Friday, 10 June 2016

ವಿಷಯವಿಲ್ಲದ ಲೇಖನಕ್ಕೆ ಟೈಟಲ್‌ ಬೇಕೇ?


      ಆಚೆ ಒಂದೇ ಸಮ ದೋ ಎಂಬ ಮಳೆ... Yes I knew it ಮುಂಗಾರು ಅದಾಗಲೇ ರಾಜ್ಯವನ್ನು ಪ್ರವೇಶಿಸಿತ್ತು. ಮಳೆಯ ಮೋಡಗಳ ನಡುವೆ ಯಾವುದೋ ಒಬ್ಬಂಟಿ ನಕ್ಷತ್ರ ನನನ್ನು ಇಣುಕಿ ನೋಡಿದ ಹಾಗೆ ಅನುಭವ. ಹೀಗೆ ನಾನು ಆ ನಕ್ಷತ್ರದಂತೆ ಬಹಳ ದಿನಗಳಿಂದ ತೀರ ಒಬ್ಬಂಟಿಯಾಗಿ ಬಿಟ್ಟಿದ್ದೇನೆ. ಯಾವಾಗ ನೋಡಿದರು ನನ್ನದು ಅದೇ ಮೌನ, ನನ್ನಂತ ಪಾಪಿಯನ್ನು ಮನೆಯ ತನಕ ಬಂದು ಮಾತಡಿಸುವವರು ಯಾರಿದ್ದಾರೆ ಹೇಳಿ? ಮೊಬೈಲಿನದು ಕೂಡ ಅದೇ ಮೌನ It never rung for me. ಹಾಗೆ ತೀರ ಒಬ್ಬಂಟಿಯಾಗಿ, ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿದ್ದವನಿಗೆ ಯಾವ ವಿಷಯ ಯೋಚಿಸಬೇಕೆಂಬುದೇ ಗೊತ್ತಾಗಲಿಲ್ಲ. ಸುಮ್ಮನೆ ಶೂನ್ಯ ಮನಸ್ಸಿನಲ್ಲಿ ಮಳೆಯನ್ನು ನೋಡುತ್ತಿದ್ದೆ. It seemed fabulous to me ! ತೀರ ಒಬ್ಬಂಟಿಯಾಗಿ, ನಗುವುದನ್ನೆ ಮರೆತು ಹೋಗಿರುವ ನನಗೆ ಮಳೆಯನ್ನು ನೋಡುವುದೇ ವಿಶೇಷವಾಗಿ, ಸಂಭ್ರಮವಾಗಿ ಕಂಡು ಬಂದಿತ್ತು.
      ಆಗಲೇ ನೆನಪದದ್ದು!
      ನಾನು ಬರೆದು ಅದಾಗಲೇ ಎಷ್ಟು ದಿನ, ತಿಂಗಳು, ವರ್ಷಗಳೇ ಹಾಗಿ ಹೋಗಿದೆ ಎಂದು. I never wrote a word from past few years!! ಯಾಕೋ ಗೊತ್ತಿಲ್ಲ ನಾನು ಬರೆದು ತುಂಬಾ ದಿನಗಳಗಿವೆ ಎಂದು ಅರೆತಾಕ್ಷಣದಿಂದ ಬರೆಯಲೇ ಬೇಕು ಎಂಬ ಹಠ ಹುಟ್ಟಿಕೊಳ್ತು. But ಬರೆಯಲು ನನ್ನತ್ರ ವಿಷಯವಾದ್ರು ಎಲ್ಲಿತ್ತು. I was blank!
ಎಲ್ಲ ಮರೆತುಬಿಟ್ಟಿದ್ದೇನೆ. ಹೊಸದನ್ನ ನಾನು ಇನ್ನೂ ಸ್ವೀಕರಿಸಿರಲಿಲ್ಲ. ನನ್ನ ಬರವಣಿಗೆ? ಅದೊಂದು ಮರೆತು ಹೋದ ಅಭ್ಯಾಸ. ಮುಗಿದು ಹೋದ ಪ್ರೀತಿ. ಆಸಲಿಗೆ ಯೋಚಿಸುವುದಕ್ಕೂ ವಿಷಯವಿಲ್ಲದವನು ಬರೆಯುವುದಾದರೂ ಹೇಗೆ ಅಲ್ವಾ.
ಹೊರಗೆ  ಮಳೆಯ ಅರ್ಭಾಟ ಕಡಿಮೆಯಾಗುತ್ತ ಬಂತು ಆದರೆ ನನ್ನ ಮನಸ್ಸು ನನಗೆ ಅರಿವಿಲ್ಲದೆ ನನ್ನೊಂದಿಗೆ ಕದನಕ್ಕಿಳಿದು ಬಿಟ್ಟಿತ್ತು! ಯೋಚಿಸುವುದಕ್ಕೆ ವಿಷಯವಿಲ್ಲದವನು ನೀನು ಬರೆಯಲು ಸಾಧ್ಯವೇ No never. come on man you are done with it ಅಂತ ಬುದ್ದಿ ಹೇಳುತ್ತಿದ್ದರೆ, ಮನಸ್ಸು let me write something ಅಂತ ಹೋರಾಟ ಮಾಡುತ್ತಲೆ ಇತ್ತು. ಹೇಗಿತ್ತು ನನ್ನ ಬದುಕು, ಹೇಗೆ ಆಗಿದೆ?!
      ನಾನು ಮನೆಯಿಂದ ಹೊರಕ್ಕೆ ಕಾಲಿಟ್ಟೆ ತಿಂಗಳಾಗಿತ್ತು ಅನ್ಸುತ್ತೆ. ಊಟ? ಹ್ಹ ಹ್ಹ.. ಯಾವಗಲಾದರೂ ತುಂಬಾ ಹಸಿವು ಕಾಡಿದರೆ ಒದಿಷ್ಟು ಊಟ ಮಾಡುತ್ತಿದ್ದೆ.. ಇಲ್ಲದಿದ್ದರೆ ಇಲ್ಲ. ಆದರೆ ಎರಡೂ ಮೂರು ದಿನಕ್ಕೆ ಒಮ್ಮೆಯಾದರೂ ತಿನ್ನಲೂ ಪ್ರಯತ್ನಿಸುತ್ತಿದ್ದೆ. some how I need to survive ಅಲ್ವಾ. ಸ್ನಾನ, ಶುಚಿತ್ವ ದೂರವಾಗಿ ಎಷ್ಟು ದಿನಗಳಾದವೋ.. ಯಾರದರೂ ಹೇಳಿದರೆ ಸ್ನಾನ. Drink? No Never. I was never a drinker. ಮನಸ್ಸು ಅದಕ್ಕೆ ಆತೋರಿತ ಇದ್ದರು I never drink. ನಾನು ಮಲಗುವ ಹಾಸಿಗೆ ಮೇಲಿದ್ದ ಬೇಡ್‌ ಶೀಟ್‌‌ ಕೊಳೆಯಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ. ನನ್ನ ಬದುಕು ಕೂಡ!
      ಯಾಕೋ ಮನಸ್ಸು, ಒಟ್ಟೆಯಾಳದಲ್ಲಿ ನೋವು ಕಾಣಿಸಿಕೊಳ್ತು. ಸಮಯ ರಾತ್ರಿ ಹತ್ತಾಗಿದೆ ಮನೆಯಲ್ಲಿ ಲೈಟ್‌‌ ಕೂಡ ಹಾಕಿರಲಿಲ್ಲ. ಆಗಲೇ ನೆನಪಾದದ್ದು ನಾಣು ತಿಂದು ಅದಾಗಲೇ ಭರ್ತಿ 40 ಗಂಟೆಯಾಗಿದೆ. ಸುಮ್ಮನೆ ಒಳ ಹೋದವನೆ ಫ್ರೀಡ್ಜ್‌‌ ತೇರೆದು ಏನಾದರೂ ಇದೇಯೆ ನೋಡಿದೆ I was an unlucky bastard. ಫ್ರೀಡ್ಜ್‌ ಸಂಪೂರ್ಣ ಖಾಲಿ ಖಾಲಿ. ಸರಿ ಬಿಡು ಎಂದು ಮತ್ತೆ ಹೊರಕ್ಕೆ ಬಂದು ಅದೇ ಮಳೆಯ ಹನಿಯನ್ನು ನೋಡುವ ಬಯಕೆಯಾಯ್ತು. Yes I was a very unlucky bastard. ಮಳೆ ನಿಂತಿತ್ತು. ಹ್ಞೂಂ ಬರೆಯಲು ವಿಷಯವಿಲ್ಲ. ಬರೆಯಲಷ್ಟೆ ಅಲ್ಲ ಆಸಲಿಗೆ ಯೋಚಿಸಲು ವಿಷಯವಿಲ್ಲ! ಏಕೇ ನನ್ನ ಬದುಕು ಈಗಾಯ್ತು ಎಂದು ಯೋಚಿಸಲು ಕೂತವನಿಗೆ ನೆನಪಾದದ್ದು ನಾನು ಅದೆಲ್ಲೊ ಅರ್ಧ ಬರೆದು ಬಿಟ್ಟ ಕಾದಂಬರಿ ನೆನಪಾಯ್ತು! ಯೆಸ್‌ ನನ್ನ ಕಪ್ಪು ಬದುಕಿಗೆ ಹೊಸ ವಿಷಯ ಸಿಕ್ಕಿದ ಖುಷಿ. ಬರಹಗಾರನಿಗಿಂತ ಬರಹ ದೊಡ್ಡದು ಎಂದು ಹೇಳುತ್ತಾರೆ. ಅದೇ ಬರಹ ನನಗೆ ಯೋಚಿಸಲು ವಿಷಯವನ್ನು ನೀಡಿತ್ತು....
In all the loneliness and sadness I have... My life!? It just goes on.......

No comments:

Post a Comment