Saturday, 27 September 2014

ಹುಣ್ಣಿಮೆಯ ನಿಶಬ್ಧ!

   ಒಂದು ನಿಚ್ಚಳ ಸುರ‍್ಯೂದಯದ ಬೆಳಗ್ಗೆ ಸುರ‍್ಯನಂತೆ ಪ್ರಜ್ವಲಿಸುತ್ತ ಪ್ರತಿಷ್ಠಿತ ಸಂಟ್ ಡೇವಿಡ್ ಕಾಲೇಜು ಮೆಟ್ಟಿಲೇರಿ ಬರುತ್ತಿದ್ದ ಯುವಕನ ಕಣ್ಣಾಲ್ಲಿ ಸಾವಿರ ಸಾವಿರ ಕನಸುಗಳಿದ್ದವು , ನಿರೀಕ್ಷೆಯಿತ್ತು , ಸಾದಿಸಬೇಕು ಎಂಬ ಹಂಬಲವಿತ್ತು.. ಪ್ರಿನ್ಸಿಪಾಲರ ಕ್ಯಾಬಿನ್ ಗೆ ಹೋದವನೆ ಆಪ್ಲೀಕೆಷನ್ ಫಾರಂ ಅವರ ಕೈಗಿಟ್ಟ..
  "ಹೆಸರು?" ಕೇಳಿದರು ಪ್ರಿನ್ಸಿಪಾಲ್ .
"ಅಪ್ಪ ಏನಿಟ್ಟನೋ ಗೋತ್ತಿಲ್ಲ , ಅಮ್ಮ ಹಿಮಾಂಶು ಅಂತ ಕರಿತಾಳೆ, ಜಗತ್ತು ಅನಾಥ ಅಂತ ಗುರುತುಸುತ್ತದೆ" ಯಾವುದೇ ದುಗುಡವಿಲ್ಲದೆ , ಒಂದೇ ಉಸಿರಿನಲ್ಲಿ ಒಂದಿಷ್ಟು ಯೋಚಿಸದೆ ಉತ್ತರಿಸಿದ ಹಿಮಾಂಶು.
 ಕುಳಿತ ಕುರ್ಚಿಯಲ್ಲೆ ಅಸಹನೆಯಿಂದ ಹಂದಾಡಿದ್ದರು ಪ್ರಿನ್ಸಿಪಾಲ್.. ಹೆಸರು-ಹಿಮಾಂಶು , ಜಾತಿ-ಮನುಷ್ಯ , ಅಪ್ಪ-ಗೊತ್ತಿಲ್ಲ , ಅಮ್ಮ-ಕಾಮಟಿಪುರದ ಕಾವೇರಿ ( ನಿಜವಾದ ಹೆಸರು ಹೇಳಿದ್ದರೆ ಪ್ರಿನ್ಸಿಪಾಲ ಬೆಚ್ಚಿಬಿಳುತ್ತಿದ್ದರೆನೋ... ಆ ಹೆಸರಿಗೆ ಅಷ್ಟು ಇತಿಹಾಸವಿತ್ತು , ನೆನಪಿತ್ತು , ಮೋಸವಿತ್ತು ) , ಕೆಲಸ-ಸೂ*ಗರಿಕೆ, ಸ೦ಬಳ- it depends!!     ತನ್ನ ಇಡೀ ಜೀವನದಲ್ಲೆ ಅಂತಹದೊಂದು ಆಪ್ಲೀಕೆಷನ್ ಫಾರಂ ಕಂಡಿರದ  ಪ್ರಿನ್ಸಿಪಾಲ ಅವನನ್ನ ನೋಡುತ್ತ ಬೆವತಿದ್ದರು..
  "character certificate ಎಲ್ಲಿ??" ತೀರಸ್ಕರದ ಧನಿಯಲ್ಲಿ ಕೇಳಿದರು  ಪ್ರಿನ್ಸಿಪಾಲ್.
 "No, I don't need it" ಅಂದಿದ್ದ ಹಿಮಾಂಶು
 "ಅಂದರೆ??" ಪ್ರಿನ್ಸಿಪಾಲ್ ಕಣ್ಣಗಾಲಿಸಿ ಕೇಳಿದ್ದ
 "ನನ್ನ characterಗೆ ಬೇರೆಯವರಿಂದ certificate ತೋಗಬೇಕಾಗಿಲ್ಲ, I am not here to impress anyone , ನನ್ನ character ಏನೆ೦ದು ನನಗೆ ಗೊತ್ತು , ನನ್ನ ಮಾತಿನಿಂದ ನೀವು ಬೇಸರಗೊಂಡರೆ i am helpless" ಯಾವುದೇ ಅಂಜಿಕೆಯಿಲ್ಲದೆ , ದುಗುಡವಿಲ್ಲದೆ ಸತ್ಯವನ್ನ ನುಡಿದಿದ್ದ ಹಿಮಾಂಶುವಿನ ಕಣ್ಣಲ್ಲಿ ಭರವಸೆಯ , ಸಾಧಿಸುವ ಬೆಳಕು ಕಾಣಿಸಿತು.  ಅವನ ಮಾತನ್ನು ನಿಶಬ್ದದಿಂದಲೇ ಆಲಿಸಿದರು ಪ್ರಿನ್ಸಿಪಾಲ್ , ಎರಡು ನಿಮಿಷ ನೀರವ ಮೌನ.. ಅದೆನನಿಸಿತೋ ಪ್ರಿನ್ಸಿಪಾಲರಿಗೆ " you are admitted , ನೀನು ಫೀ ಕೂಡ ಕಟ್ಟಬೇಕಿಲ್ಲ, ನಾನು scholorship ನೀಡ್ತೇನೆ" ಎಂದಿದ್ದರು... ಏನೋ ದೊಡ್ಡ ಗೆಲುವು ಸಾಧಿಸುತ್ತಾನೆ ಅಂತ ಪ್ರಿನ್ಸಿಪಾಲ್ಗೆ ಅನಿಸಿತ್ತು.. ಏನದು ಗೊತ್ತಿಲ್ಲ? , ಯಾವಾಗ ಉತ್ತರವಿಲ್ಲ , ಅದರೆ ನಿಜಕ್ಕೂ ಈತ ನಮ್ಮೆಲರಿಗಿಂತ ಎತ್ತರಕ್ಕೆ ಬೆಳೆಯುತ್ತಾನೆ ಮತ್ತು ತನ್ನ ಜೀವನದಲ್ಲೂ ಪ್ರಮುಖ ಪಾತ್ರವಯಿಸುತಾನೆಂದು ಪ್ರಿನ್ಸಿಪಾಲ್ ಕೂಡ ಊಹಿಸಿರಲಿಲ್ಲ.. ಹೆಸರು " Alexander ರಾಜನಾಥ ಚಟರ್ಜಿ" ಹಿಂದೂ-ಕ್ರಿಶ್ಯನ್ ದಂಪತಿಗೆ ಜನಿಸಿದ ಪ್ರಿನ್ಸಿಪಾಲ್ ಎರಡು ಮನೆತನದ ಹೆಸರು ಇಟ್ಟುಕೊಂಡು ವಿಚಿತ್ರವೇನಿಸಿದ..
                                                                    
