ನೂರಾರು ಕನಸುಗಳನ್ನು ತಡೆ
ಹಾಕಿದ್ದೆನೆ; ಒತ್ತಟ್ಟಿಗೆ ಕನಸುಗಳ
ನನಸು ಮಾಡಿಕೊಳ್ಳಲೆಂದು
ನಿನ್ನ ಜೊತೆಗೂಡಿ...
ಚಂದಿರನ ಬೆಳಕನ್ನು ತಡೆ
ಹಾಕಿದ್ದೆನೆ; ಒತ್ತಟ್ಟಿಗೆ ಬೆಳದಿಂಗಳ
ಬೆಳಕನ್ನು ಸೂಸಲೆಂದು
ನೀನಿರುವ ಬಳಿಯೇ...
ಬಿಳಿ ಮೊಡಗಳಿಗೆ ತಡೆ
ಹಾಕಿದ್ದೆನೆ; ಒತ್ತಟ್ಟಿಗೆ ಜಡಿ
ಮಳೆ ಸುರಿಸಲೆಂದು
ನೀನಿರುವ ಬಳಿಯೇ...
ಚಳಿಯ ಗಾಳಿಯನ್ನು ತಡೆ
ಹಾಕಿದ್ದನೆ; ಒತ್ತಟ್ಟಿಗೆ ಬೇಕೆಂದರೆ
ತಂಗಾಳಿಯನು ಕರೆಸಲೆಂದು
ನೀನಿರುವ ಬಳಿಯೇ...
ಭರಿಸಲು ನೂರಾರು ಕನಸು
ಸುರಿಸಿದರೆ ಹೊನ್ನ ಬೆಳಕು
ಬೆಳದಿಂಗಳಲ್ಲಿ ರಾತ್ರಿ ಮಳೆ
ಬೇಕೆಂದರೆ ತಂಗಾಳಿಯನ್ನ ಕರೆಸು
ಭರಿಸಲು ನಾನಿರುವೆ..!
ಪ್ರೇಮಮಳೆಗೆ ತೋಯ್ಯೊಣ
ಚಂದಿರನ ಒಡಲಿಗೆ ಕನ್ನ ಹಾಕೋಣ... ;)
-ಮಂಜುನಾಥ್