17 Jun 2015

ಹೇಳಲೇನು ಕಾರಣ!

ಹೇಳಿ ಹೋಗು ಕಾರಣವಾ ಹೋಗುವ ಮೊದಲು
ಹೇಳಿ ಹೋಗು ಕಾರಣವಾ ಹೋಗುವ ಮೊದಲು
ನನ್ನ ಬಾಳಿಂದ ದೂರವಾಗುವ ಮೊದಲು
ಹೇಳಿ ಹೋಗು ಕಾರಣವಾ ಹೋಗುವ ಮೊದಲು

ನಿದ್ರೆ ಬಾರದ ಕತ್ತಲ ರಾತ್ರಿಯಲ್ಲಿ ಮಹಡಿಯ ಮೇಲೆ ನಿಂತು ಗಾಢ ಮೌನವಹಿಸಿದ ಆಕಾಶದಲ್ಲಿ ಚಂದ್ರನನ್ನು ನೋಡುತ್ತ ತನ್ನ ಮೋಬೈಲ್‌ನಿಂದ ಹಾಡುಗಳನ್ನು ಕೇಳುತ್ತಿದ್ದ ಅವನಿಗೆ ಸಿ.ಆಶ್ವತ್‌ ಹಾಡಿರುವ ಈ ಹಾಡು ಅನೀರಿಕ್ಷಿತವಾಗಿ ಪ್ಲೇಯಾಗಿ ಕಾಡದೆ ಇರಲಿಲ್ಲ. ಈ ಹಾಡು ನೇರ ಅವನ ಮನಸ್ಸಿಗೆ ನುಗ್ಗಿ ಮರೆತು ಹೋಗಿತ್ತ ಸಾಕಷ್ಟು ನೆನಪುಗಳು ಕಾಡಲಾರಂಭಿಸಿತು.

ಬಲವೆಂಬ ಹಣತೆಯ ಎದೆಯಲ್ಲಿ ಬೆಳಗಿ ಬೆಳಕಾದೆ ಬಾಳಿಗೆ
ಇಂದೇಕೆ ಹೀಗೆ ಬೆಳಕನ್ನು ತೊರೆದು ನೀನೆಕೆ ಸರಿದೆ ನೆರಳಿಗೆ
ಸುಡುಬೆಂಕಿ ಬೆಳಕು ಉಳಿಯಿತು ನನ್ನ ಪಾಲಿಗೆ
ಹೇಳಿ ಹೋಗು ಕಾರಣವಾ ಹೋಗುವ ಮೊದಲು

ಅದೊಂದು ವಾಕ್ಯ ಒಂದೇ ಒಂದು ವಾಕ್ಯ ಅವನಿಗೆ ಕಾಡದೆ ಇರಲಿಲ್ಲ:  ಹೇಳಿ ಹೋಗು ಕಾರಣ!
ಭರ್ತಿ ಆರು ವರ್ಷದ ಅವನ ಕನಸಿಗೆ, ಅವನ ಪ್ರೀತಿಗೆ ಕಾರಣವೆ ಹೇಳದೆ ಹೋದ ಅವನ ಬದುಕಿನ ಜೀವನಾಡಿ ಅವನ ಆ ಮುದ್ದು ಹುಡುಗಿ ನೆನಪಾಗದೆ ಇರಲಿಲ್ಲ. ಅವನ ಪ್ರೀತಿಗೆ ಇಂದು ತುಂಬು ಆರು ವರ್ಷ! ಅವನ ಕಾಯುವಿಕೆಗೂ ಕೂಡ! ಆ ಆರು ವರ್ಷದಲ್ಲಿ ಒಮ್ಮೆಯು ಅವನನ್ನು ಹಿಂತಿರುಗಿ ನೋಡದವಳು ಆಕೇ. ಆರು ವರ್ಷದ ಅವನ ಕಣ್ಣಿರಾದವಳು ಅವಳು. ಆರು ವರ್ಷದ ಅವನ ಕಷ್ಟಕಾರ ಜೀವನದಲ್ಲಿ ಒಮ್ಮೆಯೂ ಬಾರದವಳು ಅವಳು. ಕಾರಣ ಹೇಳದೆ ಹೋರಟು ಹೋದವಳು!

ಈ ಭರ್ತಿ ಆರು ವರ್ಷದಲ್ಲಿ ಅವನು ಅವಳನ್ನು ನೆನಪು ಮಾಡಿಕೊಳ್ಳದ ನೀರವ ಕ್ಷಣವಿರಲಿಲ್ಲ.. ಆಸಲಿಗೆ ಈ ಆರು ವರ್ಷದಲ್ಲಿ ಅವಳು ಅವನಿಗೆ ನೆನಪು ಮಾಡಿಕೊಳ್ಳುವ 'outsider' ಆಗಿರಲಿಲ್ಲ! ಅವಳು ಅವನ ಬದುಕಿನ ಜೀವತಂತು. ಕರುಳ ವೀಣೆ. ಎದೆಯ ಢವಢವ

ಯಾವಗ ಅವಳು ಆರು ವರ್ಷದಲ್ಲಿ ಒಮ್ಮಯು ಅವನನ್ನು ತಿರುಗಿ ನೋಡಲಿಲ್ಲವೊ. ಅವನಿಗೆ ಜೀವನ ಪಾಠ ಕಲುಹಿಸಲು ಪ್ರಾರಂಭಿಸಿತು. ಸಾಹಿತ್ಯ ಓದಲು ರುಚಿಸಿತ್ತು, ನಿಧಾನವಾಗಿ slowly slowly he was getting into the literature. ಜೀವನ ಬದಲಾಗುತ್ತ ಹೋಯ್ತು. ಸಾಹಿತ್ಯ ಕ್ರೀಡೆ ಆಸೆ ಹುಟ್ಟಿಸಿತು. ಅವಳು ಅವನ ಮನಸಿನಿಂದ ನಿಧಾನವಾಗಿ ಕರಗಿ ಹೋಗುತ್ತಿದ್ದಳು. One fine day she was melted. She was melted from his heart! ಸಂಪೂರ್ಣವಾಗಿ ಅವಳು ಅವನ ಜೀವನದಿಂದ ಮರೆಯಾಗಿ ಬಿಟ್ಟಳು. He began to enjoy his life. ಜೀವನ ಬಣ್ಣಗಳಿಂದ ತುಂಬಿತ್ತು. Life was colourful! ಬದುಕು ಸುಂದರವಾಗಿತ್ತು. ಆಗಲೇ ಅವನಿಗೆ ಅವನ ಜೀವನ ಸಂಗಾತಿ ಸಿಕ್ಕದ್ದು.. ಪ್ರೀತಿಯ ಜ್ಯೋತಿ... ಪ್ರೀತಿಯ ತಾಯಿ... ಬದುಕಿಗೆ ಸ್ಫೂರ್ತಿಯ ಸೆಲೆ!

ಅವನ ಆರು ವರ್ಷ ಕುಂದು ಹೋಗಿದ್ದ, ಕಾಯುವಿಕೆಯಲ್ಲಿ ನರಳಿಹೋಗಿದ್ದ ಬದುಕಿಗೊಂದು ಸ್ಫೂರ್ತಿ ದೊರೆತಾಗ ಮತ್ತೆ ಅವನ ಬದುಕಿಗೆ 'ಬಿರುಗಾಳಿ?'ಯಾಗಿ ಸುಳಿದು ಬಿಟ್ಟಳು ಅವಳು ಹೇಳಲೇನು ಕಾರಣವಾ! ಎಂದು...

ಹೇಳಲೇನು ಕಾರಣ ಮತ್ತೋಮ್ಮೆ ಬಂದು
ಹೇಳಲೇನು ಕಾರಣ ಮತ್ತೋಮ್ಮೆ ಬಂದು
ನಿನ್ನ ಬಾಳಿಂದ ದೂರಾಗಲು ಇಷ್ಟವಿಲ್ಲವೆಂದು
ಹೇಳಲೇನು ಕಾರಣ ಮತ್ತೋಮ್ಮೆ ಬಂದು..

ಆರು ವರ್ಷದಲ್ಲಿ ಕೇವಲ ಕಾರಣಕ್ಕಲ್ಲ ತನ್ನ ಪ್ರೀತಿಯ ಬಗ್ಗೆ  ತನ್ನ ಕನಸು ಕನವರಿಕೆಯ ಬಗ್ಗೆ ಹೇಳಲು ಅವನು ಎಷ್ಟೆ ಪ್ರಯತ್ನಿಸಿದರು ಸಿಕ್ಕಲಿಲ್ಲ! ಬದುಕು ಕತ್ತಲೆಯಲ್ಲೆ ಇದ್ದಗಾ ಬಾರದ ಅವಳು. ಪ್ರತಿ ನಿತ್ಯದ ಹಾಗುಹೋಗುಗಳಲ್ಲು ಕಣ್ಣಿರು ಸುರಿಸುವಾಗ ಬಾರದ ಅವಳು ಈಗ! ಬದುಕು ಸುಂದರವಾಗುವಾಗ, ಖುಷಿಯಿಂದ ಬಣ್ಣದಿಂದ ತುಂಬಿರುವಾಗ ಹೇಳಲೇನು ಕಾರಣ ಎಂದು ಬಂದಿದ್ದಾಳೆ.. ಒಮ್ಮೆಲೆ ಬೆಚ್ಚಿಬಿದ್ದ ಆತ. ಆದರೆ ಯಾವುದನ್ನು ಮುಚ್ಚಿಡದೆ ಅವನ ಮನಸ್ಸಿನಲ್ಲಿದ್ದ ಅಷ್ಟು ಭಾವನೆಗಳನ್ನು ಅಕ್ಷರ ರೂಪಕ್ಕೆ ತರಲು ಪ್ರಯತ್ನಿಸಿದ.

* * * * * * * * *

ಪ್ರೀತಿಯ ಹುಡುಗಿ,
ಪ್ರೀತಿ ಇದೆಯೇ, ಗೊತ್ತಿಲ್ಲ. ನಾನು ಈ ಪತ್ರ ಬರೆಯಬೇಕು ಎಂದು ನಿರ್ಧರಿಸಿದವನೇ ನನ್ನ ಡೈರಿ ತೆಗೆದು ಬರೆಯಲಾರಂಭಿಸಿದೆ ನಾನು ಈ ಪತ್ರ ಬರೆಯಲು ತೆಗೆದುಕೊಂಡ ಸಮಯಕ್ಕಿಂತಲೂ ನಾನು ನಿನ್ನ ಏನೆಂದು ಸಂಭೋದಿಸಲಿ ಎನ್ನುವುದಕ್ಕೆ ಬಹಳ ಸಮಯ ತೆಗೆದುಕೊಂಡೆ. ಬೇರೆನೂ ತಿಳಿಯದೆ ನಿನ್ನನ್ನು ಹುಡುಗಿ ಎಂದು ಕರೆದಿದ್ದೆನೆ. ಪ್ರೀತಿ ಇದೇಯೋ ಇಲ್ಲವೋ ನಂಗೊತ್ತಿಲ್ಲ. ಕೇವಲ ಕಾಯುವಿಕೆಯಲ್ಲಿ ಪ್ರೀತಿ ಆಡಗಿತುತ್ತ I don't know ಆದರೆ ಆರು ವರ್ಷ I mean six long years ನೀನು ನನ್ನ ಬದುಕಿನಲ್ಲಿ ಹಾದು ಹೋಗದ ಗಳಿಗೆ ಇರಲಿಲ್ಲ. I was waiting you for six years. ಅದ್ರೆ ನಿನ್ನ ಒಂದೇ ಒಂದು ಸುಳಿವು ಕೂಡ ಇರಲಿಲ್ಲ. ಮಾತಿಗಲ್ಲ ನನ್ನ ಮೌನಕ್ಕೂ ನೀನು ಸೀಗಲಿಲ್ಲ ಹುಡುಗಿ. Then I realised its time to move on. ನಿಜ! ನಾನು ಬದುಕಿನ ಈ ಚಕ್ರದಲ್ಲಿ ಮುಂದುವರೆಯಲೇ ಬೇಕಾಗಿತ್ತು. ನಾನು ನನ್ನ ಸ್ಥಿರ ಹೆಜ್ಜೆಯನ್ನು ಮುಂದಕ್ಕೆ ಇಟ್ಟು ಮುಂದುವರೆಯಲೇ ಬೇಕು.. ಮತ್ತು ಮುಂದುವರೆಯುತ್ತೆನೆ.
ಹುಡುಗಿ, ನಿನಗೆ ಗೊತ್ತು ನಾನು ಹೆಚ್ಚು ಮಾತಡೊಲ್ಲವೆಂದು ಅದಕ್ಕೆ ನನಗೆ ಸಾಹಿತ್ಯ ಇಷ್ಟವಾಯ್ತ, ಗೊತಿಲ್ಲ. ಆದರೆ ನಿನಗೆ ಹೇಳಲಾಗದ ಹಲವು ಸಂಗತಿಗಳನ್ನು ನಾನು ಈ ಪತ್ರದಲ್ಲಿ ಬಿಚ್ಚಿಡಲಿದ್ದೆನೆ! ಬಹುಶಃ ಕಣ್ಣ ಒಂದು ಹನಿ ನೀರು ಬಾರದೆ ಈ ಪತ್ರ ಬರೆಯುವುದು ಕಷ್ಟವಾಗಬಹುದು ಆದರೆ ನಾನು ಅದಷ್ಟು ಸಂಗತಿಗಳನ್ನು ನಿನಗೆ ಹೇಳಲೆಬೇಕು! ಮನಸ್ಸು ಗಟ್ಟಿ ಮಾಡ್ಕೊ, ಹೇಗೆ ಆರು ವರ್ಷ ನಾನಿಲ್ಲವೆಂದು ಕೊಂಡಿದ್ದೆ ಆಗೇಯೆ ಗಟ್ಟಿಮಾಡಿ ಈ ಪತ್ರ ಓದು! ಬದುಕಿನ ಸತ್ಯಗಳು ತೆರೆದುಕೊಳ್ಳುತ್ತದೆ.
