Showing posts with label kannada kavangalu. Show all posts
Showing posts with label kannada kavangalu. Show all posts

13 May 2015

ಅವಳು ಸೂರ್ಯರಶ್ಮಿ ಇವನು ಪ್ರೇಮ ಚಂದಿರ.

ಮುಂಜಾನೆ ತಂಪು ಸೂರ್ಯ
ಹಕ್ಕಿಯ ಚಿಲಿಪಿಲಿಗಳ
ನಡುವೆ ನೆನಪಾಗುವ ಆಕೆ
ಮಧ್ಯಾಹ್ನ ಉರಿಬಿಸಿಲ
ಧೂಳು ದುಮ್ಮನಗಳ
ನಡುವೆಯು ಕಾಡುತ್ತಾಳೆ..
ಅವಳು ಪ್ರೀತಿ ಸೋಕಿಸುವ ಸೂರ್ಯರಶ್ಮಿಯಾದರೆ
ಇವನು ಆ ಪ್ರೀತಿಯ ಹೊಂಗಿರಣ!

ಸಂಜೆಯ ತಂಗಾಳಿಯೊಡನೆ
ಉಕ್ಕುವ ಪ್ರೀತಿ, ರಾತ್ರಿಯ
ಕತ್ತಲಲ್ಲಿ ಆ ಪ್ರೀತಿಯನ್ನು
ಹಾಡಾಗಿ ಹೊರಹೊಮ್ಮಿಸುತ್ತಾಳೆ..
ಅವಳು ತಡವರೆಸುವ ತಂಗಾಳಿಯಾದರೆ
ಇವನು ನಿರ್ಮಲವಾದ ಪ್ರೇಮ ಚಂದಿರ...

12 May 2015

ಮಳೆ ನಿಲ್ಲುವ ಹೋತ್ತು

ಮಳೆ ಆರ್ಭಟಿಸಿ ನಿಲ್ಲುವ ಹೊತ್ತು
ನಾ ಕಾದಿದ್ದೆ, ಅದು ಅವಳಿಗೂ ಗೊತ್ತು
ಮಳೆಯಲ್ಲಿ ತೊಯ್ದು ತಂಪೇರಿತು ವನ
ಅವಳನ್ನು ನೋಡದೆ ಕಾವೇರಿತು ನನ್ನೀ ಮನ..

ಅವಳು ಇನ್ನೇನು ಬರುವ ಹೊತ್ತು
ಕಾದು ಕಾವೇರಿದ ಮನ ತಂಪೇರಿತ್ತು
ಇದೋ, ಈಗ ಬಂದಳೆಂದಿತ್ತು ಮನ
ಅದರೂ ಬರಲಿಲ್ಲವೆಂದು ಮುನಿಸಿಕೊಂಡಿತ್ತು

ತಂಗಾಳಿಯೂ ತಡವರಿಸಿ ಪ್ರೀತಿ ಸೋಕಿಸಿತ್ತು
ಹುಸಿ ಮುನಿಸು ಹೆಚ್ಚಾಗಿತ್ತು
ಮೌನ ಮುರಿಯುವ ಹೊತ್ತು ಬಂದಾಗಿತ್ತು
ಕಡೆಗೂ ಸೊನೆ ಮಳೆ ನಿಂತಾಗಿತ್ತು;
ಅದರೂ ಬರಲೇ ಇಲ್ಲ ಅವಳೂ
ಮೇಧಿನಿ ಮಳೆಗೆ ಕಾಯುವಂತೆ, ಅವಳಿಗಾಗಿ ಕಾಯುತ್ತ
                       -ಕನಸು ಕಣ್ಣಿನ ಹುಡುಗ

17 Oct 2014

ಅವಳ ನೆನಪಲ್ಲಿ - 6

ಕಾಡುತ್ತಿರುವುದು ನಿನ್ನ ಕಣ್ಣು
ಕಾಡಿಗೆ ಹಚ್ಚಿದ ಮುದ್ದು ಕಣ್ಣು!
ಕಾಡುತ್ತಿರುವುದು ನಿನ್ನ ಮುಂಗುರುಳು
ಗಾಳಿಗೆ ಹಾರಿ ಹಾರಿ ಮುತ್ತಿಡುತ್ತಿದ್ದ ಮುಂಗುರುಳು!!

ನೆನಪಾಗುತ್ತಿದೆ ನಿನ್ನ ಗುಳಿಕೆನ್ನೆ
ಅ ನಿನ್ನ ಮುದ್ದು ಮದ್ದು ನಗು ನೋಡಲು!
ನೆನಪಾಗುತ್ತಿದೆ ನಿನ್ನ ಪುಟ್ಟ ಕೈಗಳು
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಜೊತೆಯಲ್ಲಿಡಿದು ನಡೆಯಲು!!

ಬರೆದು ಬಿಟ್ಟ ಕವಿತೆಯ ಸಾಲುಗಳಿವು
ಹೇಗೆ ನಿಡಲಿ ನನ್ನೊಲವಿನ ಹುಡುಗಿ ನಿನಗೆ!
ನೀನು ನನ್ನ ಜೊತೆಯಿಲ್ಲ;ನೀನು ಬಿಟ್ಟು ಹೋದ ನೆನಪಿದೆ
ಕಾಯುತ್ತಿರುವೆ ಹುಡುಗಿ ಕವಿತೆಯ ಬರೆದಿಟ್ಟುಕೊಂಡು!!
                                    ನಿನಗಾಗಿ..... ನಿನ್ನ ಪ್ರೀತಿಗಾಗಿ!!
                                                          -ಮಂಜುನಾಥ್

ಅವಳ ನೆನಪಲ್ಲಿ - 5

 ಬಸ್ಸಿನ ಮರೆಯಲ್ಲಿ ಮರೆಯಾಲಾಗದ
ನೆನಪುಗಳ ಮೆಲಕು ಹಾಕುತ್ತಿದ್ದೆ,
ನನ್ನ ಕಣ್ಣಿಗೆ ಕಂಡದ್ದು; ನೀನು
ಕುಳಿತ್ತಿದ್ದ ಅದೇ ಸೀಟು..

ನಾವು ಇಳಿದಿದ್ದ ಅ ಸ್ಟಾಪಿಗೆ,
ಬಸ್ಸು ಬಂದು ನಿಂತಿತ್ತು;
ದೇವಾಸ್ಥಾನದ ಪಕ್ಕವಿದ್ದ ಪಾರ್ಕ್ ಹಾಗೇ ಇದೆ,
ಅದರೆ ನನ್ನ ಪಕ್ಕವಿದ್ದ ನೀನು ಮರೆಯಾಗಿದ್ದೆ!

ನಾವಿಬ್ಬರು ನಡೆದು ಹೋಗುತ್ತಿದ್ದ ರಸ್ತೆಕೇಳಿತ್ತು ,
ಎಲ್ಲಿ ನಿನ್ನ ಹೂ ಹುಡುಗಿ ?!
ಈಗ ಅವಳು ನನ್ನ ಜೊತೆಯಿಲ್ಲ ; ಅದರೆ ,
ಬರುತ್ತಾಳೆ , ಬಂದೆ ಬರುತ್ತಾಳೆ ನನ್ನ ಹೂ ಹುಡುಗಿ ; ಎಂದೆ !!
ಕಾಡುವ ಪ್ರಶ್ನೆಗಳನ್ನು ಮನದಲಿಟ್ಟು ಕಾಯುತ್ತಿದ್ದೆನೆ ಹುಡುಗಿ.....
                                               ನಿನಗಾಗಿ....ನಿನ್ನ ಪ್ರೀತಿಗಾಗಿ !!!!
                         -ಮಂಜುನಾಥ್

8 Oct 2014

ಅವಳ ನೆನಪಲ್ಲಿ!

 ಮರೆಯಲ್ಲಿ ಮಾತಗುತ್ತೆ
ನೆನಪಲ್ಲಿ ಪ್ರೀತಿ ಹುಟ್ಟುತ್ತೆ
ದೂರದಲ್ಲಿದ್ದಳೆ ಅವಳು
ಅದಾರೂ ಹುಟ್ಟಿಸುತ್ತಾಳೆ ಅಮಲು!!

ಅವಳಿಗವನ ಹಾಡಿನ ಪಾಡು
ಇವಳಿಗವನ ಕಾಡಿಗೆ ಬೊಟ್ಟು
ಅವಳನ್ನು ಭಾವನೆಗೆ ಭರಿಸಿ ಬಣ್ಣ ಹಚ್ಚುತ್ತಾನೆ
ಅವನು ಬರೆಯುವ ಹಾಡಿಗೆ ಸ್ವರವಾಗುತ್ತಾಳೆ!!

ಅವನಿಗಲ್ಲಿ ಕಾಡೋ ಜ್ವರ
ಅವಳ ನೆನಪಲ್ಲೊ , ಆ ಮೈಯಲ್ಲೊ;
ಉಕ್ಕುವ ನೆನಪನ್ನು ಒತ್ತೆ ಇಟ್ಟು
ಅವನ ನೆನೆದಳು ಅವಳು!!
ನೆನಪು ನೆನಪಾಗೇ ಉಳಿದಿತ್ತು....
      (ರಾಜೇಶ್ ಶೆಟ್ಟಿಯವರ ಕವನಗಳ ಸ್ಪೂ ರ್ತಿಯಲ್ಲಿ)

25 May 2014

ಅವಳ ನೆನಪಲ್ಲಿ 4

ಚಂದಿರನ ಮೇಲೆ ಕುಳಿತ ರಾಣಿಯೂ ನೀನು, 
ಹೃದಯ ತುಂಬಿ ಪ್ರೀತಿಯ ಕೊಡಲು ನಿಂತ ಪ್ರೇಮಿ ನಾನು... ಅತೀತ್ತ ನೀ ನೋಡದಿರು ನನ್ನ ಕಂಗಳ ಬಿಟ್ಟು, 
ಚಂದಿರನನ್ನೇ ಮರೆತೇ ನಿನ್ನ ಕಂಗಳ ಹೊಲಪನ್ನ ನನ್ನ ಕಂಗಳಲ್ಲಿ ಇಟ್ಟು...

 ಜಗವನ್ನೇ ಸುತ್ತುವ ಆಸೆಯೂ ನಿನಗೆ, 
ಕೈ ಹಿಡಿದು ನಡೆಸುವಾಸೆ ನನಗೆ,
 ಮಗುವಂತೆ ನೋಡು ನೀ ನನ್ನ,
 ನಿರ್ಮಲವಾದ ಪ್ರೀತಿಯ ಕೊಡುವ ನಾ ಚಿನ್ನ...

ಬಯಸುವೆ ನನ್ನ ಜೀವನ ಹಾದಿಯುದಕ್ಕೂ ನಿನ್ನ,
 ಎಂದು ಉಸಿರ ಕಟ್ಟಿಸದಿರು ಮರೆತು ನನ್ನ. 
ಮನಸಿನಲ್ಲಿ ಇಟ್ಟು ನಿನ್ನ ನೋಡಿದರೆ ನಾನು, 
ಜಗತ್ತೇ ಸುಂದರವೆನಿಸುತ್ತಿದೆ ಇನ್ನ. 

ನೊವಲ್ಲು ನಾರುವೆ, ನಲಿವಲ್ಲು ನಾ ಬರುವೆ, 
ಜೊತೆ ಜೊತೆಯಾಗಿ ನಡೆದು ಸೇರುವ ನಾವಿಬ್ಬರು ದಡವನ್ಣ, ನಡುದಾರಿಯಲ್ಲಿ ಎಂದು ಕೈ ಬಿಡದಿರು ಎನ್ನ...
ನೀ ಬರುವ ದಾರಿಯಲ್ಲಿ ಕಾಯುತ್ತಿರುವೆ ಹುಡುಗಿ....
                                     ನಿನಾಗಾಗಿ...ನಿನ್ನ ಪ್ರೀತಿಗಾಗಿ...!!
    -ಮಂಜುನಾಥ್
close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →