Showing posts with label kannada kavanagalu. Show all posts
Showing posts with label kannada kavanagalu. Show all posts

13 May 2015

ಅವಳು ಸೂರ್ಯರಶ್ಮಿ ಇವನು ಪ್ರೇಮ ಚಂದಿರ.

ಮುಂಜಾನೆ ತಂಪು ಸೂರ್ಯ
ಹಕ್ಕಿಯ ಚಿಲಿಪಿಲಿಗಳ
ನಡುವೆ ನೆನಪಾಗುವ ಆಕೆ
ಮಧ್ಯಾಹ್ನ ಉರಿಬಿಸಿಲ
ಧೂಳು ದುಮ್ಮನಗಳ
ನಡುವೆಯು ಕಾಡುತ್ತಾಳೆ..
ಅವಳು ಪ್ರೀತಿ ಸೋಕಿಸುವ ಸೂರ್ಯರಶ್ಮಿಯಾದರೆ
ಇವನು ಆ ಪ್ರೀತಿಯ ಹೊಂಗಿರಣ!

ಸಂಜೆಯ ತಂಗಾಳಿಯೊಡನೆ
ಉಕ್ಕುವ ಪ್ರೀತಿ, ರಾತ್ರಿಯ
ಕತ್ತಲಲ್ಲಿ ಆ ಪ್ರೀತಿಯನ್ನು
ಹಾಡಾಗಿ ಹೊರಹೊಮ್ಮಿಸುತ್ತಾಳೆ..
ಅವಳು ತಡವರೆಸುವ ತಂಗಾಳಿಯಾದರೆ
ಇವನು ನಿರ್ಮಲವಾದ ಪ್ರೇಮ ಚಂದಿರ...

12 May 2015

ಮಳೆ ನಿಲ್ಲುವ ಹೋತ್ತು

ಮಳೆ ಆರ್ಭಟಿಸಿ ನಿಲ್ಲುವ ಹೊತ್ತು
ನಾ ಕಾದಿದ್ದೆ, ಅದು ಅವಳಿಗೂ ಗೊತ್ತು
ಮಳೆಯಲ್ಲಿ ತೊಯ್ದು ತಂಪೇರಿತು ವನ
ಅವಳನ್ನು ನೋಡದೆ ಕಾವೇರಿತು ನನ್ನೀ ಮನ..

ಅವಳು ಇನ್ನೇನು ಬರುವ ಹೊತ್ತು
ಕಾದು ಕಾವೇರಿದ ಮನ ತಂಪೇರಿತ್ತು
ಇದೋ, ಈಗ ಬಂದಳೆಂದಿತ್ತು ಮನ
ಅದರೂ ಬರಲಿಲ್ಲವೆಂದು ಮುನಿಸಿಕೊಂಡಿತ್ತು

ತಂಗಾಳಿಯೂ ತಡವರಿಸಿ ಪ್ರೀತಿ ಸೋಕಿಸಿತ್ತು
ಹುಸಿ ಮುನಿಸು ಹೆಚ್ಚಾಗಿತ್ತು
ಮೌನ ಮುರಿಯುವ ಹೊತ್ತು ಬಂದಾಗಿತ್ತು
ಕಡೆಗೂ ಸೊನೆ ಮಳೆ ನಿಂತಾಗಿತ್ತು;
ಅದರೂ ಬರಲೇ ಇಲ್ಲ ಅವಳೂ
ಮೇಧಿನಿ ಮಳೆಗೆ ಕಾಯುವಂತೆ, ಅವಳಿಗಾಗಿ ಕಾಯುತ್ತ
                       -ಕನಸು ಕಣ್ಣಿನ ಹುಡುಗ

25 Dec 2014

ಪ್ರೀತಿಯ ಹೂಗಳಿಗೆ ಕವನಗಳ ಜಾತ್ರೆ!

ಹೂ ಅರಳುತ್ತೆ ಎಂದು
ರಾತ್ರಿಯಿಡಿ ಕಾದು ಕೂತ ಆ ಹುಡುಗ;
ಹೂ ಕೋಡುತನೆಂದು
ನಿದ್ದೆಗೆಟ್ಟು ಕಾದು ಕೂತಲು ಈ ಹುಡುಗಿ;

ಅತ್ತ ಅವನು ಎಷ್ಟು ಕಾದರು
ಅರಳಲೇ ಇಲ್ಲ ಹೂ..
ಇತ್ತ ಇವಳು ಎಷ್ಟು ಕಾದರು
ತರಲೇ ಇಲ್ಲ ಹೂ..

ಅವಳದೊಂದು ಹೆಸರು
ಹೇಳಿದನಷ್ಟೆ..! ಮೊಗ್ಗು
ಅರಳಿ ಹೂವಾಯ್ತು..
ಇವಳು ಅವನಿಗಾಗಿ ಕವನ
ಉಸುರಿದಳಷ್ಟೆ..! ಹೂ
ತಂದು ಇವಳಿಗಿಟ್ಟ
ಅವನು ಕನಸಿನ ಹುಡುಗ..
ಇವಳು ಹೂ ಹುಡುಗಿ..
                                                                                                             -ಮಂಜುನಾಥ್‌

26 Oct 2014

ಅವಳ ನೆನಪಲ್ಲಿ - 9

ನನ್ನ ಕವಿತೆಗಳಿಗೆ ಸ್ಪೂರ್ತಿಯು ನೀ..
ನನ್ನ ಮನಸ್ಸಿಗೆ ರಾಣಿಯೂ ನೀ..
ನಿನಗಾಗಿ ಬರೆಯಲೇ ನಾಲ್ಕು ಸಾಲು
ನನ್ನದೆಯಲಿ ಮುಡಿನಿಂತ ಪ್ರತಿ ಸಾವಲು!!

ನೀನು ನನಗೆ ಮರೆಯಾಲಗದ ಹೂವು
ಬಣ್ಣಿಸಲಾಗದ ನೋವು
ಕಾಣಿಸಿದ್ದು ವರ್ಷದ ಹಿಂದೆ
ಮುಗ್ನಗೆ ಸುಸುತ್ತಾ ನನ್ನ ಮುಂದೆ!!

ಕವಿತೆಯೊಳಗು ನಿನ್ನ ಛಾಯೆ
ನಿನ್ನ ಪ್ರೀತಿ ಬರೀಮಾಯೆ..
ಬರೆಯಲಾಗುತ್ತಿಲ್ಲ ಕವಿತೆಯ ಸಾಲು
ಬಣ್ಣಿಸಲಾಗಿಲ್ಲ ನನ್ನ ಸಾವಲು!!

ಪ್ರೀತಿಯಿಲ್ಲದ ಕರಿದರೆ ಹೇಗಾದರು ಬಂದೀತೆ ಕವಿತೆ
ಪ್ರೀತಿಯಿಲ್ಲದೆ ಬರಿದರೆ ಅದು ಅದೀತೆ ಕವಿತೆ
ಬರೀ ಭಾವನೆಗಳನ್ನು ಎದೆಯೊಳಗೆ ಬಚ್ಚಿಟ್ಟು ಕಾಯುತ್ತಿದ್ದೆನೆ ಹುಡುಗಿ.....
                                                                              ನಿನಗಾಗಿ...ನಿನ್ನ ಪ್ರೀತಿಗಾಗಿ..!

24 Oct 2014

ಅವಳ ನೆನಪಿನಲ್ಲಿ - 8

ಅವಳ ನೆನಪಿನಲ್ಲಿ ಬರೆಯಲು ಕೂತೆ ,
ಈ ವಾರದ ಕವಿತೆಗಳ ಕಂತನ್ನ;
ಅವಳ ನೆನಪಿಗೆ ಅಕ್ಷರ ರೂಪ
ಕೊಡುವುದು ಕಷ್ಟವೆನಿಸಲಿಲ್ಲ ;
ಆದರೆ ಅವಳ ನೆನಪೇ ಇಂದು ಭಾರವಾಗಿತ್ತು .

ದೀಪಾವಳಿಯ ಹಣತೆ ಉರಿಯುತ್ತಿತ್ತು ;
ನೆನಪು ಕೆರಳುತ್ತಿತ್ತು ;
ಈ ಜುಮು ಜುಮುಚಳಿಯಲ್ಲಿ
ಅವಳಿದಿದ್ದರೆ ಹೇಗೆ ?! ವಿರಹದಲ್ಲೆ ಮಿಂದೆದ್ದೆ !!

ಅವಳ ನೆನಪಿನಲ್ಲೆ ದಣಿಯುತ್ತಾ
ಬರದೇ ಬಿಟ್ಟೆ ಈ ವಾರದ
ಕವಿತೆ ; ಓದಲು ಅವಳಿಲ್ಲ
ಬರೆದದ್ದನೆಲ್ಲ , ನಾನೇ ಗುನುಗಬೇಕಷ್ಟೆ .
ನಿನ್ನ ಜೊತೆ ಕಳೆದ ದೀಪಾವಳಿಯ ನೆನಪಿನಲ್ಲೆ ಕಾಯುತ್ತಿದ್ದೆನೆ ಹುಡುಗಿ.....
                                                                       ನಿನಗಾಗಿ....ನಿನ್ನ ಪ್ರೀತಿಗಾಗಿ
                                                                                                                          -ಮಂಜುನಾಥ್

                                           **   **  **

ಹಣತೆ ಹಚ್ಚುತ್ತೇನೆ ನಾನೂ,
ಕತ್ತಲೆಯನ್ನು ದಾಟುತ್ತೇನೆ ಎಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು ನಿನ್ನ ಮುಖ ನಾನು , ನನ್ನ ಮುಖ ನೀನು
ನೋಡಬಹುದೆಂಬ ಓಂದೇ ಓಂದು ಆಸೆಯಿಂದ ,
ಹಣತೆ ಆರಿದ ಮೇಲೆ , ನೀನು ಯಾರೋ , ಮತ್ತೆ ನಾನು ಯಾರೋ .!

                                                                                               

21 Oct 2014

ಅವಳ ನೆನಪಲ್ಲಿ - 7

ಹೇಳದೇ ಉಳಿದ ಮಾತುಗಳು 
ಬರೆಯದೇ ಉಳಿದ ಪದಗಳು 
ಜೋಡಿಸಿ ಬರೆಯಲೇ ನಾಕು ಸಾಲು 
ವರ್ಣಿಸಿ ಗೆಜ್ಜೆ ಧರಿಸಿದ ನಿನ್ನ ಕಾಲು 

ಬರೆದು ಬಿಟ್ಟ ಕವಿತೆ ಇದು..
ಹೇಗೆ ನಿಡಲಿ ನಿನಗೆ!!
ಎಲ್ಲಿ ಮರೆಯಾಗಿದ್ದಿ ಹುಡುಗಿ ನನ್ನ ಬಿಟ್ಟು..
ನನ್ನೀ ಕವಿತೆಗಳ ಬಿಟ್ಟು!!

ಕಾಡೋ ಚಳಿಗೂ ಅರೆಪಾವು
ಹೆಚ್ಚು ಕಾಡುವ ನಿನ್ನ ನೆನಪುಗಳಿಗೆ
ರೂಪ ನೀಡಿ ಬರೆಯುತ್ತಿದ್ದೆನೆ ಈ ಕವಿತೆಗಳನ್ನು...
ನಿನ್ನ ನೆನಪಿನ ಕವಿತೆಗಳನ್ನು ಕೈಲಿಡಿದು ಕಾಯುತ್ತಿದ್ದೆನೆ ಹುಡುಗಿ....
                                              ನಿನಗಾಗಿ...... ನಿನ್ನ ಪ್ರೀತಿಗಾಗಿ!!
                  -ಮಂಜುನಾ

17 Oct 2014

ಅವಳ ನೆನಪಲ್ಲಿ - 6

ಕಾಡುತ್ತಿರುವುದು ನಿನ್ನ ಕಣ್ಣು
ಕಾಡಿಗೆ ಹಚ್ಚಿದ ಮುದ್ದು ಕಣ್ಣು!
ಕಾಡುತ್ತಿರುವುದು ನಿನ್ನ ಮುಂಗುರುಳು
ಗಾಳಿಗೆ ಹಾರಿ ಹಾರಿ ಮುತ್ತಿಡುತ್ತಿದ್ದ ಮುಂಗುರುಳು!!

ನೆನಪಾಗುತ್ತಿದೆ ನಿನ್ನ ಗುಳಿಕೆನ್ನೆ
ಅ ನಿನ್ನ ಮುದ್ದು ಮದ್ದು ನಗು ನೋಡಲು!
ನೆನಪಾಗುತ್ತಿದೆ ನಿನ್ನ ಪುಟ್ಟ ಕೈಗಳು
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಜೊತೆಯಲ್ಲಿಡಿದು ನಡೆಯಲು!!

ಬರೆದು ಬಿಟ್ಟ ಕವಿತೆಯ ಸಾಲುಗಳಿವು
ಹೇಗೆ ನಿಡಲಿ ನನ್ನೊಲವಿನ ಹುಡುಗಿ ನಿನಗೆ!
ನೀನು ನನ್ನ ಜೊತೆಯಿಲ್ಲ;ನೀನು ಬಿಟ್ಟು ಹೋದ ನೆನಪಿದೆ
ಕಾಯುತ್ತಿರುವೆ ಹುಡುಗಿ ಕವಿತೆಯ ಬರೆದಿಟ್ಟುಕೊಂಡು!!
                                    ನಿನಗಾಗಿ..... ನಿನ್ನ ಪ್ರೀತಿಗಾಗಿ!!
                                                          -ಮಂಜುನಾಥ್

ಅವಳ ನೆನಪಲ್ಲಿ - 5

 ಬಸ್ಸಿನ ಮರೆಯಲ್ಲಿ ಮರೆಯಾಲಾಗದ
ನೆನಪುಗಳ ಮೆಲಕು ಹಾಕುತ್ತಿದ್ದೆ,
ನನ್ನ ಕಣ್ಣಿಗೆ ಕಂಡದ್ದು; ನೀನು
ಕುಳಿತ್ತಿದ್ದ ಅದೇ ಸೀಟು..