ಆರು ವರ್ಷವೆಂದರೆ ಚಿಕ್ಕ ಘಳೀಗೆಯಲ್ಲ! ಅದು ಭರ್ತಿ 2000ಕ್ಕೂ ಹೆಚ್ಚು ದಿನ ಅಂದರೆ ಭರ್ತಿ  5000ಕ್ಕು ಹೆಚ್ಚು ಗಂಟೆಗಳು. yes ಅಷ್ಟು ಗಂಟೆಗಳು ಅಷ್ಟು ಕ್ಷಣಗಳು ನಿನನ್ನ ಆರಧಿಸಿದ್ದೆನ? ಗೊತ್ತಿಲ್ಲ! But definitely you were one among in my life! ಅದರೆ ಅಷ್ಟು ವರ್ಷವಾದರು  ನೀನು ಬರಲಿಲ್ಲವಾದರೆ ನಾನು ಏನು ಮಾಡಬೇಕು ಹೇಳು. Life must go on. ಬದುಕು ಮುಂದುವರೆಯಬೇಕು!   , ಬದಲಾವಣೆ ಜಗದ ನಿಯಮ! ಜಗತ್ತು ಬದಲಾಯ್ತು ನಾನು ಅದರಿಂದ ಹೊರತಗಾಲಿಲ್ಲ. ನೋಡು ಹುಡುಗಿ ನಾನು ಬರೆದ ಹೇಳಿ ಹೋಗು ಕಾರಣವೆಂಬ ಪತ್ರಕ್ಕೆ ಒಂದು ವರ್ಷದ ನಂತರ ಹೇಳಲೇನು ಕಾರಣವೆಂದು ಬಂದಿದ್ದಿಯಾ! But you are too late!  ಆದರೆ ನೀನು ಮತ್ತೊಮ್ಮೆ ಹೋಗಲ್ಲವೆಂದು ಏನು ನಂಬಿಕೆ? ಇಲ್ಲ ನಾನು ಆಳುವುದಿಲ್ಲ. ಹುಡುಗಿ ನಾನು ನೀನ್ನಿಂದ ದೂರವಾಗಲೇ ಬೇಕು. ನಿನ್ನನ್ನ ಮರೆಯಲೇಬೇಕು ಕಾರಣವೇನೆಂದು ಈಗ ಬೇಡ . ಇದಕ್ಕೆ ಜಗದ ನಿಯಮ.. ನನ್ನ ಮನಸ್ಸಿನ ನಿರ್ಣಯವೆಂದು ಹೆಸರಿಡಲಾರೆ. ನಾನು ಇಷ್ಟು ವರ್ಷ ನಿನಗಾಗಿ ಪಟ್ಟ ಕಷ್ಟ , ಕಣ್ಣಿರು , ನೋವುಗಳು ಸಾಕು. I'm moving ahead.. moving away from you. ನಿನ್ನ ಬದುಕಿಗೆ ಶುಭವಾಗಲಿ. I'm vanishing from you. ಮತ್ತೊಮ್ಮೆ ಹುಡುಕುವ ಪ್ರಯತ್ನ ಮಾಡಬೇಡ.
ಬದುಕೊಂದು ಸುಂದರ ಪಯಣದಂತೆ ಆ ನಿನ್ನ ಪಯಣದಲ್ಲಿ ನಾನು ಕೇವಲ ಒಂದು ರಸ್ತೆಯಲ್ಲಿ ಬರುವ ಹುಬ್ಬಗಿರಬಹುದು. ಅದಕ್ಕೆ ಹಂಪಿನ ಮೇಲೆ ಬಹಳಷ್ಟು ಹೊತ್ತು ನಿಲ್ಲಬಾರದು. ಮುಂದೆ ನಡೆ. ಬದುಕು ಮತ್ತಷ್ಟು ಸುಂದರವಾಗಿದೆ. Happy journey ನಿನ್ನ ಸುಂದರ ಬದುಕಿನ ಪಯಣಕ್ಕೆ ನನ್ನ ತುಂಬು ಹೃದಯದ ಆರೈಕೆ. ಈ ಬಾರಿ ಕಾರಣ ಕೇಳುವುದಿಲ್ಲ ಹೋಗಿಬೀಡು, ನನ್ನ ಬಾಳಿಂದ ದೂರವಾಗು!

-ಇಂತಿ
ನಿನ್ನ ಜೀವನದಲ್ಲಿ ನಾನು ಏನಾಗಿದ್ದೆನೋ ಗೊತ್ತಿಲ್ಲ!

* * * * * * * * * *

ತನ್ನ ಮನಸ್ಸಿನಲ್ಲಿದ್ದ ಕೇಲವೆ ಕೇಲವು ಸಂಗತಿಗಳನ್ನು ಬರೆದು ಆಕೆಗೆ ಕೊಡುವಷ್ಟರಲ್ಲಿ ಅವನಿ ನಿಟ್ಟಿಸಿರಾಗಿ ಬಿಟ್ಟ.. ಆದರೆ ಅವಳಿಂದ ಬಂದ ಉತ್ತರ ಅವನಿಗೆ ದಂಗುಬಡಿಸಿತ್ತು! ಅವಳು ಬರೆದ ಉತ್ತರ ಮುಂದಿನ ಭಾಗದಲ್ಲಿ
(ಮುಂದುವರೆಯುತ್ತದೆ- To be continued) 


close