26 Oct 2014

ಬರೆದೆನು ನಾನು ಕವಿತೆಯನು..!

ನಿನನ್ನು ಕಂಡು,
ನಿನನ್ನು ನೆನೆದು,
ನಾನಾದೆ ಅಂದು ಕವಿಯು!

ನಿನನ್ನು ಪ್ರೀತಿಸಿ,
ನಿನನ್ನು ಭ್ರಮಿಸಿ,
ಬರೆದೆ ನಾನು ಕವಿತೆಯನು!

ನಿನನ್ನು ನೆನೆದು,
ನಿನಗಾಗಿ ಬರೆದು,
ಕೊಡುವೆನು ನನ್ನ ಕವಿತೆಯನು!

ನಿನನ್ನು ನೋಡಿ,
ನಿನನ್ನು ಕೂಡಿ,
ಬರೆಯುವೆನು ನಾನು ಪ್ರೇಮ ಗೀತೆಯನು!

ನಿನನ್ನು ಕಾಡಿ,
ನಿನನ್ನು ಬೇಡಿ,
ಆಗುವೆನು ನಾನು ಪ್ರೇಮಿಯು!!
                                                    -ಮಂಜುನಾಥ್

ಅವಳ ನೆನಪಲ್ಲಿ - 9

ನನ್ನ ಕವಿತೆಗಳಿಗೆ ಸ್ಪೂರ್ತಿಯು ನೀ..
ನನ್ನ ಮನಸ್ಸಿಗೆ ರಾಣಿಯೂ ನೀ..
ನಿನಗಾಗಿ ಬರೆಯಲೇ ನಾಲ್ಕು ಸಾಲು
ನನ್ನದೆಯಲಿ ಮುಡಿನಿಂತ ಪ್ರತಿ ಸಾವಲು!!

ನೀನು ನನಗೆ ಮರೆಯಾಲಗದ ಹೂವು
ಬಣ್ಣಿಸಲಾಗದ ನೋವು
ಕಾಣಿಸಿದ್ದು ವರ್ಷದ ಹಿಂದೆ
ಮುಗ್ನಗೆ ಸುಸುತ್ತಾ ನನ್ನ ಮುಂದೆ!!

ಕವಿತೆಯೊಳಗು ನಿನ್ನ ಛಾಯೆ
ನಿನ್ನ ಪ್ರೀತಿ ಬರೀಮಾಯೆ..
ಬರೆಯಲಾಗುತ್ತಿಲ್ಲ ಕವಿತೆಯ ಸಾಲು
ಬಣ್ಣಿಸಲಾಗಿಲ್ಲ ನನ್ನ ಸಾವಲು!!

ಪ್ರೀತಿಯಿಲ್ಲದ ಕರಿದರೆ ಹೇಗಾದರು ಬಂದೀತೆ ಕವಿತೆ
ಪ್ರೀತಿಯಿಲ್ಲದೆ ಬರಿದರೆ ಅದು ಅದೀತೆ ಕವಿತೆ
ಬರೀ ಭಾವನೆಗಳನ್ನು ಎದೆಯೊಳಗೆ ಬಚ್ಚಿಟ್ಟು ಕಾಯುತ್ತಿದ್ದೆನೆ ಹುಡುಗಿ.....
                                                                              ನಿನಗಾಗಿ...ನಿನ್ನ ಪ್ರೀತಿಗಾಗಿ..!

25 Oct 2014

ಮನಸ್ಸು ಗಾಂಧಿಬಜಾರು - Manassu Gandhibazaru !!

ಮನಸ್ಸು ಗಾಂಧಿಬಜಾರು
ಅಲ್ಲಿ ಯೋಚನೆಗಳು ನೂರು , ಬ್ರೇಕಿರದ ಕಾರು
.

ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ
ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ !!
ಗಾಂಧಿಬಜಾರ್‌ನ ಸಂಜೆ ಚುಮು ಚುಮು ಚಳಿ,
ಬಿಸಿ ಬಿಸಿ ಕಾಫಿ , ಗಿಜಿ ಗಿಜಿ ಟ್ರಾಫಿಕ್ಕು , ಲೈಬ್ರರಿಯ ಕಳ್ಳ ನೋಟ .

ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ
ಅದು ಕಾಲೇಜು ಹುಡುಗಿಯ ಇಣುಕು ನೋಟ ,
ವಿದ್ಯಾರ್ಥಿ ಭವನ್‌ನ ದೋಸೆ , ರೋಟಿ ಘರ್‌ನ
ಇಡ್ಲಿ , ಕೋಟ್ರೆಶ್ವರನ ಬೆಣ್ಣೆ ಮಸಾಲೆ ; ಪ್ರೇಮಿಗಳ
ಊಸಿ ಊಸಿ ನಗೆ!!

ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ
ಅದು ಡಿವಿಜಿ ರಸ್ತೆಯ ಬಿಸ್‌ನೆಸ್ಸು , ಬಿಬಿಸಿಯ ಬ್ಯೂಝಿನೆಸ್ಸು !!
ಗಾಂಧಿಬಜಾರು ನ್ಯಾ‍‍ಷನಲ್ ಕಾಲೇಜು ಹುಡುಗಿಯರನ್ನು
ಕದ್ದು ನೋಡಿದ್ದು , ಬ್ಯೂಗಲ್ ರಾಕ್ ಮೇಲೆ ನಿಂತು ಕೂಗಿದ್ದು !!