                                                             *     *     *     *     *     *

        ಕಾಲೇಜು ಪ್ರಾರಂಭವಾಗಿತ್ತು ಹಿಮಾಂಶು ಬೇರೆ ವಿದ್ಯಾರ್ಥಿಗಳೊಂದಿಗೆ ಬೇರೆಯುತ್ತಿರಲಿಲ್ಲ , ಆತ ಯಾರು , ಎಲ್ಲಿಂದ ಬರುತ್ತಾನೆ , ಅಪ್ಪ-ಅಮ್ಮ , ಊಂ, ಯಾರಿಗೂ ಏನು ತಿಳಿದಿರಲಿಲ್ಲ ... ಹಿಮಾಂಶು ಕಾಲೇಜುನವರಿಗೆ ನಿಗೂಡನಾಗಿದ್ದ , ಒಬ್ಬನೆ ಕುರುತ್ತಿದ್ದ , breakನಲ್ಲೂ ಏನು ತಿನ್ನದೆ ಯಾವುದೋ  ಕಾದಂಬರಿಯನ್ನು ಓದುತ್ತಿರುತ್ತೆದ್ದ , ಐದು ದಿನಗಳಿಗೊಂದು ಹೊಸ ಕಾದಂಬರಿ , ಅಷ್ಟು ಓದುತ್ತಿದ್ದ ಹಿಮಾಂಶು , ವಾಲಿಬಾಲ್ ನಲ್ಲಿ ಕಾಲೇಜಿಗೆ ಕ್ಯಾಪ್ಟನ್ ಆಗಿದ್ದ , ಕೊರ್ಟನೊಳಗೆ ಕಾಲಿಟ್ಟರೆ ಹಸಿದ ಹೆಬ್ಬುಲಿಯಂತೆ ಬಡಬಡನೆ ಆಡುತಿದ್ದ , ಎಲ್ಲರೊಂದಿಗೂ ಬೇರೆಯುತ್ತಿದ್ದ ಆತ ಕೊರ್ಟನಿಂದ ಹೊರ ಬಂದರೆ ಅದೆ ನೀರಾವ ಮೌನ ಮತ್ತು ನಿಗೂಡತೆ ಅವರಿಸಿಕೊಳ್ಲುತ್ತಿತ್ತು.. ಹಿಮಾಂಶು ಯಾಕೆ ಹೀಗೆ ಅಂತ ಎಲ್ಲರಿಗಿಂತ ಹೆಚ್ಚು ತಲೆಕೆಡಿಸಿಕೊಂಡವಳು ಶಾಲಿನಿ.. ದೊಡ್ಡ ಶ್ರೀಮಂತರ ಮಗಳು ಇಡೀ ಕಾಲೇಜಿಗೆ ಗಾಡಿ ತರುತಿದ್ದ ಹುಡುಗಿ ಅವಳೊಬ್ಬಳೆ , ಕಪ್ಪು kinetic honda...

    ಕೈನಿಯಲ್ಲಿ ಬರುತ್ತಿದ್ದರೆ ಒಂದೀಡಿ ಹುಡುಗರ ಗುಂಪು ಬೆರಗಾಗಿ ನೋಡುತ್ತ ನಿಂತಿರುತಿದ್ದರು , ಅದೆಷ್ಟು ಪ್ರಪೋಸಲ್ ಬಂದಿತ್ತು ಶಾಲಿನಿಗೆ , ಲೆಕ್ಕವೆಯಿಲ್ಲ ಅದನ್ನ ಆಗೆ ಲೆಕ್ಕವೆಯಿಲ್ಲದಂತೆ ತೀರಸ್ಕರಿಸಿದ್ದಳು, ಹುಡುಗರ ಬಗ್ಗೆ ಆಸಕ್ತಿಯಿಲದ ಶಾಲಿನಿಗೆ ಅವತ್ತು ಹಿಮಾಂಶು ಬಗ್ಗೆ ಚಿಂತಿಸಿದ್ಲು.. ಮೊದಲ ಬಾರಿಗೆ ಯಾವುದೋ ಹುಡುಗನ ಬಗ್ಗೆ ಅದರಲ್ಲೂ ನಿಗೂಢತೆಯನ್ನು ಮೈಗೂಡಿಸಿಕೊಂಡಿದವನ ಬಗ್ಗೆ ಚಿಂತಿಸುತ್ತಿದಿನಿ ಎಂದು ಶಾಲಿನಿ ತನ್ನೊಳಗೆ ತಾನೆ ನಕ್ಕಳು! , ಆಗ್ಗೆ ಒಂದು ದಿನ ತೀರ ಬೊರಿಂಗ್ ಆದ ಕ್ಲಾಸ್ ನಂತರ ಹಿಮಾಂಶು ಬಳಿ ಹೋಗಿ "Let's have a cup of coffee, ಹಿಮು!!" , ಅಂದಿದ್ಲು , ಹಿಮು ತನ್ನ ಮನಸ್ಸಿಗೆ ತಿಳಿಯದೆ ಬಂದ ಪಧವಾ? ಅಥವಾ ಇಷ್ಟು ದಿನ ಮನಸ್ಸಿನಲ್ಲಿ ಅಡಗಿದ ಪ್ರೀತಿಯ ಮಾತ? ಆರೆ ನಾನೇಕೆ ಹಿಮು ಎಂದೆ?. ಯೊಚಿಸುವುದಕ್ಕು ಸಮಯ ಕೊಡದೆ ಅವಳ ಆಹ್ವನಕ್ಕೆ ಉತ್ತರ ನೀಡಿದ್ದ ಹಿಮಾಂಶು..

      "can you mind your own business " ಎಷ್ಟು ಆಹಂಕಾರ ಎಂದುಕೊಂಡಿದ್ದಲು ಶಾಲಿನಿ,

       "Look ಹಿಮಾಂಶು , ನೀನು ಒಬೊಂಟಿಯಾಗಿ ಇರುತಿಯಾಲ್ಲ ಅಂತ ನಾನು ಕಾಫಿಗೆ ಕರೆದದ್ದು ,ನಿನ್ನನ್ನ ಮೆಚ್ಚಿಸಿಲಿಕ್ಲ ಅಥವಾ ನನ್ನ ಜೊತೆ ಕಾಫಿ ಕುಡಿಯಲು ಯಾರು ಇಲ್ಲವೆಂದಲ್ಲ , ನಾನು ಕರೆದರೆ ನೂರಾರು ಹುಡುಗರು ತಲೆಮೆಲೊತ್ತು ರಾಣಿತರ ಕಾಫಿ ಡೇ ಕರೆದುಕೊಂಡು ಹೋಗ್ತರೆ" ಬಸುಗುಡುತ್ತ ಹೇಳಿದಳು ಶಾಲಿನಿ , ಅವಳ ಕೆನ್ನೆ ಕೆಂಪಾಗಿತ್ತು , ಕಣ್ಣು ಕೆಂಡಾಕರುತಿತ್ತು. ಇದನ್ನು ಹೇಳಿದವಳೆ ಮುಖ ತಿರುಗಿಸಿ ಹೊರಟು ಹೊದಳು.. ಇದನ್ನು ಕೇಳಿಸಿಕೊಂಡಿದ್ದ ಹಿಮಾಂಶುವಿನ ಕಣ್ಣಲ್ಲಿ ಯಾವುದೇ ಅಪರಾಧ ಮನೋಭವ ಇರಲಿಲ್ಲ , ಏನು ನಡೆದಿಲ್ಲವೆನೋ ಎಂಬಂತೆ ವಾಲಿಬಾಲ್ practice ನಲ್ಲಿ ತೋಡಗಿದ , ಅವನ ಮನೆ, ಎಲ್ಲಿಂದ ಬರುತ್ತನೆ ಎಂಬೂದು ಅವನಷ್ಟೆ ನಿಗೂಡವಾಗಿತ್ತು , ನಡೆದು ಬರುತ್ತಿದ್ದ , ಕೀಲೊ ಮೀಟರ್ ಕೀಲೊ ಮೀಟರ್‍ ಲೆಕ್ಕಿಸದೆ ನಡೆದುಬರುತ್ತಿದ್ದ , ಕಾಲೇಜಿಗೆ ಒಂದು ದಿನವೂ ರಜೆ ಹಾಕದೆ ಬರುತ್ತಿದ್ದ , ಒಬ್ಬರನ್ನೂ ಮಾತಡಿಸಿರಲಿಲ್ಲ ಶಾಲಿನಿಯನ್ನು ಬಿಟ್ಟು  "can you mind your own business " ಅನ್ನೊ ಮಾತನ್ನು ಬಿಟ್ಟು , ಅವನ ನಿಗೂಡತೆಯ ಬಗ್ಗೆ ಆಸಕ್ತಿ ಬೆಳೆಯುತ್ತಲೆ ಇತ್ತು , ಒಮ್ಮೆ ಹಿಮಾಂಶು ಕಾಲೇಜಿಗೆ ಬರದಿರುವುದು ಎಲ್ಲರಿಗೂ ಅಚ್ಚರಿಯಾಗಿತ್ತು , ನಂತರ ಕಾಲ ಉರುಳಿದಂತೆ ತಿಂಗಳು ತಿಂಗಳು ಕಳೆದಂತೆ ಎಲ್ಲರು ಗಮನಿಸಿದ್ದು ಒಂದೇ!! ಹಿಮಾಂಶು ಪೂರ್ತಿ ಚಂದ್ರನ ದಿನ ಅಂದರೆ "ಹುಣ್ಣಿಮೆಯ ದಿನ" ಕಾಲೇಜಿಗೆ ಬರುತ್ತಿಲ್ಲವೆಂದು , ಹಿಮಾಂಶು ಮತ್ತಷ್ಟು ನಿಗೂಡನಾದ , ಯಾರು ಏನೇ ಮಾತಡಿದರೂ ಕಣ್ಣಲ್ಲೆ ಉತ್ತರ , semester examನಲ್ಲಿ first ಬಂದರು ಕೂಡ ಅತನ ಮುಖದಲ್ಲಿ ನಗುವಿರದನ್ನು ಕಂಡು ಸ್ವತಃ ಪ್ರಿನ್ಸಿಪಾಲ್ ಕೂಡ ಅಚ್ಚರಿಪಟ್ಟರು. ಹಿಮಾಂಶು ನಮ್ಮೆಲ್ಲರಿಗಿಂತಲೂ ವಿಚಿತ್ರ ಮತ್ತು ವಿಶಿಷ್ಟತೆಯುಳ್ಳ ಒಳ್ಳ ಹುಡುಗನೆಂದುಕೊಂಡಳು ಶಾಲಿನಿ , ತನ್ನ ಮನಸ್ಸು ಹಿಮಾಂಶುವಿನ ಕಡೆ ವಾಲುತ್ತಿರುವುದೂ ಶಾಲಿನಿ ಕೂಡ ಅರ್ಥಮಾಡಿಕೊಂಡಿರಲಿಲ್ಲ... ಮತ್ತೊಂದು ಅಚ್ಚರಿಯಂದರೆ state level championshipಗೆ ಹಿಮಾಂಶು ಬರದೆ ಇದ್ದದ್ದು!! ಅವತ್ತು ಕೂಡ "ಹುಣ್ಣಮೆ"!!!  
                                                                                  (ಮುಂದುವರೆಯುತ್ತದೆ-to be continued)

No comments:

Post a Comment