Sunday, 8 February 2015

ನನ್ನ ಕನಸೇ. .!

ನನ್ನ ಸ್ಪೂರ್ತಿಯೇ,

     ನಿನ್ನ ಬಿಟ್ಟು ಬರಲು ಒಲ್ಲದ ಮನಸ್ಸಿನಿಂದ ಬಂದು ಸುರಕ್ಷಿತವಾಗಿ ಮನೆ ತಲುಪಿದೆ... ಮನೆಗೆ ಬಂದು ಕುಳಿತವನಿಗೆ ಯಾಕೋ ನಿನ್ನ ನೆನಪು ತುಂಬಾ ಕಾಡಿತ್ತು. 'Message' ಮಾಡೋಣವೆಂದರೆ ನೀನು 'offline', ಬೇರೆ ದಾರಿ ಕಾಣದೆ ಸುಮ್ಮನೆ ಒಬ್ಬಂಟಿಯಾಗಿ ಪುಟ್ಟ 'walk' ಹೋಗಿದ್ದೆ. ಅದು ಸೂರ್ಯನ ಬಣ್ಣ ನೀರಿಗೆ ಬಿದ್ದು ಅಲೆಗಳ ನಡುವೆ ಕರಗಿ ಹೋಗುವ ಸಂಭ್ರಮದ ಸಂಜೆ ಹೊತ್ತದು. ತಂಪು ಗಾಳಿ ನಿನ್ನ ನೆನಪಿನ ಜೊತೆ ನೀನು ಉಸಿರಾಡಿದ ಗಾಳಿಯನ್ನು ತಂದು ನನ್ನ ಬಳಿ ಬಿಟಿದ್ದ ಅನುಭವ. I felt you more that time sweetheart. ಆಗ ತುಂಬಾ ನೆನಪಾಗಿ ಬಿಟ್ಟೆ. ರಾತ್ರಿಯ ಚಂದ್ರ ನಕ್ಷತ್ರವನ್ನು ನೆನಪಿಸಿಕೊಂಡ ಆಗೆ. ಹರಿಯುವ ನದಿ ಮಳೆಯನ್ನು ನೆನಪಿಸಿಕೊಂಡ ಆಗೆ. ಡಿಸೆಂಬರ್‌ ತಿಂಗಳು ಚಳಿಯನ್ನು ನೆನಪಿಸಿಕೊಂಡ ಆಗೆ. ನಿನ್ನ ಮುದ್ದು ಕೋತಿ ನಿನ್ನ ನೆನಪಿಸಿಕೊಂಡ, ತನ್ನ ಸ್ಪೂರ್ತಿಯನ್ನ.

ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೆ
ಸುತ್ತೇಳು ಲೋಕದಲಿ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ!

       ನಿನ್ನ ನೆನಪಿಗೆ ಯಾಕೋ ಅಕ್ಷರ ರೂಪ ಕೊಡಬೇಕೆನಿಸಿತು. ಅದಕ್ಕಾಗಿ ಈ ಪತ್ರ ಬರೆಯುತ್ತಿದ್ದೇನೆ. ಪತ್ರ ಬರೆಯಲು ಕೂರಿಸಿದ ಈ ಚಳಿಯ ಸಂಜೆಗೆ ನಾನು ಚಿರಋಣಿ. ಬರೆಯಲು ಕುಳಿತವನ ಬೆರಳಿನ ತುದಿಗೆ ನಿನ್ನ ಕೂದಲು ಸೋಕಿದ ಅನುಭವ. ನಿನ್ನ ಪ್ರೀತಿತುಂಬಿದ 'soft eyes' ನನ್ನನ್ನೇ ನೋಡುತಿದೆಯೇನೊ ಎಂಬ ಅನುಭವ. ನನ್ನ ಪಕ್ಕದಲ್ಲೆ ಕೂತು ನನ್ನ ಕೈಯಿಡಿದುಕೊಂಡ ಅನುಭವ. ನಿನ್ನ ಹಣೆಗೊಂದು ಒಲವ ಹೂ ಮುತ್ತು ಕೊಟ್ಟು ಈ ಪತ್ರ ಬರೆಯುತ್ತಿದ್ದೇನೆ ಎಂಬ ಅನುಭವ... Every second I felt you dear!!

    ಇಷ್ಟು ಬರೆದು ಮುಂದೆ ಒಂದು ಅಕ್ಷರ ಬರೆಯಾಲಾಗದೆ ಮನೆಯ ಅಂಗಳದಲ್ಲಿ ನಡೆಯಲಾರಂಭಿಸುತ್ತೇನೆ. ಮನೆ ಎದುರಿನ ಪುಟ್ಟ ಮರ ನನ್ನನ್ನು ನೋಡಿ ನಗುತಿದ್ದಂತೆ ಭಾಸವಾಯ್ತು. ಪೂರ್ವದ ಗಾಳಿಯೊಂದು ಸುಳಿದಿರುದು ಮರದ ಎಲೆಗಳೆಲ್ಲ ನನ್ನ ಬಳಿ ಬಂದು ಬಿದ್ದರೆ ನಿನ್ನ ಚಿತ್ರವೊಂದು ಕನಲಿ ಮರೆಯಾದಂತಾಗುತ್ತದೆ. ಏನ್‌ ಮಾಡ್ಲಿ... I feel you!

    ಬಿಡು, ಒಂದು ದಿನ ಸಂಜೆ ಸಿಗೋಣ. ಅರಬ್ಬಿಯ ದಂಡೆ ಮೇಲೆ ಸುಮ್ಮನೆ ನಡೆದು ಹೋಗೋಣ. ಅದೇ ಸಂಜೆಗೆಂಪು ಆಕಾಶ. ಸಕ್ಕರೆ ಮರಳ ಮೇಲೆ ನಡೆಯೋ ಪುಟ್ಟ ಹುಡುಗಿ ನಿನ್ನ ಸದ್ದು. ಕಿಲಕಿಲ ಅನ್ನೋ ನಿನ್ನ ನಗು. ಸುಮ್ಮನೆ ಕೈಗೆ ತಾಗೋ ನಿನ್ನ ವೇಲಿನ ಫ್ರಿಲ್ಲು. ನಿಮಿಷಕ್ಕೆ ಎರಡು ಸಲ ಕಣ್ಣಿಗೆ ಬಂದು, ನೀ ಹಿಂದೆ ಸರಿದೋ ನಿನ್ನ ಮುಂಗುರುಳು. ದಾರಿ ಕಳೆಯುತ್ತಾ ಹೋದಂತೆ ನೀನು ಕಾಯುತ್ತಿತುತ್ತೀಯ! ಎಲ್ಲಿ ಘಕ್ಕನೆ ಕೈ ಹಿಡಿದು "Love you" ಅಂದುಬಿಡುತ್ತಾನೊ.... ಅಂತ.   ಆ ಕ್ಷಣಕ್ಕಾಗಿ ನಾನು ಕಾಯುತ್ತಿದ್ದೇನೆ ಹುಡುಗಿ. ಬೇಗ ಬಾ.. ಬೀಚಿನ ದಂಡೆಯ ಮೇಲೆ ಮರಳಿನಿಂದ ಮನೆ ಕಟ್ಟೋಣ. ಕನಸುಗಳಿಗೆ ಜೀವ ತುಂಬೋಣ . ಆಸೆಗಳಿಗೆ ಸ್ಪರ್ಶ ನೀಡೋಣ. ಆ ದಿನ ಭೂಮಿ ಮೇಲೆ ಅಪರೂಪದ ಮಳೆ ಬೀಳುತ್ತೆ! At the same time,  ನಿನ್ನ ಪುಟ್ಟ ಅಂಗೈಯನ್ನು ನಾನು ನನ್ನ ಒರಟು ಕೈಗಳ ಮಧ್ಯೆ ಬಚ್ಚಿಟ್ಟುಕೊಳುತ್ತೆನೆ. ಅದರಲ್ಲಿ ಕೊನೆಯವರೆಗೂ ಜೊತೆಗಿರುವ ಭರವಸೆ ಇರುತ್ತೆ ಹುಡಗಿ, ಹೆದರಿಕೊಳ್ಳಬೇಡ. ಮ್‌.... ಇಷ್ಟು ಬರೆಯುವಷ್ಟರಲ್ಲಿ ಮೊಬೈಲ್‌ ಮೌನ ಮುರಿದಿತ್ತು. ನಿನ್ನ message!

    ಸದ್ಯಕ್ಕೆ ಸಾಕು! ನನ್ನ ಪತ್ರಗಳಿಗೆ ಕೊನೆಯಿಲ್ಲ ಹುಡುಗಿ. ಹೊಸ ಕನಸಿನ ಆರಂಭಗಳಿವೆ. Take care!

-ಎಂದೆಂದಿಗೂ ನಿನ್ನವನು
"ಮಂಜು"   


No comments:

Post a Comment