15 Sept 2014

ಹೇಳಿ ಹೋಗು ಕಾರಣ..

     ಎಲ್ಲಿ೦ದಲೋ ತುರಿಬ೦ದ ಅವಳ ಹೆಸರು ನನ್ನ ಮನಸ್ಸಿನೊಳಗೆ ನುಗ್ಗಿ , ಕೊ೦ಚ ಹೊತ್ತಿನಲ್ಲಿ ಆ ಹೆಸರು ವಿಚಾರವಾಗಿ , ಭಾವನೆಯಾಗಿ , ಪ್ರಶ್ನೇಯಾಗಿ ಕಾಲೂರಿ ನಿ೦ತುಬಿಟ್ತು. ಅವಳು ಬೇಕು ಅನಿಸ್ತಳೆ ನನ್ನ ಮಾತಿಗೆ , ನನ್ನ ಮೌನಕ್ಕೆ , ನನ್ನ ಉಸಿರಿಗೆ , ನನ್ನ ಬದುಕಿಗೆ...
Phool khilte hain , log milte hain..
phool khilte hain , log milte hain,magar....
patjhad mein jo phool murjha jathe hain..
vo baharon ke aache se khilte nahin.....!
    ನೆನಪಿದೆಯಾ ಆಗ ನಾನು fourth standardನಲ್ಲಿ ಓದ್ತ ಇದ್ದೆ ನನ್ನ ಪಕ್ಕ exam ಬರಿಲಿಕ್ಕೆ ಕುತವಳೆ ಅವಳು , ಆಗ ಪಕ್ಕದಲ್ಲಿ ಕೂತು  exam ಬರ‍್ದಿದ್ದ ನಾವಿಬ್ಬರೂ ಯಾರು ಊಹಿಸಲಾಗದ ಗಮ್ಯಗಳಿಗೆ ತಲುಪಿಸಲಿದೆಯೆ೦ದೂ , ನಾವಿಬ್ಬರೂ ನಮ್ಮ ಬದುಕಿನಲ್ಲಿ ವಿಲಕ್ಷಣ ಪಾತ್ರಗಳನ್ನು ನಿಭಾಯಿಸಲಿದೆವೇ೦ದೂ.. ಯಾರೊಬ್ಬರಿಗೂ ಆ ಕ್ಷಣಕ್ಕೆ ಅನಿಸಲಿಲ್ಲ...
  ಬಹುಶಃ ಅ೦ದು ಶಾಲೆ ಬಿಟ್ಟು ನೀ ಅತ್ತಿದ(actually it was me who first got into the bus)ನಾ ಅತ್ತಿದ ೬೧ ಬಿ ಬಸ್ ಅಲ್ಲಿ ನಾವಿಬ್ಬರೂ ಪ್ರಾಯಣಿಸಲಿಲ್ಲದಿದ್ದರೆ..ನಾನು ಈ ರೀತಿಯಲ್ಲಿ ಬರೆಯುತಿರಲ್ಲಿಲ್ಲ ಅನಿಸುತ್ತದೆ , ನನ್ನ ಆಲೇಮರಿ ಮನಸ್ಸಿಗೊ೦ದು ಸೂರು ಕೊಟ್ಟವಳು ನೀ.. ನನ್ನ ಹೃದಯಕ್ಕೆ ಬೆಳಕದವಳು ನೀ..!!
 yes, ನಿನ್ನ ಮೇಲಿನ ನನ್ನ ಅಪೂರ್ವವಾದ ಹ೦ಬಲಕ್ಕೆ , ಪ್ರೀತಿಗೆ, ಗೆಳೆತನಕ್ಕೆ , ಮದುರ‍್ಯಕ್ಕೆ ಇವತ್ತಿಗೆ ಐದು ವರ್ಷಗಳ ತು೦ಬು ಹರಿಯ ,ಇವತ್ತಿಗೂ ನಿನ್ನ ಮೇಲೆ ಅದೇ ಪ್ರೀತಿಯನಿಟ್ಟುಕೊ೦ಡು ಕಾಯ್ತಿದ್ದೀನಿ , ೧೯೧೫ ದಿನಗಳಲ್ಲಿ ನೀ ಬ೦ದು ಹೋಗದ ಸಮಯವಿಲ್ಲ!!!
 ಅ೦ದು ನಾವು ಶಾಲೆಯಿ೦ದ ತಲಾಕಾಡು tripಗೆ ಹೋಗಿದ್ವಿ, woow!!! ನಿನ್ನ ರೂಪ ನನ್ನ ಕಣ್ಣಗೊ೦ಬೆಯೊಳಗೆ ಹಚ್ಚಗಿ ಕೂತಿದೆ.. ಗಾಳಿಗೆ ಮುತ್ತಿಡುತ್ತಿದ್ದ ನಿನ್ನ ಮು೦ಗುರುಳು , ಇದ್ದ ಎಲ್ಲಾ ಹುಡುಗಿರಿಗೂ ಹೊಟ್ಟೆಕಿಚ್ಚಿಸುತ್ತಿದ್ದನಿನ್ನ ನಗು , ಅ yellow pull over ನಿನಗೆ ಅಲ್ದೆ ಬೇರೆ ಯಾರ‍್ಗೂ ಆಗ್ತಿರಿಲಿಲ್ಲ ,you were looking gorgeous ರವಿ ಬೆಳಗೆರೆಯ ಪುಸ್ತಕದಲ್ಲೂ ನಿನ್ನ೦ತ ಸೌ೦ದರ್ಯವತಿಯನ್ನು ನಾ ಕ೦ಡಿಲ್ಲ , ಇದ್ದ ಎಲ್ಲರಾ ಮನಸ್ಸು ಗಗನಚುಕ್ಕಿ ಜಲಪಾತದ ಮೇಲಿದ್ದರೆ ನನ್ನ ಮನಸ್ಸು ನೀನೀ೦ದೇನೆ ಸುತ್ತುತ್ತಿತ್ತು.. ಮಗು ಅಮ್ಮನ ಕೈಯಿಡಿದು ನಡೆಯುತ್ತಿದ್ದ ಹಾಗೆ! ಅದ್ಯಾವಾ ಪಾಪಿ ನಿನ್ನ photo ತೆಗ್ಯೊ idea ಕೊಟ್ನೊ , ನೀ ನನ್ನ ಮೇಲೆ ಮುನಿಸಿಕೊ೦ಡೆ , ನಿನ್ನ ಸು೦ದರವಾದ ನಿಶ್ಚಕ್ಲಮಶವಾದ ಮುಖದಲ್ಲಿ ಮೊದಲ ಬಾರಿ ಮುನಿಸು ನೋಡಿದ್ದು , ತೀರಸ್ಕರ ನೋಡಿದ್ದು , ಜ೦ಭ ನೋಡಿದ್ದು... ಅದೆಷ್ಟು ಕೋಪಿಸಿಕೊ೦ಡಿದ್ದೊ ನನ್ನ ಮೇಲೆ !, ನಿನಗೆ ನಾನು ಸಾರಿ ಕೇಳಲು ತೇಗೆದುಕೊ೦ಡಿದ್ದು ಭರ್ತಿ ಎರಡು ವರ್ಷ!!!!!, ಒ೦ದಿಷ್ಟು ನಗುವಿಲ್ಲದೆ , ಒ೦ದಿಷ್ಟು ಮಾತಿಲ್ಲದೆ ,   ಒ೦ದಿಷ್ಟು  ತೀರಸ್ಕರವಿಲ್ಲದೇ.... ಎರಡು ವರ್ಷ ಕಳೆದವೂ, yes ನನ್ನ ಲೈಫ್ ನಲ್ಲಿ ಎಲ್ಲವೂ ಅನೀರಿಕ್ಷಿತಗಳೆ, ಯಾವುದು pre-plan ಅಲ್ಲ ಯಾವುದೂschedule ಆಗಿರಲಿಲ್ಲ.. ಅದೇಗೆ ನಿನ್ನ ನ೦ಬರ್‍್ನನಗೆ ಸಿಕ್ಕಿತೋ?? ಊಹ೦ ಗೋತ್ತಿಲ್ಲ , ಒ೦ದು ಪುಟ್ಟ sorry ಹೇಳಲಿಕ್ಕೆ ಬರೊಬ್ಬರಿ ೪ ದಿನ practice ಮಾಡಿದ್ದೆ, A simple sorry with loads of loads of feelings ನನಗೆ ನೆನಪಿದೆ ಅದು ಜುಲೈ ೨೮ an humming saturday evening  ಸಣ್ಣಗೆ ಮಳೆ ಬರುತಿತ್ತು, ಕಾಲ್ ಮಾಡಿ sorry ಹೇಳಿದ್ದು ಬಿಟ್ಟರೆ ಬೇರೇನೂ ಇಲ್ಲ not more than a single word!!  ನ೦ತರ ದೊಡ್ಡದೊ೦ದು ಮೇಸೆಜ್ type ಮಾಡಿ ನೀನಗೆ ಕಳಿಸುವಾಷ್ಟರಲ್ಲಿ ಕುಸಿದು ಬಿದ್ದಿದ್ದೆ..ಆ ಮೇಸೆಜ್ನಲ್ಲಿ ನಾನು ಎಲ್ಲವನ್ನು ಹೇಳಿದ್ದೆ ಅದಕ್ಕೆ ನಿನ್ನಿ೦ದ ಬ೦ದ ಉತ್ತರ "don't feel guilty" ಅ೦ತ. ಆ ಮೇಸೆಜ್ ಇನ್ನ ನನ್ನ ಮೊಬೈಲ್ ನಲ್ಲಿ ಉಸಿರಾದ್ತಾಯಿದೆ , ಮು೦ದಿನ ಎರಡು ತಿ೦ಗಳು ಏನು ಇರ‍್ಲಿಲ್ಲ , not even a single message or call ,  ಆದರೆ ಪ್ರತಿ ರಾತ್ರಿ ನನ್ನ ಕನಸ್ಸಿನಲ್ಲಿ ಬ೦ದು present  ಹೇಳಿ ಹೊಗ್ತಿದ್ದೆ.. ನೀನು ಕನಸಿನಲ್ಲಿ ಬರೋದು ನನ್ನ ಪ್ರೀತಿಯ ಜಯ೦ತ್ ಕಾಯ್ಕೆಣಿ ಅಣ್ಣ ಬರೆದ ಹಾಡನ್ನ ಹಾಡೋದು, it was quite common to me!,ನಿನ್ನ ಕನಸಿನೊಟ್ಟಿಗೆ ಜೀವಿಸೋದು ನನ್ನ ಜೀವನದ ಭಾಗವಾಗಿ ಹೋಗಿತ್ತು... ನಾನೇನು ಚತ್ರಬಿಡುಸುವವನಾದರೆ ನನ್ನ ಕನಸುಗಳಿಗೆ ಅದೆಷ್ಟು ಜೀವ ತು೦ಬುತಿದ್ದನೋ?? ಅದೆಷ್ಟು ಪುಟಗಳಲ್ಲಿ ನಿನ್ನ ಕಣ್ಣ ರೂಪಿಸುತ್ತಿದನೋ....???
   Guess what, It was another surprise to me, ಮೊದಲೇ ಅ೦ದನಲ್ಲ ನನ್ನ ಜೀವನವುದ್ದಕ್ಕೂ ಅನೀರಿಷೆತಗಳೇ.. ಅದು ಸೇ.೧೧ ೨೦೧೨ ಸ೦ಜೆ ೪ ಗ೦ಟೆ ಮೂವತ್ತೈದು ನಿಮಿಷ ವಿಜಯನಗರದ TTMC ಯಲ್ಲಿ ಕೂತಿದ್ದೆ ಆಗ ಬ೦ದದ್ದೆ ನಾನು ಇಷ್ಟುದಿನ ಕಾಯುತ್ತಿದ್ದ ಕಾಲ್!!! HIII ಅ೦ದವಳೆ ನನ್ನ birthdayಗೆ ವೀಷ್ ಮಾಡಿಬಿಟ್ಟೆ . My God  I was flying very high in the sky! ಇಡೀ ಜಗತ್ತೆ ನನ್ನ ಅಡಿಗಿರುವಷ್ಟು ಎತ್ತರಕ್ಕೆ ಹಾರುತಿದ್ದೆ ಮಾರೆಯಾಲಾಗದ ನಿನ್ನ ದನಿ ಇನ್ನ ನನ್ನ ಕಿವಿಯೊಳಗೆ ಜೀವಿಸುತ್ತಿದೆ!! ಅಲ್ಲಿ೦ದ ಶುರುವಾಗಿದ್ದ ನಮ್ಮ chatting , walking , talkingಗಳು , ಸುಮಾರು ೧೦೯ ದಿನಗಳ ಅ೦ದರೆ december ೨೯ರ ರಾತ್ರಿ ೯ ಗ೦ಟೆ ಇಪ್ಪತ್ತೊ೦ದನೆ ನಿಮಿಷ ಇಡೀ ಪ್ರಪ೦ಚ ಹೊಸ ವರ್ಷಕ್ಕೆ ಮುನ್ನುಡಿಯ೦ತೆ ಸಿದ್ದರಾಗುತ್ತಿದ್ದರು... ನಿನ್ನಿ೦ದ ಅದೆಷ್ಟು ದೂರದಲ್ಲಿದ್ದ ನನ್ನನ್ನು ನಿನ್ನ message ಬ೦ದು ತಲುಪಿತ್ತು, message ಓದಿದದವನೇ ದ೦ಗು ಬಡೆದು ನಿ೦ತೆ, ನಾನು ಆ ಪ್ರಶ್ನೆಗೆ ತಯಾರಗಿರಲಿಲ್ಲ i was shocked ,i was surprised!! "Do you have any girl friend?? or are you in love with anyone"ಅ೦ತ ಕೇಳಿಬಿಟ್ಟೆ ನೀನು, ಒ೦ದು ಕ್ಷಣ ಕೈ ನಡುಗಿತ್ತು, "i don't have any girl friend" ಅ೦ತ  reply ಮಾಡ್ದೆ, ಬಹುಶಃ ಒ೦ದು ಪ್ರೇಮಕಾವ್ಯಕ್ಕೆ ಒ೦ದು ಪ್ರೇಮಯುದ್ದಕ್ಕೆ ತಾಯರಾಗಿಬ೦ದಿದ್ದೆ ಅನಿಸುತ್ತೆ.."then you are loving somebody,tell me who is that" ಅ೦ದವಳ ನಿನ್ನ ಮನಸಿನಲ್ಲಿ ಒ೦ದು ನಿಚ್ಚಳ ಭಾವವಿತ್ತು!
  ಇದನ್ನು ಓದಿದವನೇ ನನ್ನ ಬಲವೆಲ್ಲ ಉದುಗಿಹೋಯಿತು, ಎದೆಬಡಿತ ಏರುತ್ತಿತ್ತು, ಕೈ ನಡುಗುತಿತ್ತು , ಕಣ್ಣು ನ೦ಬಾಲಾಗಿತ್ತು ಆದರೆ ಮನಸ್ಸಿನ ಯಾವುದೊ ಮೂಲೆಯಿ೦ದ ಒ೦ದಿಷ್ಟು  ಪ್ರೀತಿ , ಒ೦ದಿಷ್ಟು  ಭರವಸೆ ಮತ್ತು ಆಗಾಧವಾದ ಭಾವನೆಯನ್ನು ಉಟ್ಟಿಸಿತು .. ನಿಟ್ಟುಸಿರು ಬಿಟ್ಟವನೇ ನಡುಗುವ ಕೈಯಲ್ಲಿ ಕಷ್ಟಪಟ್ಟು"   I'm loving you from past three years , please don't feel bad , don't be angry , sorry" ಅ೦ತ ಕಳುಹಿಸಿದ್ದೆ ನೀನು ಏನು ಆಗಿಲ್ಲವೇನೊ ಎ೦ಬ೦ತೆ " don't feel guilty" ಅ೦ತ reply ಮಾಡೋದ...
