24 Oct 2018

#MeToo ಅಭಿಯಾನದ ಸುತ್ತ!!

#MeToo ಅಭಿಯಾನ ಏನನ್ನು ಸಾಧಿಸಿತು ಎಂಬ ಪ್ರಶ್ನೆ ಕೇಳಿದರೆ ಅದಕ್ಕೆ ಅನೇಕ ಉತ್ತರಗಳಿರಬಹುದು. ಲೈಂಗಿಕ ಶೋಷಣೆಯ ವಿವಿಧ ಸ್ವರೂಪಗಳನ್ನು ಅದು ತೆರೆದಿಟ್ಟಿತು. ಶೋಷಕರ ಮುಖವಾಡಗಳನ್ನು ಕಳಚಿತು. ಪುರುಷ ಪ್ರದಾನ ಸಾಮಾಜಿಕ ವೆವಸ್ಥೆಯಲ್ಲಿ ಹೆಣ್ಣು ಶೋಷಣೆಯ ಕೇಂದ್ರಬಿಂದುಯಾಗಿದ್ದಾಳೆ ಎಂಬುದೆಲ್ಲಾ ಉತ್ತರಗಳೇ. ಇವೆಲ್ಲಕ್ಕಿಂತ ಮುಖ್ಯವಾದುದು ಈ ಆಂದೋಲನ ವಿಶ್ವವ್ಯಾಪಿಯಾಗಿ ಗಂಡು ಮನಸ್ಸಿನ ನಿಜ ರೂಪವನ್ನು ತೆರೆದಿಟ್ಟದ್ದು.
ನನಗೆ ಈ ಸಂದರ್ಭದಲ್ಲಿ ಕುಮಾರವ್ಯಾಸ ಭಾರತದ ಸಭಾಪರ್ವದ ದ್ರೌಪದಿಯ ವಸ್ರ್ತಾಪಹರಣದ ಸನ್ನಿವೇಶ ನೆನಪಾಗುತ್ತಿದೆ. ಕಪಟ ದ್ಯೂತದಲ್ಲಿ ಪಾಂಡವರು ಸಕಲವನ್ನು ಕಳೆದುಕೊಂಡು ಕುರುರಾಜನ ಅಡಿಯಾಳುಗಳಾಗುತ್ತಾರೆ. ಯುಧಿಷ್ಠಿರ ಹೆಂಡತಿ ದ್ರೌಪದಿಯನ್ನೂ ಜೂಜಿಗೊಡ್ಡಿ ಸೋತಿರುತ್ತಾನೆ. ಅವನು ಮೊದಲಿಗೆ ತಾನು ಸೋತು ಆನಂತರ ಆಕೆಯನ್ನು ಸೋತಿರುತ್ತಾನೆ‌. ತಾನೇ ಮೊದಲು ಸೋತು ಆ ಬಳಿಕ ದ್ರೌಪದಿಯನ್ನು ಸೋಲಲು ಅವನಿಗೆ ಹಕ್ಕಿಲ್ಲ. ಇತ್ತ ದುರ್ಯೋಧನ ತನ್ನ ತಮ್ಮ ದುಶ್ಶಾಸನನಿಗೆ ಆಕೆಯನ್ನು ಎಳೆದು ತರುವಂತೆ ಆಜ್ಞಾಪಿಸುತ್ತಾನೆ. ಅಂತಃಪುರದಲ್ಲಿ ಕೆಳದಿಯರೊಡನೆ ಕುಳಿತಿದ್ದ ಅತ್ತಿಗೆ ದ್ರೌಪದಿಯಲ್ಲಿಗೆ ದಾಂಡಿಗನಂತೆ ಬರುವ ದುಶ್ಶಾಸನ, ಎದುರು ಸಿಕ್ಕ ಹೆಣ್ಣುಮಕ್ಕಳನ್ನೆಲ್ಲಾ ಒದ್ದು ಕೆಡವುತ್ತಾ ದ್ರೌಪದಿಯನ್ನು ತನ್ನ ಅತ್ತಿಗೆಯೆಂದೂ ಯೋಚಿಸದೆ ಆಶ್ಲೀಲವಾಗಿ ನಿಂದಿಸಿ ಕರೆಯುತ್ತಾನೆ‌. ಆಕೆ ಆ ಸಂದರ್ಭದಲ್ಲಿ ತಿಂಗಳಾದ ಹೆಣ್ಣು. ತಾನು "ಪುಷ್ಪವತಿಯಾಗಿದ್ದೇನೆ" ಎಂದು ದುಶ್ಶಾಸನನಲ್ಲಿ ಹೇಳಿಕೊಂಡರೂ ಕೇಳದೆ "ಪುಷ್ಪವತಿಯಾಗಿಲ್ಲಿ ಫಲವತಿಯಾಗು ನಡೆ ಅಲ್ಲಿ ಕುರುರಾಜಭವನದಲಿ" ಎಂದು ಆಕೆಯ ಮುಡಿಯನ್ನು ಹಿಡಿದು ಕ್ರೂರವಾಗಿ ಕುರುಸಭೆಗೆ ಎಳೆದು ತರುತ್ತಾನೆ‌. ಸಭಾ ಮಧ್ಯದಲ್ಲಿ ಹೆಣ್ಣೊಬ್ಬಳು ಅಸಹಾಯಕಳಾಗಿ ಕೈ ಮುಗಿಯುತ್ತಾ ಕಂಗಾಲಾಗಿ ನಿತ್ತಿದ್ದಾಳೆ. ಅವರೆದುರು ಆಕೆ " ಧರ್ಮರಾಜ ಮೊದಲು ತನ್ನ ತಾನು ಸೋತುಕೊಂಡು ನಂತರ ನನ್ನನ್ನು ಸೋತನೋ..? ಅಥವಾ ತಾನು ಸೋಲುವ ಮೊದಲು ನನ್ನನ್ನು ಸೋತು ಆ ಬಳಿಕ ಅವನು ಸೋತನೋ ...?" ಎಂದು ಬಹಿರಂಗವಾಗೇ ಪ್ರಶ್ನೆ ಎತ್ತುತ್ತಾಳೆ ಆದರೆ ಸಭಾಸದರೆಲ್ಲರೂ ಮೌನಕ್ಕೆ ಜಾರುತ್ತಾರೆ. ಒಂದು ಹೆಣ್ಣಿನ ಯಾತನಾಮಯ ಕೂಗು ಕೇಳಿಯೂ ಬಾಯಿಬಿಡದೆ ದುರ್ಯೋಧನನ ಅನ್ನದ ಋಣಕ್ಕಾಗಿ ಜಢಚೇತನರಾಗಿ ಕುಳಿತುಕೊಳ್ಳುತ್ತಾರೆ. ದ್ರೌಪದಿ ಹೇಳುತ್ತಾಳೆ " ಹಿರಿಯರಿಲ್ಲದ ಸಭೆಯದು ಮನುಷ್ಯರ ನೆರವಿ ಹಿರಿಯರು ಹಿರಿಯರಲ್ಲ ಯತಾರ್ಥ ಭಾಷಣಭೀತ ಚೇತನರು" ಎನ್ನುತ್ತಾಳೆ. "ಸ್ರ್ತೀಮತವನುತ್ತರಿಸಬಾರದೇ ಧರ್ಮಮಾರ್ಗದೊಳ್" ಎಂದು ಅರಚುತ್ತಾಳೆ. ಅವಳೆಷ್ಟೇ ಅರಚಿದರೂ ಪ್ರಶ್ನಿಸಿದರೂ ಸಭೆಯಲ್ಲಿ ಸೀರೆ ಸೆಳೆಯುವ ದುಷ್ಕೃತವನ್ನು ಅವರಾರಿಂದಲೂ ತಪ್ಪಿಸಲಾಗುವುದಿಲ್ಲ. ಆ ಮಹಾನುಭಾವರ ಜನ್ಮಕ್ಕೆ ನಾಚಿಕೆಯಾಗಬೇಕಲ್ಲವೇ..? ದ್ರೌಪದಿಯ ಆ ಪ್ರಶ್ನೆಗೆ ಇಂದಿಗೂ ಯಾರೂ ಉತ್ತರಿಸಿಲ್ಲ. ಉತ್ತರಿಸಬೇಕಾದವರು ಗಂಡಸರೇ ಅಲ್ಲವೇ...? ದ್ರೌಪದಿಯ ಆ ಪ್ರಶ್ನೆ ಎಲ್ಲ ಹೆಣ್ಣಮಕ್ಕಳದ್ದೂ ಆಗಿದೆ. ನಾವು ಈಗ ಅವರೆತ್ತುವ ಪ್ರಶ್ನೆಯ ಎದಿರು ನಿತ್ತು ಉತ್ತರಿಸಬೇಕಾಗಿದೆ. ಅಂದು ಕುರುಸಭೆಯಲ್ಲಿ ಗಂಡಸರು ಮೌನವಾಗಿದ್ದರು, ಇಂದು ಮಾತನಾಡಲಾರಂಭಿಸಿದ್ದಾರೆ‌. ಅಂದು ಮೌನವಾಗಿದ್ದು ಅನ್ಯಾಯವೆಸಗಿದರು. ಇಂದು ಬಾಯಿಬಿಟ್ಟು ಅತ್ಯಾಚಾರವೆಸಗುತ್ತಿದ್ದಾರೆ.
ಹೆಣ್ಣೊಬ್ಬಳು ಗಂಡಿನಿಂದ ತನ್ನಮೇಲಾದ ದುರ್ವರ್ತನೆಯನ್ನು ಹೇಳಿಕೊಂಡರೆ ಅದು ಈಗ ನುಂಗಲಾರದ ತುತ್ತಾಗಿದೆ. ಮೀ ಟೂ ಅಭಿಯಾನದಲ್ಲಿ ಪ್ರಶ್ನೆ ಕೇಳುವವರಿಗೆ ಉತ್ತರಿಸದೇ ನೋವು ತೋಡಿಕೊಂಡವರಿಗೆ ಸಂತೈಸದೆ ಅತ್ಯಂತ ಅನಾಗರೀಕವಾದ ಭಾಷೆಯಲ್ಲಿ ಹೆಣ್ಣನ್ನು ಅವಳ ಅಭಿವ್ಯಕ್ತಿಯನ್ನು ಹತ್ತಿಕ್ಕಲಾಗುತ್ತಿದೆ. ಅತ್ಯಾಚಾರವನ್ನು ಅವಳ ಮೇಲೆ ದೈಹಿಕ ದಾಳಿ ಮಾಡಿಯೇ ಮಾಡಬೇಕಿಲ್ಲ ಹೀಗೂ ಮಾಡಬಹುದು ಎಂಬುದನ್ನು ಬಹಳೇ ಜನ ತೋರಿಸಿಕೊಳ್ಳುತ್ತಿದ್ದಾರೆ‌. ಇದೂ ಹೆಣ್ಣಿನ ಮೇಲಾಗುತ್ತಿರುವ ಸಾಮೂಹಿಕ ಅತ್ಯಾಚಾರವೇ ಅಲ್ಲವೇ...? ಎರಡು ವರ್ಷಗಳ ಹಿಂದೆ ಈ ಆಂದೋಲನ ಆರಂಭವಾದ ಹೊತ್ತಿನಲ್ಲಿ ತಾವು ಅನುಭವಿಸಿದ ಲೈಂಗಿಕ ಶೋಷಣೆ ಕುರಿತು ಬರೆದಿದ್ದ ಲಾರಾ ಗಿಯಾನಿನೊ ತನ್ನ ಮೇಲೆ ನಡೆದ ಆನ್‌ಲೈನ್ ದಾಳಿಯ ತೀವ್ರತೆಯನ್ನು ವಿವರಿಸುವುದು ಹೀಗೆ: ‘ನಾನು ‘ಮೀ-ಟೂ’ ಎಂದು ಹೇಳಲೇಬಾರದಿತ್ತು. ನಾನು ಬಾಯಿ ಮುಚ್ಚಿಕೊಂಡಿರ
ಬೇಕಿತ್ತು ಅಂದುಕೊಂಡೆ’  ಇದು ಕೇವಲ ಲಾರಾಳ ಮಾತಲ್ಲ 'ಮೀ-ಟೂ' ಎಂದು ತನ್ನಮೇಲಾದ ದುರ್ವರ್ತನೆಯನ್ನು ಹೇಳಿಕೊಂ ಪ್ರತಿಯೊಬ್ಬ ಹೆಣ್ಣು ಮಗಳ ಅಭಿಪ್ರಾಯ. ಅವರ ನೋವಿನೊಂದಿಗೆ ನಿಲ್ಲಬೇಕಾದ ಈ ಪ್ರಪಂಚವೇ ಮತ್ತಷ್ಟು ನೋವು ನೀಡಲು ಆರಂಭಿಸಿದೆ. ತನುಶ್ರೀಯಿಂದ ಶ್ರುತಿ ಹರಿಹರನ್ ತನಕದ ಸಿನಿಮಾ ತಾರೆಗಳು ನತದೃಷ್ಟರು(?) ಏಕೆಂದರೆ ಅವರು ಕೆಲಸ ಮಾಡುತ್ತಿರುವ ಉದ್ಯಮದಲ್ಲಿ ‘ಅದೆಲ್ಲಾ ಮಾಮೂಲು. ಅದರಲ್ಲೇನು ವಿಶೇಷ’ ಎಂದು ಹೆಚ್ಚಿನವರು ಪ್ರಶ್ನಿಸುವಂಥ ಮನೋಭಾವವೊಂದು ವ್ಯಾಪಕವಾಗಿದೆ. ತನುಶ್ರೀ, ಸಂಗೀತ, ಶ್ರುತಿ ‘ಇದೇಕೆ ಮಾಮೂಲು ಸಂಗತಿಯಾಗಬೇಕು’ ಎಂದು ಪ್ರಶ್ನಿಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲೂ ನಾವು ಮುಂದಾಗುವುದಿಲ್ಲ. ಇದು ಸಂಭವಿಸಿದಾಗಲೇ ಏಕೆ ಹೇಳಲಿಲ್ಲ? ಆಗ ಏಕೆ ದೂರು ಕೊಡಲಿಲ್ಲ? ಇದೊಂದು ಬ್ಲ್ಯಾಕ್‌ಮೇಲ್ ತಂತ್ರ ಎಂಬ ತೀರ್ಮಾನಗಳಿಗೆ ಬಂದು ಚರ್ಚಿಸುವ ಪ್ರಕ್ರಿಯೆಯಲ್ಲಿ
ತೊಡಗಿಕೊಳ್ಳುತ್ತೇವೆ ಎಂತಹ ಹೀನಾಯ ಸಮಾಜ ನಮ್ಮದು.
ಮಹಿಳೆಯರು ತಮ್ಮ ವಿರುದ್ಧ ನಡೆದ ಲೈಂಗಿಕ ಶೋಷಣೆಯನ್ನು ತಡೆಯುವಲ್ಲಿ ಕಾನೂನುಗಳು ವಿಫಲವಾದವು, ಸಮಾಜ ವಿಫಲವಾಯಿತು. ಮುಖ್ಯವಾಹಿನಿಯ ಮಾಧ್ಯಮಗಳೂ ಗಮನಿಸಲಿಲ್ಲ ಅಥವಾ ತಮ್ಮ ಧ್ವನಿಯನ್ನು ಆಲಿಸಲು ಸಿದ್ಧವಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳ ಮೊರೆ ಹೋದರು. ಹೇಳಿಕೊಳ್ಳುವುದಕ್ಕೆ ಒಂದಾದರೂ ವೇದಿಕೆಯಿದೆಯಲ್ಲ ಎಂಬುದು ಅವರ ಭಾವನೆಯಾಗಿರಬಹುದು. #MeToo ಟ್ರೆಂಡ್ ಆಯಿತು. ಆದರೆ ಆಮೇಲೆ ನಡೆದದ್ದೇನು? ಆಮೇಲೆ ನಡೆದದೆಲ್ಲ ಅವರ ಮೇಲೆಯೇ ವೈಯಕ್ತಿಕ ದಾಳಿ. ಶ್ರುತಿ ಹರಿಹರನ್ ರೊಂದಿಗೆ ನಿಂತು ಹೋರಾಟ ಮಾಡುವುದು ಒತ್ತಟ್ಟಿಗಿರಲಿ ಆಕೆಯದೇ ತಪ್ಪು ಎಂದು ಆಕೆಯ ಮೇಲೆ ಆನ್‌ಲೈನ್ ದಾಳಿ ಮಾಡುತ್ತಿದ್ದಾರೆ. ಅತ್ಯಂತ ಕೆಟ್ಟ ಪದಗಳಲ್ಲಿ ಆಕೆಯನ್ನು ನಿಂದುಸುತಿದ್ದಾರೆ. ಅಷ್ಟೇ ಏಕೇ ಆಕೆಯೊಂದಿಗೆ ನಿಂತು ಧೈರ್ಯ ಕೊಟ್ಟ ಜನಕ್ಕೂ ನಿಂದುಸುತ್ತಿದ್ದಾರೆ. ಪ್ರಕಾಶ್ ರೈ ಹೇಳಿದ್ದರಲ್ಲಿ ತಪ್ಪೇನಿತ್ತು? ಅರ್ಜುನ್ ಸರ್ಜಾ ಕ್ಷಮೆ ಕೇಳಬಹುದಿತ್ತು ಎಂದು ಅವರು ಹೇಳಿದಾಗ ಇಡೀ ಜಗತ್ತೇ ಅವರ ಮೇಲೆ ತಿರುಗಿಬಿತ್ತು. ಅರ್ಜುನ್ ಸರ್ಜಾ ತಪ್ಪು ಮಾಡಿದ್ದಾರೆ ಎಂದು ಅವರು ಎಂದು ಹೇಳಿರಲಿಲ್ಲ. ನಾನು ತಪ್ಪಾಗಿ ನಡೆದುಕೊಂಡಿದ್ದೇನೆ ಎಂಬ ಭಾವ ನಿಮ್ಮಲ್ಲಿ ಹುಟ್ಟಿದ್ದರೆ ಕ್ಷಮಿಸಿ ಅಂತ ಕ್ಷಮಾಪಣೆಯನ್ನು ಮುಂದಿಡುವುದು ಆರೋಗ್ಯವಂತ ಜೀವನದ ಲಕ್ಷಣ. ಸಿನಿಮಾದಲ್ಲಿ ಯಾವ ಕಾರಣಕ್ಕೋ ಯಾವ ಹೊತ್ತಿನಲ್ಲೋ ಯಾವುದೋ ಒಂದು ಸ್ಪರ್ಶ ಕೆಟ್ಟದು ಅಂತ ನಾಯಕಿಗೂ ಅನಿಸಿರಬಹುದು. ನಾಯಕನಿಗೂ ಅನಿಸಿರಬಹುದು. ಅದನ್ನು ಒಬ್ಬಾಕೆ ಹೇಳಿದಾಗ, ಹೌದೇ, ಹಾಗೇನಾದರೂ ಆಗಿದ್ದರೆ ಅದು ಉದ್ದೇಶಪೂರ್ವಕ ಅಲ್ಲ. ನನಗದು ಗೊತ್ತು ಆಗಲಿಲ್ಲ ಎಂದು ಬಿಡುವುದ್ಕಕೆ ಅಹಂಕಾರ ಯಾಕೆ ಅಡ್ಡಿಬರಬೇಕು?




ಶ್ರುತಿ- ಅರ್ಜುನ್ ಪ್ರಕರಣದಲ್ಲಿ ಯಾರು ನಿಜವೇಳುತ್ತಿದರೋ, ಯಾರು ಸುಳ್ಳು ಹೇಳುತ್ತಿದರೋ ಅದು ನಿರ್ಧಾರವಾಗುವ ಮೊದಲೇ ಆಕೆಯನ್ನು ಕೀಳುಮಟ್ಟದಲ್ಲಿ ನಿಂದುಸುವುದು ಎಷ್ಟು ಸರಿ? ಇಂದು ಶ್ರುತಿಗೆ ಆದದ್ದು ನಾಳೆ ನಮಗೂ ಆಗಬಹುದು. ಆನ್ಲೈನ್ ದಾಳಿ ನಡೆಯುತ್ತದೆ ಎಂದು ಆಕೆಗೆ ಗೊತ್ತಿದರು ಆಕೆ ದೈರ್ಯವಾಗಿ ತನ್ನ ನಿಲುವನ್ನು ವ್ಯಕ್ತ ಪಡಿಸಿದ್ದಾರೆ ಅದಕ್ಕೆ ನಾವು ಮೆಚ್ಚಬೇಕೆ ಹೊರತು ಆಕೆಯನ್ನು ನಿಂದಿಸುವುದಲ್ಲ. ಸತ್ಯ ಇಂದಲ್ಲ ನಾಳೆ ಹೊರಬರುತ್ತದೆ. ಅದು ತಿಳಿಯುವ ಮುನ್ನವೇ ಆಕೆಯ ಧ್ವನಿಯನ್ನು ಅಡಗಿಸುವುದು ಸರಿಯಲ್ಲ. ಇದರಿಂದ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬರುವ ಮಂದಿಗೆ ಮತ್ತಷ್ಟು ಭಯವಾಗುತ್ತದೆ ವಿನಃ ಧೈರ್ಯ ಬರುವುದಿಲ್ಲ.
ಮೀ ಟೂ ವಿರೋಧಿಸುವವರೆಲ್ಲರೂ ಒಮ್ಮೆ ಕಾಂಡೇಕರರ 'ಯಯಾತಿ' ಕಾದಂಬರಿಯನ್ನೋದಬೇಕು. ಆಗ ಗೊತ್ತಾಗುತ್ತದೆ ಯಯಾತಿಯ ಲಂಪಟತನ ತನ್ನಲ್ಲೂ ಇರುವುದು‌. ಯಯಾತಿ ನಮ್ಮ ಒಳಗಿನ ಲಂಪಟತನದ ಪರಾಮರ್ಷೆಗೊಂದು ದೊಂದಿ. ಹೆಣ್ಣುಮಕ್ಕಳೆಲ್ಲರೂ ಅಹಲ್ಯೆಯರಾಗಿರಬೇಕು ತನ್ನದಲ್ಲದ ತಪ್ಪಿಗೂ ತಾವೇ ತಪ್ಪಿತಸ್ಥೆಯರೆಂದು ಒಪ್ಪಿಕೊಳ್ಳಬೇಕು. ಸೀತೆಯಂತೆ ಬಂದದ್ದನ್ನೆಲ್ಲಾ ಆದದ್ದನ್ನೆಲ್ಲಾ ಅನುಭವಿಸಬೇಕು. ಕುಮಾರವ್ಯಾಸನ ದ್ರೌಪದಿಯಂತೆ ಅವಳು ಈ ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಕೇಳಬಾರದು ಪ್ರತಿಭಟಿಸಬಾರದು "ಸ್ರ್ತೀಮತವನುತ್ತರಿಸಬಾರದೇ ಧರ್ಮಮಾರ್ಗದೊಳ್" ಎಂದು. ಯಾಕೆಂದರೆ ಇದು ಪ್ರಜಾ ಪ್ರಭುತ್ವವಲ್ಲ. ಪುರುಷ ಪ್ರಭುತ್ವ.
ಸಾಮಾಜಿಕ ಜಾಲತಾಣಗಳಲ್ಲಿರುವ ಹೆಚ್ಚಿನವರು ಸಂವೇದನಾಶೀಲತೆಯನ್ನು ಕಳೆದುಕೊಂಡಂತೆ ಆರ್ಭಟಿಸಿದ್ದು ಈ ತಾಣಗಳು ಗಂಡು ಮನಸ್ಸಿನ ಆಡೊಂಬಲವಾಗಿರುವುದನ್ನು ಸೂಚಿಸಿದವು. ಶ್ರುತಿ ಹರಿಹರನ್ ಪ್ರಕರಣದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲೂ ಇದು ಪ್ರತಿಫಲಿಸಿತು. ಇನ್ನೂ ದುರದೃಷ್ಟಕರ ಸಂಗತಿಯೆಂದರೆ ನಿರ್ಭಯಾ ಪ್ರಕರಣ ನಡೆದಾಗ ಅತ್ಯಾಚಾರಿಗಳನ್ನು, ಲೈಂಗಿಕ ಶೋಷಕರನ್ನು ಗಲ್ಲಿಗೇರಿಸಬೇಕೆಂದು ಗಂಟಲು ಹರಿದು
ಕೊಳ್ಳುತ್ತಿದ್ದವರೇ ತಮ್ಮ ಲೈಂಗಿಕ ಶೋಷಣೆಯ ಕಥೆ ಹೇಳಿದವರ ಮೇಲೆ ಅತ್ಯಾಚಾರಿಗಳಂತೆ ಏರಿ ಹೋದರು. ಇಬ್ಬರು ನಾಯಕ ನಟರ ದೈವಭಕ್ತಿಯಿಂದ ಆರಂಭಿಸಿ ರಾಜಕೀಯ ಆಯ್ಕೆಗಳ ತನಕ ಎಲ್ಲವೂ ಅವರ ನಿರಪರಾಧಿತ್ವದ ಸಂಕೇತಗಳಂತೆಯೂ ಆರೋಪ ಹೊರಿಸಿದವರ ಹೆಣ್ತನವೇ ಅವರ ಆರೋಪ ಸುಳ್ಳಾಗಿರುವುದಕ್ಕೆ ಸಾಕ್ಷಿ ಎಂಬಂತೆಯೂ ಬಿಂಬಿಸಲಾಯಿತು.
ಎಲ್ಲಾ ಸಂಘಟಿತ ಉದ್ಯಮಗಳಿಗೂ ಅನ್ವಯಿಸುವ ವಿಶಾಖಾ ಮಾರ್ಗದರ್ಶಿ ಸೂತ್ರಗಳ ಅನ್ವಯ ಇರಲೇಬೇಕಾದ ಆಂತರಿಕ ದೂರು ಸಮಿತಿಯನ್ನು ಯಾವ ಸಿನಿಮಾ ನಿರ್ಮಾಣ ಕಂಪನಿಯೂ ಹೊಂದಿಲ್ಲ ಎಂಬ ವಿಚಾರವನ್ನು ಯಾರೂ ಎತ್ತಲಿಲ್ಲ. ಅಂದೇ ದೂರು ಕೊಡಬೇಕಾಗಿತ್ತು ಎಂಬ ಕಾನೂನಿನ ವಾದ ಮಂಡಿಸುವವರಿಗೂ ಇದು ಹೊಳೆಯಲಿಲ್ಲ. ಅಷ್ಟೇಕೆ ಈ ಮಹಿಳೆಯರಿಬ್ಬರಿಗೆ ಸಂಶಯದ ಲಾಭವನ್ನು ಕೊಡುವುದಕ್ಕೂ ಒಪ್ಪಲಾರದವರೇ ಹೆಚ್ಚಿದ್ದರು. ಇವೆಲ್ಲವೂ ಕೊನೆಗೂ ಸೂಚಿಸುವುದು ಅದನ್ನೇ. ನಾವು ಬೀದಿಗಳನ್ನು ಮಹಿಳೆಯರಿಗೆ ಸುರಕ್ಷಿತವಾಗಿಡುವುದರಲ್ಲಿ ಸೋತಂತೆ, ಕೆಲಸ ಸ್ಥಳಗಳನ್ನು ಲಿಂಗ ಅಸಮಾನತೆಯಿಂದ ಮುಕ್ತಗೊಳಿಸುವುದಕ್ಕೆ ಸೋತಂತೆ, ಸಾಮಾಜಿಕ ಜಾಲತಾಣಗಳನ್ನು ಮಹಿಳೆಯ ಮುಕ್ತ ಅಭಿವ್ಯಕ್ತಿಗೆ ನಿಲುಕಲಾರದ ಸ್ಥಳವನ್ನಾಗಿ ಮಾಡಿಬಿಟ್ಟಿದ್ದೇವೆ ಅಷ್ಟೇ. ಆದರೂ ಮಹಿಳೆಯರು ಸೋತು ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹುಸಂಖ್ಯೆಯಲ್ಲಿರುವ ಗಂಡಸರು ನಿಜಕ್ಕೂ ಎಂಥಾ ಮನಃಸ್ಥಿತಿಯವರು ಎಂದು ಅವರ ತಾಯಿ, ಅಕ್ಕ, ತಂಗಿ, ಪತ್ನಿ ಮತ್ತು ಮಕ್ಕಳೆದುರೇ ಅನಾವರಣಗೊಳಿಸಿದ್ದಾರೆ. ಅಷ್ಟರ ಮಟ್ಟಿಗೆ #MeToo ಯಶಸ್ವಿಯಾಗಿದೆ.

8 Oct 2018

ಅಲೆಮಾರಿ ಜೀವನದ ಹತ್ತಾರು ಕಥೆಗಳು.

ಮೊದಲ ಭಾಗ:
ನಾನು ಅಲೆಮಾರಿ, ನಿತ್ಯ ಅಲೆಮಾರಿ. ಮಾನಸಿಕ ಮತ್ತು ದೈಹಿಕ ಅಲೆಮಾರಿ. ಕಳೆದೊಂದು ವರ್ಷದಿಂದ ಅದೆಷ್ಟು ಜಾಗವನ್ನು ಸುತ್ತಿದೆನೋ, ಅದೆಷ್ಟು ಹೋಟೆಲ್ಗಳಲ್ಲಿ ವಾಸಮಾಡಿದ್ದೆನೋ, ಅದೆಷ್ಟು ಸಾವಿರ ಅಪರಿಚಿತರೊಂದಿಗೆ ಮಾತನಾಡಿದ್ದೇನೋ, ನನ್ನ ಕನಸುಗಳನ್ನು ಹಂಚಿಕೊಂಡಿದ್ದೇನೋ, ಅದೆಷ್ಟು ಭಾಷೆಗಳನ್ನು ಕಲಿಯಲು ಯತ್ನಿಸಿ ಸೋತಿದ್ದೆನೋ.  I never know.

ಒಂದು ಕಡೆ ತೊಪ್ಪೆಯಂತೆ ಬಿದ್ದಿರುವುದು ನನ್ನ ಸ್ವಭಾವವಲ್ಲ. ನಾನು ಪಾದರಸ.  ತುಂಬಾ ಹಿಂದೆ ಶೃಂಗೇರಿಯಿಂದ ಆಗುಂಬೆಗೆ ಬರಿಗೈನ ಫಕೀರನಂತೆ ನಡೆದು ಹೋಗಿದ್ದೆ. ರಾತ್ರಿ ಉಳಿಯಲು ರೂಮಿಲ್ಲದೆ ಶಿವಮೊಗ್ಗೆಯಿಂದ ಚಿಕ್ಕಮಗಳೂರು, ಕೊಪ್ಪ, ಬಾಳೆಹೊನ್ನೂರು ಎಂಬಂತೆ ಅದೆಷ್ಟ್ ಜಾಗಕ್ಕೆ ಸುಮ್ಮನೆ ಬಸ್ಸಿನಲ್ಲಿ ಕೂಳಿತು ಸವಾರಿ ಮಾಡಿದ್ದೇನೆ.  ಕೈಯಲ್ಲಿ ಹಣವಿಲ್ಲದೆ, ಉಳಿಯಲು ರೂಮಿಲ್ಲದೆ ಎಂದೋ ಹಾಕಿಸಿದ ಪೆಟ್ರೋಲ್ನಲ್ಲೇ ಇಡೀ ರಾತ್ರಿ ಅದೆಷ್ಟು ನೂರು ಕಿಲೋಮೀಟರು ಪ್ರಯಾಣಿಸಿದ್ದೇನೋ Nobody knows.  ಕೈತುಂಬಾ ದುಡ್ಡಿದ್ದಾಗಲೂ ಶೃಂಗೇರಿ ಬಳಿಯ ಸಿರಿಮನೆ ಜಲಪಾತಕ್ಕೆ ಹೋಗಿದ್ದೇನೆ. ಏನೂ ಇಲ್ಲದಾಗಲೂ ಅದೇ ಜಲಪಾತದ ಬಳಿ ಕೂತು ಸಾವಿರ ಕನಸುಕಂಡಿದ್ದೇನೆ. ಯಾವಾಗಲು ಅದೇ ಸಂತೋಷ, ಅದೇ ನೆಮ್ಮದಿ,  ಅದೇ ಒಲವು . ಪ್ರಯಾಣ ನನಗೆ ಎಂದು ಬೋರ್ ಮಾಡಿಲ್ಲ. Probably ಮಾಡೋದು ಇಲ್ಲ ಅನ್ಸುತ್ತೆ.

ನನ್ನ ಜೀವನದಲ್ಲಿ ಎಂದು ಗಾಂಜಾ, ಸಿಗರೇಟ್ಗಳಿಗೆ ಅಡಿಕ್ಟ್ ಆಗಲಿಲ್ಲ. ನಾನು ಅಡಿಕ್ಟ್ ಆದದ್ದೂ ಪ್ರಯಾಣಕ್ಕೆ. ನೂರಾರು ದಿನ ಒಬ್ಬನೇ ಮಾತಾಡಿಕೊಂಡು ದಾರಿಯಲ್ಲಿ ಅಳುತ್ತಾ, ಬಿಕ್ಕುತ್ತಾ, ನನ್ನೊಳಗೆ ನಾನೇ ನಗುತ್ತಾ, ಹಾಡು ಕೇಳುತ್ತಾ, ಅದನ್ನು ಹಾಡಿಕೊಳ್ಳುತ್ತಾ ಒಂದು ಆನಂದಮಯ ಜೀವನ ಯಾತ್ರೆ ಸಾಗಿಸಿದ್ದು, ಸಾಗಿಸುತ್ತಿರುವುದು ನನಗೆ ದೊಡ್ಡ ಸಂತೃಪ್ತಿ ತಂದುಕೊಟ್ಟಿದೆ. ರಸ್ತೆಯಿಂದ ರಸ್ತೆಗೆ, ರೈಲಿನಿಂದ ರೈಲಿಗೆ, ಬಸ್ಸಿನಿಂದ ಬಸಿಗ್ಗೆ, ರೈಲ್ವೆ waiting room ನಿಂದ waiting roomಗೆ, ಹಾಸಿಗೆಯಿಂದ ಹಾಸಿಗೆಗೆ, ಹೆಂಡದಂಗಡಿಯಿಂದ ಹೆಂಡದಂಗಡಿಗೆ, ಪುಸ್ತಕದಿಂದ ಪುಸ್ತಕಕ್ಕೆ, ಲೈಬ್ರರಿಯಿಂದ ಲೈಬ್ರರಿಗೆ ನಡೆದು ಹೋದ ಚೈತ್ರ ಯಾತ್ರೆ ನನ್ನದು.  no regrets. ಈಗಾಗಲೇ ನಾನು ನೆಲೆಗೊಂಡಿದ್ದೇನೆ ಎಂದು ನನಗೆ ಅನ್ನಿಸುವುದಿಲ್ಲ. ಇಲ್ಲೇ ಸುಮ್ಮನೆ ಬೆಂಗಳೂರಿನಲ್ಲಿ ಕುಳಿತು ಕೊಂದವನು ಕೇರಳವನ್ನು ನೆನೆಪಿಸಿಕೊಂಡು ಅದೆಷ್ಟು ಬರಿ ಹೋಗಿದ್ದೆನೋ.  ಇನ್ನೊಮ್ಮೆ ನೀನು ಕೇರಳಕ್ಕೆ ಹೋದರೆ ನಿನ್ನನ್ನು ಅಲ್ಲೇ ಮಾದುವೆ ಮಾಡಿಸಿ ಅಳಿಯ ಮಾಡಿಕೊಳ್ಳುತ್ತಾರೆ ಎಂದು ಈಗಲೂ ಹಾಸ್ಯ ಮಾಡುವ ಗೆಳೆಯರಿದ್ದಾರೆ.

ನನಗೆ ನಿತ್ಯ ಪಯಣಿಸುವ ಹಂಬಲ, ಯಾವುದೇ ಗಮ್ಯವಿಲ್ಲದೆ ಪ್ರತಿನಿತ್ಯ ಪಯಣಿಸುತ್ತಾ. ಹೊಸ ಹೊಸ ಜಾಗಗಳಿಗೆ ಹೋಗುತ್ತಾ, ಜನಗಳನ್ನೂ ಭೇಟಿಯಾಗುತ್ತಾ, ಅವರೊಂದಿಗೆ ಹರಟುತ್ತಾ, ನಗುತ್ತಾ, ಊಟವನ್ನು ಹಂಚಿಕೊಳ್ಳುತ್ತಾ ಪಯಣಿಸುತ್ತಿರಬೇಕು. ಸಾವಿರಾರು ಜಾಗಗಳು, ನೂರಾರು ಭಾಷೆಗಳು, ವಿವಿಧ ರೀತಿಯ ಊಟಗಳು, ಅಪರಿಚಿತರು ಹಂಚಿಕೊಳ್ಳುವ ಹತ್ತಾರು ಕಥೆಗಳು, ನೋವುಗಳು, ಖುಷಿಯ ಕ್ಷಣಗಳು, ಜೀವನದ ಅನುಭವಗಳು. these things makes me happy even today! ನಾನು ಬದುಕಿನ ಬಗ್ಗೆ ಎಂದು rough discipline ಹೊಂದಿಲ್ಲ. ಏನನ್ನೂ ಪ್ಲಾನ್ ಮಾಡದೇ ಕಳೆದ 6 ತಿಂಗಳಲ್ಲಿ ಅದೆಷ್ಟು ರಾಜ್ಯ ಸುತ್ತಿದ್ದೇನೆ. ನಾನು ಸಾವಿನ ಮುಂದೆ ಎಂದೂ ಕೈ ಕಟ್ಟಿ ನಿಂತಿಲ್ಲ. ಸಾವಿಗೇನಂತೆ ಬಚ್ಚಲು ಮನೆಯಲ್ಲಿ ಎಡವಿ ಬಿದ್ದರು ಸಾಯಬಹುದು.

ನನಗೆ ಒಂದಿಡೀ ವರ್ಷ ಯುರೋಪ್ ಅನ್ನು ನಿರುಮ್ಮಳವಾಗಿ ಸುತ್ತಬೇಕೆಂಬ ಆಸೆಯಿದೆ. ಆಫ್ರಿಕಾದ ಕೀನ್ಯಾ,  ಉಗಾಂಡಾ ಕಾಡುಗಳಲ್ಲಿ ಸುಮ್ಮ ಸುಮ್ಮನೆ ಕೇಕೆ ಹಾಕುತ್ತಾ ಅಲೆಯಬೇಕಿದೆ. ನಾನು ಕವಿಯಲ್ಲ- prose is my pitch. ಆದರೂ ಪ್ರಕೃತಿಯ ಕವಿತೆಯನ್ನು ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದೇನೆ. ಜೋರು ಮಳೆಯ ನಡುವೆಯೂ ಬೈಕಿನಲ್ಲಿ ಹೋಗುತ್ತಾ, ಕೂಗುತ್ತಾ ಸಂತೋಷ ಪಟ್ಟವರನ್ನು ನೋಡಿದ್ದೇನೆ. ಸಾಗರ ದಢದಲ್ಲಿ ಕೂತು ಸಮುದ್ರದ ರೌದ್ರ ಅಲೆಗಳ ನಡುವೆಯೂ ಶಾಂತವಾಗಿ ಉದಯಿಸುವ ಸೂರ್ಯನನ್ನು ಕಂಡಿದ್ದೇನೆ. ಅದೆಲ್ಲೋ ಕಾಡಿನ ಮಧ್ಯೆ ದಶಕಗಳಿಗೊಮ್ಮೆ ಅರಳುವ ನೀಲಿ ಕುರುಂಚಿ ಹೂವಿನ ಬಿಂದುವನ್ನು ಹೀರುವ ದುಂಬಿಯಲ್ಲಿ ಪ್ರೀತಿ ಕಂಡಿದ್ದೇನೆ. ಲಕ್ಷಾಂತರ ಜನರು ಒಮ್ಮೆಲೇ ಓಡಾಡುವ howrah bridgeನ ಫುಟ್ಬಾತ್ ನಲ್ಲಿ ತರಕಾರಿ ಮಾರುವವನ ಕಣ್ಣಿನಲ್ಲಿ ನಗುವನ್ನು ಕಂಡಿದ್ದೇನೆ. ಇದನೆಲ್ಲ ನಾವು ಹುಡುಕಿಕೊಂಡು ಹೋಗಬೇಕೆ ಹೊರತು ಇದಾವುದೂ ನಮ್ಮ ಬಳಿ ಬರುವುದಿಲ್ಲ. 