ಮನಸ್ಸು ಗಾಂಧಿಬಜಾರು
ಅಲ್ಲಿ ಯೋಚನೆಗಳು ನೂರು , ಬ್ರೇಕಿರದ ಕಾರು  ಮತ್ತು ಅವಳ ನೆನಪು.. !!

24 Oct 2014

ಅವಳ ನೆನಪಿನಲ್ಲಿ - 8

ಅವಳ ನೆನಪಿನಲ್ಲಿ ಬರೆಯಲು ಕೂತೆ ,
ಈ ವಾರದ ಕವಿತೆಗಳ ಕಂತನ್ನ;
ಅವಳ ನೆನಪಿಗೆ ಅಕ್ಷರ ರೂಪ
ಕೊಡುವುದು ಕಷ್ಟವೆನಿಸಲಿಲ್ಲ ;
ಆದರೆ ಅವಳ ನೆನಪೇ ಇಂದು ಭಾರವಾಗಿತ್ತು .

ದೀಪಾವಳಿಯ ಹಣತೆ ಉರಿಯುತ್ತಿತ್ತು ;
ನೆನಪು ಕೆರಳುತ್ತಿತ್ತು ;
ಈ ಜುಮು ಜುಮುಚಳಿಯಲ್ಲಿ
ಅವಳಿದಿದ್ದರೆ ಹೇಗೆ ?! ವಿರಹದಲ್ಲೆ ಮಿಂದೆದ್ದೆ !!

ಅವಳ ನೆನಪಿನಲ್ಲೆ ದಣಿಯುತ್ತಾ
ಬರದೇ ಬಿಟ್ಟೆ ಈ ವಾರದ
ಕವಿತೆ ; ಓದಲು ಅವಳಿಲ್ಲ
ಬರೆದದ್ದನೆಲ್ಲ , ನಾನೇ ಗುನುಗಬೇಕಷ್ಟೆ .
ನಿನ್ನ ಜೊತೆ ಕಳೆದ ದೀಪಾವಳಿಯ ನೆನಪಿನಲ್ಲೆ ಕಾಯುತ್ತಿದ್ದೆನೆ ಹುಡುಗಿ.....
                                                                       ನಿನಗಾಗಿ....ನಿನ್ನ ಪ್ರೀತಿಗಾಗಿ
                                                                                                                          -ಮಂಜುನಾಥ್

                                           **   **  **

ಹಣತೆ ಹಚ್ಚುತ್ತೇನೆ ನಾನೂ,
ಕತ್ತಲೆಯನ್ನು ದಾಟುತ್ತೇನೆ ಎಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು ನಿನ್ನ ಮುಖ ನಾನು , ನನ್ನ ಮುಖ ನೀನು
ನೋಡಬಹುದೆಂಬ ಓಂದೇ ಓಂದು ಆಸೆಯಿಂದ ,
ಹಣತೆ ಆರಿದ ಮೇಲೆ , ನೀನು ಯಾರೋ , ಮತ್ತೆ ನಾನು ಯಾರೋ .!

                                                                                               

21 Oct 2014

ಅವಳ ನೆನಪಲ್ಲಿ - 7

ಹೇಳದೇ ಉಳಿದ ಮಾತುಗಳು 
ಬರೆಯದೇ ಉಳಿದ ಪದಗಳು 
ಜೋಡಿಸಿ ಬರೆಯಲೇ ನಾಕು ಸಾಲು 
ವರ್ಣಿಸಿ ಗೆಜ್ಜೆ ಧರಿಸಿದ ನಿನ್ನ ಕಾಲು 

ಬರೆದು ಬಿಟ್ಟ ಕವಿತೆ ಇದು..
ಹೇಗೆ ನಿಡಲಿ ನಿನಗೆ!!
ಎಲ್ಲಿ ಮರೆಯಾಗಿದ್ದಿ ಹುಡುಗಿ ನನ್ನ ಬಿಟ್ಟು..
ನನ್ನೀ ಕವಿತೆಗಳ ಬಿಟ್ಟು!!

ಕಾಡೋ ಚಳಿಗೂ ಅರೆಪಾವು
ಹೆಚ್ಚು ಕಾಡುವ ನಿನ್ನ ನೆನಪುಗಳಿಗೆ
ರೂಪ ನೀಡಿ ಬರೆಯುತ್ತಿದ್ದೆನೆ ಈ ಕವಿತೆಗಳನ್ನು...
ನಿನ್ನ ನೆನಪಿನ ಕವಿತೆಗಳನ್ನು ಕೈಲಿಡಿದು ಕಾಯುತ್ತಿದ್ದೆನೆ ಹುಡುಗಿ....
                                              ನಿನಗಾಗಿ...... ನಿನ್ನ ಪ್ರೀತಿಗಾಗಿ!!
                  -ಮಂಜುನಾ

close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →