Showing posts with label kavana. Show all posts
Showing posts with label kavana. Show all posts

13 May 2015

ಅವಳು ಸೂರ್ಯರಶ್ಮಿ ಇವನು ಪ್ರೇಮ ಚಂದಿರ.

ಮುಂಜಾನೆ ತಂಪು ಸೂರ್ಯ
ಹಕ್ಕಿಯ ಚಿಲಿಪಿಲಿಗಳ
ನಡುವೆ ನೆನಪಾಗುವ ಆಕೆ
ಮಧ್ಯಾಹ್ನ ಉರಿಬಿಸಿಲ
ಧೂಳು ದುಮ್ಮನಗಳ
ನಡುವೆಯು ಕಾಡುತ್ತಾಳೆ..
ಅವಳು ಪ್ರೀತಿ ಸೋಕಿಸುವ ಸೂರ್ಯರಶ್ಮಿಯಾದರೆ
ಇವನು ಆ ಪ್ರೀತಿಯ ಹೊಂಗಿರಣ!

ಸಂಜೆಯ ತಂಗಾಳಿಯೊಡನೆ
ಉಕ್ಕುವ ಪ್ರೀತಿ, ರಾತ್ರಿಯ
ಕತ್ತಲಲ್ಲಿ ಆ ಪ್ರೀತಿಯನ್ನು
ಹಾಡಾಗಿ ಹೊರಹೊಮ್ಮಿಸುತ್ತಾಳೆ..
ಅವಳು ತಡವರೆಸುವ ತಂಗಾಳಿಯಾದರೆ
ಇವನು ನಿರ್ಮಲವಾದ ಪ್ರೇಮ ಚಂದಿರ...

25 Dec 2014

ಪ್ರೀತಿಯ ಹೂಗಳಿಗೆ ಕವನಗಳ ಜಾತ್ರೆ!

ಹೂ ಅರಳುತ್ತೆ ಎಂದು
ರಾತ್ರಿಯಿಡಿ ಕಾದು ಕೂತ ಆ ಹುಡುಗ;
ಹೂ ಕೋಡುತನೆಂದು
ನಿದ್ದೆಗೆಟ್ಟು ಕಾದು ಕೂತಲು ಈ ಹುಡುಗಿ;

ಅತ್ತ ಅವನು ಎಷ್ಟು ಕಾದರು
ಅರಳಲೇ ಇಲ್ಲ ಹೂ..
ಇತ್ತ ಇವಳು ಎಷ್ಟು ಕಾದರು
ತರಲೇ ಇಲ್ಲ ಹೂ..

ಅವಳದೊಂದು ಹೆಸರು
ಹೇಳಿದನಷ್ಟೆ..! ಮೊಗ್ಗು
ಅರಳಿ ಹೂವಾಯ್ತು..
ಇವಳು ಅವನಿಗಾಗಿ ಕವನ
ಉಸುರಿದಳಷ್ಟೆ..! ಹೂ
ತಂದು ಇವಳಿಗಿಟ್ಟ
ಅವನು ಕನಸಿನ ಹುಡುಗ..
ಇವಳು ಹೂ ಹುಡುಗಿ..
                                                                                                             -ಮಂಜುನಾಥ್‌

26 Oct 2014

ಬರೆದೆನು ನಾನು ಕವಿತೆಯನು..!

ನಿನನ್ನು ಕಂಡು,
ನಿನನ್ನು ನೆನೆದು,
ನಾನಾದೆ ಅಂದು ಕವಿಯು!

ನಿನನ್ನು ಪ್ರೀತಿಸಿ,
ನಿನನ್ನು ಭ್ರಮಿಸಿ,
ಬರೆದೆ ನಾನು ಕವಿತೆಯನು!

ನಿನನ್ನು ನೆನೆದು,
ನಿನಗಾಗಿ ಬರೆದು,
ಕೊಡುವೆನು ನನ್ನ ಕವಿತೆಯನು!

ನಿನನ್ನು ನೋಡಿ,
ನಿನನ್ನು ಕೂಡಿ,
ಬರೆಯುವೆನು ನಾನು ಪ್ರೇಮ ಗೀತೆಯನು!

ನಿನನ್ನು ಕಾಡಿ,
ನಿನನ್ನು ಬೇಡಿ,
ಆಗುವೆನು ನಾನು ಪ್ರೇಮಿಯು!!
                                                    -ಮಂಜುನಾಥ್

ಅವಳ ನೆನಪಲ್ಲಿ - 9

ನನ್ನ ಕವಿತೆಗಳಿಗೆ ಸ್ಪೂರ್ತಿಯು ನೀ..
ನನ್ನ ಮನಸ್ಸಿಗೆ ರಾಣಿಯೂ ನೀ..
ನಿನಗಾಗಿ ಬರೆಯಲೇ ನಾಲ್ಕು ಸಾಲು
ನನ್ನದೆಯಲಿ ಮುಡಿನಿಂತ ಪ್ರತಿ ಸಾವಲು!!

ನೀನು ನನಗೆ ಮರೆಯಾಲಗದ ಹೂವು
ಬಣ್ಣಿಸಲಾಗದ ನೋವು
ಕಾಣಿಸಿದ್ದು ವರ್ಷದ ಹಿಂದೆ
ಮುಗ್ನಗೆ ಸುಸುತ್ತಾ ನನ್ನ ಮುಂದೆ!!

ಕವಿತೆಯೊಳಗು ನಿನ್ನ ಛಾಯೆ
ನಿನ್ನ ಪ್ರೀತಿ ಬರೀಮಾಯೆ..
ಬರೆಯಲಾಗುತ್ತಿಲ್ಲ ಕವಿತೆಯ ಸಾಲು
ಬಣ್ಣಿಸಲಾಗಿಲ್ಲ ನನ್ನ ಸಾವಲು!!

ಪ್ರೀತಿಯಿಲ್ಲದ ಕರಿದರೆ ಹೇಗಾದರು ಬಂದೀತೆ ಕವಿತೆ
ಪ್ರೀತಿಯಿಲ್ಲದೆ ಬರಿದರೆ ಅದು ಅದೀತೆ ಕವಿತೆ
ಬರೀ ಭಾವನೆಗಳನ್ನು ಎದೆಯೊಳಗೆ ಬಚ್ಚಿಟ್ಟು ಕಾಯುತ್ತಿದ್ದೆನೆ ಹುಡುಗಿ.....
                                                                              ನಿನಗಾಗಿ...ನಿನ್ನ ಪ್ರೀತಿಗಾಗಿ..!

25 Oct 2014

ಮನಸ್ಸು ಗಾಂಧಿಬಜಾರು - Manassu Gandhibazaru !!

ಮನಸ್ಸು ಗಾಂಧಿಬಜಾರು
ಅಲ್ಲಿ ಯೋಚನೆಗಳು ನೂರು , ಬ್ರೇಕಿರದ ಕಾರು
.

ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ
ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ !!
ಗಾಂಧಿಬಜಾರ್‌ನ ಸಂಜೆ ಚುಮು ಚುಮು ಚಳಿ,
ಬಿಸಿ ಬಿಸಿ ಕಾಫಿ , ಗಿಜಿ ಗಿಜಿ ಟ್ರಾಫಿಕ್ಕು , ಲೈಬ್ರರಿಯ ಕಳ್ಳ ನೋಟ .

ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ
ಅದು ಕಾಲೇಜು ಹುಡುಗಿಯ ಇಣುಕು ನೋಟ ,
ವಿದ್ಯಾರ್ಥಿ ಭವನ್‌ನ ದೋಸೆ , ರೋಟಿ ಘರ್‌ನ
ಇಡ್ಲಿ , ಕೋಟ್ರೆಶ್ವರನ ಬೆಣ್ಣೆ ಮಸಾಲೆ ; ಪ್ರೇಮಿಗಳ
ಊಸಿ ಊಸಿ ನಗೆ!!

ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ
ಅದು ಡಿವಿಜಿ ರಸ್ತೆಯ ಬಿಸ್‌ನೆಸ್ಸು , ಬಿಬಿಸಿಯ ಬ್ಯೂಝಿನೆಸ್ಸು !!
ಗಾಂಧಿಬಜಾರು ನ್ಯಾ‍‍ಷನಲ್ ಕಾಲೇಜು ಹುಡುಗಿಯರನ್ನು
ಕದ್ದು ನೋಡಿದ್ದು , ಬ್ಯೂಗಲ್ ರಾಕ್ ಮೇಲೆ ನಿಂತು ಕೂಗಿದ್ದು !!

ಮನಸ್ಸು ಗಾಂಧಿಬಜಾರು
ಅಲ್ಲಿ ಯೋಚನೆಗಳು ನೂರು , ಬ್ರೇಕಿರದ ಕಾರು  ಮತ್ತು ಅವಳ ನೆನಪು.. !!

24 Oct 2014

ಅವಳ ನೆನಪಿನಲ್ಲಿ - 8

ಅವಳ ನೆನಪಿನಲ್ಲಿ ಬರೆಯಲು ಕೂತೆ ,
ಈ ವಾರದ ಕವಿತೆಗಳ ಕಂತನ್ನ;
ಅವಳ ನೆನಪಿಗೆ ಅಕ್ಷರ ರೂಪ
ಕೊಡುವುದು ಕಷ್ಟವೆನಿಸಲಿಲ್ಲ ;
ಆದರೆ ಅವಳ ನೆನಪೇ ಇಂದು ಭಾರವಾಗಿತ್ತು .

ದೀಪಾವಳಿಯ ಹಣತೆ ಉರಿಯುತ್ತಿತ್ತು ;
ನೆನಪು ಕೆರಳುತ್ತಿತ್ತು ;
ಈ ಜುಮು ಜುಮುಚಳಿಯಲ್ಲಿ
ಅವಳಿದಿದ್ದರೆ ಹೇಗೆ ?! ವಿರಹದಲ್ಲೆ ಮಿಂದೆದ್ದೆ !!

ಅವಳ ನೆನಪಿನಲ್ಲೆ ದಣಿಯುತ್ತಾ
ಬರದೇ ಬಿಟ್ಟೆ ಈ ವಾರದ
ಕವಿತೆ ; ಓದಲು ಅವಳಿಲ್ಲ
ಬರೆದದ್ದನೆಲ್ಲ , ನಾನೇ ಗುನುಗಬೇಕಷ್ಟೆ .
ನಿನ್ನ ಜೊತೆ ಕಳೆದ ದೀಪಾವಳಿಯ ನೆನಪಿನಲ್ಲೆ ಕಾಯುತ್ತಿದ್ದೆನೆ ಹುಡುಗಿ.....
                                                                       ನಿನಗಾಗಿ....ನಿನ್ನ ಪ್ರೀತಿಗಾಗಿ
                                                                                                                          -ಮಂಜುನಾಥ್

                                           **   **  **

ಹಣತೆ ಹಚ್ಚುತ್ತೇನೆ ನಾನೂ,
ಕತ್ತಲೆಯನ್ನು ದಾಟುತ್ತೇನೆ ಎಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು ನಿನ್ನ ಮುಖ ನಾನು , ನನ್ನ ಮುಖ ನೀನು
ನೋಡಬಹುದೆಂಬ ಓಂದೇ ಓಂದು ಆಸೆಯಿಂದ ,
ಹಣತೆ ಆರಿದ ಮೇಲೆ , ನೀನು ಯಾರೋ , ಮತ್ತೆ ನಾನು ಯಾರೋ .!