ಇದೆಲ್ಲಾ ಅನುಭವ ಕೂಡ ನನ್ನ ಅಲೆಮಾರಿತನಕ್ಕೆ ಸಿಕ್ಕ ದೊಡ್ಡ ಬಹುಮಾನ. ಒಮ್ಮೆ ನಿಮ್ಮ ದೈನಂದಿಕ ಬದುಕಿನ ನಡುವೆ ಜಗತ್ತನ್ನು ಮೂರನೇ ವ್ಯಕ್ತಿಯಾಗಿ ನೋಡಿ. ಬದುಕು ಬಲು ಸುಂದರ ಮತ್ತು ರೋಚಕ!

2 Oct 2018

Stories from Bhutan

The Iconic Tiger's Nest in Bhutan
I often slip into daydreams about a mystical dragon kingdom in the Himalayas. It is still hard to believe I’ve realized my dreams and actually witnessed the magic that is Bhutan. Even so, I continue to dream. If anything, the yearning for this protected haven has multiplied tenfold while it mocks me for leaving it behind.

Bhutan. Where Buddhist prayer flags flutter in the wind, where monks in flaming red chant Om Mani Pae Mey Hun, where spinning prayer wheels create music with the wind, where menacing beasts and fiery dragons adorn walls and ward off evil, where the Royal family and the Government care more for the kingdom’s happiness than for its standing in wealth and modernisation, where tourism is high value and low impact, where the Phallus is worshipped and homes are built without blueprints or nails, where the food is a lip-smacking assault of spices and the tea is rich in butter. The last Shangri La, the Land of the Thunder Dragon, the country that doesn’t belong.

Bhutan worships phallus for fertility
Yup! that's a penis! No, it's not a pornography

Bhutan almost feels like an anomaly in our planet. Everything you experience in this remote Himalayan kingdom hits you like a breath of fresh air, both literally and figuratively. This is where I hope to spend my last days, following the rhythmic movement of dancing prayer flags adding color to the snow-capped mountains in the distance.

My love story with this country began many years ago, when I saw an image of the mighty Taktshang temple perched precariously at the edge of an ominous cliff. So mystical and enigmatic, somehow exuding energies even through a grainy image. Over the years, I would often wonder how a country could be defined by its happiness. Such an abstract thought, such an optimistic notion.

A poster outside Bhutan’s National Library in Thimphu

But Bhutan makes it work. It makes Happiness tangible. You can feel it in the crisp mountain air, the rich flavor of ema datshi, the gazillion stray dogs waiting to be petted, the impeccably manicured terrace fields, the serene silence punctuated by tinkling prayer wheels and the slow pace of life which lets you savor every moment.
Happiness in acceptance
Bhutan bursts with happiness. Ridiculously so. Worldly norms are defied here, your own preconceived notions and opinions fall flat as you see faith embraced, traditions followed and modernity shunned. You learn to travel with a Guide and not scrunch up your stubborn backpacker nose in distaste. You see all the locals proudly wearing their national dress, the Gho and the Kira during business hours. You see complying monks break free during an interval and share a laugh over a Coca-Cola.

Stud Monks of Bhutan!

There is a perplexing lack of negativity and rebellion in everything the Bhutanese do. Perhaps it is the teachings of Buddhism that have been passed down by generations. The sheer love and respect for humans, animals and nature. To leave things be.
Flying into Bhutan
These puzzling observations began to befuddle me soon after my plane landed into the dangerously beautiful Paro Valley. I chose to fly into Bhutan to get a glimpse of Mt. Everest from above- one of the biggest USPs the air route offers. The dazzling reflection of the morning sun on the world’s mightiest peaks definitely makes it worth choosing this over the charm of a land crossing and a train to the Indo-Bhutan border (next time!)

Who’s starting an Air Drop service to the summit of Mt.Everest? Sign me up.


*Note: Pick a seat on the left when you land in to catch the dramatic view which is duly announced by the pilot. And if you’re lucky enough to get a seat on the right side of the plane on your way out, you’ll see the spectacular sight paint your window again.
Traveling with a Guide and loving it
A cheerful  man greets me at the exit of the tiny airport  wearing a dark grey Gho and a wide smile. Over the next few days, this man Wangchu is my window into the deeply guarded cultural and spiritual nuggets I hope to unravel on my journey. From him, I would learn to travel differently. Slowly. Not as a leader, but as a follower (a notion I would have scoffed at with my popularly shaped opinion of solo travel.) He would teach me to stop Googling answers, point out the camouflaged inscriptions on an intricate wall, help me have a broken conversation with a dear old man who sells me a bunch of pears, introduce me to locals and their homes, tell me where to find the cheapest  deal, and give me a full insight into Bhutan’s illustrious history and no-frills way of life.
My guide Wangchu for 7 days

The unassuming Capital City
On the first day, we headed straight to Thimphu, about an hour’s drive from Paro. The first few things I noticed- no traffic lights, no loud honks (a regular Indian ambient noise that rings loud in its absence), an abnormally large number of stray dogs and the uniformity in architecture. The capital city has a population of just about 1 lakh people. It is simple and quiet, with one main market street that houses some of the best hotels, restaurants, cafes, and bakeries.
Over the next two days, I explored all that there is to see in Thimphu, exclaimed over the fine architecture and expansive courtyard of the Thimphu Dzong (“wait till you get to Punakha, this is nothing!” said Wangchu), felt the energies from the mighty Buddha Dordenma that towered over me, met a rockstar artist who has figured out how to win at life despite his cerebral palsy, cheered on a bunch of players practising the national sport Archery, ate my weight in cheese and chillies, fell for butter tea and peach wine, played staring games with the national animal Takin at the reserve, and even managed to enter a questionable undercover bar (locally known as a Drayang)
Amidst all this, Wangchu pointed out the King’s abode, an inconspicuous palace that doesn’t quite assert itself like royalty usually does. Pictures of the royal family adorn pretty much ever shop and restaurant, and I asked Wangchu if this is mandatory. He looked puzzled as he answered, “We love our King. You know, the baby boy turns four in a couple of months. There will be a big celebration!’’
As someone who has always questioned monarchy, Bhutan showed me a glimpse of a responsible monarch truly loved by his people. In fact, his father Jigme Singye Wangchuck abdicated his throne to him in 2008 after successfully ruling Bhutan for 34 years and is responsible for introducing a constitutional monarchy in the country, even though the people were perfectly content with his rule. He taught them to vote and have a bigger say in their governance. How’s that for a people-serving ruler?

A picturesque valley, crystal clear rivers and a madman

Punakha quickly became my favourite. Everything from the pristine early morning drive in the winter sun, the stop at Dochula Pass with an uninterrupted  view of Bhutan’s highest peaks, and the walk up to the Druk Wangyal Lhakhang for a bird’s eye view of the symmetric 108 Chortens (stupas) built in memory of Bhutanese soldiers who lost their lives in an Assamese insurgency war, to the gorgeous views as the car snaked through mountainous roads and finally descended into Punakha Valley three hours later.
The 108 memorial stupas in Dochula Pass arranged in concentric circles.

We had arrived into a breathtakingly beautiful valley town wrapped in a blanket of peace and calm. Despite the stunning natural beauty, my eyes were drawn to the rather shocking display of painted phalli outside homes.
Wangchu narrated the story as we began our hike through terrace fields to get to Chimi Lakhang, the temple of the Divine Madman. Drukpa Kunley, who is beloved as Bhutan’s patron saint, is said to have used his ‘divine thunderbolt of wisdom’ to subjugate a demoness. It stands as a symbol of his tantric ways, sexual exploits and triumph over evil. Essentially, he went about flouting all known rules to ask the people some uncomfortable questions about their traditional way of life. Today, many locals and tourists flock to the temple to seek fertility and/or good health for their children. I sought blessings for my own unborn children (I’m obssessed with them, yes), rolled a die inside the temple for good luck, and clicked a dozen pictures of penises to shock show you how normal it is in Bhutan.

Phallus souvenirs!
A beautiful chir pine tree against gorgeous blue skies at the temple grounds of Chimi Lakhang.


A Dzong so pretty I’m still catching my breath
Wangchu was right. The Punakha Dzong does put all the other Dzongs to shame with its staggering presence and postcard location at the confluence of two rivers, Mo Chhu and Pho Chhu (Mother and Father river), looming over the enchanting valley. “This would be a painter’s delight’’ I thought as I walked on the wooden suspension bridge and entered the fortress. Punakha Dzong is the winter home of the monastic body, and has seen the coronation of all of Bhutan’s kings. I struggled to keep my jaw shut as I spent over two hours inside the citadel, cancelling another plan Wangchu had made for our evening. This was a special place. Visually and emotionally uplifting, a lesson in history and faith, and a photographer’s dream come true.

The commanding entrance to Punakha Dzong in Bhutan.

I walked into a painting called Punakha Dzong



The next day, I woke up to a dreamy sunrise in the clouds with a wide smile on my face, (yet another first in Bhutan: early mornings and a smile. How people change!) walked on the rickety Punakha Suspension Bridge arching over a gurgling river, and hiked up a hillock to see an old temple.
I realised I was truly beginning to feel like a mountain girl- a hike here, a walk along the river there, humming songs and spending time just staring out at the distance from every new viewpoint I scaled. Punakha felt like a cocooned valley, far from the shrillness of the outside world. Leaving it wasn’t easy, but it was a temporary goodbye, for this is the kind of place that lets you peek into the future and see yourself back in its lap again.
Discovering my favourite city and Bhutan’s highest roads
Paro was my last base. A city I instantly fell in love with. More open and even less crowded than Thimphu, with mountains and valley views all around. Quaint cafes and shop after shop full of trinkets and handicrafts line the central town street. The National Museum housed in a 17th century watch tower showed me how little I had witnessed of Bhutan’s rich bio-diversity, and how a trip in the winter had denied me an experience intrinsic to Bhutanese culture- the masked festivals and dances which happen pretty much all year around, one of them in Paro’s own magnificent Rinpung Dzong.
On another day, we drove up to Bhutan’s highest motorable road, Chele La Pass. Hundreds of tall white flags and smaller colourful flags whipped around in the windy clearing, from where one could see a jaw dropping view of Bhutan’s most revered mountain- the mighty Jomolhari (7326 m)
“Today the wind is good and the sky is clear, and it is an even numbered day” announced Wangchu, deciding it was a great day to put up the player flags we had purchased the previous day, and send our prayers into the wind.
In Bhutan's highest point 

Leaving a part of me and my dreams up high in the mountains of Bhutan, we drove on to Haa Valley, an even more secluded township also aptly named “Hidden-Land Rice Valley.” The Indian Army maintains a military base in the valley to secure Bhutan against potential invasions from China. It is the smallest Dzongkhag in the country with a population of under 15,000 people and is also the least visited. Adorned with alpine forests and tranquil mountain peaks, it has an unspoiled air that instantly infuses you with happiness. We visited the Black Temple and White Temple, both dating back to 7th century AD. It felt like the whole place was my own, with not another soul in sight. I lit a butter lamp and sent out some more good energies before we set out for a lovely lunch including Haa’s special buckwheat momos.
That temple on that cliff
I saved Bhutan’s iconic cliff temple for the end. It was going to be an arduous trek in thin air, best worked up to with all the prep hikes I had done in Punakha.
This landmark pilgrim site is what brought me to Bhutan in the first place. Before I knew anything else about the country, I knew of this temple and I romanticized it. A beautiful monastery just casually perched on the edge of a steep high cliff, unaware of how precariously poised it is and how impossible it seems to even imagine how it got there.
Tiger’s Nest or Taktsang Lhakhang was built in 1692. Legend has it that seer sage Guru Rinpoche who is believed to have introduced Buddhism to Bhutan, meditated in a cave at this site in 7th century A.D for three years, three months, three days and three hours in order to subdue evil demons residing within it. He is said to have flown to the site atop a tigress, which is what gave the temple its name.
Despite being on my period, I strangely had zero qualms about making this journey. There seemed to be an inexplicable energy and skip in my step throughout that day. I ensured we had a really early start, and with adequate breaks and many huffs and puffs, my impatient feet quickly found their way to the temple. Amidst the other early risers and the non-stop clicks of their cameras at the main viewpoint, I found a strange sense of calm envelop me. 
This is the only part of my trip to Bhutan that I struggle to detail out. The vibrations on this journey are indescribable. I could try, but I’d be guilty of hyperbole. Maybe because I’ve never seen myself as a religious person, and I have very little understanding of spirituality. But up there, I just knew. I felt it stealthily snake around me and wrap me in its embrace. Who or what was it? I’ll never know. Let’s just say that it is a powerful experience that tests you and then celebrates your triumph. I don’t know what the question is, but Taktsang gave me the answer. It was the answer.


Someday, I know I will return to unravel more of Bhutan’s fiercely protected layers as it teaches me to slow down, smile and travel responsibly.
Have you been to Bhutan? Or do you plan to go in the near future? Drop me a comment with your questions if any, 
close