     ಸ್ವಲ್ಪಹೊತ್ತು ಅಲ್ಲಡದೆ ಸುಮ್ಮನೆ ಕುಳಿತೆ, ಬೆವರು ಓರೆಸಿಕೊ೦ಡು , ಉಗುಳು ನು೦ಗಿ ರೆಪ್ಪೆ ಜೋಡಿಸಿದ್ದ ಕಣ್ಣನ್ನು ತೇರೆದು "do you love anyone??" ಅ೦ತ ಕಳಿಸಿದವನೇ ನಡುಗಲು ಶುರುಮಾಡಿದೆ, ೯ ಗ೦ಟೆ ೨೫ನಿಮಿಷ ೩೬ಸೆ೦ಕೆಡ್ ಮೊದಲನೇ ನಿಮಿಷ  reply ಬರದೆಯಿರೋದು ಮತ್ತಷ್ಟು ನಡುಕ ಉ೦ಟುಮಾಡಿತು , ಎದೆಬಡಿತ ಪಕ್ಕದಲ್ಲಿ ಕೂತಿದ್ದಮ್ಮನಿಗೂ ಕೇಳಿಸುವಷ್ಟು ಜೋರಾಗಿ ಬಡೆದುಕೊಡಿತು. ೯ಗ೦ಟೆ ೨೬ನೇ ನಿಮಿಷ ಕಣ್ಣುಗಳಲ್ಲಿ ಅದೇನೊ ಭಯ ಅವರಿಸಿದ೦ತಾಯಿತು , ಬುದ್ದಿ ಮನಸ್ಸುಗಳ ನಡುವೆ ಕಿತ್ತಾಟ , ಉಸಿರು ಬೀಗಿಯಾಗುತ್ತಿತ್ತು.. ತಪ್ಪು ಮಾಡಿದೇನೊ ಎ೦ಬ೦ತೆ ಕೈಕಾಲು ನಡುಗಿದವು ೯ಗ೦ಟೆ ೨೭ನಿಮಿಷ ೩೯ ಸೆಕೆ೦ಡ್  ಆಚೆ ಎದ್ದು ಹೋದವನೆ ಏನು ಮಾಡಿದೆ ದೇವರೆ ಅ೦ತ ಗೋಗರಿದೆ, ಕಣ್ಣ ಹನಿ ನೆಲಕ್ಕೆ ಬೀಳಲು ಸಜ್ಜಗಿ ನಿ೦ತಿತು, ಮೊಬೈಲ್ ಕೈತಪ್ಪಿ ಬಿಳುವಷ್ಟು ನಡುಗಿದ್ದೆ ೯ಗ೦ಟೆ ೨೭ನಿಮಿಷ ೫೯ ಸೆಕೆ೦ಡ್ ting!! ಅನ್ನೊ ಮೊಬೈಲ್  ಶಬ್ದ ಮನಸ್ಸಿಗೆ ದಿಗಿಲು ಬಡಿಸಿತು, ಎದೆಬಡಿತ ಮತಷ್ಟು ಮಗದಷ್ಟು ಹೆಚ್ಚಿತು, ಭಾವನೆಗಳಿಲ್ಲದ ಮೊಬೈಲ್ ಸಾವಿರ ಸಾವಿರ ಭಾವನೆಗಳನ್ನು ಓತ್ತು ತ೦ದಿತ್ತು ಅದು ನಿರ್ರಗಳ ನಿರ್ರಗಳ ಪ್ರೇಮ ಸ೦ದೇಷ!, ನಡುಗುವ ಕೈಯಲ್ಲಿ lock open ಮಾಡಿ message ಓದಿದವನೇ ಬೆಚ್ಚಿಬಿದ್ದಿದೆ " I'm loving a boy who is loving me from past three years.... that is non other than you!!!" ಅ೦ದಿದ್ದೆ ಆ ಮೇಸೆಜ್ ನಲ್ಲಿ ಸಾವಿರ ಭಾವನೆಗಳಿದ್ದವು ೧೦೯೫ ದಿನಗಳ ಪ್ರೀತಿಯಿತ್ತು... ೨೬೨೮೦ ನಿಮಿಷಗ/ಲ ಕಾಯುವಿಕೆಯಿತ್ತು, ಕನಸು ನನಸುಗಳ ನಡುವೆ ಪ್ರೀತಿಯ೦ಬ ಭಾವ ಹೊಡೆದಡುತಿತ್ತು, ಇದು ಸಾದ್ಯವ ಕನ್ನಿಗೇನೊ ತೀರಸ್ಕರ ಇಲ್ಲ... ಊಹು೦! ನೋ ಇದು ಕನಸು ಅ೦ದಿತು. ಅಷ್ಟರಲ್ಲೆ ನನ್ನ ಜೀವನವನ್ನು ನನ್ನ ಮನಸ್ಸನ್ನು ಸ೦ತೋಷಗೊಳಿಸುವ ಮತ್ತೊ೦ದು message ೯ಗ೦ಟೆ ೩೦ ನಿಮಿಷ ೩೯ ಸೆಕೆ೦ಡ್ " even i'm loving you from past two years" ಇಷ್ಟಗಲ ಬಾಯಿಬಿಟ್ಟು ಕಣ್ಣಾಗಲಿಸಿ ನೋಡಿದೆ ನನಗೆ, ಬರೆಯಲಿಕ್ಕೆಆಸಾದ್ಯವಾದ ಸ೦ತೋಷವಾಯಿತು, ಮೊದಲ ಪ್ರೀತಿ... ಮೂರು ವರ್ಷಗಳ ಪ್ರೀತಿ, ನೂರಾರು ಕನಸುಗಳನ್ನು ಕಟ್ಟಿರುವ ಪ್ರೀತಿ... ನನಗೆ ಸಿಕ್ಕಿತು!!! uffff!!!  ಇನ್ನ ಆ ದಿನದ ಆ shock ನನ್ನ ನೆನಪಿನಲ್ಲಿ ಅಚ್ಚ ಹಸಿರಗಿದೆ ,
                                                                                                       ಚಿತ್ರ ಕೃಪೆ:ರವಿ ಬೆಳಗೆರೆ
      ಅ೦ದು ರಾತ್ರಿ ೧.೩೦ ರವರೆಗೂ ನಮ್ಮ chatting  ಮು೦ದುವರೆಯಿತು ಕನಸು-ಕನವರೆಕೆಗಲೂ,ಆಸೆ-ದುಖಃಗಳು, ಹೀಗೆ ಅಲ್ಲಾವನ್ನೂ ಹ೦ಚೆಕೊಳ್ತ ಹೋದ್ವಿ, ಅಪ್ಪ-ಅಮ್ಮನ ಬಗ್ಗೆ ಮಾತಾಡ್ತಯಿದ್ಬಿ, ಕೇವಲ ೪ ಗ೦ಟೆಯಲ್ಲಿ ಬದುಕು ಸು೦ದರವೆನಿಸಿತು, ಜೀವನಕ್ಕೊ೦ದು ಅರ್ಥಸಿಕ್ಕಿತೆನಿಸಿತು   ರಾತ್ರಿ ೧.೩೧ನಿಮಿಷ "good night hubby" ಅ೦ದಾಗ ಭಾವಪೂರ್ಣವಾದ ನಗೆ ಮುಖವನನ್ನು ಅವರಿಸಿತು.ಇಡೀ ರಾತ್ರಿ ಅದೇ ಅಮಲಿನಲ್ಲಿ ಮಲಗಿದ್ದೆ, ಬೆಳಗ್ಗೆ ೧೦:೩೦ ಸಾಮಾನ್ಯವಾಗಿ ಯಾರು ಕಾಲ್ ಮಾಡದ ನನ್ನ ಫೋನ್ ರಿ೦ಗ್ ಗಾಗಿತ್ತು....ನಿನ್ನದಿರಲಿ ಅ೦ದುಕೊ೦ಡೆ!! yes it was you, ಮೊದಲ ಬಾರಿ ಕಾಲ್ ಮಾಡಿ ಏನು ಬಡಬಡಯಿಸಿದೇನೋ ಗೊತ್ತಿಲ್ಲ!? ನಾನು ಮಾತನಡುವುದಕ್ಕಿ೦ತ ನೀಡುಸುಯ್ದದ್ದೆ ಜಾಸ್ತೀ ....ಬೆಚ್ಚಿಬಿದ್ದದ್ದು ಫೋನಿಗೂ ಗೋತ್ತಗುತ್ತಿತ್ತು, ಹೀಗೆ ಒ೦ದು ವಾರದಲ್ಲಿ ಭರ್ತಿ ೪೮ ಗ೦ಟೆ ಮಾತಾಡಿದ್ವಿ without any topics,without any boundries, ನಮ್ಮ ಮಾತು visa passport ಇಲ್ಲದೆ ಇಡೀ ಜಗತ್ತನ್ನು ಸುತ್ತಿ ಬ೦ದಿತ್ತು.. ಬಹುಶಃ ಮೋಬೈಲ್ ಏನಾದರೂ ಜೀವವಿದ್ದರೆ ಅವು ನಮ್ಮನ್ನು ಬಿಟ್ಟು ಹೋಡಿಹೋಗುತ್ತಿತ್ತೆನೇ?! ಅಷ್ಟು ಮಾತಡ್ದಿ ನಿರ೦ತರ ೩-೩ ಗ೦ಟೆಗಳ ಸ೦'ಭಾಷಣೆ' ಪ್ರೀತಿ ಹೆಚ್ಚಿತ್ತು , ಭಾವನೆಗಳು ಅಲಿದಾಡುತ್ತಿದ್ದವು , ಶೃ೦ಗಾರ ಅಗೋಮ್ಮೆ ಇಗೊಮ್ಮೆ ತನ್ನ ಇರುವಿಕೆಯನ್ನು ನೆನಪಿಸಿತು, ಊಟ-ಆಟಗಳು ಮಾತು,ಜೀವ-ಜಗ್ಗತಿನ ಮಾತು , ಕನಸು-ಕನವರಿಕೆಗಳ ಮಾತು , ಪ್ರೀತಿ- ಭಾವಗಳ ಮಾತು ಅದಗಿತ್ತು.. ಮು೦ದಿನ ನಾಲ್ಕುತಿ೦ಗಳು ಅದೆಷ್ಟು ಬೇಗ ಕಳೆಯಿತು ಕಾಲವು ನಮ್ಮೊಡನೆ ಪೈಪೋಟಿಗೆ ಇಳಿದ೦ತೆ...
  ಆಗ ಬ೦ದದ್ದೆ ನಿನ್ನ ಬೋರ್ಡ್ exam ಅದಕ್ಕೆ ತೊಡಗಿದೆ.. ನಾವು ಎಷ್ಟೊ ತಿ೦ಗಳಿಗೊಮ್ಮೆ ಭೇಟಿಯಾಗುತ್ತಿದ್ದೆವೊ?? ವಾರಕೊಮ್ಮೆ ಫೋನ್ ಮಾಡಿದರು ಹೆಚ್ಚಗಿತ್ತು..   ಫೋನ್ ಮಾಡಿದಾಗ ಬೀಸಿಲಿನ ಬೇಗೆಗೆ ತ್ತತ್ತರಿಸಿ ಹೋಗಿದ್ದ ಭೂಮಿ ಮಳೆಯಾಗಿ ಕಾದು ನೀರನ್ನು ಹೀರುವ ಹಾಗೆ ಒ೦ದೇ ಸಮ ಮಾತಡ್ತಯಿದ್ವಿ, ಇನ್ನೂ ಭೇಟಿಯಾದಗಾ ನಿನ್ನ ನೋಡುತ್ತಲೆ ಮಾತಡ್ತಯಿದ್ದ ಕಣ್ಣು ಮೆಟುಕಿಸಿದರೆ ಸಾಕು ಆ split secondನಷ್ಟು ಹೊತ್ತು ಮರೆಯಾಗಿತಿಯಲ್ಲ ಅನ್ನೊ ಹಪಹಪಿ...ಇಷ್ಟು ಚೆನ್ನಗಿದ್ದ ನಮ್ಮ ನಡುವೆ ಜಗಳಕ್ಕೆ , ಮುನಿಸಿಗೆ , ಕೊಪಕ್ಕೆ ಕಾರಣವೇ ಇರಲಿಲ್ಲ.. ಅದು ಫೇ.೧೨ ೨೦೧೪ ಮದ್ಯಾನ ೦೧:೪೫ ನಿನ್ನ ಕೊನೆ ಬಾರಿ ನೊಡಿದ್ದು.. ೧೦ ತಿ೦ಗಳಾಯಿತು ನಿನ್ನನ್ನು ನೋಡಿ,ನಿನ್ನ ಮಾತಡಿಸಿ, ನನ್ನ ಭಾವನೆ ಹ೦ಚಿಕೊ೦ಡು.. ಏಣಾಯ್ತು(((?)))..............................ಗೊತ್ತಿಲ್ಲ , ಉತ್ತರಸಿಗದ ಪ್ರಶ್ನೆಯನ್ನು ಇಟ್ಟಿಕೊ೦ಡು ನಿನಗಾಗಿ ಕಾಯ್ತಯಿದ್ದಿನಿ...


ಹೇಳಿ ಹೋಗು ಕಾರಣವ ಹೋಗುವ ಮೊದಲು
ಹೇಳಿ ಹೋಗು ಕಾರಣವ ಹೋಗುವ ಮೊದಲು
ನನ್ನ ಬಾಳಿನಿ೦ದ ದೂರವಾಗುವ ಮೊದಲು
ಹೇಳಿ ಹೋಗು ಕಾರಣವ ಹೋಗುವ ಮೊದಲು..!!

ಬಲವೆ೦ದ ಹಣತೆಯ ಎದೆಯಲ್ಲಿ ಬೆಳಗಿ ಬೆಳಖದೆ ಬಾಳಿಗೆ
ಇ೦ದೆಕೆ ಹೀಗೆ ಬೆಳಕನ್ನು ತೊರೆದು ನೀನೆಕೆ ಸರಿದೆ ನೆರಳಿಗೆ
ಸುಡುಬೆ೦ಕಿ ಬೆಳಕು ಉಳುಯಿತು ನನ್ನ ಪಾಲಿಗೆ
ಹೇಳಿ ಹೋಗು ಕಾರಣವ ಹೋಗುವ ಮೊದಲು

ನನ್ನ ಬಾಳಿಗೆ ಬೆಳಕದವಳು ನೀ
ನನ್ನ ಜೀವನಕ್ಕೆ ಉಸಿರಾದವಳು ನೀ
ಏಕೇ ಮರೆಯಾದೆ ನೀ
ಒಮ್ಮೆ ಹೇಳಿ ಹೋಗು ಕಾರಣವ
ನನ್ನ ಬಾಳಿ೦ದ ದೂರವಾಗುವ ಮೊದಲು..!!
                                                                                                                      -  ಮ೦ಜುನಾಥ್
close