8 Oct 2018

ಅಲೆಮಾರಿ ಜೀವನದ ಹತ್ತಾರು ಕಥೆಗಳು.

ಮೊದಲ ಭಾಗ:
ನಾನು ಅಲೆಮಾರಿ, ನಿತ್ಯ ಅಲೆಮಾರಿ. ಮಾನಸಿಕ ಮತ್ತು ದೈಹಿಕ ಅಲೆಮಾರಿ. ಕಳೆದೊಂದು ವರ್ಷದಿಂದ ಅದೆಷ್ಟು ಜಾಗವನ್ನು ಸುತ್ತಿದೆನೋ, ಅದೆಷ್ಟು ಹೋಟೆಲ್ಗಳಲ್ಲಿ ವಾಸಮಾಡಿದ್ದೆನೋ, ಅದೆಷ್ಟು ಸಾವಿರ ಅಪರಿಚಿತರೊಂದಿಗೆ ಮಾತನಾಡಿದ್ದೇನೋ, ನನ್ನ ಕನಸುಗಳನ್ನು ಹಂಚಿಕೊಂಡಿದ್ದೇನೋ, ಅದೆಷ್ಟು ಭಾಷೆಗಳನ್ನು ಕಲಿಯಲು ಯತ್ನಿಸಿ ಸೋತಿದ್ದೆನೋ.  I never know.

ಒಂದು ಕಡೆ ತೊಪ್ಪೆಯಂತೆ ಬಿದ್ದಿರುವುದು ನನ್ನ ಸ್ವಭಾವವಲ್ಲ. ನಾನು ಪಾದರಸ.  ತುಂಬಾ ಹಿಂದೆ ಶೃಂಗೇರಿಯಿಂದ ಆಗುಂಬೆಗೆ ಬರಿಗೈನ ಫಕೀರನಂತೆ ನಡೆದು ಹೋಗಿದ್ದೆ. ರಾತ್ರಿ ಉಳಿಯಲು ರೂಮಿಲ್ಲದೆ ಶಿವಮೊಗ್ಗೆಯಿಂದ ಚಿಕ್ಕಮಗಳೂರು, ಕೊಪ್ಪ, ಬಾಳೆಹೊನ್ನೂರು ಎಂಬಂತೆ ಅದೆಷ್ಟ್ ಜಾಗಕ್ಕೆ ಸುಮ್ಮನೆ ಬಸ್ಸಿನಲ್ಲಿ ಕೂಳಿತು ಸವಾರಿ ಮಾಡಿದ್ದೇನೆ.  ಕೈಯಲ್ಲಿ ಹಣವಿಲ್ಲದೆ, ಉಳಿಯಲು ರೂಮಿಲ್ಲದೆ ಎಂದೋ ಹಾಕಿಸಿದ ಪೆಟ್ರೋಲ್ನಲ್ಲೇ ಇಡೀ ರಾತ್ರಿ ಅದೆಷ್ಟು ನೂರು ಕಿಲೋಮೀಟರು ಪ್ರಯಾಣಿಸಿದ್ದೇನೋ Nobody knows.  ಕೈತುಂಬಾ ದುಡ್ಡಿದ್ದಾಗಲೂ ಶೃಂಗೇರಿ ಬಳಿಯ ಸಿರಿಮನೆ ಜಲಪಾತಕ್ಕೆ ಹೋಗಿದ್ದೇನೆ. ಏನೂ ಇಲ್ಲದಾಗಲೂ ಅದೇ ಜಲಪಾತದ ಬಳಿ ಕೂತು ಸಾವಿರ ಕನಸುಕಂಡಿದ್ದೇನೆ. ಯಾವಾಗಲು ಅದೇ ಸಂತೋಷ, ಅದೇ ನೆಮ್ಮದಿ,  ಅದೇ ಒಲವು . ಪ್ರಯಾಣ ನನಗೆ ಎಂದು ಬೋರ್ ಮಾಡಿಲ್ಲ. Probably ಮಾಡೋದು ಇಲ್ಲ ಅನ್ಸುತ್ತೆ.

ನನ್ನ ಜೀವನದಲ್ಲಿ ಎಂದು ಗಾಂಜಾ, ಸಿಗರೇಟ್ಗಳಿಗೆ ಅಡಿಕ್ಟ್ ಆಗಲಿಲ್ಲ. ನಾನು ಅಡಿಕ್ಟ್ ಆದದ್ದೂ ಪ್ರಯಾಣಕ್ಕೆ. ನೂರಾರು ದಿನ ಒಬ್ಬನೇ ಮಾತಾಡಿಕೊಂಡು ದಾರಿಯಲ್ಲಿ ಅಳುತ್ತಾ, ಬಿಕ್ಕುತ್ತಾ, ನನ್ನೊಳಗೆ ನಾನೇ ನಗುತ್ತಾ, ಹಾಡು ಕೇಳುತ್ತಾ, ಅದನ್ನು ಹಾಡಿಕೊಳ್ಳುತ್ತಾ ಒಂದು ಆನಂದಮಯ ಜೀವನ ಯಾತ್ರೆ ಸಾಗಿಸಿದ್ದು, ಸಾಗಿಸುತ್ತಿರುವುದು ನನಗೆ ದೊಡ್ಡ ಸಂತೃಪ್ತಿ ತಂದುಕೊಟ್ಟಿದೆ. ರಸ್ತೆಯಿಂದ ರಸ್ತೆಗೆ, ರೈಲಿನಿಂದ ರೈಲಿಗೆ, ಬಸ್ಸಿನಿಂದ ಬಸಿಗ್ಗೆ, ರೈಲ್ವೆ waiting room ನಿಂದ waiting roomಗೆ, ಹಾಸಿಗೆಯಿಂದ ಹಾಸಿಗೆಗೆ, ಹೆಂಡದಂಗಡಿಯಿಂದ ಹೆಂಡದಂಗಡಿಗೆ, ಪುಸ್ತಕದಿಂದ ಪುಸ್ತಕಕ್ಕೆ, ಲೈಬ್ರರಿಯಿಂದ ಲೈಬ್ರರಿಗೆ ನಡೆದು ಹೋದ ಚೈತ್ರ ಯಾತ್ರೆ ನನ್ನದು.  no regrets. ಈಗಾಗಲೇ ನಾನು ನೆಲೆಗೊಂಡಿದ್ದೇನೆ ಎಂದು ನನಗೆ ಅನ್ನಿಸುವುದಿಲ್ಲ. ಇಲ್ಲೇ ಸುಮ್ಮನೆ ಬೆಂಗಳೂರಿನಲ್ಲಿ ಕುಳಿತು ಕೊಂದವನು ಕೇರಳವನ್ನು ನೆನೆಪಿಸಿಕೊಂಡು ಅದೆಷ್ಟು ಬರಿ ಹೋಗಿದ್ದೆನೋ.  ಇನ್ನೊಮ್ಮೆ ನೀನು ಕೇರಳಕ್ಕೆ ಹೋದರೆ ನಿನ್ನನ್ನು ಅಲ್ಲೇ ಮಾದುವೆ ಮಾಡಿಸಿ ಅಳಿಯ ಮಾಡಿಕೊಳ್ಳುತ್ತಾರೆ ಎಂದು ಈಗಲೂ ಹಾಸ್ಯ ಮಾಡುವ ಗೆಳೆಯರಿದ್ದಾರೆ.

ನನಗೆ ನಿತ್ಯ ಪಯಣಿಸುವ ಹಂಬಲ, ಯಾವುದೇ ಗಮ್ಯವಿಲ್ಲದೆ ಪ್ರತಿನಿತ್ಯ ಪಯಣಿಸುತ್ತಾ. ಹೊಸ ಹೊಸ ಜಾಗಗಳಿಗೆ ಹೋಗುತ್ತಾ, ಜನಗಳನ್ನೂ ಭೇಟಿಯಾಗುತ್ತಾ, ಅವರೊಂದಿಗೆ ಹರಟುತ್ತಾ, ನಗುತ್ತಾ, ಊಟವನ್ನು ಹಂಚಿಕೊಳ್ಳುತ್ತಾ ಪಯಣಿಸುತ್ತಿರಬೇಕು. ಸಾವಿರಾರು ಜಾಗಗಳು, ನೂರಾರು ಭಾಷೆಗಳು, ವಿವಿಧ ರೀತಿಯ ಊಟಗಳು, ಅಪರಿಚಿತರು ಹಂಚಿಕೊಳ್ಳುವ ಹತ್ತಾರು ಕಥೆಗಳು, ನೋವುಗಳು, ಖುಷಿಯ ಕ್ಷಣಗಳು, ಜೀವನದ ಅನುಭವಗಳು. these things makes me happy even today! ನಾನು ಬದುಕಿನ ಬಗ್ಗೆ ಎಂದು rough discipline ಹೊಂದಿಲ್ಲ. ಏನನ್ನೂ ಪ್ಲಾನ್ ಮಾಡದೇ ಕಳೆದ 6 ತಿಂಗಳಲ್ಲಿ ಅದೆಷ್ಟು ರಾಜ್ಯ ಸುತ್ತಿದ್ದೇನೆ. ನಾನು ಸಾವಿನ ಮುಂದೆ ಎಂದೂ ಕೈ ಕಟ್ಟಿ ನಿಂತಿಲ್ಲ. ಸಾವಿಗೇನಂತೆ ಬಚ್ಚಲು ಮನೆಯಲ್ಲಿ ಎಡವಿ ಬಿದ್ದರು ಸಾಯಬಹುದು.

ನನಗೆ ಒಂದಿಡೀ ವರ್ಷ ಯುರೋಪ್ ಅನ್ನು ನಿರುಮ್ಮಳವಾಗಿ ಸುತ್ತಬೇಕೆಂಬ ಆಸೆಯಿದೆ. ಆಫ್ರಿಕಾದ ಕೀನ್ಯಾ,  ಉಗಾಂಡಾ ಕಾಡುಗಳಲ್ಲಿ ಸುಮ್ಮ ಸುಮ್ಮನೆ ಕೇಕೆ ಹಾಕುತ್ತಾ ಅಲೆಯಬೇಕಿದೆ. ನಾನು ಕವಿಯಲ್ಲ- prose is my pitch. ಆದರೂ ಪ್ರಕೃತಿಯ ಕವಿತೆಯನ್ನು ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದೇನೆ. ಜೋರು ಮಳೆಯ ನಡುವೆಯೂ ಬೈಕಿನಲ್ಲಿ ಹೋಗುತ್ತಾ, ಕೂಗುತ್ತಾ ಸಂತೋಷ ಪಟ್ಟವರನ್ನು ನೋಡಿದ್ದೇನೆ. ಸಾಗರ ದಢದಲ್ಲಿ ಕೂತು ಸಮುದ್ರದ ರೌದ್ರ ಅಲೆಗಳ ನಡುವೆಯೂ ಶಾಂತವಾಗಿ ಉದಯಿಸುವ ಸೂರ್ಯನನ್ನು ಕಂಡಿದ್ದೇನೆ. ಅದೆಲ್ಲೋ ಕಾಡಿನ ಮಧ್ಯೆ ದಶಕಗಳಿಗೊಮ್ಮೆ ಅರಳುವ ನೀಲಿ ಕುರುಂಚಿ ಹೂವಿನ ಬಿಂದುವನ್ನು ಹೀರುವ ದುಂಬಿಯಲ್ಲಿ ಪ್ರೀತಿ ಕಂಡಿದ್ದೇನೆ. ಲಕ್ಷಾಂತರ ಜನರು ಒಮ್ಮೆಲೇ ಓಡಾಡುವ howrah bridgeನ ಫುಟ್ಬಾತ್ ನಲ್ಲಿ ತರಕಾರಿ ಮಾರುವವನ ಕಣ್ಣಿನಲ್ಲಿ ನಗುವನ್ನು ಕಂಡಿದ್ದೇನೆ. ಇದನೆಲ್ಲ ನಾವು ಹುಡುಕಿಕೊಂಡು ಹೋಗಬೇಕೆ ಹೊರತು ಇದಾವುದೂ ನಮ್ಮ ಬಳಿ ಬರುವುದಿಲ್ಲ. 

ಇದೆಲ್ಲಾ ಅನುಭವ ಕೂಡ ನನ್ನ ಅಲೆಮಾರಿತನಕ್ಕೆ ಸಿಕ್ಕ ದೊಡ್ಡ ಬಹುಮಾನ. ಒಮ್ಮೆ ನಿಮ್ಮ ದೈನಂದಿಕ ಬದುಕಿನ ನಡುವೆ ಜಗತ್ತನ್ನು ಮೂರನೇ ವ್ಯಕ್ತಿಯಾಗಿ ನೋಡಿ. ಬದುಕು ಬಲು ಸುಂದರ ಮತ್ತು ರೋಚಕ!

close