22 Aug 2014

ಅನಂತ ಅಸ್ತಂಗತ..

ಆಕಾಶವೇ 
ಕಂಬನಿಗರೆದು
ಆ ಹೊತ್ತಿಗೆ 
ಅಶ್ರು:ತರ್ಪಣ 
ಬಿಟ್ಟಿತ್ತು 

ಸಾವಿಗೂ 
ಪಟಾಕಿ ಸಿಡಿಸಿ 
ಸಂಭ್ರಮಿಸಿದರೆ... 
ಬಿಡಿ ಆತ
ಮತ್ತೆ ಹುಟ್ಟಿದ್ದಾನೆ ..

ಸಾವಿನ ಸುದ್ದಿಯ 
ಬಿತ್ತರದಲ್ಲೂ 
ದಂಡಿ ಉಡುವ ಉಣ್ಣುವ 
ಜಾಹಿರಾತುಗಳೇ 
ಆತ ಸತ್ತಿಲ್ಲ.... 

ಸಾವೊಂದು 
ಎದೆಯಲ್ಲಿಸಂಕಟ 
ಹುಟ್ಟಿಸದಿದ್ದರೆ
ಅದು ಬದುಕಲ್ಲ 
ಸಾವು
'ಅನಂತನಂತ್ಯ'

close