2 Jan 2015

ಆಸೆಗೊಂದು ಕವನ!

ಬಿಳಿಯ ಹಾಳೆಯ ಮೇಲೆ
ಒಂದೊಂದೇ ಅಕ್ಷರಗಳನ್ನು
ಜೋಡಿಸುತ್ತಾ ಪ್ರೀತಿಯ ಕವನ
ಬರೆಯಲು ಹೊರಟಿರುವೆ..

ಮುಂಜಾವಿಗೇ ಭೇಟಿಯಾಗೋ ನೀನು
ಕತ್ತಲು ಆವರಿಸೋವರೆಗೂ ನನ್ನ ಜೊತೆ
ಇರಬೇಕು ಅನ್ನೊ ಆಸೆ...
ನಿತ್ಯವು ನಿನ್ನ ಹೆಸರಲೊಂದು ನಿನಗೆ
ಪ್ರೀತಿಯಿಂದ ಕವನ ಬರೆಯುವಾಸೆ...
ನಿನ್ನ ಸಮೀಪದಲ್ಲೆ ಕೂತು
ನಾ ಬರೆದ ಕವನವನ್ನು ನಿನಗಾಗಿ
ಓದಿ ಹೇಳೊ ಆಸೆ...

ಆಸೆ ಆಸೆಗಳ ನಡುವೆ
ಬರೆಯುತ್ತಿರುವ ಬಿಳಿ ಹಾಳೆ
ತುಂಬುತ್ತ ಬಂತು..
ಅಕ್ಷರಗಳನ್ನು ಜೋಡಿಸುತ್ತಾ ಬರೆದ
ಕವನ... ಬರೇ ಕವನವಲ್ಲ
ನನ್ನ ತುಂಬು ಮೌನದ ಭಾವಗಳು!

                                                              -ಮಂಜುನಾಥ್‌
close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →