ಮಳೆ ಆರ್ಭಟಿಸಿ ನಿಲ್ಲುವ ಹೊತ್ತು
ನಾ ಕಾದಿದ್ದೆ, ಅದು ಅವಳಿಗೂ ಗೊತ್ತು
ಮಳೆಯಲ್ಲಿ ತೊಯ್ದು ತಂಪೇರಿತು ವನ
ಅವಳನ್ನು ನೋಡದೆ ಕಾವೇರಿತು ನನ್ನೀ ಮನ..
ಅವಳು ಇನ್ನೇನು ಬರುವ ಹೊತ್ತು
ಕಾದು ಕಾವೇರಿದ ಮನ ತಂಪೇರಿತ್ತು
ಇದೋ, ಈಗ ಬಂದಳೆಂದಿತ್ತು ಮನ
ಅದರೂ ಬರಲಿಲ್ಲವೆಂದು ಮುನಿಸಿಕೊಂಡಿತ್ತು
ತಂಗಾಳಿಯೂ ತಡವರಿಸಿ ಪ್ರೀತಿ ಸೋಕಿಸಿತ್ತು
ಹುಸಿ ಮುನಿಸು ಹೆಚ್ಚಾಗಿತ್ತು
ಮೌನ ಮುರಿಯುವ ಹೊತ್ತು ಬಂದಾಗಿತ್ತು
ಕಡೆಗೂ ಸೊನೆ ಮಳೆ ನಿಂತಾಗಿತ್ತು;
ಅದರೂ ಬರಲೇ ಇಲ್ಲ ಅವಳೂ
ಮೇಧಿನಿ ಮಳೆಗೆ ಕಾಯುವಂತೆ, ಅವಳಿಗಾಗಿ ಕಾಯುತ್ತ
-ಕನಸು ಕಣ್ಣಿನ ಹುಡುಗ