29 Jul 2021

The Paradox Love: Bangalore- Bangkok

Reading Olivia Liang’s “The Lonely City” recently transported me back to Bangkok — its stark glass skyscrapers, its deep estrangement punctured by moments of humanity. The City of Dreams, this glistening center of the world, often crystallized what it meant to be lonely amongst millions — to inhabit that “uneasy combination of separation and exposure” revealed by the tiny window cells reaching hundreds of stories from the ground to sky.

I had romantic notions when I first traveled to Bangkok: to canvas the city, my first international city, to build memories on every block of that land. In many ways, I succeeded — we walked, we wrote, we danced, we stole, we spoke, we bled and we lived — in so many known and unknown corners. In places where we were both welcome and unwelcome. A small boy back then, discovering the entire kaleidoscope of the world.

 


In that sense, Bangalore is only the city that I have ever truly inhabited. Unlikely symmetries like this are the mystic riddles of cities, tiny patterns crisscrossing an ever-expanding canvas. 

 

Almost many years, I do not profess to know Bangalore as a city, not yet. But I have done my fair share of canvassing, and have found those few places that are my own personal oases. 

Early-morning walks by Ulsoor, Sankey, or Jakkur lake, the unmoving water reflecting the sky. Dosas and chai at Airlines, its massive Banyan tree seemingly immortal. Those afternoon picnics at Cubbon, surrounded by families, kids on Yulu bikes, joggers. The tiny back lanes of DJ Halli, where the shopkeepers nod and a small gaggle of children scream with glee each Saturday I walk to the volunteer center. A terrace in Koramangala fourth block,  one of many temporary houses, wherein springtime the trumpet blossoms cover the windowsills like a pink sleeve.

*

Why does Bangalore feel so different from Bangkok? Why have I grown content here, peaceful even, in a way I never figured in the City of Dreams? Why does loneliness feel so different across the two places? Was it simply that I had grown out of my adolescent extremism and angst, or was it some difference between the cities themselves? My intuition is that it is a bit of both. 

For one, Bangalore is a horizontal city — sprawl in all directions. The result of highly inefficient and unplanned infrastructure to be sure, but the lack of those glassy, vertical skyscrapers so characteristic of hyper-modern cities is also refreshing. There is no vertigo in Bangalore, that “anonymous surveillance” where you can namelessly watch and be watched, where human routines are endlessly mediated and miniaturized by tiny glass windows on all sides. 

From my terrace, I can only see one house, one window, occupied by a family I know by name. Sometimes, we shout to one another — warnings about monkeys, quick exchanges about the day. These small rituals can root you to a place, give identity to your compatriots in the city — they are small intimacies that matter.

There is also a balance in Bangalore between community and openness, between consistency and change, between the old guard and the underdogs. Local folks still identify with their communities, joint families, tribes — yet balance it with an openness (or at the very least — resignation) to outsiders. The city has retained its localism to a good extent (the old eateries, theatres, parks) while amassing new “cosmopolitan” spaces for its burgeoning population and wealth. Neighborhoods, while still divided by class and community, always feature some diversity — there are no fully walled gardens, no “city within a city” where all undesirables are pushed to the perimeter or fringe.

This fusion, and the (relatively strong) upward mobility of a tech ecosystem, has given Bangalore this social “je ne sais quois” that I loved about Bangkok — where it mattered far less where you were from, but who you are to become.

And finally, the friendships — families that we are not born with, but make and discover along the uneven path. I love the level of familiarity (in other words, the lack of formality), how close friends show up to the house (“was just in the neighborhood!”) without warning, to have tea or a doobie. How there’s that unspoken loyalty that can be built with effort — whereas I could never be certain of this in the hyper-individualism of New York, where people often disappeared into their lives after some time, the signal patchy then suddenly, all too soon — lost. 

*

My loneliness in Bangalore is self-imposed, but gentle, something that can be easily dispelled with a walk or a call to the few friends that have helped me build a home here. Yet there are also new dimensions that I have never experienced before the loneliness of privilege, and of language. The inability to bridge the former without the latter. 

In New York, I was one of the millions of survivors with nothing to lose — I had waited tables, lived in a 70 square foot room amongst Chinatown’s illegal immigrants, felt as comfortable there as I did at the Opera House, or some Michelin-starred restaurant. 

In Bangalore, I am like a spectator in the city, seeing but never able to fully partake, wanting to break out of a comfortable cocoon but sheepishly mute, unable to express myself. The loneliness of privilege is unfamiliar to me. But not an unbreakable one by any means. 

After all, the love story between me and this city has only just begun. 

 

27 Jul 2021

ಬಸವರಾಜ ಬೊಮ್ಮಾಯಿ - ಕರ್ನಾಟಕ ರಾಜ್ಯದ ೨೩ನೇ ಮುಖ್ಯಮಂತ್ರಿ

ಬೊಮ್ಮಾಯಿ ಎಂದರೆ ರಾಜ್ಯಕ್ಕೆ ಹಿತ, 

ಬಿಜೆಪಿಗೆ ಹಿತಮಿತ, 

ಕಾಂಗ್ರೆಸ್ ಗೆ ಅಹಿತ.


ಬಸವರಾಜ ಬೊಮ್ಮಾಯಿ


ರಾಜ್ಯದ ಹಿತದೃಷ್ಟಿಯಿಂದ ಮಾತ್ರವಲ್ಲ ಬಿಜೆಪಿಯ ಭವಿಷ್ಯದ ದೃಷ್ಟಿಯಿಂದಲೂ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಒಳ್ಳೆಯ ಆಯ್ಕೆ. ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ಪ್ರಹ್ಲಾದ ಜೋಷಿ, ಬಿ.ಎಲ್.ಸಂತೋಷ್, ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲವೇ ಯಾರಾದರೂ ಲಿಂಗಾಯತೇತರ ನಾಯಕ ಮುಖ್ಯಮಂತ್ರಿ ಸ್ಥಾನಕ್ಕೆ ಒಳ್ಳೆಯ ಆಯ್ಕೆಯಾಗಿರುತ್ತಿತ್ತು, ಬಸವರಾಜ ಬೊಮ್ಮಾಯಿ ಅಲ್ಲ. 

 

ರಾಜ್ಯಕ್ಕೆ ಒಳ್ಳೆಯದು ಮಾಡಬೇಕೆಂಬ ಸದ್ಬುದ್ದಿಯಿಂದ ಬಿಜೆಪಿ ಹೈಕಮಾಂಡ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ  ಆಯ್ಕೆ ಮಾಡಿರಲಾರದು. ಅನಿವಾರ್ಯವಾಗಿ ಬಿ.ಎಸ್.ಯಡಿಯೂರಪ್ಪನವರ ಬಿಗಿಪಟ್ಟಿಗೆ 56 ಇಂಚಿನ ಎದೆ ಬಾಗಿದೆ ಅಷ್ಟೆ. 


ಜೋಷಿ, ಹೆಗಡೆ, ಸಂತೋಷ್ ಮೊದಲಾದ ಬ್ರಾಹ್ಮಣ ನಾಯಕರು, ತಪ್ಪಿದರೆ ಸಂಘ ಪರಿವಾರದಿಂದ ಬಂದ ಲಿಂಗಾಯತೇತರ ನಾಯಕರು ಅದೂ ತಪ್ಪಿದರೆ ಯಡಿಯೂರಪ್ಪನವರಿಗೆ ಆತ್ಮೀಯರಲ್ಲದ ಲಿಂಗಾಯತರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕೆಂದು ಕೇಶವಕೃಪಾದ ಪಾರುಪತ್ತೆಗಾರರು ಖಂಡಿತ  ಬಯಸಿರುತ್ತಾರೆ. ಆದರೆ ಭವಿಷ್ಯದಲ್ಲಿ ಅದರಿಂದಾಗುವ ಪರಿಣಾಮದ ಬಗ್ಗೆ ಯೋಚಿಸಿ ಹಿಂದಡಿ ಇಟ್ಟಿದ್ದಾರೆ. ಈ ಮೂರು ಗುಂಪುಗಳಲ್ಲಿ ಯಾರನ್ನೂ ಮಾಡಿದ್ದರೂ ಯಡಿಯೂರಪ್ಪನವರು ಸುಮ್ಮನೆ ಕೂರುತ್ತಿರಲಿಲ್ಲ.


ಒಂದೊಮ್ಮೆ  ಜೋಷಿ,ಹೆಗಡೆ,ಸಂತೋಷ್ ಮೊದಲಾದವರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಮಾಡಿದ್ದರೆ ಈ ಸರ್ಕಾರ ಬಹಳ ದಿನ ಬಾಳುತ್ತಿರಲಿಲ್ಲ, ಮಧ್ಯಂತರ ಚುನಾವಣೆ ಅನಿವಾರ್ಯವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ   ಸಂಖ್ಯಾಬಲ ಇಲ್ಲದ ಬ್ರಾಹ್ಮಣ ನಾಯಕರ ನೇತೃತ್ವದಲ್ಲಿ ಚುನಾವಣೆಯನ್ನು  ಎದುರಿಸಿದರೆ ಪರಿಣಾಮ ಏನಾಗಬಹುದೆಂದು ಊಹಿಸಲಾಗದಷ್ಟು ಸಂಘ ಪರಿವಾರದ ನಾಯಕರು ದಡ್ಡರಲ್ಲ. ಅವರೇನು ನಮ್ಮ ಟಿವಿ ಚಾನೆಲ್ ಗಳ ರಂಗ,ಪೆಂಗರೇ? ಈ ಕಾರಣದಿಂದಾಗಿ ಈ ತ್ರಿಮೂರ್ತಿಗಳ ಹೆಸರು ಹೈಕಮಾಂಡ್ ಪಟ್ಟಿಯಿಂದ ಎಂದೋ ಡಿಲೀಟ್ ಆಗಿತ್ತು. 


ಪ್ರಾರಂಭದಲ್ಲಿ ಯಡಿಯೂರಪ್ಪನವರು ಪ್ರಹ್ಲಾದ ಜೋಷಿ ಅವರ ಹೆಸರನ್ನೂ ಸೂಚಿಸಿದ್ದರಂತೆ.  ಇತ್ತೀಚಿನ ದಿನಗಳಲ್ಲಿ ಸೀರಿಯಸ್ಸಾಗಿ ಸೋಷಿಯಲ್ ಎಂಜನಿಯರಿಂಗ್ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ ಸದ್ಯಕ್ಕೆ ಎಲ್ಲಿಯೂ ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಬಾರದೆಂದು ತೀರ್ಮಾನಿಸಿದೆಯಂತೆ. ಆದ್ದರಿಂದ ಈ ಹೆಸರುಗಳು ನಮ್ಮ ಮಾಧ್ಯಮ ಮಾಲೀಕರು ಮತ್ತು ಸಂಪಾದಕರ ಗುಪ್ತ ಆಶಯದಂತೆ ಟಿವಿ ಪರದೆಗಳಲ್ಲಿ, ಪತ್ರಿಕೆಯ ಮುಖಪುಟಗಳಲ್ಲಿ ರಾರಾಜಿಸಿದೆ ಅಷ್ಟೆ.


ಬಿಜೆಪಿ ಹೈಕಮಾಂಡ್ ಗೆ ಇದ್ದ ಎರಡನೇ ಆಯ್ಕೆ ಲಿಂಗಾಯತೇತರ ಅಂದರೆ ಒಕ್ಕಲಿಗ, ಹಿಂದುಳಿದ ಜಾತಿ ಇಲ್ಲವೇ ದಲಿತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುವುದು. ಆದರೆ ಯಡಿಯೂರಪ್ಪನವರ ಪರವಾಗಿ ಎದ್ದುನಿಂತ  ಲಿಂಗಾಯತ ಸ್ವಾಮಿಗಳ ಕೂಗು, ಯಡಿಯೂರಪ್ಪನವರ ಕಣ್ಣೀರಿಗೆ ಹರಿದ ಅನುಕಂಪದ ಹೊಳೆ, ಮಾಧ್ಯಮಗಳಲ್ಲಿಯೂ  ಪ್ರಕಟ/ಪ್ರಸಾರವಾದ ಯಡಿಯೂರಪ್ಪನವರ ಪರವಾದ ವರದಿಗಳನ್ನು ನೋಡಿ ಬಿಜೆಪಿ ಹೈಕಮಾಂಡ್ ಈ ಆಯ್ಕೆಯನ್ನೂ ಕೈಬಿಟ್ಟಿದೆ.


 ಕೊನೆಯ ಆಯ್ಕೆಯಾಗಿ ಕೊನೆಕ್ಷಣದ ವರೆಗೆ ಯಡಿಯೂರಪ್ಪನವರ ಆತ್ಮೀಯ ವಲಯದಲ್ಲಿ ಇಲ್ಲದ ಲಿಂಗಾಯತ ನಾಯಕರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ಹೈಕಮಾಂಡ್ ಪ್ರಯತ್ನ ಮಾಡಿದೆ. ಸಂಭಾವ್ಯ ಲಿಂಗಾಯತ ಅಭ್ಯರ್ಥಿಗಳ ಪಟ್ಟಿಯಲ್ಲಿ ಬೊಮ್ಮಾಯಿಯೊಬ್ಬರನ್ನು ಹೊರತುಪಡಿಸಿ ಉಳಿದೆಲ್ಲ ಲಿಂಗಾಯತ ನಾಯಕರು (ಯತ್ನಾಳ್, ಬೆಲ್ಲದ, ನಿರಾಣಿ,ಮಾಧುಸ್ವಾಮಿ), ಒಂದಲ್ಲ ಒಂದು ಸಂದರ್ಭದಲ್ಲಿ ಯಡಿಯೂರಪ್ಪನವರ ವಿರುದ್ದ ದನಿ ಎತ್ತಿ ಎದುರು ಹಾಕಿಕೊಂಡವರು.


ಬಸವರಾಜ ಬೊಮ್ಮಾಯಿ ಮಾತ್ರ ಪ್ರಾರಂಭದಿಂದಲೂ ಯಡಿಯೂರಪ್ಪನವರ ನಿಷ್ಠಾವಂತ ಅನುಯಾಯಿಯಾಗಿ ನಡೆದುಕೊಂಡವರು. ಹೀಗಾಗಿ ಲಿಂಗಾಯತರನ್ನು ಮುಖ್ಯಮಂತ್ರಿಯಾಗಿ ಮಾಡುವುದನ್ನು ವಿರೋಧಿಸಿದ್ದ ಯಡಿಯೂರಪ್ಪನವರು ಕೊನೆಗೆ ಬೊಮ್ಮಾಯಿ ಹೆಸರಿಗೆ ರಾಜಿಯಾಗಿದ್ದಾರೆ. ಇದನ್ನು ಒಪ್ಪಿಕೊಳ್ಳದೆ ಬಿಜೆಪಿ ಹೈಕಮಾಂಡ್ ಗೆ ಬೇರೆ ದಾರಿ ಇರಲಿಲ್ಲ.   ಸಂಘ ಪರಿವಾರದಿಂದ ಬಂದವರಲ್ಲ ಎನ್ನುವುದಷ್ಟೇ ಬೊಮ್ಮಾಯಿ ಬಗ್ಗೆ ಇರುವ ಏಕೈಕ ಆಕ್ಷೇಪವಾಗಿತ್ತು . ಅಷ್ಟಕ್ಕೆ ಬಿಜೆಪಿ ಹೈಕಮಾಂಡ್ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಯಿತು. ವಾಸ್ತವದಲ್ಲಿ ಲಿಂಗಾಯತ ಸ್ವಾಮಿಗಳ ಪ್ರತಿರೋಧದ ನಿಜವಾದ ಫಲಾನುಭವಿ ಬಸವರಾಜ ಬೊಮ್ಮಾಯಿ.


ಬಿ.ಎಸ್.ಯಡಿಯೂರಪ್ಪ ಮತ್ತು ಸಂಘ ಪರಿವಾರದ ನಡುವಿನ ಹಗ್ಗ ಜಗ್ಗಾಟದಲ್ಲಿ ಸಿಕ್ಕಿಹಾಕಿಕೊಳ್ಳದೆ ಇದ್ದರೆ ಬಸವರಾಜ ಬೊಮ್ಮಾಯಿ ಅವರಿಗೆ ಒಳ್ಳೆಯ ಆಡಳಿತ ನೀಡುವ ಬುದ್ದಿಶಕ್ತಿ ಮತ್ತು ಅನುಭವ ಇದೆ. ವಿಧಾನಮಂಡಲದಲ್ಲಿ ವಿರೋಧ ಪಕ್ಷದ ಮುಖ್ಯವಾಗಿ ಸಿದ್ದರಾಮಯ್ಯನವರ ವಾಗ್ದಾಳಿಯನ್ನು ಅನೇಕಬಾರಿ ಅವರದೇ ರೀತಿಯಲ್ಲಿ  ಬೊಮ್ಮಾಯಿಯವರು ಅಂಕಿಅಂಶಗಳನ್ನು ಮುಂದೊಡ್ಡಿ ತರ್ಕದ ಪಟ್ಟು ಹಾಕಿ ಸಮರ್ಥವಾಗಿ ಎದುರಿಸಿದ್ದಾರೆ. ಹಣಕಾಸು ಸಚಿವರಲ್ಲದೆ ಇದ್ದರೂ ಜಿಎಸ್ ಟಿ ಕೌನ್ಸಿಲ್ ನಲ್ಲಿ ಅವರೇ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. ಸದ್ಯ ಕಳಂಕಗಳ ಕಪ್ಪು ಚುಕ್ಕೆಗಳಿಲ್ಲ, ನಡವಳಿಕೆಯಲ್ಲಿ ಘನತೆ ಇದೆ.  ಹೇಳಲೇ ಬೇಕಾದ ಕೊನೆಯ ಮಾತೆಂದರೆ ಬಿಜೆಪಿಯಲ್ಲಿದ್ದರೂ ಇಲ್ಲಿಯ ವರೆಗೆ ಕೋಮುವಾದಿ ಅಲ್ಲವಾದರೂ ಮತಾಂತರಿಗಳು ಹೆಚ್ಚು ಮತನಿಷ್ಟರಾಗಿರುವುದನ್ನು ಅನುಭವ ಹೇಳುತ್ತಿದೆ.


(ಕಳೆದ ನಾಲ್ಕೈದು ದಿನಗಳಲ್ಲಿ ಮುಖ್ಯಮಂತ್ರಿ ಯಾರಾಗಬಹುದೆಂಬ ಗೆಳೆಯರ ಪ್ರಶ್ನೆಗೆ ಖಾಸಗಿಯಾಗಿ ನಾನು ಹೇಳಿದ್ದ ಹೆಸರು ಬಸವರಾಜ ಬೊಮ್ಮಾಯಿ. ನಾನು ಇದನ್ನು ಬರೆಯಲು ಹೋಗಿರಲಿಲ್ಲ.  ನನಗೆ ಯಾರೂ ಈ ಹೆಸರನ್ನು ಕಿವಿಯಲ್ಲಿ ಬಂದು ಹೇಳಿರಲಿಲ್ಲ. ಮತ್ತೆ ಹೇಗೆ ಆ ಹೆಸರು ಎಂದು ಕೇಳಿದರೆ ಅವರಿಗೆ ಮೇಲಿನ ಬರಹ ಓದಿರಿ ಎಂದಷ್ಟೇ ಹೇಳಬಲ್ಲೆ.   )

-ಅಮಿನ್ಮಟ್ಟು 

13 Jul 2021

'ಅಕ್ಕಯ್' ಎಂಬ 'ಅವಳ' ಕಥೆ (Her-Story )| Akkai biography| Akkai book in Kannada

Akkai Biography

 

" Everyone is handicapped in some way "

        ತನ್ನ ಎಂಟನೇ ವಯಸ್ಸಿನಲ್ಲಿ ಬಹಳ ಇಷ್ಟಪಟ್ಟು ಹುಡುಗಿಯರೊಂದಿಗೆ ಕುಂಟೆಬಿಲ್ಲೆ ಆಡುತ್ತಿದ್ದ ಜಗದೀಶ (ಅಕ್ಕಯ್) ಎಂಬ ಹುಡುಗನನ್ನು ಅವರ ಅಪ್ಪ ಕೋಪದಿಂದ ಧರಧರನೆ ಮನೆಗೆ ಎಳೆದೊಯ್ದು ದಂಡಿಸಿ, ಒಲೆಯ ಮೇಲೆ ಕುದಿಯುತ್ತಿದ್ದ ಬಿಸಿ ನೀರನ್ನು ಸುರಿದು ಇನ್ನುಮೇಲೆ ಆ ಆಟವನ್ನು ಆ ಹುಡುಗಿಯರೊಂದಿಗೆ ಆಡಲೇಬಾರದು ಎಂಬ ಕ್ರೌರ್ಯ ಮೆರೆದರು. ಆದರೆ ಆತ ತಾನು ಹುಡುಗಿಯಾಗಬೇಕೆಂದೇ ಬಯಸಿದ್ದ.ಗೆಜ್ಜೆ ತೊಟ್ಟು, ಅಮ್ಮನ ಸೀರೆ ಉಟ್ಟು ಸಿಂಗಾರ ಮಾಡಿಕೊಳ್ಳುತ್ತಿದ್ದ. ಟವಲ್ ತೊಟ್ಟು ಉದ್ದ ಕೂದಲಿನವಳೆಂದು ನಟಿಸುತ್ತಿದ್ದ.


ಇದನ್ನು ನೆನಪಿಟ್ಟುಕೊಳ್ಳಿ ...


ಹಾಗೆಯೇ ತನ್ನ ಎಂಟನೇ ವಯಸ್ಸಿಗೆ ಕಣ್ಣುಗಳನ್ನು ಕಳೆದುಕೊಂಡ ಡೇವಿಡ್ ಹಾರ್ಟ್ ಮನ್ ಎಂಬ ಹುಡುಗ ಡೈನಿಂಗ್ ಟೇಬಲ್ ಮುಂದೆ ಕೂತು 'ಅಪ್ಪ ನಾನು ಡಾಕ್ಟರ್ ಆಗಬೇಕು' ಎಂದ. ಅದಕ್ಕೆ ಅವರಪ್ಪ ಫ್ರೆಡ್ ಹಾರ್ಟ್ ಮನ್ ' ನೀನು ಡಾಕ್ಟರ್ ಆಗಬಹುದು ಎಂದು ಯೋಚಿಸುತ್ತೀಯಾದರೆ ಖಂಡಿತಾ ಆಗುತ್ತೀಯ' ಎಂದು ಹೇಳಿದ. ಇಡೀ ಕುಟುಂಬವೇ ಅವನ ಬೆಂಬಲಕ್ಕೆ ನಿಂತಿತು. ಶಾಲೆಗಳಲ್ಲಿ ಅಡ್ಮಿಶನ್ ಕೊಡಲು ಹಿಂಜರಿದಿದ್ದ , ಮೆಡಿಕಲ್ ಸೀಟ್ ಕೊಡಲು ನಿರಾಕರಿಸಿದ್ದ ದಿನಗಳನ್ನೆಲ್ಲ ಮೆಟ್ಟಿನಿಂತ  ಡೇವಿಡ್ ಹಾರ್ಟ್‌ಮನ್ ಎಂಬ 26 ವರ್ಷದ ಫಿಲೆಡೆಲ್ಫಿಯನ್ ಯುವಕನೊಬ್ಬನಿಗೆ 1975 ರ ಮೇ ತಿಂಗಳ ಒಂದು ದಿನ ಅಮೇರಿಕದ ಟೆಂಪಲ್ ಯೂನಿವರ್ಸಿಟಿಯು ಮೆಡಿಕಲ್ ಡಿಗ್ರಿಯನ್ನು ಪ್ರದಾನ ಮಾಡಿತು. ಆ ಮೂಲಕ ಆತ ಅಮೇರಿಕದ ಮೊದಲ Blind Doctor ಎನಿಸಿಕೊಂಡ. ಹತ್ತು ಸಾವಿರ ಜನ ನೆರೆದಿದ್ದ ಸಭಾಂಗಣದಲ್ಲಿ ಗೆಳೆಯರು , ಕುಟುಂಬಸ್ಥರು, ಪ್ರೊಫೆಸರ್ ಗಳು, ವಿವಿಯ ಸಿಬ್ಬಂದಿ ಎಲ್ಲರ ಕೈಗಳು ಚಪ್ಪಾಳೆ ತಟ್ಟುತ್ತಿದ್ದರೆ ಕಣ್ಣುಗಳಲ್ಲಿ ನೀರಾಡುತ್ತಿದ್ದವು. 


ಡೇವಿಡ್ ತನ್ನ ಆಸೆಯನ್ನು ಹೇಳಿದಾಗ ಸಿಕ್ಕ ಪ್ರೋತ್ಸಾಹಕ್ಕೂ ಜಗದೀಶ ಎಂಬ ಹುಡುಗ ತಾನು ಹುಡುಗಿಯಾಗಬೇಕೆಂಬ ಆಸೆಯನ್ನು  ಪರೋಕ್ಷವಾಗಿ ಹೊರಹಾಕಿದಾಗ ಸಿಕ್ಕ ಪ್ರತಿಕ್ರಿಯೆಗೂ ಎಷ್ಟು ವ್ಯತ್ಯಾಸವಿದೆ ಅಲ್ಲವೆ ? ಡೇವಿಡ್ ನ ಮಾತುಗಳಲ್ಲೇ ಹೇಳುವುದಾದರೆ ' Everyone is handicapped in some way ' ಆದರೂ ಹೆತ್ತವರಿಂದ ಅವನಿಗೆ ಸಿಕ್ಕ ಪ್ರೋತ್ಸಾಹಕ್ಕೂ ಜಗದೀಶ ಎಂಬ ಹುಡುಗ ನಾನು ನಿಜವಾಗಿಯೂ ಅಕ್ಕಯ್ ಆಗಲು ಹವಣಿಸುವದಕ್ಕೆ ಸಿಕ್ಕ ಪ್ರತಿಕ್ರಿಯೆಗೂ ಇರುವ ವ್ಯತ್ಯಾಸದ ಅಂತರ ಬಹು‌ ದೂರದ್ದು. ವಿಶೇಷ ಎಂದರೆ ಈ ಅಕ್ಕಯ್ ಕೂಡ ಶ್ವೇತ ಭವನದ ಅತಿಥಿಯಾಗಿ ಹೋಗಿ ಬಂದ ಸಾಧನೆ ಮಾಡಿದ್ದಾರೆ. ಅವರ ಸಾಧನೆ ನನಗೆ ಹಾರ್ಟ್ ಮನ್ ಗಿಂತ ಎತ್ತರದ್ದು ಎಂದೆನ್ನಿಸುತ್ತದೆ. ಆತ ಮೀರಬೇಕಾದದ್ದು  ಕೇವಲ ಧೈಹಿಕ ಕೊರತೆಯೊಂದನ್ನು. ಆದರೆ ಅಕ್ಕಯ್ ಧೈಹಿಕ ಮತ್ತು ಸಾಮಜಿಕ ಸ್ವೀಕೃತಿ ( Social Sanction) ಎರಡನ್ನೂ ಜಯಿಸಬೇಕಿತ್ತು. She has been a bravo. ಅವರ ಜೀವನ ಕಥನ ಓದುವಾಗ ಇಡೀ ಪುಸ್ತಕದಲ್ಲಿ ಎಲ್ಲಾದರೂ ಒಂದು 'Stationary Space' ಸಿಗುತ್ತದಾ ಎಂದು ಬಹಳ ಕಾಯುತ್ತಿದ್ದೆ. ಆದರೆ ನಿರಂತರವಾಗಿ ಚಲಿಸುತ್ತಲೇ ಇದ್ದಾರೆ ಆಕೆ.  


ಈ ಪುಸ್ತಕದಲ್ಲಿ ಇಡೀ LGBTQ ಸಮುದಾಯವೇ ನಮ್ಮ ಕಣ್ಮುಂದೆ ಬರುತ್ತದೆ. ಇದು ಅಕ್ಕಯ್ ನ ಕಥೆ ಮಾತ್ರವಲ್ಲ. ಹಾಗೆ ನೋಡಿದರೆ ಇದು ಇಡೀ ಸಮಾಜದ ಕಥೆ. ಏಕೆಂದರೆ ಇದು ಶೋಷಣೆ , ಅಸಮಾನತೆ , ಕಿರುಕುಳ ಮತ್ತು ಪುರುಷಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಲು ನಿಸರ್ಗ ಸಹಜ ಕಾರಣಗಳನ್ನು ನಮ್ಮ ಮುಂದಿಡುವ ಕಥೆ. ತಮ್ಮದಲ್ಲದ ತಪ್ಪಿಗೆ , ದೇಹದ ವಿಶಿಷ್ಟ ( ಅದೊಂದು ನ್ಯೂನ್ಯತೆ ಆಗಲಾರದು) ಸಂರಚನೆ ಮತ್ತು ಮಾನಸಿಕ ಸ್ಥಿತಿಯಿಂದಾಗಿ ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾಗುವ  ಒಂದು ಸಮುದಾಯದ ಕಥೆ. ಅಕ್ಕಯ್ ನಲ್ಲಿರುವ ವೈಚಾರಿಕತೆ ಎಷ್ಟು ಪ್ರಖರವಾದದ್ದು ಎಂದರೆ ' ತೃತೀಯ ಲಿಂಗಿಗಳು' ಎಂಬ ಪದ ಬಳಕೆಗೆ ಆಕ್ಷೇಪ ವ್ಯಕ್ತ ಪಡಿಸುತ್ತಾ  ಮೊದಲ ಹಾಗೂ ದ್ವಿತೀಯ ಲಿಂಗಗಳು ಯಾವುವು  ಮತ್ತು ಯಾವ ಆಧಾರದಲ್ಲಿ ಅವು ಆ ಸ್ಥಾನವನ್ನು ಪಡೆಯುತ್ತವೆ ? ಎಂದು ಪ್ರಶ್ನಿಸುತ್ತಾರೆ. ಹೌದಲ್ಲವೆ ? 


ಇನ್ನು ಗಂಡೂ ಅಲ್ಲದ , ಹೆಣ್ಣೂ ಅಲ್ಲದ ಅಥವಾ ಗಂಡಾಗಿ ಹೆಣ್ಣಾಗ ಬಯಸುವ , ಹೆಣ್ಣಾಗಿಯೂ ಗಂಡಾಗ ಬಯಸುವ ಒಂದು ವರ್ಗ ಇಂದು ನಿನ್ನೆಯದೇನಲ್ಲ ಎಂಬುದನ್ನು ರಾಮಾಯಣ ,ಮಹಾಭಾರತ ಮತ್ತು ಇತಿಹಾಸಗಳಿಂದ ಉದಾಹರಿಸುವುದನ್ನು ನೋಡಿದರೆ ನನಗೆ ನಮ್ಮ ಭಾಷಾ ಲಿಂಗತ್ವದ ಬಗ್ಗೆ ಅನುಮಾನ ಮೂಡುತ್ತದೆ.‌ ಹಿಂದಿಯನ್ನೂ ಒಳಗೊಂಡಂತೆ ಕೆಲ ಭಾಷೆಗಳಲ್ಲಿ ಕೇವಲ ಎರಡೇ ಲಿಂಗಗಳಿವೆ.‌ ವಸ್ತುಗಳನ್ನೂ ಸ್ತ್ರೀಲಿಂಗ ,ಪುಲ್ಲಿಂಗಗಳಾಗಿ ವಿಭಾಗಿಸಲಾಗುತ್ತದೆ. ಇಂಗ್ಲಿಷ್ ಭಾಷೆಗೂ ಇಂಥ ಗ್ರಾಮ್ಯಾಟಿಕಲ್ ಜೆಂಡರ್ ಒಂದು ಕಾಲದಲ್ಲಿ ಇತ್ತು. ಆಮೇಲೆ ಅದನ್ನು ಕೈ ಬಿಡಲಾಯಿತು. Feminine ಮತ್ತು Masculine ಅಲ್ಲದ್ದನ್ನು ಗುರುತಿಸುವ ಅವಕಾಶವನ್ನು ಭಾಷೆಯೇ ಮೊದಲು ಕಳೆದು ಬಿಡುತ್ತದೆ. ವೈವಿಧ್ಯತೆಯನ್ನು ಗೌರವಿಸುವುದನ್ನು ಒಂದು ಸಮಾಜವಾಗಿ ನಾವು ಕಲಿಯದೇ ಇರುವುದು ನೋವಿನ ಸಂಗತಿ. 

' ಅವನು ಹೆಣ್ಣಿಗ ' ಎಂದಾಗ ಮತ್ತು ' ಅವಳು ಗಂಡು ಬೀರಿ' ಎಂದಾಗ ಎರಡೂ ಸಂದರ್ಭದಲ್ಲಿ 'ಹೆಣ್ಣ' ನ್ನೇ ದೂಷಿಸುತ್ತಿರುವುದು ಸ್ಪಷ್ಟ ಎಂಬುದನ್ನು ಸೂಕ್ಷ್ಮವಾಗಿ ನಾವು ಅರಿಯಬೇಕು. ಹಾಗೂ ಅದು ಅನೇಕ ಸಮಯದಲ್ಲಿ ' ಅಮ್ಮ, ಅಕ್ಕ, ಅತ್ತೆ,‌ ತಂಗಿ , ಅಜ್ಜಿ' ಇವರುಗಳಿಂದಲೇ ಆಗುತ್ತದೆಂಬುದೂ ಅಷ್ಟೆ ಸತ್ಯ. 


' Sex worker ' ಎಂಬ ಪದ ನಮ್ಮ ಕಿವಿಗೆ ಅಶ್ಲೀಲವಾಗಿ ಕೇಳುತ್ತದೆ ಎಂದಾದರೆ ಅವರಿಗೆ ನಾವು ಬೇರ್ಯಾವ ಕೆಲಸಗಳನ್ನು ನೀಡಲು ತಯಾರಿದ್ದೇವೆ ಎಂಬ ಆತ್ಮವಿಮರ್ಶೆ ಅತ್ಯಗತ್ಯ. ವೇಶ್ಯಾವಾಟಿಕೆ ಎಂಬ ಪದಕ್ಕೂ ಲೈಂಗಿಕ ಕಾರ್ಯಕರ್ತೆ(ರ್ತ) ಎನ್ನುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂಬುದನ್ನು ನಾವು ಗಮನಿಸಬೇಕು. ಬೇರೆಲ್ಲಾ ವಿಷಯಗಳಿಗೆ ಈ ಸಮುದಾಯವನ್ನು ತಿರಸ್ಕಾರ ಮತ್ತು ಬಹಿಷ್ಕಾರದಂತೆ ನೋಡುವ ಅದೇ ಸಮಾಜದ ಜನ ಲೈಂಗಿಕ ತೃಷೆಗಾಗಿ ಅವರ ಬಳಿ ಹೋಗುವುದು ಎಂಥ ವೈರುಧ್ಯ ಅಲ್ಲವೆ ? ಹಾಗಾಗಿಯೇ ನನಗನ್ನಿಸುತ್ತದೆ ಮನುಷ್ಯ ವಿಕಾಸವನ್ನು ನಾವು ಸಂಪೂರ್ಣವಾಗಿ ಇನ್ನೂ ಅರಿತಿಲ್ಲವೇನೋ ಎಂದು. ಸೆಕ್ಸ್  ಎಂಬುದು ಮೂಲತಃ ಮನುಷ್ಯನನ್ನು ಇತರೆಲ್ಲ ಜೀವಿಗಳಂತೆಯೇ ಪರಿಗಣಿಸಬೇಕೆಂದು ಮನವರಿಕೆ ಮಾಡುತ್ತದೆ. ಆದರೆ ಅನೇಕ ಸಾಮಾಜಿಕ ಕಟ್ಟಳೆಗಳನ್ನು ವಿಧಿಸಿಕೊಂಡಿರುವ ಮನುಷ್ಯ ತನ್ನ ಮೇಲೆ ಮಡಿವಂತಿಕೆಯನ್ನು ಹೇರಿಕೊಂಡಿದ್ದಾನಷ್ಟೆ. ಲೈಂಗಿಕ ವೃತ್ತಿಯಲ್ಲಿರುವಾಗ ಬಹಳಷ್ಟು ಮಂದಿ ಒಳ್ಳೆಯವರನ್ನು ಭೇಟಿಯಾಗಿದ್ದೇನೆ. ಅವರಲ್ಲಿ ಕೆಲವರು ಈಗಲೂ ಒಳ್ಳೆಯ ಸ್ನೇಹಿತರಾಗಿದ್ದಾರೆ ಎನ್ನುತ್ತಾರೆ ಅಕ್ಕಯ್. 


ಇಂದು ಅಕ್ಕಯ್ ಏನಾಗಿದ್ದಾರೋ ಅದಕ್ಕೆ ಅವರಲ್ಲಿರುವ 'ಹೋರಾಟಗಾರ್ತಿ'ಯೇ ಕಾರಣ. ಹಿಜ್ರಾ ಸಮುದಾಯದ ಒಳಗೇ ಅವರು ಅನೇಕ ಬಾರಿ ಪ್ರತಿಭಟಿಸಿದ್ದಾರೆ. ಯಾವುದು ಶೋಷಣೆಗೆ ಒಳಗಾದ ಸಮುದಾಯ ಎನ್ನುತ್ತೇವೋ ಅಲ್ಲಿಯೂ ಇರುವ ಸಂಪ್ರದಾಯದ ಯಜಮಾನಿಕೆಯನ್ನು ಅವರು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ.  ಶೋಷಣೆ ಮತ್ತು ಅಸಮಾಧಾನವನ್ನು ಅವರು ಒಪ್ಪಿಕೊಳ್ಳುವುದೇ ಇಲ್ಲ. ಹಾಗಾಗಿಯೇ ತಮ್ಮ ಗಂಡನ ಹಿಂಸೆ ,ಕಿರುಕುಳದಿಂದಲೂ ಮುಕ್ತರಾಗಲು ಬಯಸುತ್ತಾರೆ.


"ನಾವು ಚಪ್ಪಾಳೆ ತಟ್ಟಿ ಒಂದು ರೂಪಾಯಿ ಭಿಕ್ಷೆ ಬೇಡುವುದು ನಮ್ಮಲ್ಲಿ ಹಣವಿಲ್ಲದ ಏಕೈಕ ಕಾರಣಕ್ಕಾಗಿ. ಹಣವನ್ನು ಬೇಡಿ ಪಡೆಯುವುದು ನಮ್ಮ ಹಕ್ಕು. ಇದು ಸಮಾಜದ ಮುಂದೆ ಪ್ರತಿಭಟಿಸುವ ವಿಧಾನವೂ ಹೌದು" ಎನ್ನುವ ಅಕ್ಕಯ್, ಅವರ ಮೂಲಭೂತ ಹೋರಾಟ ಇರುವುದು ಮಾನವ ಹಕ್ಕುಗಳಿಗಾಗಿ. ನಿಜ , ಅವರು ತಟ್ಟುವ ಚಪ್ಪಾಳೆ ಸದ್ದು ಸಮಾಜದ ವಿರುದ್ಧ ಅವರ ಪ್ರತಿಭಟನೆಯೇ ಆಗಿದೆ. 2009 ರ ಜುಲೈ 2ರ ದೆಹಲಿ ಹೈಕೋರ್ಟಿನ ತೀರ್ಪು ಖಾಸಗಿಯಾಗಿ ವಯಸ್ಕರ ನಡುವೆ ಸಹಮತದ ಸೆಕ್ಸ್ ಶಿಕ್ಷಾರ್ಹವಲ್ಲ ಎಂದು ಹೇಳಿತು. ಅಂದು ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕ ದಿನ ಎಂದು ಹೇಳುವ ಅಕ್ಕಯ್ ಇಂಥ ಕ್ರಿಯೆಯನ್ನು ಅಪರಾಧವೆಂದು ಪತಿಗಣಿಸುತ್ತಿದ್ದ ಸೆಕ್ಷನ್ 377 ನ್ನು ಮೆಕಾಲೆ ಜಾರಿಗೊಳಿಸಿದ ವಸಾಹತುಶಾಹಿ ನೆಲೆಯದ್ದು ಎನ್ನುತ್ತಾರೆ.  ಸಂತಾನೋತ್ಪತ್ತಿಯನ್ನು ಹೊರತುಪಡಿಸಿಯೂ ಲೈಂಗಿಕತೆಯೆನ್ನುವುದು ಅನ್ಯೋನ್ಯತೆ , ಸಂಬಂಧಗಳು ,ಕೆಲಸ , ಅಧಿಕಾರ/ಶಕ್ತಿ ...ಹೀಗೇ ಬಹುರೂಪಿಯಾದದ್ದು ಎಂಬ ಅವರ ಮಾತು ಎಷ್ಟು ಸತ್ಯ ! ಎಷ್ಟೋ ಜನ ಕಾವಿ ತೊಟ್ಟು ಸಂಸಾರ ತ್ಯಜಿಸಿದ ಸನ್ಯಾಸಿಗಳು ಖಾಸಗಿಯಾಗಿ ಸೆಕ್ಸ್ ನಲ್ಲಿ ಭಾಗಿಯಾದ ಪ್ರಕರಣಗಳು ನಮ್ಮ ಮುಂದಿರುವಾಗ ಅದನ್ನು ಕೇವಲ ಸಂತಾನೋತ್ಪತ್ತಿಗೆ ಬಳಸಬೇಕು ಎನ್ನುವುದು ಎಷ್ಟು ಅತಾರ್ಕಿಕವಾದುದಲ್ಲವೆ ? ಈ ನಿಟ್ಟಿನಲ್ಲಿ ಅವರ ಹೋರಾಟದ ಹಾದಿ ಮೆಚ್ಚುವಂತದ್ದು. 


ಅಮೇರಿಕಾದ ಪೊಲೀಸ್ ವ್ಯವಸ್ಥೆಗೆ ನೀಡಲಾಗಿರುವ ಅಪರಿಮಿತ ಅಧಿಕಾರವನ್ನು ಅಕ್ಕಯ್ ಆತಂಕದಿಂದ ನೋಡುತ್ತಾರೆ. ಸಾರ್ವಜನಿಕರ ಕೈಯಲ್ಲೂ ಬಂದೂಕು ಕೊಟ್ಟಿರುವ ಅಮೇರಿಕಾದಲ್ಲಿ LGBTQ ಸಮುದಾಯ ಭಯದಿಂದಲೇ ಇದೆ. ಇದು ಹೆಚ್ಚೆಚ್ಚು ಅಮೇರಿಕನ್ನರನ್ನು ನಾವು ಭೇಟಿ ಮಾಡಿದಾಗ ತಿಳಿಯುತ್ತದೆ ಎನ್ನುವ ಅವರು ಜಗತ್ತಿನ ಎಲ್ಲಾ  ರಾಷ್ಟ್ರಗಳೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೇ. ಅಮೇರಿಕ , ಭಾರತ, ಜಪಾನ್ ಹೀಗೆ ಎಲ್ಲಾ ದೇಶಗಳಲ್ಲೂ ಸಮಸ್ಯೆಗಳಿವೆ ಎನ್ನುವ ಅವರ ನಿಲುವನ್ನು ಒಪ್ಪದೇ ಇರಲಾಗದು.


ಅಕ್ಕಯ್ ತುಂಬಾ ಚೆಂದ ಸೀರೆ ಉಡುತ್ತಾರೆ ಎಂಬ ಕಾರಣಕ್ಕೆ ಅವರು ಸೀರೆ ಬ್ರಾಂಡಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಾಗ ಇದೇ ಸೀರೆಯ ಕಾರಣಕ್ಕೆ ತಾನು ಅನುಭವಿಸಿದ ಯಾತನೆಯನ್ನೂ ನೆನಪಿಸಿಕೊಳ್ಳುತ್ತಾರೆ. ಸೀರೆ ಉಟ್ಟರೆ ಹೊಡೆಯಲು ಬರುತ್ತಿದ್ದ ಅಪ್ಪ ಅಮ್ಮ ನಂತರದಲ್ಲಿ ಜೊತೆಯಾಗಿ ನಿಲ್ಲುವಂತೆ ಮಾಡುತ್ತಾರೆ ಅವರು. ಹೆಣ್ಣಾಗಬೇಕೆಂಬ ತಹತಹ ಈಡೇರಿದ ಮೇಲೆ ಹೆಣ್ಣು ಎದುರಿಸುವ ಕೌಟುಂಬಿಕ ಕಟ್ಟಳೆಗಳನ್ನೂ ಆಕೆ ಎದುರಿಸುತ್ತಾರೆ. ಇಲ್ಲಿ ಸಂಚಾರಿ ವಿಜಯ್ ಅಭಿನಯದ ನಾನು ಅವನಲ್ಲ ಅವಳು ಚಿತ್ರದ ' ಹೆಣ್ಣಾಗಿ ಹುಟ್ಟೋದು ಸುಲಭ. ಆದ್ರೆ ಹುಟ್ಟಿದ ಮೇಲೆ ಹೆಣ್ಣಾಗೋದು ಬಹಳ ಕಷ್ಟ' ಎಂಬ ಮಾತನ್ನು ನೆನೆಯಬೇಕು. ಅಕ್ಕಯ್ ಜೀವನವಿಡೀ ಈ ಪುರುಷಪ್ರಧಾನ ಶೋಷಣೆಯನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸಿದ್ದಾರೆ. ಅವರು History ಅಂದರೆ His- Story ( ಆತನ ಕಥೆ) ಯಾಗಿ ಮಾತ್ರ ಕಾಣಬೇಡಿ. ಅದನ್ನು Her- Story ಎಂದೂ ಕಾಣುವ ಅಗತ್ಯವಿದೆ ಎಂದು ಅಭಿಪ್ರಾಯ ಪಡುತ್ತಾರೆ. ಅದನ್ನು ಆಗುಮಾಡಿದ ಬಹುರೂಪಿ ಪ್ರಕಾಶನವೂ ಅಭಿನಂದನಾರ್ಹ.


ಅಕ್ಕಯ್ ಜೀವನ ಕಥನ ನಮ್ಮಲ್ಲಿ ಒಂದು ತಲ್ಲಣ  ತಂದೊಡ್ಡಿ ನಮ್ಮನ್ನು ಮತ್ತಷ್ಟು ವೈಚಾರಿಕವಾಗಿ ಆಲೋಚಿಸಲು ಹಚ್ಚುತ್ತದೆ. ಸಿದ್ಧ ಮಾದರಿಗಳ ಆಚೆ ನಿಂತು ನಮ್ಮ ಸುತ್ತ ನೋಡಲು ಪ್ರೇರೇಪಿಸುತ್ತದೆ. ಜಗತ್ತಿನ ಜೀವ ವೈವಿಧ್ಯತೆಯನ್ನು ಗೌರವಿಸಲು ಹೇಳಿ ಕೊಡುತ್ತದೆ. ಪೊಲೀಸರಿಂದ ದೂಷಣೆ , ಕಿರುಕುಳ ಎದುರಿಸಿದ ಅವರು ಪೊಲೀಸ್ ಅಕಾಡೆಮಿಗೆ ತರಬೇತಿ ನೀಡಲು ಹೋಗುವ ದಿನಗಳನ್ನು ನಮ್ಮ ಮುಂದಿಡುತ್ತದೆ. 


ಪುಸ್ತಕದ ಕೊನೆಯ ಪುಟದಲ್ಲಿ ಅಕ್ಕಯ್, ಶೋಷಿತರ ರಂಗಭೂಮಿ ( Theatre of the oppressed )ಯನ್ನು ವಿನ್ಯಾಸ ಗೊಳಿಸಿದ ಅಗಸ್ತೋ ಬೋಲ್ ನ ಮಾತೊಂದನ್ನು ಮುಂದಿಡುತ್ತಾರೆ. 

" ನೀವು ಪ್ರೇಕ್ಷಕರಂತೆ ನಟಿಸುತ್ತೀರಿ. ನೀವೇ ನಟರಾದಾಗ ನೀವು ಕಥೆಯನ್ನು ಹೇಳಲು ಶುರು ಮಾಡುತ್ತೀರಿ " 


ಪುಸ್ತಕ ಓದಿ ಮುಗಿಸುತ್ತಿದ್ದ  ಹೊತ್ತಲ್ಲಿ ಮೂರುವರೆ ವರ್ಷದ ನನ್ನ ಮಗ ಬಂದು ಪುಸ್ತಕದ ಮುಖಪುಟವನ್ನು ಮತ್ತು ಒಳ ಪುಟವನ್ನು ಎರೆಡೆರಡು ಬಾರಿ ನೋಡಿದ. ಒಳ ಪುಟಗಳ ಹೆಡ್ಡರ್ ನಲ್ಲಿರುವ ಅಕ್ಕಯ್ ರನ್ನು ತೋರಿಸಿ, ಮುಖಪುಟದ ಅಕ್ಕಯ್ ರನ್ನೂ ತೋರಿಸಿ 

' ಪಪ್ಪ, ಇವರು ಅವರೇನಾ ?' ಅಂದ. ' ಹೌದು,ಅವರೇ'  ಅಂದೆ.‌ ಹೆಡ್ಡರ್ ನ ಪೋಟೋ ತೋರಿಸುತ್ತ, ' ಅಲ್ಲ, ಇವ್ರು ಹುಡುಗ ಅಲ್ವಾ! ಹುಡುಗನ ಥರ ಕಟಿಂಗ್ ಇದೆ ' ಎಂದು ಮತ್ತೆ ಹೇಳಿದ. ಅದಕ್ಕೆ ನಾನು ' ಹಾಗೇನಿಲ್ಲಪ್ಪ, ಅವರು ಇದೇ ಆಂಟಿ. ಕಟಿಂಗ್ ಹಾಗೆ ಮಾಡಿಸಿದ್ದಾರೆ ಅಷ್ಟೆ. ಅವರೂ ಹಾಗೆ ಹೇರ್ ಕಟ್ ಮಾಡಿಸಿಕೊಳ್ಳಬೋದು ' ಅಂದೆ. ನನ್ನ ಮಾತನ್ನು ಅವನು ನಂಬಿದ ಹಾಗೆ ಕಂಡ. ಅಕ್ಕಯ್ ಪುಸ್ತಕ ನನ್ನಲ್ಲಿ ಮೂಡಿಸಿದ ಅರಿವು ಇಷ್ಟೆ. ಲಿಂಗಾಧಾರಿತವಾದ ತರತಮಗಳನ್ನು ಮೂಡಿಸುವಂಥ ಒಂದು ಮಾತನ್ನೂ ನಾವು ಮನೆಯಲ್ಲಿ ಆಡಬಾರದು. ನಮ್ಮ ನಮ್ಮ ಮನೆಗಳನ್ನು ನಾವು ಸಮಾಜಮುಖಿಯಾಗಿ‌ ರೂಪಿಸುವುದೇ ದೊಡ್ಡ ದೇಶಪ್ರೇಮವಾಗುತ್ತದೆ. ಆಗ ಮಾತ್ರ ನಾವು ಅಕ್ಕಯ್ ಮುಖ ಮಾಡಿರುವ " ನಾಳೆಗಳ " ನ್ನು ಕಾಣಲು ಸಾಧ್ಯವಾಗಬಹುದೇನೊ... ಇಲ್ಲವಾದಲ್ಲಿ ನಾವು ಪ್ರೇಕ್ಷಕರಂತೆ ನಟಿಸುತ್ತಲೇ ಇರುತ್ತೇವಷ್ಟೆ...


ಅಷ್ಟಕ್ಕೂ ನಾವು ಮರೆಯಲೇಬಾರದು ;

" Everyone is handicapped in some way "

-ಶಿವಕುಮಾರ ಮಾವಲಿ

4 Jul 2021

children's book in Kannada PDF | Kid's book in Kannada PDF | ಮಕ್ಕಳ ಪುಸ್ತಕಗಳು ಉಚಿತ ಡೌನ್ಲೋಡ್ ಪಿಡಿಎಫ್

 ಕನ್ನಡ ಮಕ್ಕಳ ಪುಸ್ತಕಗಳಿಗೆ ನಿಚ್ಚಿನ ತಾಣ, The best website to download the Kannada Children's book for FREE| These are the best children's book in Kannada.


ಪಟ್ಟಣದಲ್ಲಿಯ ಕೋಳಿ 



ಪುಕ್ಕಟ್ಟೆ ಗ್ರಂಥಾಲಯ - ಲೇ ಸಾರ ಸ್ಟೂಅರ್ಟ್

ಮಾರ್ಕೋನಿ ಕಾಮಿಕ್ ಕನ್ನಡ ಮಕ್ಕಳ ಪುಸ್ತಕ 

ಚಿನ್ನದ ಮೀನು ಕನ್ನಡ ಮಕ್ಕಳ ಪುಸ್ತಕ

ನಮ್ಮ ಕನ್ನಡ 

ಸೊವಿಯೆಂಟ್ ಮಕ್ಕಳ ಪುಸ್ತಕ - ರಷ್ಯಾನ್ ಪುಸ್ತಕ

* ಗಾಳಿಯನ್ನು ಗೆದ್ದ ಬಾಲಕ 

* ಎರಡು ಬೆಕ್ಕುಗಳ ಕಥೆ 

ಕಾಗುಣಿತ

* ಆಲೂಗಡ್ಡೆ ಎಲ್ಲಿಂದ ಬರುವವು?

* ಗೆರ್ಗ್'ಸ್ ಮೈಕ್ರೋಸ್ಕೋಪ್ 

* ಒಂದು ಚಿಕ್ಕ ಗಿಳಿಯ ಕಥೆ 

ಸಣ್ಣ ಕಥೆಗಳು

* ಕೆಂಪ್ ಜುಟ್ಟಿನ ಹುಂಜ 

* ಲಾರಿ ಬೇಕರ 

* ಅತ್ಯಂತ ಶಕ್ತಿವಂತರು 

ಮಕ್ಕಳ ಕಥೆಗಳು ಕನ್ನಡ 

* ಬಾಂಬ್ ಮ್ಯಾಟ್ ಜನರಲ್ 

* ಒಂದು ಆನೆಯ ಕಥೆ 




1 Jul 2021

ಕಾವೇರಿ ಹರಿದು ಬಂದ ದಾರಿ | Books on Kaveri river | Kannada ebook free download

 ದಕ್ಷಿಣ ಭಾರತದ ಸಾಂಸ್ಕೃತಿಕ ತೊಟ್ಟಿಲಾಗಿರುವ ಕಾವೇರಿ ತನ್ನ ಪಾತ್ರದುದ್ದಕ್ಕೂ ನೆಲವನ್ನು ಸಸ್ಯಶ್ಯಾಮಲೆಯನ್ನಾಗಿಸಿದೆ. ವಿಶಿಷ್ಟ ಜೀವಸಂಪನ್ಮೂಲವನ್ನು ಪೋಷಿಸಿದೆ, ಸಹಸ್ರಾರು ವರ್ಷಗಳಲ್ಲಿ ಕಾವೇರಿ ತನ್ನ ಬದುಕನ್ನೇ ಬದಲಾಯಿಸಿರುವ ವೈಜ್ಞಾನಿಕ ಸತ್ಯ ಕಲ್ಪನೆಯ ಕಥೆಗಿಂತಲೂ ರೋಮಾಂಚನಕಾರಿ . ಈ ನದಿ ದಡದಲ್ಲಿ ನಮ್ಮೆಲ್ಲ ಧಾರ್ಮಿಕ ನಂಬಿಕೆಗಳು ಗರಿಗಟ್ಟಿವೆ; ಪುರಾಣ ಪುಣ್ಯಕಥೆಗಳು ಅರಳಿವೆ; ಪೈರುಪಚ್ಚೆ ನಳನಳಿಸಿದೆ. ಇದು ಕೇವಲ ನೀರುಣಿಸುವ ಜಲರಾಶಿಯಲ್ಲ; ಜನಜೀವನದ ಉಸಿರು. ಭಾವಾತಿರೇಕದಿಂದ ಕಾವೇರಿಯನ್ನು ನೋಡುವ ಬದಲು ನಿಸರ್ಗದ ಈ ಸುಂದರ ಸೃಷ್ಟಿಯನ್ನು ಯಥಾವತ್ತಾಗಿ ನೋಡಿದರೂ ಮನಸ್ಸು ಅರಳೀತು. ಕಾವೇರಿ ಹರಿದು ಬಂದ ದಾರಿ ಕೃತಿ ಈ ನದಿಯ ಧಾರ್ಮಿಕ, ಸಾಮಾಜಿಕ , ರಾಜಕೀಯ ಹಿನ್ನೆಲೆಯನ್ನಷ್ಟೇ ಓದುಗರಿಗೆ ಒದಗಿಸುತ್ತಿಲ್ಲ; ಇದೊಂದು ವೈಜ್ಞಾನಿಕ ಸತ್ಯವನ್ನು ತೆರೆದಿಡುವ ಪ್ರಯತ್ನ . .

ಕಾವೇರಿ ಹರಿದು ಬಂದ ದಾರಿ - Download here

ಹರಿಯುವುದೇ ನದಿಯ ಧರ್ಮ , ಅದು ಜೀವಂತವಾಗಿರುವಂತೆ ನೋಡಿಕೊಳ್ಳಬೇಕಾದುದು ನಮ್ಮ ಧರ್ಮ, ಕಾವೇರಿ ನದಿ ಗಂಗಾ ನದಿಯಂತೆ ಮಾಲಿನ್ಯದ ಮಡುವಾಗಲು ಅವಕಾಶ ನೀಡಬಾರದು. ಇಲ್ಲಿ ನಮ್ಮ ಪ್ರಜ್ಞೆ ಎಚ್ಚರಗೊಳ್ಳಬೇಕು. ಈ ನದಿ ಹರಿಯುವ ದಾರಿಯುದ್ದಕ್ಕೂ ಅದು ಸೃಷ್ಟಿಸಿರುವ ಪ್ರೇಕ್ಷಣೀಯ ಸ್ಥಳಗಳ ಯಾದಿ ಮಾಡುತ್ತಾ ಹೋದರೆ ಅದೇ ಒಂದು ಬೃಹತ್ ಕೃತಿಯಾದೀತು. ತಲಕಾಡಿನ ಅದ್ಭುತ ಮರಳರಾಶಿಯ ಬಗ್ಗೆಯಾಗಲಿ, ಮೇಕೆದಾಟಿನ ನಿಸರ್ಗದ ಮನಮೋಹಕ ಶಿಲ್ಪದ ಬಗ್ಗೆಯಾಗಲಿ ನಮ್ಮ ಪ್ರವಾಸೋದ್ಯಮ ದೊಡ್ಡ ಕಾಳಜಿಯನ್ನೇನೂ ತೋರಿಸಿಲ್ಲ. ಅದರಲ್ಲಿನ ಭೂವೈಜ್ಞಾನಿಕ ಸತ್ಯವನ್ನೂ ಪ್ರಚಾರ ಮಾಡಿಲ್ಲ. ಟಿ. ಎಂ . ಸಿ. ಯ ಅಳತೆಗೋಲಿನಿಂದ ಕಾವೇರಿಯನ್ನು ಅಳೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಈ ಜೀವನದಿಯಲ್ಲಿ ಮಶೀರ್ ಮೀನುಗಳ ಸಂತತಿ ಕಣ್ಮರೆಯಾಗುತ್ತಿರುವ ಘೋರ ಸತ್ಯವನ್ನೇ ನಾವು ಮನಗಂಡಿಲ್ಲ. ಕಾವೇರಿಯನ್ನು ಭೌಗೋಳಿಕ ಸೀಮಾರೇಖೆಯಿಂದ ಮುಕ್ತಗೊಳಿಸಿ, ಅದು ನಮ್ಮೆಲ್ಲ ಜೀವನಾಡಿ ಎಂದು ಭಾವಿಸಿದರೆ ಮಾತ್ರ ಅಕ್ಕರೆ ಹುಟ್ಟಿತು.

ಈ ಸಂಕಲನದಲ್ಲಿ ಸೇರಿರುವ ಲೇಖನಗಳು ಕೆಲವು ಪತ್ರಿಕೆಗಳಲ್ಲಿ ಬೆಳಕುಕಂಡಿವೆ. ಮತ್ತೆ ಕೆಲವನ್ನು ಪ್ರಕಟಣೆಗೆಂದೇ ಕೋರಿ ಬರೆಸಲಾಗಿದೆ. ಸುಧಾ,ಪ್ರಜಾವಾಣಿ, ಕನ್ನಡಪ್ರಭ ಪತ್ರಿಕೆಗಳ ಸಂಪಾದಕರು ಆಯಾ ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನು ಬಳಸಲು ಅನುಮತಿ ನೀಡಿ ಉಪಕರಿಸಿದ್ದಾರೆ. ಲೇಖಕರು ಕಾಳಜಿವಹಿಸಿ ಬರೆದುಕೊಟ್ಟಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆಗಳು ಸಲ್ಲುತ್ತವೆ. 

- ಮೊದಲ ಮುದ್ರಣ ಪ್ರಕಟವಾದ ಹದಿನೈದು ವರ್ಷಗಳ ( 1997) ನಂತರ ಈಗ (2012) ಮರುಮುದ್ರಣವಾಗುತ್ತದೆ. ಈ ಅವಧಿಯಲ್ಲಿ ಕಾವೇರಿ ನದಿಯಲ್ಲಿ ಎಷ್ಟು ಟಿ. ಎಂ . ಸಿ . ನೀರು ಹರಿದಿದೆಯೋ ಲೆಕ್ಕ ಇಟ್ಟವರೇ ಹೇಳಬೇಕು. ಈ ಮರುಮುದ್ರಣದಲ್ಲಿ ಯಾವ ಲೇಖನವನ್ನೂ ಬದಲಾಯಿಸಿಲ್ಲ. ಅದರ ಬದಲು ಅನುಬಂಧದಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ಕುರಿತಂತೆ ಇತ್ತೀಚಿಗಿನ ಬೆಳವಣಿಗೆಗಳನ್ನು , ಕೇಂದ್ರ ಸರ್ಕಾರದ ನಿಲುವನ್ನು ಪ್ರಸ್ವವಾಗಿ ದಾಖಲಿಸಿದೆ. ಸಹೃದಯ ಓದುಗರು ಇದನ್ನು ಗಮನಿಸಬೇಕಾಗಿ ಕೋರುವೆ. ಎರಡನೇ ಮುದ್ರಣವನ್ನು ಹೊರತಂದಿರುವ ಕೀರ್ತನ ಪ್ರಕಾಶನದ ಶ್ರೀ ಕುಲಕರ್ಣಿ ಅವರಿಗೆ ಮತ್ತು ಈ ಕೃತಿಯನ್ನು ಮುದ್ರಣಕ್ಕೆ ಸಿದ್ಧಪಡಿಸುವಲ್ಲಿ ನೆರವಾದ ಮಡದಿ ಎ .ಆರ್. ಅನ್ನಪೂರ್ಣಗೆ ನನ್ನ ವಂದನೆಗಳು ಸಲ್ಲುತ್ತವೆ.

- ಟಿ.ಆರ್ ಅನಂತರಾಮು.




close