2 Sept 2020

ಡಿವಿಜಿಯವರ ಮಂಕುತಿಮ್ಮನ ಕಗ್ಗ ಪಿಡಿಎಫ್ | ಕನ್ನಡದ ಭಗವದ್ಗೀತೆ pdf| Mankutimmana Kagga DVG with meaning

ಕನ್ನಡದ ಭಗವದ್ಗೀತೆಯ ಬಗ್ಗೆ ಎಷ್ಟು ಜನಕ್ಕೆ ಗೊತ್ತು?

ಡಿ. ವಿ. ಜಿಯವರ ಮಂಕುತಿಮ್ಮನ ಕಗ್ಗವನ್ನು ಕನ್ನಡದ ಭಗವದ್ಗೀತೆ ಎಂದು ಏಕೆ ಕರೆಯುತ್ತಾರೆ?

ಮಂಕುತಿಮ್ಮನ ಕಗ್ಗ ಮತ್ತು ಭಗವದ್ಗೀತೆಗೆ ಹೋಲಿಕೆಗಳಿವೆ.

೧. ಭಗವದ್ಗೀತೆಯೂ ಯುದ್ಧದ ಸಂದರ್ಭದಲ್ಲಿ ಶುರುವಾಗುತ್ತದೆ. ಅರ್ಜುನ ತಾನು ಹೇಗೆ ಯುದ್ಧ ಮಾಡಲಿ ಎಂದು ದುಃಖಿಸುವ ಸಮಯದಲ್ಲಿ ಭಗವದ್ಗೀತೆಯ ಪ್ರಾರಂಭ. ಕಗ್ಗವೂ ಸಹ ಆಗ ಸದ್ಯ ಆರಂಭವಾಗಿದ್ದ ವಿಶ್ವ ಮಹಾಯುದ್ಧದ ಬಗ್ಗೆ ಆತಂಕಿಸುತ್ತಾ ಶುರುವಾಗುತ್ತದೆ..



Download Mankutimmana Kagga here: DVG MANJUTIMMANA KAGGA PDF

Click here to download the Mankutimmana Kagga with meaning 


ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ

ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ

ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ

ಎತ್ತಲಿದಕೆಲ್ಲ ಕಡೆ? - ಮಂಕುತಿಮ್ಮ

೨. ನಂತರ ದೇವರ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾ , ಅದರ ಬಗ್ಗೆ ಸ್ಪಷ್ಟನೆ ನೀಡುತ್ತಾ ಹೋಗುತ್ತಾರೆ. ಭಗವದ್ಗೀತೆಯಲ್ಲೂ ಕೃಷ್ಣ ತನ್ನ ಬಗ್ಗೆ ಹೇಳಿಕೊಳ್ಳುವ ಶ್ಲೋಕಗಳಿವೆ.

ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು

ಹೊಮ್ಮುವೆನು ಕೋಟಿರೂಪದಲಿ ನಾನೆಂದು

ಬೊಮ್ಮನೆಳಸಿದನಂತೆ. ಯೆಳಸಿಕೆಯೆ ಮಾಯೆ

ನಮ್ಮಿರವು ಮಾಯೆಯಲಿ - ಮಂಕುತಿಮ್ಮ

Mankutimmana Kagga with meaning 

ಕೃಷ್ಣನೂ ಸಹ ತನ್ನಿಂದಲೇ (ಪರಬ್ರಹ್ಮ) ಎಲ್ಲಾ ಹುಟ್ಟಿದೆ ಎಂದು ಹೇಳಿಕೊಳ್ಳುತ್ತಾನೆ. ಅಲ್ಲಿಯ ತತ್ವ,ಇಲ್ಲಿಯ ತತ್ವ ಒಂದೇ ರೀತಿ ಇದೆ.

೩. ಎಲ್ಲಕ್ಕಿಂತ ಮುಖ್ಯವಾಗಿ ಭಗವದ್ಗೀತೆ ಜೀವನದಲ್ಲಿ ಹೋರಾಡುವುದು ಹೇಗೆ ಎಂದು ಹೇಳುತ್ತದೆ. ಫಲಾಪೇಕ್ಷೆ ಇಲ್ಲದೆ ಎಲ್ಲಾ ಭಗವಂತನಿಂದಲೇ ಎಂದು ಭಾವನೆಯನ್ನು ಇಟ್ಟುಕೊಂಡು ನಿನ್ನ ಕೆಲಸವನ್ನು ಮಾಡು ಎಂದು ತಿಳಿಸುತ್ತದೆ. ಕಗ್ಗವೂ ಸಹ ಬದುಕನ್ನು ಹೇಗೆ ನಿರ್ಲಿಪ್ತತೆಯಿಂದ ಜೀವಿಸಬೇಕೆಂದು ಹೇಳುತ್ತದೆ.

ನಗುಮನದಿ ಲೋಗರ ವಿಕಾರಂಗಳನು ನೋಡಿ

ಬಿಗಿ ತುಟಿಯ ದುಡಿವಂದು ನೋವಪಡುವಂದು

ಪೊಗು ವಿಶ್ವಜೀವನದ ಜೀವಾಂತರಂಗದಲಿ

ನಗುನಗುತ ಬಾಳ್, ತೆರಳು - ಮಂಕುತಿಮ್ಮ

ಬೇಡಿದುದನೀವನೀಶ್ವರನೆಂಬ ನೆಚ್ಚಿಲ್ಲ

ಬೇಡಲೊಳಿತಾವುದೆಂಬುದರರಿವುಮಿಲ್ಲ

ಕೂಡಿಬಂದುದನೆ ನೀನ್ ಅವನಿಚ್ಛೆಯೆಂದು ಕೊಳೆ

ನೀಡುಗೆದೆಗಟ್ಟಿಯನು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ಭಗವದ್ಗೀತೆಯ ಸಾರವನ್ನು ಸಾಮಾನ್ಯ ಜನರ ಯೋಚನೆಯ ಮಟ್ಟಕ್ಕೆ ತರಲು ಪ್ರಯತ್ನ ಪಟ್ಟಿದ್ದು ಎಂದು ಹೇಳಬಹುದು. ಆದ್ದರಿಂದ 'ಕನ್ನಡದ ಭಗವದ್ಗೀತೆ' ಎನ್ನುವ ಹೊಗಳಿಕೆ ಮಂಕುತಿಮ್ಮನ ಕಗ್ಗಕ್ಕೆ ಸರಿಯಾಗಿದೆ ಎನ್ನಬಹುದು.

ಕುವೆಂಪು ಅವರ ಅಭಿಪ್ರಾಯ ಕಗ್ಗದ ಬಗ್ಗೆ-

ಹಸ್ತಕ್ಕೆ ಬರೆ ನಕ್ಕೆ; ಓದುತ್ತ ಓದುತ್ತ 
ಮಸ್ತಕಕ್ಕಿಟ್ಟು ಗಂಭೀರವಾದೆ
ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈಮುಗಿದೆಮಂಕುತಿಮ್ಮ 

Holding the book in my hands, I laughed

As I read it, I kept it to my head, and meditated

The pinnacle of such an expansive philosophy!

I bow down to your book, Mankutimma


Quora - Chaitraya

 Download Mankutimmana Kagga here: DVG MANJUTIMMANA KAGGA PDF

Mankutimmana Kagga with meaning 

close