25 Jan 2015

ಸಂಜೆ ಐದರ ನೆನಪು..!

ಸಂಜೆ ಐದರ ಮಳೆಯಲ್ಲಿ
ಖಾಲಿ ಖಾಲಿ ರಸ್ತೆಯಲ್ಲಿ
ನೆನಪಗೂತಿಹುದೂ ಅವಳ ಆಟವೂ..!

ಸಂಜೆ ಕತ್ತಲ ಬೆಳಕಿನಲ್ಲಿ
ಅವಳಿಲ್ಲದ ವೇಳೆಯಲ್ಲಿ
ಬೇಕು ಎನ್ನಿಸುತಿಹುದೂ ಅವಳ ಪ್ರೀತಿಯೂ..!

ಸಂಜೆ ಮುಗಿಯುವ ಹೊತ್ತಿನಲ್ಲಿ
ಕನಸು ಕಾಣುವ ವೇಳೆಯಲ್ಲಿ
ಬೆರಗಾಗಿಸುತಿಹುದೂ ಅವಳ ಚೆಲುವು..!

ಕರಗುತಿರುವ ಕತ್ತಲಲ್ಲಿ
ಇರುಳು ಬೆಳಕಿನ ಆಟದಲ್ಲಿ
ಚಂದ್ರಕಾಂತಿಯ ಸೊಬಗಿನಲ್ಲಿ
ಕಾಡುತಿಹುದು ಅವಳ ಬಿಂಬವು..!

ಇರುಳು ಮುಗಿಯಿತು
ಕತ್ತಲು ಹಾರಿಹೋಗಿತ್ತು
ಮತ್ತೆ ಬರುತಿಹಳು ಅವಳು
ಗುಳಿ ಕನ್ನೆಯಲ್ಲಿ ಚೆಂದನೆಯ ನಗುವ ಬಿರುತ್ತ..!

                                                                          -ಮಂಜುನಾಥ್‌‌
close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →