Tuesday, 24 June 2014

ನನ್ನ ಮುದ್ದು ಕೋತಿಗೊಂದು ಪ್ರೇಮ ಪತ್ರ

 ಪ್ರೀತಿಯ ಮುದ್ದು ಕೋತಿ ಮರಿ,  


        ಒಂದು ನಿಚ್ಚಳ ಸೂರ್ಯೋದಯವನ್ನು ಹೀಗೆ ಕಣ್ಣರಳಿಸಿ ನೋಡಿ ಅದೇಷ್ಟು ವರ್ಷಗಳಾಗಿದ್ದವೋ? ಬೆಳ್ಳಗ್ಗೆ ಬೇಗ ಎದ್ದೆ ರಾತ್ರಿ ಕನಸಿನಲ್ಲಿ ಪುಟ್ಟ ಹುಡುಗ ಹುಡಿಗಿಯರ್ರಿಬ್ಬರು ಸಮುದ್ರ ತೀರದಲ್ಲಿ ಮಳಲ ಮನೆ ಕಟ್ಟುತಿದ್ದಹಾಗೆ went for a long walk.ವಾಪಸ್ಸು ಬಂದು ಕುಳಿತವನು ಈ ಪತ್ರ ಬರೆಯುತ್ತಿದೆನೇ. ನಿನಗೆ ಕೊಡುತೇನಾ? ಗೊತ್ತಿಲ್ಲ . ಕೊಡದೆ ಇದ್ದರು ಪರವಾಗಿಲ್ಲ ಮೂಡಿ ನಿಂತ ಪ್ರೀತಿಗೆ ಹೆಸರು ಇಡಲೇಬೇಕು ಅಂತ ನಿಯಮವೆಲ್ಲಿದೆ .  ಈ ಪತ್ರ ನನ್ನ ಎದೆಯಲ್ಲಿ ಮೂಡಿ ನಿಂತು ದಿನಗಳೇ ಆಗಿವೆ ಯಾಕೋ ಅಕ್ಷರ ಸಿಗದಂತಗಿತ್ತು . ಬರೆಯಲು ಕುಳಿತರೆ ಮನುಸ್ಸು ಹಾಳೆಯಷ್ಟೆ ಖಾಲಿ ಖಾಲಿ . ಇವತ್ತು ಬೇಡಬಿಡು ಬರೆಯೋದು ಅಂದುಕೊಂಡು ಪೆನ್ನು ಮೂಚಿಟ್ಟ ಮರು ಕ್ಷಣ ಭಾವಗಳ ಮಹಾಪೂರ . ಇವತ್ತಿಗೆ ಮೂರು ತಿಂಗಳಾದವು ನೀನನ್ನು ನೋಡಿ. ನಿನ್ನ messageನ್ನು ಮೂರು ಸಾವಿರ ಸಲ ಓದಿಕೋಡಿರಬಹುದು . ಮೆಸೇಜ್ ಮಾಡೋದು ಬೇಡ ಬಿಡು ಅಂತ ಹೇಳಿದ್ದರಿಂದ ಮೊಬೈಲ್ ಮೌನ . ಬೇರೆ ದಾರಿ ಕಾಣದೆ ಈ ಪತ್ರ ಬರೆಯುತ್ತೇದೆನೇ . ನಿನಗೂ ನೆನಪಿದೆಯಲ್ಲ It started with a phone call ಈಗ ಹಗಲಿಡಿ ನೆನಪಾಗಿ ಕಾಡುತ್ತಿ . ನನ್ನ ಪಾಲಿಗೆ ನೀನೊಂಥರ ಕಳೆದುಹೋಗಿರುವ ಕನ್ನಡಕ. ಅದು ಸಿಕ್ಕುವ ತನಕ ಹುಡುಕಲಾಗುವುದಿಲ್ಲ . ಹುಡುಕದಿದ್ದರೆ ಕನ್ನಡಕ ಸಿಗುವುದಿಲ್ಲ . ಸುಮ್ಮನೆ ಕುಳಿತು ಕೈ ಚಾಚಬೇಕು. ನನಗೆ ತುಂಬಾ ಆಚಾರ್ಯವಾಗೋದು ಏನು ಗೊತ್ತಾ ಕೋತಿ ? ನನ್ನ ಪ್ರತಿ ಮುಂಜಾವು ನಿನ್ನ ಸ್ಮರಣೆಯೊಂದಿಗೆ ಆರಂಭವಾಗುತ್ತದೆ . ಪ್ರತಿ ರಾತ್ರಿಯೂ ಮುಗಿಯುವುದು ನಿನ್ನ ಕನವರಿಕೆಯೊoದಿಗೆ . 

        ಅಂದು ನೀನು ಸಿಕ್ಕಿದ್ದು ಅನಿರೀಕ್ಷಿತ ನಿನ್ನ ಮುನಿಸಂತೆ , ನಿನ್ನ ಮುದ್ದಿನಂತೆ, ನಿನ್ನೇ ಪ್ರೀತಿಯಂತೆ. ನೀನು ಸಿಕ್ಕಾಗ ನಿನ್ನನ್ನು ನೋಡುತಲೇ ಮಾತಾಡುತೇನೆ . ಸುಮ್ಮನೆ ಕಣ್ಣು ಮಿಟುಗಿಸಿದರೆ ಸಾಕು ಆ split secondನಷ್ಟು ಹೊತ್ತು ನೀನು ಕಾಣದಾಗುತಿಯಲ್ಲಾ ಅನ್ನೋ ಹಪ ಹಾಪಿ. ನನ್ನ ಈಡೀ ದಿನದ ಚಟುವಟಿಕ್ಕೆಯಲ್ಲಿ ನೀನು ಹಾದುಹೋಗದ ಗಳಿಗೆಯಿಲ್ಲ . ನೀ ನಿಲ್ಲದ ನೀರವ ಗಳಿಗೆಯನ್ನು ನಾನು ಅನಂದಿಸಿಲ್ಲ . ನಿನ್ನೊ೦ದಿಗೆ ಕೆಲವು ಸಾವಿರ ಗಂಟೆ ಮಾತನಾಡಿದ್ದೇನೆ . ನಿನ್ನ ಚಿತ್ರ ನನ್ನ ಕಣ್ಣಗೊಂಬೆಯೊಳಗೆ ಹಚ್ಚೆಯಂತೆ ಹರಡಿ ಕುಳಿತಿದೆ. ಸುಮ್ಮನೆ ನೆನಪಿಸಿಕೊದ್ದರೆ ಸಾಕು ನಿನ್ನೊ೦ದಿಗೆ ನನ್ನ ಪ್ರೀತಿಯ ಗಾಂಧಿಬಜ಼ಾರ್ ಹಾಗೂ ನಿನ್ನ ಪ್ರೀತಿಯ TTMCಯಲ್ಲಿ ಕಳೆದ ಪ್ರತಿಯೊಂದು ಕ್ಷಣಗಳು ಕಣ್ಣ ಮುಂದೆ ಬಂದು ನಿಲ್ಲುತದೆ. ಅವತ್ತು ಮೊದಲ ಬಾರಿಗೆ ಫೋನ್ ಮಾಡಿದಾಗ ನಾನು ತುಂಬಾ excite ಆಗಿದ್ದೆ . ಏನೇನೋ ಮಾತಾಡಬೇಕು ಅಂದುಕೊಂಡವನು ಏನು ಮಾತಾಡಲಿಲ್ಲ . ನೀನೇ ಪ್ರಶ್ನೆ ಕೇಳುತ್ತಾ ಹೋದೆ . ನಾನು ಉತ್ತರಿಸುದಕಿಂತ ನಿಡುಸುಯ್ದ್ದದೆ ಜಾಸ್ತಿ . ಬೆಚ್ಚಿ ಬಿದ್ದದು ಫೋನ್ಗೂ ಗೊತ್ತಾಗುತಿತ್ತು ಅವತಿನ ಮಟ್ಟಿಗೆ ಫೋನು ಮಾಡಿ ಮಾತಾಡುವುದಕ್ಕೆ ಹಾಗದವನು funny guy ಅಂದುಕೊಡಿದ್ದೋ ಏನೋ.....? 

        ಕಾಫೀ ಕುಡಿಯೋಣ ! ಅಂದಾಗಲೆಲ್ಲ ಬ್ಯಾಡ ಟೀ ಕುಡಿಯೋಣ ಅಂತ ಹಟ ಹೂಡುವವಳು ನೀನು , ಆ ಮೇಲೆ ಇಷ್ಟಗಲ ಕಣ್ಣು ಬಿಟ್ಟು ಕಾಫೀ ಸಕಥಾಗಿದೆ ಅಂತ ಉದ್ಗರಿಸಿದವಳು .   ಇಷ್ಟು ದಿನ ನನಗೆ ಒಬ್ಬಂಟಿತನ ಭಾರವೆನಿಸಿರಲಿಲ್ಲ . ನಿನ್ನ ಪರಿಚಯವಾದ ಮೇಲೆ ಯಾಕೋ ನಾನು lonely lonenly . ನೀನು ಬೇಕು ಆನೆಸೆತಿಯ ಮಾತಿಗೆ ಮೌನಕ್ಕೆ , ಮುನಿಸಿಗೆ , ಏಕಾಂತಕ್ಕೆ . ಚೆಂದದ ಹುಡುಗಿ ನೀನು ಮತ್ತು ತುಂಬಾ naughty . ಅದನೆಲ್ಲ ಮರೆತು ಒಡೆಷ್ಟು ಹೊತ್ತು ನನ್ನ ಬಗ್ಗೆ ಯೋಚಿಸು . ನಾನು ತುಂಬಾ ಒಳ್ಳೆ ಮನುಷ್ಯನಲ್ಲ . not a niceman to know ಆದರೆ ತುಂಬಾ ಪ್ರೀತ್ಸ್ತನಿ ಹಾಗಂತ ನಿನಗೂ ಹನಿಸಿದರೆ ಪತ್ರ ಬಾರಿ. ನಾನು ಒಪ್ಪಿಕೊಳಲೇಬೇಕು ಅಂತ ಒತ್ತಾಯ ಮಾಡಲಾರೆ. ಒಪ್ಪಿಕೊಳ್ಳದಿದ್ದರೆ ಇನ್ನಷ್ಟು ಒಬಂಟಿಯಾಗುತ್ತೇನೆ ಅಂತ ಮಾತ್ರ ಹೇಳಬಲ್ಲೆ ಆಕಸ್ಮಾತ್ ಒಪ್ಪಿಕೊಂಡರೆ ನಾನು ನನ್ನ ಕವಿತೆ ಈ ಪ್ರಾಮಾಣಿಕತೆ , ನಾನೆಲ್ಲ ಪ್ರೀತಿ ಮತ್ತು ಬರವಸೆ ನಿನಗೆ . ಒಪ್ಪಿಕೊಳದಿದರೆ ಇಂಥವೇ ೮೧ ಪತ್ರ ೦೫೩೨ ಮೆಸ್ಸೆಜುಗಳು ೧೯೫ ಕಿಶೋರನ ಹಾಡುಗಳು wills ಕಂಪನಿಯ ಸಿಗರೇಟ್ ಕೆಲವು ಲಕ್ಷಗಟ್ಟಲೆ ಲಿಟರಸ್ಟ್ತು ವಿಸ್ಕೀ -ಉಹೂ೦ no chance ನನ್ನ ಕಣ್ಣ ಹನಿಗೆ ಸದಿಲ್ಲದೆ ನೆಲಕ್ಕೆ ಬಿದ್ದು ಇಂಗಿ ಹೋಗುವುದು ಗೊತ್ತು. 

      ಮೊದಲ ಪ್ರೇಮ ಘಟಿಸುವುದೇ ಹಾಗಂತೆ ಅರೆನಿದ್ದ್ರೆಯಲ್ಲಿ ಮಗು ವಿನಾಕಾರಣ ನಕ್ಕಂತೆ . ಇದನ್ನು ಓದಿದ ನಿನ್ನ ಹೃದಯದಲ್ಲೂ ಪ್ರೀತಿ ಮೋಳಕೆಯೋಡೆಯಲಿ . I LOVE YoU MY DEAR ಮಂಕಿ ಮರಿ  

             ನೀನು ನನ್ನ ಕನಸು  

           ನೀನೇ ನನ್ನ ಅಂತಿಮ ಚಿರನಿದ್ರೆ.

                         ನಿನ್ನ ನಿರಾಕರಣೆಯಲ್ಲೂ ಒಂದು ಸ್ವೀಕಾರ ಇರಬಹುದು  

            -ಎಂದೆoದಿಗೂ ನಿನ್ನವನೇ 

                     ಮಂಜುನಾಥ್. 

No comments:

Post a Comment