                                                                                               

21 Oct 2014

ಅವಳ ನೆನಪಲ್ಲಿ - 7

ಹೇಳದೇ ಉಳಿದ ಮಾತುಗಳು 
ಬರೆಯದೇ ಉಳಿದ ಪದಗಳು 
ಜೋಡಿಸಿ ಬರೆಯಲೇ ನಾಕು ಸಾಲು 
ವರ್ಣಿಸಿ ಗೆಜ್ಜೆ ಧರಿಸಿದ ನಿನ್ನ ಕಾಲು 

ಬರೆದು ಬಿಟ್ಟ ಕವಿತೆ ಇದು..
ಹೇಗೆ ನಿಡಲಿ ನಿನಗೆ!!
ಎಲ್ಲಿ ಮರೆಯಾಗಿದ್ದಿ ಹುಡುಗಿ ನನ್ನ ಬಿಟ್ಟು..
ನನ್ನೀ ಕವಿತೆಗಳ ಬಿಟ್ಟು!!

ಕಾಡೋ ಚಳಿಗೂ ಅರೆಪಾವು
ಹೆಚ್ಚು ಕಾಡುವ ನಿನ್ನ ನೆನಪುಗಳಿಗೆ
ರೂಪ ನೀಡಿ ಬರೆಯುತ್ತಿದ್ದೆನೆ ಈ ಕವಿತೆಗಳನ್ನು...
ನಿನ್ನ ನೆನಪಿನ ಕವಿತೆಗಳನ್ನು ಕೈಲಿಡಿದು ಕಾಯುತ್ತಿದ್ದೆನೆ ಹುಡುಗಿ....
                                              ನಿನಗಾಗಿ...... ನಿನ್ನ ಪ್ರೀತಿಗಾಗಿ!!
                  -ಮಂಜುನಾ

17 Oct 2014

ಅವಳ ನೆನಪಲ್ಲಿ - 6

ಕಾಡುತ್ತಿರುವುದು ನಿನ್ನ ಕಣ್ಣು
ಕಾಡಿಗೆ ಹಚ್ಚಿದ ಮುದ್ದು ಕಣ್ಣು!
ಕಾಡುತ್ತಿರುವುದು ನಿನ್ನ ಮುಂಗುರುಳು
ಗಾಳಿಗೆ ಹಾರಿ ಹಾರಿ ಮುತ್ತಿಡುತ್ತಿದ್ದ ಮುಂಗುರುಳು!!

ನೆನಪಾಗುತ್ತಿದೆ ನಿನ್ನ ಗುಳಿಕೆನ್ನೆ
ಅ ನಿನ್ನ ಮುದ್ದು ಮದ್ದು ನಗು ನೋಡಲು!
ನೆನಪಾಗುತ್ತಿದೆ ನಿನ್ನ ಪುಟ್ಟ ಕೈಗಳು
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಜೊತೆಯಲ್ಲಿಡಿದು ನಡೆಯಲು!!

ಬರೆದು ಬಿಟ್ಟ ಕವಿತೆಯ ಸಾಲುಗಳಿವು
ಹೇಗೆ ನಿಡಲಿ ನನ್ನೊಲವಿನ ಹುಡುಗಿ ನಿನಗೆ!
ನೀನು ನನ್ನ ಜೊತೆಯಿಲ್ಲ;ನೀನು ಬಿಟ್ಟು ಹೋದ ನೆನಪಿದೆ
ಕಾಯುತ್ತಿರುವೆ ಹುಡುಗಿ ಕವಿತೆಯ ಬರೆದಿಟ್ಟುಕೊಂಡು!!
                                    ನಿನಗಾಗಿ..... ನಿನ್ನ ಪ್ರೀತಿಗಾಗಿ!!
                                                          -ಮಂಜುನಾಥ್

ಅವಳ ನೆನಪಲ್ಲಿ - 5

 ಬಸ್ಸಿನ ಮರೆಯಲ್ಲಿ ಮರೆಯಾಲಾಗದ
ನೆನಪುಗಳ ಮೆಲಕು ಹಾಕುತ್ತಿದ್ದೆ,
ನನ್ನ ಕಣ್ಣಿಗೆ ಕಂಡದ್ದು; ನೀನು
ಕುಳಿತ್ತಿದ್ದ ಅದೇ ಸೀಟು..

ನಾವು ಇಳಿದಿದ್ದ ಅ ಸ್ಟಾಪಿಗೆ,
ಬಸ್ಸು ಬಂದು ನಿಂತಿತ್ತು;
ದೇವಾಸ್ಥಾನದ ಪಕ್ಕವಿದ್ದ ಪಾರ್ಕ್ ಹಾಗೇ ಇದೆ,
ಅದರೆ ನನ್ನ ಪಕ್ಕವಿದ್ದ ನೀನು ಮರೆಯಾಗಿದ್ದೆ!

ನಾವಿಬ್ಬರು ನಡೆದು ಹೋಗುತ್ತಿದ್ದ ರಸ್ತೆಕೇಳಿತ್ತು ,
ಎಲ್ಲಿ ನಿನ್ನ ಹೂ ಹುಡುಗಿ ?!
ಈಗ ಅವಳು ನನ್ನ ಜೊತೆಯಿಲ್ಲ ; ಅದರೆ ,
ಬರುತ್ತಾಳೆ , ಬಂದೆ ಬರುತ್ತಾಳೆ ನನ್ನ ಹೂ ಹುಡುಗಿ ; ಎಂದೆ !!
ಕಾಡುವ ಪ್ರಶ್ನೆಗಳನ್ನು ಮನದಲಿಟ್ಟು ಕಾಯುತ್ತಿದ್ದೆನೆ ಹುಡುಗಿ.....
                                               ನಿನಗಾಗಿ....ನಿನ್ನ ಪ್ರೀತಿಗಾಗಿ !!!!
                         -ಮಂಜುನಾಥ್

10 Oct 2014

ಅವಳ ನೆನಪಲ್ಲಿ ೩!!

ಶಬ್ದಗಳಿಲ್ಲಿದೆ ನಿಶಬ್ದವಾದೆ
ಮಾತುಗಳಿಲ್ಲದೆ ರೋಮಾಚನವಾದೆ
ಕನಸುಗಳಿಲ್ಲದೆ ಕತ್ತಲಾದೆ
ನೀನಿಲ್ಲದೆ ನಾ! ಬರಿದಾದೆ!!

ಗಾಡಕತ್ತಲೆಯಲ್ಲಿ ಕನಸಕಂಡೆ
ನನ್ನೊಲವಿನ ಹುಡುಗಿ ಎಲ್ಲಿದಳೆಂದು?!;
ಸುತ್ತಲೂ ಮುತ್ತಲೂ ಎಲ್ಲೆಲ್ಲೂ ಕತ್ತಲು
ನೀನೆ ನನ್ನ ಮನದೊಳಗೆ ದೀಪ ಹಚ್ಚಿದಂತಾಯ್ತು!!

ಅಂದು ಏಕೆ ಸಿಕ್ಕೆಯೊ ಬಸ್ಸಿನಲ್ಲಿ
ಇಂದು ಏಕೆ ಮಾಯವಾದೆ ಮರೆಯಲ್ಲಿ
ನಿನಗಾಗಿ ಕಾಯುತ್ತಿರುವೆ ನನಿಲ್ಲಿ
ಎಲ್ಲಿರುವೆ ಹುಡುಗಿ ಬಾ ನನ್ನ ಬಳಿ ಇಲ್ಲಿ!
 ಹಣತೆಯನ್ನು ಕೈಲಿಡಿದು ಕಾಯುತ್ತಿರುವೆ  ಹುಡುಗಿ.....
                            ನಿನಗಾಗಿ.. ನಿನ್ನ ಪ್ರೀತಿಗಾಗಿ...!!
                                                                            -ಮಂಜುನಾಥ್

9 Oct 2014

ಅವಳ ನೆನಪಲ್ಲಿ!!-೨

ರಾತ್ರಿಯ ಕಗ್ಗತ್ತಲು ಭಯವಾಗಿತ್ತು
ಯಾವುದೋ ನೆನಪಲ್ಲಿ ನಿದ್ದೆಮಾಡಿದ್ದೆ;
ಬೆಳಗಿನ ಜಾವದ ಸವಿಗನಸು ಸಿಹಿಯಾಗಿತ್ತು
ನಿನ್ನ ನೆನಪಲ್ಲೆ ಹಾಸಿಗೆಬಿಟ್ಟಿದ್ದೆ!!

ಸಾವಿರ ಕನಸನ್ನು ಹೊತ್ತು ನಿನ್ನ ಬಳಿ ಬಂದೆ
ನಿನ್ನ ಆ ಸಿಹಿ ನಗುವಿನಲ್ಲಿ ಮಿಂದೆ;
ನಿನ್ನ ಕಣ್ಣುಗಳಲಿದ್ದ ಭಾವ ನನಗೆ ಪ್ರೀತಿ ಹುಟ್ಟಿಸಿತು
ನಿನ್ನ ಮೇಲೋ , ನಿನ್ನ ಕಣ್ಣ ಮೇಲೋ!!

ಸೆಪ್ಟಂಬರ‍್ನ ಮೊದಲ ಮುಂಗಾರು ಬೀರುಸಾಗಿತ್ತು
ಬಿಳುತ್ತಿದ್ದ ಪ್ರತಿ ಹನಿಯು ನಿನ್ನ ನೆನಪಿಸಿತ್ತು;
mes ಕಾಲೇಜಿನಿಂದ ವಿಜಯನಗರದವರೆಗೂ ಕಾಣಿಸಿದ್ದು ನೀನೆ
ಅದು ಹೇಗೆ ನೀ ನನ್ನೊಲವಿಗೆ ಸಿಕ್ಕೆ!!
ಮಳೆಯ ಹನಿಯನ್ನು ಕೈಲಿಡಿದು ಕಾಯುತ್ತಿರುವೆ ಹುಡುಗಿ
                                                ನಿನಗಾಗಿ.... ನಿನ್ನ ಪ್ರೀತಿಗಾಗಿ.....!!
                                                                                 -ಮಂಜುನಾಥ್

8 Oct 2014

ಅವಳ ನೆನಪಲ್ಲಿ!

 ಮರೆಯಲ್ಲಿ ಮಾತಗುತ್ತೆ
ನೆನಪಲ್ಲಿ ಪ್ರೀತಿ ಹುಟ್ಟುತ್ತೆ
ದೂರದಲ್ಲಿದ್ದಳೆ ಅವಳು
ಅದಾರೂ ಹುಟ್ಟಿಸುತ್ತಾಳೆ ಅಮಲು!!

ಅವಳಿಗವನ ಹಾಡಿನ ಪಾಡು
ಇವಳಿಗವನ ಕಾಡಿಗೆ ಬೊಟ್ಟು
ಅವಳನ್ನು ಭಾವನೆಗೆ ಭರಿಸಿ ಬಣ್ಣ ಹಚ್ಚುತ್ತಾನೆ
ಅವನು ಬರೆಯುವ ಹಾಡಿಗೆ ಸ್ವರವಾಗುತ್ತಾಳೆ!!

ಅವನಿಗಲ್ಲಿ ಕಾಡೋ ಜ್ವರ
ಅವಳ ನೆನಪಲ್ಲೊ , ಆ ಮೈಯಲ್ಲೊ;
ಉಕ್ಕುವ ನೆನಪನ್ನು ಒತ್ತೆ ಇಟ್ಟು
ಅವನ ನೆನೆದಳು ಅವಳು!!
ನೆನಪು ನೆನಪಾಗೇ ಉಳಿದಿತ್ತು....
      (ರಾಜೇಶ್ ಶೆಟ್ಟಿಯವರ ಕವನಗಳ ಸ್ಪೂ ರ್ತಿಯಲ್ಲಿ)

2 Sept 2014

ಪ್ರೀತಿಯ ಹೂಗಳಿಗೆ ಕವನಗಳ ಜಾತ್ರೆ

   ಬರೆಯ ಬಯಸಿದೆ ಕವನವ
ಏನೆ೦ದು ತಿಳಿಯದೆ ವಿ‍‍ಷಯವ
ಶೂನ್ಯವಾಗಿಹುದು ಈ ಮನವು
ಇನ್ನೆಲ್ಲಿ ನನ್ನ ಕವನಗಳಿಗೆ ಉಳಿವು

ಅ೦ದಿನ ಕವನಗಳಿಗೆ ಉತ್ತರವಾದವಳು
ಇ೦ದಿನ ಖಾಲಿ ಹಾಳೆಗೆ ಪ್ರಶ್ನೆಯಾದವಳು
ನನ್ನೀ ಬದುಕ ಶೂನ್ಯವಾಗಿಸಿಹಳು
ಈ ಬಡ ಜೀವನ ಶವವ೦ತಾಗಿಸಿಹಳು

ಈ ಶವದ ಮು೦ದಿಹುದು ಬೆಳಕು
ಆದರೆ ಬೆಳಕ ನೋಡಳು ಅದಕಳುಕು
ಕಾರಣ ಶವದ ಜೀವನ ಕೆಲ ಘ೦ಟೆಗಳು ಮಾತ್ರ
ಒಮ್ಮೆ ಬೆಳಕಿಗೆ ಮುಗಿಬಿದ್ದೊಡೆ ಕೇವಲ ಕ್ಷಣಿಕ
         

8 Jul 2014

ಏ ಮನವೇ ನೀನೇಕಿಷ್ಟು ವಿಚಿತ್ರ...

ಕಾಡುವ ಗೆಳತಿ ಕಾದಿರುವೆ ನಿನಗಾಗಿ
ಕಾದು ಕಾದು ಸಾಕಯ್ತು ಮನದ ಮಯಾವಿ

*ಏ ಮನವೇ ನೀನೇಕಿಷ್ಟು ವಿಚಿತ್ರ ?*

ನೂರಾರು ಬಾರಿ ಗೀಚಿದರೂ
ಬಾರದಲ್ಲ ನಿನ್ನ *ಪೂರ್ತಿ ಚಿತ್ರ.*

ಗೆಳೆಯರಿಗೆ ಬೇಜಾರಾದಾಗ
ನೀ ಬೇಜಾರಾಗುವೆ,
ಗೆಳೆಯರು ಖುಷಿ ಪಡುವಾಗ
ಅವರೊಡನೆಯೇ ಕೇಕೆ ಹಾಕುವೆ.

ಅದೇಕೆ ಆ ಕೊಂಕು?
*ಗೆಳೆಯರಿಗೆ ಬೇಜಾರಾದಾಗ ಒಳಗೊಳಗೇ ಖುಷಿ ತರುವಂತದ್ದು?**
ಗೆಳೆಯರು ಖುಷಿ ಪಡುತ್ತಿರುವಾಗ ,ನಗುಮುಖದಲ್ಲೇ ಬೇಜಾರಾಗುವಂತದ್ದು?*

ಒಂಟಿ ಮನಕೊಂದು* ಗೆಳತಿ*
*ಬೇಕೆಂದು *ಹಂಬಲಿಸುವಂತದ್ದು
ಗೆಳತಿ ಸಿಕ್ಕಾಗ ,"* ಈ ವಯಸ್ಸಿಗೆ ಒಂಟಿಯಾಗಿದ್ದರೇ*
*ಬದುಕು ಚೆನ್ನ*" ಎಂದು ಬಿಂಬಿಸುವಂತದ್ದು,

ಜಾತ್ರೆಯಲಿ ,*ಖಾಲಿ ರಸ್ತೆಯಾದರೂ*
*ಇದ್ದರೆ ಹಾಯಾಗಿ ತಿರುಗಬಹುದುತ್ತು* ಎನ್ನುವೆ..
ಮರುದಿನ ಖಾಲಿ ರಸ್ತೆಯ ಕಂಡು,
*ಛೇ! ಬಿಕೋ ಎನ್ನುವ ಬದಲು*
*ಜಾತ್ರೆ ಪೇಟೆಯಾದರೂ ಇರಬಾರದಿತ್ತೇ* ? ಎನ್ನುವೆ.

ಮದುವೆ ಮನೆ ಊಟದಲಿ ,ತನ್ನ ಬಾಳೆಯ ಬಿಟ್ಟು
*ಬಾಕಿ* ಏನೇನಿದೆ ಎಂದು ಹುಡುಕುವೆ.
ನೋಡಿ ನೋಡಿ ,ಎಲ್ಲಾ ಹಾಕಿಸಿಕೊಂದು
ಎಲ್ಲದನ್ನೂ ಎಂಜಲು ಮಾಡಿ ,
ಎಲ್ಲ ಬಾಳೆಯಲ್ಲೇ *ಬಾಕಿ ಉಳಿಸಿ* ಬರುವೆ

ಸೆಲ್ಲು,ಕಂಪ್ಯೂಟರಿನ ಮುಂದೆ ಕೆಂಪು ಕಣ್ಣಲಿ ಕುಳಿತಾಗ,
ಛೇ,"*ಯಾಕಾದರೂ ಈ ರೀತಿ ಅಂಟಿರುವೆನೊ ಇದಕೆ* "ಎನ್ನುವೆ.
ಅವರಿವರು ಬೈದು ಕಣ್ಣು ಕೆಂಪಗಾದಾಗ,ಮೆಸ್ಸೇಜುಗಳಿಗಾದೇ
ಹಪಹಪಿಸುವೆ,ನೆಟ್ಟಿನಲ್ಲೇ ಹೊಸ ಭಾವಲೋಕಕೆ ತೆರೆದುಕೊಳ್ಳುವೆ

ಹೇಳು ಓ ಮನವೇ ನೀ ಏಕೆ ಹೀಗೆ?
*"ನಿಜ ಹೇಳಿ,"**"ನಿಮಗೆಲ್ಲರಿಗೂ ಹೀಗಾಗುತ್ತದೆಯೋ,"**"ಅಥವಾ ನನಗೊಂದೆಯೋ ಹೇಗೆ???"*

14 Jun 2014

ಮೌನ ಉಳಿಯಿತು ಕವಿತೆಯಲಿ...

ಆಹಾ! ಕಡಲ ತೀರದಲ್ಲಿ

ಜೊತೆಯಾಗಿ ಕುಳಿತಾಗ

ಮೌನ ಮಾತಾಡಿತು,

ನಿನ್ನ ಕೈಯ ಬಿಸುಪು

ಜಗವ ಮರೆಸಿತು

ಎಂಬುದೆಲ್ಲ ಕವಿತೆಯಲ್ಲಿನ

ಸಾಲಾಗಿ ಉಳಿಯಲಷ್ಟೇ


ಕಡಲ ತೀರವೋ,

ಹಸಿರು ಬೆಟ್ಟವೋ,

ವ್ಯತ್ಯಾಸವೇನಿಲ್ಲ

ಮೌನ ಮಾತನಾಡುವುದಿಲ್ಲ


ಕಂಡಕಂಡವರ ಬಗೆಗೆಲ್ಲ ಮಾತಾಡಿ

ಅವರಿವರ ವಿವರಗಳ ಹಂಚಿಕೊಂಡು

ಮುಂದಿನ ಸುಖಗಳ ಕನಸು ಕಂಡು

ಇರುವ ದುಃಖಕ್ಕೆ ಮತ್ತಷ್ಟು ಸೇರಿಸಿ

ಪರಸ್ಪರ ಕರುಣೆಯನ್ನು ಬೇಡಿ,

ಇಬ್ಬರೂ ಭಿಕ್ಷುಕರು......

ಅಬ್ಬಾ! ಮನಸು ಹಗುರಾಯಿತು ಎನುವಾಗ,


ಮೌನಕ್ಕೆ ಜಾಗವೆಲ್ಲಿ?

ಉಳಿಯಲೇಬೇಕು ಅದು ಕವಿತೆಯಲ್ಲಿ......

close