ನಾವು ಇಳಿದಿದ್ದ ಅ ಸ್ಟಾಪಿಗೆ,
ಬಸ್ಸು ಬಂದು ನಿಂತಿತ್ತು;
ದೇವಾಸ್ಥಾನದ ಪಕ್ಕವಿದ್ದ ಪಾರ್ಕ್ ಹಾಗೇ ಇದೆ,
ಅದರೆ ನನ್ನ ಪಕ್ಕವಿದ್ದ ನೀನು ಮರೆಯಾಗಿದ್ದೆ!

ನಾವಿಬ್ಬರು ನಡೆದು ಹೋಗುತ್ತಿದ್ದ ರಸ್ತೆಕೇಳಿತ್ತು ,
ಎಲ್ಲಿ ನಿನ್ನ ಹೂ ಹುಡುಗಿ ?!
ಈಗ ಅವಳು ನನ್ನ ಜೊತೆಯಿಲ್ಲ ; ಅದರೆ ,
ಬರುತ್ತಾಳೆ , ಬಂದೆ ಬರುತ್ತಾಳೆ ನನ್ನ ಹೂ ಹುಡುಗಿ ; ಎಂದೆ !!
ಕಾಡುವ ಪ್ರಶ್ನೆಗಳನ್ನು ಮನದಲಿಟ್ಟು ಕಾಯುತ್ತಿದ್ದೆನೆ ಹುಡುಗಿ.....
                                               ನಿನಗಾಗಿ....ನಿನ್ನ ಪ್ರೀತಿಗಾಗಿ !!!!
                         -ಮಂಜುನಾಥ್

10 Oct 2014

ಅವಳ ನೆನಪಲ್ಲಿ ೩!!

ಶಬ್ದಗಳಿಲ್ಲಿದೆ ನಿಶಬ್ದವಾದೆ
ಮಾತುಗಳಿಲ್ಲದೆ ರೋಮಾಚನವಾದೆ
ಕನಸುಗಳಿಲ್ಲದೆ ಕತ್ತಲಾದೆ
ನೀನಿಲ್ಲದೆ ನಾ! ಬರಿದಾದೆ!!

ಗಾಡಕತ್ತಲೆಯಲ್ಲಿ ಕನಸಕಂಡೆ
ನನ್ನೊಲವಿನ ಹುಡುಗಿ ಎಲ್ಲಿದಳೆಂದು?!;
ಸುತ್ತಲೂ ಮುತ್ತಲೂ ಎಲ್ಲೆಲ್ಲೂ ಕತ್ತಲು
ನೀನೆ ನನ್ನ ಮನದೊಳಗೆ ದೀಪ ಹಚ್ಚಿದಂತಾಯ್ತು!!

ಅಂದು ಏಕೆ ಸಿಕ್ಕೆಯೊ ಬಸ್ಸಿನಲ್ಲಿ
ಇಂದು ಏಕೆ ಮಾಯವಾದೆ ಮರೆಯಲ್ಲಿ
ನಿನಗಾಗಿ ಕಾಯುತ್ತಿರುವೆ ನನಿಲ್ಲಿ
ಎಲ್ಲಿರುವೆ ಹುಡುಗಿ ಬಾ ನನ್ನ ಬಳಿ ಇಲ್ಲಿ!
 ಹಣತೆಯನ್ನು ಕೈಲಿಡಿದು ಕಾಯುತ್ತಿರುವೆ  ಹುಡುಗಿ.....
                            ನಿನಗಾಗಿ.. ನಿನ್ನ ಪ್ರೀತಿಗಾಗಿ...!!
                                                                            -ಮಂಜುನಾಥ್

9 Oct 2014

ಅವಳ ನೆನಪಲ್ಲಿ!!-೨

ರಾತ್ರಿಯ ಕಗ್ಗತ್ತಲು ಭಯವಾಗಿತ್ತು
ಯಾವುದೋ ನೆನಪಲ್ಲಿ ನಿದ್ದೆಮಾಡಿದ್ದೆ;
ಬೆಳಗಿನ ಜಾವದ ಸವಿಗನಸು ಸಿಹಿಯಾಗಿತ್ತು
ನಿನ್ನ ನೆನಪಲ್ಲೆ ಹಾಸಿಗೆಬಿಟ್ಟಿದ್ದೆ!!

ಸಾವಿರ ಕನಸನ್ನು ಹೊತ್ತು ನಿನ್ನ ಬಳಿ ಬಂದೆ
ನಿನ್ನ ಆ ಸಿಹಿ ನಗುವಿನಲ್ಲಿ ಮಿಂದೆ;
ನಿನ್ನ ಕಣ್ಣುಗಳಲಿದ್ದ ಭಾವ ನನಗೆ ಪ್ರೀತಿ ಹುಟ್ಟಿಸಿತು
ನಿನ್ನ ಮೇಲೋ , ನಿನ್ನ ಕಣ್ಣ ಮೇಲೋ!!

ಸೆಪ್ಟಂಬರ‍್ನ ಮೊದಲ ಮುಂಗಾರು ಬೀರುಸಾಗಿತ್ತು
ಬಿಳುತ್ತಿದ್ದ ಪ್ರತಿ ಹನಿಯು ನಿನ್ನ ನೆನಪಿಸಿತ್ತು;
mes ಕಾಲೇಜಿನಿಂದ ವಿಜಯನಗರದವರೆಗೂ ಕಾಣಿಸಿದ್ದು ನೀನೆ
ಅದು ಹೇಗೆ ನೀ ನನ್ನೊಲವಿಗೆ ಸಿಕ್ಕೆ!!
ಮಳೆಯ ಹನಿಯನ್ನು ಕೈಲಿಡಿದು ಕಾಯುತ್ತಿರುವೆ ಹುಡುಗಿ
                                                ನಿನಗಾಗಿ.... ನಿನ್ನ ಪ್ರೀತಿಗಾಗಿ.....!!
                                                                                 -ಮಂಜುನಾಥ್

25 May 2014

ಅವಳ ನೆನಪಲ್ಲಿ 4

ಚಂದಿರನ ಮೇಲೆ ಕುಳಿತ ರಾಣಿಯೂ ನೀನು, 
ಹೃದಯ ತುಂಬಿ ಪ್ರೀತಿಯ ಕೊಡಲು ನಿಂತ ಪ್ರೇಮಿ ನಾನು... ಅತೀತ್ತ ನೀ ನೋಡದಿರು ನನ್ನ ಕಂಗಳ ಬಿಟ್ಟು, 
ಚಂದಿರನನ್ನೇ ಮರೆತೇ ನಿನ್ನ ಕಂಗಳ ಹೊಲಪನ್ನ ನನ್ನ ಕಂಗಳಲ್ಲಿ ಇಟ್ಟು...

 ಜಗವನ್ನೇ ಸುತ್ತುವ ಆಸೆಯೂ ನಿನಗೆ, 
ಕೈ ಹಿಡಿದು ನಡೆಸುವಾಸೆ ನನಗೆ,
 ಮಗುವಂತೆ ನೋಡು ನೀ ನನ್ನ,
 ನಿರ್ಮಲವಾದ ಪ್ರೀತಿಯ ಕೊಡುವ ನಾ ಚಿನ್ನ...

ಬಯಸುವೆ ನನ್ನ ಜೀವನ ಹಾದಿಯುದಕ್ಕೂ ನಿನ್ನ,
 ಎಂದು ಉಸಿರ ಕಟ್ಟಿಸದಿರು ಮರೆತು ನನ್ನ. 
ಮನಸಿನಲ್ಲಿ ಇಟ್ಟು ನಿನ್ನ ನೋಡಿದರೆ ನಾನು, 
ಜಗತ್ತೇ ಸುಂದರವೆನಿಸುತ್ತಿದೆ ಇನ್ನ. 

ನೊವಲ್ಲು ನಾರುವೆ, ನಲಿವಲ್ಲು ನಾ ಬರುವೆ, 
ಜೊತೆ ಜೊತೆಯಾಗಿ ನಡೆದು ಸೇರುವ ನಾವಿಬ್ಬರು ದಡವನ್ಣ, ನಡುದಾರಿಯಲ್ಲಿ ಎಂದು ಕೈ ಬಿಡದಿರು ಎನ್ನ...
ನೀ ಬರುವ ದಾರಿಯಲ್ಲಿ ಕಾಯುತ್ತಿರುವೆ ಹುಡುಗಿ....
                                     ನಿನಾಗಾಗಿ...ನಿನ್ನ ಪ್ರೀತಿಗಾಗಿ...!!
    -ಮಂಜುನಾಥ್
close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →