಹೊತ್ತು ನಿನ್ನ ಬಳಿ ಬಂದೆ
ನಿನ್ನ ಆ ಸಿಹಿ ನಗುವಿನಲ್ಲಿ ಮಿಂದೆ;
ನಿನ್ನ ಕಣ್ಣುಗಳಲಿದ್ದ ಭಾವ ನನಗೆ ಪ್ರೀತಿ ಹುಟ್ಟಿಸಿತು
ನಿನ್ನ ಮೇಲೋ , ನಿನ್ನ ಕಣ್ಣ ಮೇಲೋ!!

ಸೆಪ್ಟಂಬರ‍್ನ ಮೊದಲ ಮುಂಗಾರು ಬೀರುಸಾಗಿತ್ತು
ಬಿಳುತ್ತಿದ್ದ ಪ್ರತಿ ಹನಿಯು ನಿನ್ನ ನೆನಪಿಸಿತ್ತು;
mes ಕಾಲೇಜಿನಿಂದ ವಿಜಯನಗರದವರೆಗೂ ಕಾಣಿಸಿದ್ದು ನೀನೆ
ಅದು ಹೇಗೆ ನೀ ನನ್ನೊಲವಿಗೆ ಸಿಕ್ಕೆ!!
ಮಳೆಯ ಹನಿಯನ್ನು ಕೈಲಿಡಿದು ಕಾಯುತ್ತಿರುವೆ ಹುಡುಗಿ
                                                ನಿನಗಾಗಿ.... ನಿನ್ನ ಪ್ರೀತಿಗಾಗಿ.....!!
                                                                                 -ಮಂಜುನಾಥ್

8 Oct 2014

ಅವಳ ನೆನಪಲ್ಲಿ!

 ಮರೆಯಲ್ಲಿ ಮಾತಗುತ್ತೆ
ನೆನಪಲ್ಲಿ ಪ್ರೀತಿ ಹುಟ್ಟುತ್ತೆ
ದೂರದಲ್ಲಿದ್ದಳೆ ಅವಳು
ಅದಾರೂ ಹುಟ್ಟಿಸುತ್ತಾಳೆ ಅಮಲು!!

ಅವಳಿಗವನ ಹಾಡಿನ ಪಾಡು
ಇವಳಿಗವನ ಕಾಡಿಗೆ ಬೊಟ್ಟು
ಅವಳನ್ನು ಭಾವನೆಗೆ ಭರಿಸಿ ಬಣ್ಣ ಹಚ್ಚುತ್ತಾನೆ
ಅವನು ಬರೆಯುವ ಹಾಡಿಗೆ ಸ್ವರವಾಗುತ್ತಾಳೆ!!

ಅವನಿಗಲ್ಲಿ ಕಾಡೋ ಜ್ವರ
ಅವಳ ನೆನಪಲ್ಲೊ , ಆ ಮೈಯಲ್ಲೊ;
ಉಕ್ಕುವ ನೆನಪನ್ನು ಒತ್ತೆ ಇಟ್ಟು
ಅವನ ನೆನೆದಳು ಅವಳು!!
ನೆನಪು ನೆನಪಾಗೇ ಉಳಿದಿತ್ತು....
      (ರಾಜೇಶ್ ಶೆಟ್ಟಿಯವರ ಕವನಗಳ ಸ್ಪೂ ರ್ತಿಯಲ್ಲಿ)

5 Oct 2014

5000!

  yes,5000 page viewers. It may not be a big number , it's a chicken feed compared to other blogs which reach 5000 with in a hour  but guys definately it is a number , I created this blog around the midst of 2013 but started blogging from the may this year..
  Intially my posts were inspired from many other blogs , even from my Dronacharya Ravi belagere's Hi bangalore! and Oh manase... now I'm growing independently , My "Heli hogu karana" & the thriller "Hunnimeya Nishabda" getting more viwers rather attracting more viewers.
   My blog & writing was started from the love letters[not for the personal use  though ;)]  then slightly started blogging about love and romantic stories now all my concentration & thinking is revolving around the one thriller story "Hunnimeya nishabda" and another romantic comedy story . 
    many say dream big to avhieve  , yes I'm dreaming big... my page viwers is 5000 by now , I'm sure one or other day it'll reach 50,000 mark . one of my other big dream is writting a novel! , may be its too early but the work has started, the dream is getting its shape....may be its a big dream , guys  dream does vome true..
    with all my headache internals , assignments , lab test , exams I'm making some time to update my blog.... please do come & read my posts n suggest my blogs to your knowns...
   finally a big thanks to all my friends Chaithanya,  Vinay , Ramya , Sindhu , Kishore , Naveen , Sanjay , Aishu , Madhu , Manu , Shonali , Nandan and the list goes on.... it's my heartfull thanks to all my readers and to YOU! Thank you , Thanks alot !!

3 Oct 2014

ಹುಣ್ಣಿಮೆಯ ನಿಶಬ್ಧ ಭಾಗ-೩

    

    ( ಹಿಂದಿನ ಭಾಗದಿಂದ- ಹಿಂಟ್ ಸಿಕ್ಕಿದ ಖುಷಿಯಲ್ಲಿ AC Viencient ಹಂತಕರ ಬೆನ್ನೆಟ್ಟಿ ಹೊರಟರು . ಶಾಲಿನಿ ತನಗೆ ಅರಿವಿಲ್ಲದೆ ಹಿಮಾಂಶುವಿಗೆ ಮತಷ್ಟು ಹತ್ತಿರವಾಗುತ್ತ ಹೋದಳು, ಹಿಮಾಂಶು ಹುಣ್ಣಿಮೆಯ ದಿನ ಯಾಕೆ ಕಾಲೇಜಿಗೆ ಬರುವುದಿಲ್ಲ ಮತ್ತು ಈ ಹುಣ್ಣಮೆಯ ದಿನ ಕಾಲೇಜಿಗೆ ಬಂದದ್ದು ಕೂಡ ನಿಗೂಢವಾಗೆಯಿತ್ತು)

   ಭಾಗ-೩  

       ಪುಟ್ಟ ಹಿಂಟ್ ದೊರೆತದ್ದೆ ತಡ ಹಿಂದುಪುರದ Assistant commisioner vincient ಬೆಂಗಳೂರು ಪೋಲಿಸರೊಂದಿಗೆ ದೊಡ್ಡ plan ಸಿದ್ದಪಡಿಸಿದ್ದರು "It was a very intellectual plan" ರಾತ್ರೊರಾತ್ರಿ ತಾತಲ್ಕಿಕ  CC cameraಗಳನ್ನು ರೈಲಿನ ಎಲ್ಲಾ  ಬೋಗಿಗು ಫಿಕ್ಸ್ ಮಾಡಲಾಗಿತ್ತು. ತಾವು ಪೋಲಿಸ್ ಎಂಬುದೇ ಗೊತ್ತಗದ ಮಟ್ಟಗೆ ವೇಶ ಮರಿಸಿಕೊಂಡರು , "Fully loaded English made CZ೭೫ SEMI AUTOMATIC PISTOL"ಗಳನ್ನ ಇಟ್ಟುಕೊಂಡಿದ್ದರು , ಒಂದು bullet, just one bullet ಹಂತಕನ ತಲೆಗೆ ಬಿದ್ದರೆ. ಅವನ ಮೆದುಲು ಟ್ರೇನ್ನ ಚವಣಿಗೆ ಕಚ್ಚಿಕೊಳ್ಳತ್ತಿತ್ತೆನೊ? ಅಷ್ಟು damage , mobility , acclereation ಇರೋ pistolನನ್ನು ಇಟ್ಟುಕೊಂಡಿದ್ದರು Assistant commisioner of Police Louis vincient , ಟ್ರೇನ್ನ ಅಷ್ಟು ಬೋಗಿಯಲ್ಲು ಮಫ್ತಿಯಲ್ಲಿದ್ದ ಪೋಲಿಸರು ಸುತ್ತುವರಿದಿದ್ದರು. ಕಳೆದ  ನಾಲ್ಕು ಹುಣ್ಣಮೆಗಳಿಂದ ನಡೆಯುತ್ತಿದ್ದ ಸಾಲು ಸಾಲು ಕೊಲೆಗಳು ಅವರನ್ನ ನಿದ್ದೆಗೆಡಿಸಿತ್ತು " It was reallu an INTELLECTUAL plan" ಹದ್ದಿನ ಕಣ್ಣಂತೆ ಟ್ರೇನ್ಗೆ ಹತ್ತುತಿದ್ದ ಪ್ರತಿ ಒಬ್ಬರನ್ನು ಗಮನಿಸುತ್ತಿದ್ದರು  , ಆಗ ಬೆಳಗ್ಗೆ ಆರು ಗಂಟೆ ಮುವತ್ತು ನಿಮಿಷ ಬೆಂಗಳೂರು-ಭಬನೆಶ್ವರ ಟ್ರೇನ್ ನಂ.೧೮೪೬೪ ಪ್ರಶಾಂತಿ ಎಕ್ಸಪ್ರೇಸ್ ನಿಧಾನವಾಗಿ ಸದ್ದು ಮಾಡುತ್ತ , ಕೂಗುತ್ತ ಚಲಿಸಲಾರಂಬಿಸಿತು.

    ಕರ್ನಾಟಕ -ಅಂಧ್ರದ ಜೀವನಾಡಿಯಾಗಿದ್ದ ಪ್ರಶಾಂತಿ ಎಕ್ಸಪ್ರೇಸ್ ಭರ್ತಿ ೬೦೦೦ ಪ್ರಯಾಣಿಕರರನ್ನು ಒತ್ತುಹೊಯ್ಯತ್ತಿತ್ತು , ಟ್ರೇನ್ ಯಲಹಂಕ , ಗೌರಿಬಿದನೂರು ದಾಟಿತ್ತು ಪೋಲಿಸರ ಕಣ್ಣಗಳು ಮೊನಚಗಿತ್ತು , ಬಲಿಗಾಗಿ ಕಾಯುತ್ತ ಬೆಚ್ಚನೆ  Assistant commisioner vincientನ ಕಾಲುಗಳ ಸಾಕ್ಸನಲ್ಲಿ ಅಡಗಿ ಕೂತ್ತಿತ್ತು English made CZ೭೫ SEMI AUTOMATIC PISTOL, ೯ಕಿಮೀ ಪೋಲಿಸರ ಎದೆಬಡಿತ ಹೆಚ್ಚಗುತ್ತಿತ್ತು , ಬೋಗಿಯಲ್ಲಿದ್ದ ಅಷ್ಟು ಜನರನ್ನು ದಿಟ್ಟಿಸಿ ನೋಡುತ್ತಿದ್ದರು.ಒಂದೇ ಸಮ ತಾವು ತಂದಿದ್ದ hidden mikeನಲ್ಲಿ ಆದೇಷ ಪಾಸ್ ಆಗುತ್ತಿತ್ತು .ಹಿಂದುಪುರ,   ಕರ್ನಾಟಕ -ಅಂಧ್ರದ ಗಡಿ ಪ್ರದೇಶವಾದ ಹಿಂದುಪುರ ಬಂದೆಬಿಟ್ಟಿತ್ತು . ಪೋಲಿಸರ ಕಣ್ಣುಗಳು ಏನ್ನನ್ನೊ ಹುಡುಕುತಿದೆ , ಪ್ರತಿಯೊಂದು ಜಾಗವನ್ನು ದಿಟ್ಟಿಸಿ ನೋಡುತ್ತಿತ್ತು , no, ಯಾವುದೇ ಕೊಲೆ ಈ ಬಾರಿ ನಡೆದಿರಲಿಲ್ಲ , they didn't give up- let us wait untill we reach Ananthpur ಅಂದಿದ್ದರು AC Vincient . They were waiting to catch the killers . No, they were dissappointed ಕೊಲೆಗಾರರು ಈ ಬಾರಿ ಇಲ್ಲಿಗೆ ಬಂದಿರಲಿಲ್ಲ.. ಬಂದಿರಲಿಲ್ವ??
     *   *   *

      ಕಾಮಟಿಪುರದ ಕಾವೇರಿ , ಬೆಳಕನ್ನು ಕಂಡು ಅದೆಷ್ಟು ದಿನಗಳಾಗಿದ್ದವು. ಅವಳ ಬದುಕಿದ್ದದ್ದೆ ಕತ್ತಲೆಯಲ್ಲಿ. ರಾತ್ರಿಯಾದ ಕೂಡಲೆ ಒಂದು ತೆಳ್ಳನೆಯ ಸೀರೆ ಹುಟ್ಟು. ಹೂವು ಮುಡಿದು ಹೊರಟಲೆಂದರೆ ಪುನಃ ಹಿಂತುರುಗುತ್ತಿದ್ದದ್ದೆ ಮರುದಿನ ಬೆಳಗ್ಗೆಯೇ. ಕಾವೇರಿ ಕಸುಬು ಎಷ್ಟು ಪ್ರಸಿದ್ದಿ ಪಡೆದಿತ್ತು ಎಂದರೆ ಅವಳಿಗೆ ಹೆಸರು ತಂದಿಟ್ಟಿದ ಮುಂಬೈನ ಕೇಂಪು ಲೋಕ ಕಾಮಟಿಪುರದ ಗಲ್ಲಿಗಲ್ಲಿಯಲ್ಲೂ  ಗೊತ್ತಿತ್ತು. ಕಾವೇರಿಯನ್ನು ಮುಂಬೈನಿಂದಲು ಜನ ಹುಡುಕಿಬರುತ್ತಿದರು . ಕಾವೇರಿ ಕತ್ತಲ ಲೋಕದ ಕಸುಬಿನಲ್ಲಿ ಮುಳುಗಿ ಹೋಗಿದ್ದಳು "ಹುಣ್ಣಮೆಯ ದಿನ : ಹೊರತುಪಡಿಸಿ . ಅಮ್ಮ ಯಾಕೆ ಹೀಗೆ , ಇದರಿಂದ ಹೊರಗೆ ಬಾ! ನಾನು ನಿನ್ನನ್ನು ನೋಡಿಕೊಳ್ಳುತ್ತೆನೆಂದು ಹೇಳಲು ಯೋಚಿಸಿದ್ದನಾದರು. ಅಮ್ಮನ ಬಗ್ಗೆ ಜಿಗುಪ್ಸೆ ಹುಟ್ಟಿಸಿತು ಹಿಮಾಂಶುವಿಗೆ . ಅಮ್ಮನ ಮೇಲಿದ್ದ ಕೋಪ , ಅಮ್ಮನ ಮೇಲಿದ್ದ ಜಿಗುಪ್ಸೆ , ತೀರಸ್ಕರ , ಇವನನ್ನು ಮೌನದಿಂದಲೆ ಬೆಳೆಯಲು ಹೆಡುಮಾಡಿತ್ತು , ಯಾರೊಂದಗೂ ಬೆರೆದಿರಲಿಲ್ಲ . ಯಾರ ಪ್ರೀತಿಯು ಸಿಕಿರಲಿಲ್ಲ. ಹಿಮಾಂಶು , ಅನಾಥ ಮಕ್ಕಳಿಗೂ ಹೀನವಾಗಿ ಬೆಳೆದಿದ್ದ  . ಅಮ್ಮನೊಂದಿಗೆ ಸಂತೋಷ , ನೋವು , ನಲಿವು , ಪ್ರೀತಿ , ಅನುಭವ ಯಾವುದನ್ನು ಅಂಚುಕೊಂಡಿರಲಿಲ್ಲ , ಎಷ್ಟೊ ಬಾರಿ ಸಾಯಲು ಪ್ರಯತ್ನಿಸಿದ್ದನಾದರು , "ಇಲ್ಲ , ಈ ಜಗತ್ತಿನಲ್ಲಿ ಎಲ್ಲಾ ನನ್ನನ್ನು ತಿರುಗಿನೊಡಬೇಕು , ಸಾದಿಸಬೇಕು" ಎಂದು ತನ್ನಲ್ಲೆ ತಾನೆ ಹೇಳಿಕೊಂಡಿದ್ದ ಹಿಮಾಂಶು...
     ಇತ್ತ ತಾಯಿ ತಾನೇಕೆ ಹೀಗೆ.. ಇದರ ಹಿಂದಿನ ಕಾರಣ ಏನೆಂಬುದು ಎಂದು ವಿವರಿಸಲು ಹೊದರು ಯಾರು ಕೇಳುತ್ತಿರಲಿಲ್ಲ , ನನ್ನ ನಿಜವಾದ ಹೆಸರು ಕಾವೇರಿಯಲ್ಲ , ಪ್ರಶಾಂತಿನಿ ಅಂತ ಸ್ವತಃ ತನ್ನ ಮಗ ಹಿಮಾಂಶುವಿಗೆ ಹೇಳೆದರು ಕೂಡ ನಂಬುತ್ತಿರಲಿಲ್ಲ. ಅವಳ ಜೀವನದಲ್ಲಿ ನಡೆದ ಆ ದೊಡ್ಡ ಮೋಸ, ಹಿಂಸೆ ಕಾಡುತ್ತಲೆ ಇತ್ತು , "ಎಷ್ಟು ಸುಂದರವಾಗಿತ್ತು ನನ್ನ ಬದಕು " ಅಂತ ತನ್ನೊಳಗೆ ತಾನೆ ಕೇಳಿಕೊಳ್ಳುತ್ತಿದ್ದಲು ಕಾವೇರಮ್ಮ
    ಸುಂದರವಾದ ಮತ್ತು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಪ್ರಶಾಂತಿನಿ ಲವ್ ಮಾಡಿ ಪ್ರೋಫೆಸರ್‍್ನನ್ನು ಮದುವೆಯಾಗಿದ್ದಳು . ಜೀವನದಲ್ಲಿ ತನಗಿದ್ದ ಎಲ್ಲಾ comfort ನೀಡಿದ್ದ ಪ್ರಶಾಂತಿನಿ ಗಂಡ  . ಬೆಂಗಳೂರಿನ ಜಯನಗರದಂತ ಜಯನಗರದಲ್ಲೊಂದು ಸ್ವಂತ ಮನೆ , ಇಬ್ಬರು ಮಕ್ಕಳು. ಹೀಗೆ ಶಾಂತ ಸಾಗರದಲ್ಲಿ ಸಾಗುತ್ತಿದ್ದ ದೋಣಿಗೆ ನಾವುಕ ಮಾರೆಯಾಗಿ ಹೋಗಿದ್ದ , ಸುಂದರವಾದ ಪ್ರಶಾಂತಿನಿಯನ್ನು ಬಿಟ್ಟು ಹೋಗಿದ್ದ ಪ್ರೋಫೆಸರ್ "‍ತನ್ನ ಬದುಕಿನ ಎಲ್ಲಾ ಬಾಗಿಲು ಮುಚ್ಚಿಕೊಂಡಗಲೇ ಅಲ್ವೇ ನಾನು ಈ ಕಸುಬಿಗೆ ಇಳಿದದ್ದು " ಎಂದು ತನ್ನೊಳಗೆ ತಾನೆ ಕೊರಗುತ್ತಿದ್ದಳು ಪ್ರಶಾಂತಿನಿ @ ಕಾವೇರಿ
   *   *   *
    Alaxander ರಾಜನಾಥ ಚಟರ್ಜಿ  , ಬೆಂಗಳೂರಿನ ಪ್ರತಿಷ್ಠತ ಕಾಲೇಜು ಪ್ರೀನ್ಸಿಪಾಲ್ ಗೆ ಇರಬೇಕಾದ ಸಂತೋಷ ಆಗಲಿ , comfort ಆಗಲಿ ಇರಲಿಲ್ಲ . ಒಬ್ಬಂಟಿ ಬದುಕಿನಲ್ಲಿ ಒಂದು ಹೆಣ್ಣು ಮಗುವನ್ನು ತಾಯಿಯ ಆಸರೆಯಿಲ್ಲದೆ ಬೆಳೆಸಿದ್ದರು , ಆಕೆಗೆ comfortಗಿಂತ luxuryಯನ್ನೆ ನೀಡಿದ್ದ , but what ಇರಬೇಕಾದ ನೆಮ್ಮದಿಯೆ ಇರಲಿಲ್ಲ ಆಕೆಗೆ , ಮಧ್ಯರಾತ್ರಿಯಲ್ಲಿ  ಕಿಟರೆನೆ ಚಿರುತ್ತಿದ್ದಳು , ಅಪ್ಪನಿದ್ದ ಬಳಿಗೆ ಓಡಿ ಬರುತ್ತಿದ್ದಳು ಸಿಂಧು...... ತಾನು ಚಿಕ್ಕ ವಯಸ್ಸಿನಲ್ಲೆ ಇದ್ದಾಗ ಅಮ್ಮನ ಬಿಟ್ಟು ಬಂದಿದ್ದ ಅಂತ ಗೊತ್ತಿತ್ತು. ಆದರೆ ಅಮ್ಮನ ಮಮತೆ , ಪ್ರೀತಿ ಕೊಟ್ಟು ಬೆಳೆಸಿದ್ದ ಚಿಕ್ಕಮ್ಮ ಇದ್ದಕ್ಕ್ಇದಂತೆ ತೀರಿಕೊಂಡಿದ್ದು ಆಕೆ ಮೇಲೆ ಗಾಢ ಪರಿಣಾಮ ಬೀರಿತ್ತು , ಯಾಕೋ ತನ್ನ ಸೀಮಿತ ಕಳೆದುಕೊಡಿದ್ದಳು ಸಿಂಧು
*  *  *
 
  ಅಂದು ಸ್ಯಾಂಕಿಯ ರಸ್ತೆಯಲ್ಲಿ ಅನಿರಿಕ್ಷಿತವಾಗಿ ಸಿಕ್ಕಿದ ಹಿಮಾಂಶು ಅಲ್ಲೆ MES ಕಾಲೇಜು ಬಳಿ ಇದ್ದ ಕಾಫಿ ಡೇ ಕರೆದೊಯ್ದು cappacio ಕುಡಿದ ನಂತರ ಶಾಲಿನಿಯ ಮನಸ್ಸೆಲ್ಲಿ ಹಿಮು ಅಂತ ಅಂತವಾಗಿ ಅವರಿಸಿಕೊಂಡಿದ್ದ .. ಎಂದು ತನ್ನ appreance ಬಗ್ಗೆ ಕಾಳಜಿವಯಸದ ಶಾಲಿನಿ ಆ ದಿನ ಮನಗೆ ಹೊದವಳೆ ತನ್ನ ಸೌಂದರ್ಯದ ಬಗ್ಗೆ ಯೋಚಿಸ ತೋಡಗಿದಲಳು.." Am I pretty enough to be a friend for my ಹಿಮು??" ಅಂತ ತನ್ನೊಳಗೆ ತಾನೆ ಕೇಳಿಕೊಂಡ ಶಾಲಿನಿಯ ಮುಖದಲ್ಲಿ ಸಣ್ಣದೊಂದು ನಗೆ ಆಕೆಯ ಕೆನ್ನೆಯನ್ನು ತಂಪುಮಾಡಿತ್ತು . ಈಗ ತಾನೇ ಹಚ್ಚಿದ್ದ ದೀಪದಂತೆ ಆಕೆಯ ಕಣ್ಣುಗಳು ಹೊಳೆಯುತದತಿದ್ದವು . ಯಾವುದೋ ಸಂತೋಷದಲ್ಲಿ ತನ್ನ bed ಮೇಲೆ ಅಂಗಾತ ಮಲಗಿ ಯೋಚಿಸತೊಡಗಿದಳು "ನಾನು ಹಿಮುನನ್ನು ಪ್ರೀತಿಸ ತೋಡಗಿದ್ದೆನ? Am I in love with him "   ಆಕೆಗೆ Clarity ಇರಲಿಲ್ಲ. confused stateನಲ್ಲಿದ್ದಳು ಜಗತ್ತಿನ ಎರಡನೇ ಅತೀ ಸುಂದರಿ ಶಾಲಿನಿ , ಯಾವುದೆ ದಾರಿ ಕಾಣದೆ ಹಿಮಾಂಶುವಿಗೆ ಬರೆಯತೊಡಗಿದಳು..

     ಪ್ರೀತಿಯ(?) ಹಿಮು ,
       ಈ ಪತ್ರ ನನ್ನ ಎದೆಯಲ್ಲಿ ಮೂಡಿನಿಂತು ದಿನಗಳೆ ಆಗಿದ್ದವು , I don't know whether I'm doing it right or not , ನೀನು ನನ್ನ ಜೊತೆಯಲ್ಲಿದಷ್ಟು ಹೊತ್ತು I feel comfort , ನಿನ್ನೊಂದಿಗೆ ನಡೆಯುವ ಪ್ರತಿ ಹೆಜ್ಜೆಯನ್ನು ನಾನು enjoy ಮಾಡಿದ್ದೆ , ನಿನ್ನ presence ನನ್ನ ಮನಸ್ಸಿಗೆ ಮುದ ನೀಡುತ್ತೆ.. ಬರೀ comfort , happy , sweetness , ಮುದ ನೀಡುವ ಅನುಭವ ಪ್ರೀತಿನ ಗೊತಿಲ್ಲ , ನೋ definately ಇದು ಲವ್ ಅಲ್ಲ , ಲವ್ ಇರಬಹುದ ಹಿಮು?? ನಿಜವಾಗಲೂ ಗೊತ್ತಿಲ್ಲ , but we are not just friends , we are more than  friends , ನಿನ್ನ ಉತ್ತರದ ನೀರಿಕ್ಷೆಯಲ್ಲಿ..
                                                                                           -ನಿನ್ನ ಶಾಲಿನಿ


   ಈ ರೀತಿ kanglishನಲ್ಲಿ ಪತ್ರ ಬರೆದು ಹಿಮಾಂಶುವಿಗೆ ನೀಡಿದ್ದಳು ಶಾಲಿನಿ , ಆತ ನೀಡಿದ್ದ ಉತ್ತರ ಶಾಲಿನಿಯನ್ನ ದಂಗುಬಡಿಸುವುದರೊಂದಿಗೆ ನೆಮ್ಮದಿನೀಡಿತ್ತು!!!?? 
close