Sunday, 11 January 2015

ರತ್ನಗಿರಿ ರಹಸ್ಯ!

     ಸಮಯ ಬೆಳಗ್ಗೆ 7 ಗಂಟೆ!

   ಡಿಸೆಂಬರ್‌ನ ಚಳಿಯಲ್ಲಿ ಜಿಟಿ-ಜಿಟಿ ಮಳೆಯಿಂದ ವಾತವರಣ ತಂಪಾಗಿತ್ತು.  ಭಾವನ ಇನ್ನೂ ನಿದ್ದೆಯಿಂದ ಎದ್ದಿರಲಿಲ್ಲ, ಆಕೆಗೆ ಪ್ರತಿದಿನ ಬಿಳುತ್ತಿದ್ದ ಕನಸುಗಳು ಸ್ವತಃ ನಡೆದಿದ್ಯೆನೋ ಎಂಬಂತೆ ತಿಳಿಯುತ್ತಿದ್ದಳು. ಒಬ್ಬಳೆ ಏಕಾಂತದಲ್ಲಿ ಹಸಿರು ತುಂಬಿದ ಪಾರ್ಕ್‌ನಲ್ಲಿ ನಡೆದು ಹೋಗುತ್ತಿದ್ದರೆ ನೂರಾರು ಬಣ್ಣದ ಚಿಟ್ಟೆಗಳು ಅವಳನ್ನು ಸ್ವಾಗತಿಸುತ್ತಿವೆ ಎಂದು ಕನಸಿನಲ್ಲಿ ಮುಳುಗಿ ಹೋಗಿದ್ದಳು ಭಾವನ. ನಿದ್ದೆಯಲ್ಲಿದ್ದರು ಸ್ವಲ್ಪ ಎಚ್ಚರಿಕೆಯಿಂದಲೇ ಇರುತ್ತಿದ್ದಳು. ಸುಮ್ಮನೆ ಮಲಗಿದ್ದವಳು ಗಡಿಯಾರದ ಕಡೆ ಕಣ್ಣಾಡಿಸಿದಳು 7 ಗಂಟೆ 5 ನಿಮಿಷ ಇಷ್ಟರಲ್ಲಗಲೇ ಫ್ಯಾಕ್ಟರಿಯ ಯಾಂತ್ರಗಳು ಕೆಲಸ ಆರಂಭವಾಗಿ ಅವರಿಗೆ ಕೇಳಿಸಬೇಕಿತ್ತು. ಆದರೆ ಆಕೆಗೆ ಕೇಳಿಸಿದ್ದು ಯಾರೋ ಮೆಟ್ಟಿಲನ್ನು ಅವಸರವಾಸರವಾಗಿ ಹತ್ತುತ್ತಿದ್ದದ್ದು. ಮೆಟ್ಟಿಲು ಮರದಿಂದ ಮಾಡಿದ್ದ ಕಾರಣ ಅ ನಡಿಗೆಯ ಶಬ್ಧ ಭಾವನಳಿಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಅ ನಡಿಗೆಯಲ್ಲಿ ಭೀಕರತೆ ಅನುಭಿಸಿದ್ದ ಭಾವವಿತ್ತು, ಭಯವಿತ್ತು, ಅಸಹನೆಯಿತ್ತು, ಅವಸರವಿತ್ತು. ಓಡಿ ಬಂದವರೆ ದಡ ದಡನೆ ಬಾಗಿಲು ಬಡಿದರು... ಬಾಗಿಲು ತೆಗೆದ ಭಾವನಳಿಗೆ ಅಚ್ಚರಿ ಎದುರಾಗಿತ್ತು!

   ಅದು ಕೆಲಸದಾತ ಡಿಸೋಜ!

    ಭಯದಿಂದ ಓಡಿಬಂದವನೆ ಉಸಿರು ಬಿಗಿಹಿಡಿದು ಒಂದೇ ಸಮನೆ ತಡಬಡಯಿಸಿದ
"ಮೇಡಂ.. ಮೇಡಂ.. ಫ್ಯಾಕ್ಟರಿಯ ಕ್ಯಾಬಿನ್‌ನಲ್ಲಿ ಯಾವುದೋ ಹೆ.. ಹೆ.. ಹೆಣ ಬಿದ್ದಿದ್ದೇ! ಬೇಗ ಬನ್ನಿ" ಎಂದವನೇ ಬಂದಷ್ಟೆ ವೇಗವಾಗಿ ಓಡಿಹೋದ... ಅವನ ಮುಖದಲ್ಲಿ ಅವರಿಸಿಕೊಂಡಿದ್ದ ಭಯ ಭಾವನಳನ್ನು ಬೆಚ್ಚಿಬಿಳುವಂತೆ ಮಾಡಿತ್ತು.

                        "ರತ್ನಗಿರಿ ಎಸ್ಟೇಟ್‌ನಲ್ಲಿ ಫ್ಯಾಕ್ಟರಿಯಲ್ಲಿ ಶವ ಬಿದ್ದಿತ್ತು!"

    ಅದು ಶೃಂಗೇರಿಯಿಂದ- ಕಳಸಕ್ಕೆ ಹೊಗುವ ಮಾರ್ಗ ಕುದುರೆಮುಖವೆಂಬ ಪ್ರಕೃತಿಯ ಸ್ವರ್ಗದ ಮಧ್ಯಯಿದ್ದ ಕಾಫಿ ಎಸ್ಟೇಟ್‌. ಕಣ್ಣು ಆಯಿಸಿದಷ್ಟು ದೂರ ಕೇವಲ ಹಸಿರು ಗಿಡ-ಮರಗಳೇ ಅವರಿಸಿಕೊಂಡಿತ್ತು. ಮುಗಿಲಿಗೆ ಮುತ್ತಿಡುತ್ತಿದ್ದ ಗಿರಿ ಶಿಖರಗಳು, ಕಿವಿಗೆ ಇಂಪೇನಿಸುತ್ತಿದ್ದ ಪಕ್ಷಿಗಳ ಲವಲವಿಕೆಯ ಕೂಗಾಟ , ವರ್ಷದ 365 ದಿನಗಳು ಮಳೆ ಸುರಿಯುತ್ತಿದ್ದ ಈ ಪ್ರದೇಶ ಪ್ರಕೃತಿಯ ಸ್ವರ್ಗ ಎಂದರೆ ತಪ್ಪಿಲ್ಲ. ಅಷ್ಟು ಹಸಿರಿನ ನಡುವೆ ಇದ್ದದೇ ಈ ಎಷ್ಟೇಟ್‌.
     ರತ್ನಗಿರಿ ಎಸ್ಟೇಟ್‌!
 ಎಸ್ಟೇಟ್‌ನೊಳಗೆ ಕಾಫಿ ಸಂಸ್ಕರಣಗೆಂದೆ ಇದ್ದ ಫ್ಯಾಕ್ಟರಿ ಅದರ ಪಕ್ಕದಲ್ಲೆ ಇದ್ದ ತುಂಬ ಹಳೆದೆನಿಸುವ ಮರದಿಂದ ಕಟ್ಟಿಸಿದ ಮನೆ. ಅಲ್ಲಿ ವಾಸವಾಗಿದ್ದ ಕಾಫಿ ಎಸ್ಟೇಟ್‌ನ ಅನಭಿಕ್ಷಿತ ದೊರೆ ದೀಪಕ್‌ ಶರ್ಮಾ ಜೊತೆಗೆ ಅವನ ಹೆಂಡತಿ ಭಾವನ ಶರ್ಮಾ.

      ಕೆಲಸಗಾರ ಡಿಸೋಜ ಬಂದು ಕಾಫಿ ಫ್ಯಾಕ್ಟರಿಯ ಕ್ಯಾಬಿನ್‌ನಲ್ಲಿ ಶವವಿದೆ ಎಂದ ಕೂಡಲೆ ಭಾವನ ಬೆಚ್ಚಿಬಿದ್ದಿದ್ದಳು!
 ಇದೆಲ್ಲ ಆಕೆಗೆ ಕನಸಂತೆ ಭಾಸವಾಯ್ತು. ಪರೀಕ್ಷಿಸಿಕೊಂಡಳು. No! ಇದು ಸತ್ಯ ಎಂದು ಅರಿತವಳೆ ಗಂಡ ದೀಪಕ್‌ ಶರ್ಮಾನನ್ನು ಎಬ್ಬಿಸಿದಳು.

"ದೀಪಕ್‌ ಕೇಳಿಸ್ತಾ ಡಿಸೋಜ ಹೇಳಿದ್ದು?". ಆತಂಕದಿಂದ ಕೇಳಿದಳು ಭಾವನ.
"ಏನಂತೆ?" ನಿದ್ದೆಯ ಅಸಹನೆಯಲ್ಲಿ ಕೇಳಿದ ದೀಪಕ್‌ನಲ್ಲಿ ಯಾವುದೇ ಭಾವಗಳಿರಲಿಲ್ಲ.
"ಫ್ಯಾಕ್ಟರಿಯ ಕ್ಯಾಬಿನ್‌ನಲ್ಲಿ ಯಾವುದೋ ಶವ ಪತ್ತೆಯಾಗಿದೆಯಂತೆ."
'ಅಯ್ಯೊ! ಇಕೇಗೆ ಇವತ್ತು ಕೊಲೆಯ ಕನಸು ಬಿದ್ದಿರಬೇಕು' ಎಂದು ಮನಸ್ಸಿನಲ್ಲಿ ಅಂದುಕೊಂಡ ದೀಪಕ್‌.
"ದೀಪಕ್‌ ಕೇಳಿಸ್ತಾ ನಾನು ಹೇಳಿದ್ದು."
"ಭಾವನ, calm down ಯಾವದೇ ಶವ ಪತ್ತೆಯಾಗಿಲ್ಲ It's just a dream ಕನಸು ಕಂಡಿರಬೇಕು ಅಷ್ಟೇ" ಎಂದ ದೀಪಕ್‌.
"ಇಲ್ಲ, ಡಿಸೋಜ ಬಂದು ಭಯದಿಂದ ಹೇಳಿ ಹೋದ it's not a dream Deepak , ಬಾ ಹೋಗಿ ನೋಡೊಣ " ಅಂದು ಹೇಳಿದವಳೆ ಮಾತು ಮುಗಿಸಿದಳು ಭಾವನ.
ಆಕೆಯ ಸ್ಥಿತಿ, ಧನಿಯ ಏರಿಳಿತ, ಭಯ , ತಳಮಳ ಗಮನಿಸಿದ ದೀಪಕ್‌ ಸ್ವಲ್ಪ ಭಯಗೊಂಡ, ನಿಜವಿರಬಹುದ?? ಎಂದು ಅನುಮಾನದಿಂದಲೇ ಫ್ಯಾಕ್ಟರಿಯತ್ತ ಧವಿಸಿದ.

                                                     ** ** **

     ಡಿಸೋಜ ಫ್ಯಾಕ್ಟರಿಯ ಮೂಲೆಯಲ್ಲಿ ಬೆಚ್ಚಿಬಿದ್ದು ನಿಂತಿದ್ದ ಅವನನ್ನು ಶಂಕರ್‌ ಮತ್ತು ಸುಬ್ಬಣ್ಣ ಅನ್ನೊ ಕೆಲಸಗಾರರು ಸಂತೈಸುತ್ತಿದ್ದರು.
"ಏನಾಯ್ತು?" ಜೋರಗೇ ಕೇಳಿದ ಕಾಫಿ ಎಸ್ಟೇಟ್‌ನ ಅನಭಿಕ್ಷಿತ ದೊರೆ ದೀಪಕ್‌ ಶರ್ಮಾ.
"ಯಾಜಮಾನರೇ , ಬೆಳಗ್ಗೆ ನಿತ್ಯದಂತೆ 6:30ಕ್ಕೆ ಫ್ಯಾಕ್ಟರಿ ತೆರೆದು, ನಿಮ್ಮ ಕ್ಯಾಬಿನ್‌ ಕ್ಲಿನ್‌‌ ಮಾಡಲು ಹೊರಟಗಾ ಡಿಸೋಜ ಯಾವುದೋ ಶವಕಂಡಿದ್ದಾನೆ. ನಾವು ನೀವು ಬರಯವವರೆಗೂ ಯಾರನ್ನು ಓಳಬಿಟ್ಟಿಲ್ಲ, ಬನ್ನಿ ಯಾಜಮಾನರೇ ಎಂದು ಕ್ಯಾಬಿನ್‌ ಬಾಗಿಲು ತೆರೆದ ಶಂಕರ್‌"  
                                          
              ರಕ್ತಸಿಕ್ತವಾಗಿ ಬಿದ್ದಿತ್ತು ಹುಡುಗಿಯ ಶವ!

   ಶಂಕರ್‌ ಮತ್ತು ಸುಬ್ಬಣ್ಣನಿಗೆ ಪೋಲಿಸರಿಗೆ ಫೋನ್‌ ಮಾಡಿ ವಿಷಯ ಮುಟ್ಟಿಸಿ! ಒಳಕ್ಕೆ ಯಾರನ್ನು ಬಿಡಬೇಡಿ. ವಿಷಯ ನಮ್ಮಲ್ಲಿ ಮಾತ್ರ ಇರಲಿ ಹೊರ ಹೋಗದು ಬೇಡ. Be careful! ಎಂದವನೇ ತನ್ನ ರೂಮಿಗೆ ಧವಿಸಿ ನಡೆದ.
                                                  ** ** **

    ಕರೆಮಾಡಿ ಸ್ವಲ್ಪ ಹೊತ್ತಿನಲ್ಲೆ ಕುದುರೆಮುಖದ ಪೋಲಿಸರ ಜೀಪು ರತ್ನಗಿರಿ ಎಸ್ಟೇಟ್‌ಗೆ ಬಂದು ತಲುಪಿತ್ತು. ಸಮಯ 7 ಗಂಟೆ 45 ನಿಮಿಷ ಬಂದ ಪೋಲಿಸರನ್ನು ತನ್ನ ಕ್ಯಾಬಿನಿಗೆ ಕರೆತಂದು ಶವ ಬಿದ್ದಿದ್ದ ಸ್ಥಳವನ್ನು ತೋರಿಸಿದ ದೀಪಕ್‌ ಶರ್ಮಾ. ಸ್ವಲ್ಪಹೊತ್ತು Bodyಯನ್ನ ಗಮನಿಸಿದ ಪೋಲಿಸರಿಗೆ ಕೊಲೆಯ ಭೀಕರತೆ ಅರ್ಥವಾಯ್ತು. PC ರಾಜುವಿಗೆ ಶವಪರೀಕ್ಷೆ ಮತ್ತು crime scene investigation ಮಾಡಲು ಸಿದ್ದತೆ ನಡೆಸು ಎಂದವನೇ ತನ್ನ ವಿಚಾರಣೆ ಶುರುಮಾಡಿದ್ದ SI ಸಿದಾರ್ಥ.

   'ಶವವನ್ನು ಮೊದಲು ನೋಡಿದ್ದು ಯಾರು?' ಕೇಳಿದ ಸಿದಾರ್ಥ. ದೂರದಲ್ಲೆ ಕೂತಿದ್ದ ಡಿಸೋಜನನ್ನು ತೋರಿಸಿ ಅವರೆ ಎಂದ ದೀಪಕ್‌.
" ಪ್ರತಿದಿನ ನೀವೆನ ಮೊದಲು ಬಾಗಿಲು ತೇಗಿಯುವುದು?"
 "ಹೌದು! Inspector ಪ್ರತಿದಿನ ರಾತ್ರಿ ಬಾಗಿಲು ಹಾಕಿ ಬೆಳಗ್ಗೆ ತೆಗೆಯುವುದು ನಾನೇ' ಎಂದ ಡಿಸೋಜ
"ಇವತ್ತು ಬಾಗಿಲು ಯಾರು ತೆಗೆದಿದ್ದು? ರಾತ್ರಿ L0ck ಮಾಡಿದ್ರ?" ದೀಪಕ್‌ಗೆ ಕೇಳಿದ SI
"Sure inspector, lock ಮಾಡೊವಾಗ ನಾನೇ ಇದ್ದೆ"
"ಬೆಳಗ್ಗೆ , Cabin open ಮಾಡಿದ್ದು ಇವರೇನಾ?
"Yes, inspector!" ಎಂದು ನಿಟ್ಟುಸಿರು ಬಿಟ್ಟ ದೀಪಕ್‌ ಶರ್ಮಾ.
SI ಸಿದಾರ್ಥನ ಕಣ್ಣು ನೇರವಾಗಿ ಡಿಸೋಗನ ಮೇಲೆ ಬಿತ್ತು.
"ಫ್ರಾಕ್ಲಿಂನ್‌ ಡಿಸೋಜ"

                                                                       (ಮುಂದುವರೆಯುತ್ತದೆ-To be continued)

No comments:

Post a Comment