Monday, 29 September 2014

ಹುಣ್ಣಿಮೆಯ ನಿಶಬ್ಧ ಭಾಗ-೨

    (ಮೊದಲ ಭಾಗದಿಂದ-ಕಾಲೇಜು ಪ್ರಾರಂಭವಾಗಿ ತಿಂಗಳು ಕಳೆದರು ಹಿಮಾಂಶು ಎಲ್ಲರಿಗೂ ನಿಗೂಢನಾಗಿದ್ದ.... ಹುಣ್ಣಿಮೆಯ ದಿನ ಕಾಲೇಜಿಗೆ ಬಾರದ ಹಿಮಾಂಶುವಿನ ಬಗ್ಗೆ  ಅನುಮಾನ ಮೂಡಿತ್ತು .... ತನಗೆ ತಿಳಿಯದೆ ಹಿಮಾಂಶುವಿನ ಕಡೆ ಶಾಲಿನಿಯ ಮನಸ್ಸು ವಾಲುತ್ತಿತ್ತು )
  ಹುಣ್ಣಿಮೆಯ ನಿಶಬ್ಧ ಮೊದಲ ಭಾಗ ಓದಲು ಇಲ್ಲಿ click ಮಾಡಿ.

 
      ಅವತ್ತು ಕೂಡ ಅಂತಹುದೇ ಒಂದು ಹುಣ್ಣಿಮೆಯ ದಿನ , ಇವತ್ತು ಹಿಮು ಬಂದಿರವಿಲ್ಲವೆಂದು ಶಾಲಿನಿಯ ಕಣ್ಣು ಹುಡುಗರ ಬೆಂಚಿನೆಡೆಗೆ ಹೋಗಿರಲಿಲ್ಲ...ಅವಳ ಪಕ್ಕದಲ್ಲಿದ್ದ ಪ್ರಾಥನ 'ಹಿಮಾಂಶು' ಬಂದಿದ್ದಾನೆಂದು ಉದ್ಗರಿಸಿದಳು..ಕ್ಲಾಸ್ ನಲ್ಲಿದ್ದ ಅಷ್ಟು ಜನರು ಹಿಮಾಂಶುನನ್ನು ದಿಟ್ಟಿಸಿ ನೋಡಿದರು , ಶಾಲಿನಿ ತಡೆಯಲಾಗದೆ "wow what a surprise, ಹಿಮು ಇವತ್ತು ನೀ ಬಂದಿದ್ಯಾ , ನಿನ್ನ ಹುಣ್ಣಿಮೆಯ ಕೆಲಸ ಮಾರೆತುಬಿಟ್ಯಾ"ವೆಂದು ವ್ಯಂಗ್ಯವಾಗಿ ಮಾತಾಡಿದ್ಳು... ಏನು ನಡೆದಿಲ್ಲ ಮತ್ತು ಯಾವುದೇ ಅಚ್ಚರಿಯಿಲ್ಲದೆ ಹಿಮಾಂಶು ಸಣ್ಣದೊಂದು ನಗೆ ಬೀರಿ ಸುಮ್ಮನಾಗಿದ್ದ
      ಹಿಮಾಂಶು ಪಕ್ಕದಲ್ಲಿ ಕುತ್ತಿದ್ದ ಚಿರಂತ್ "ಹಿಮಾಂಶು, ನೀನು ಎಲ್ಲಿರೋದು , ನೀನೇಕೆ ಇಷ್ಟು ನಿಗೂಡ , ಹುಣ್ಣಿಮೆ ದಿನ ಎಲ್ಲಿಗೆ ಹೊಗ್ತ್ಯ? ಯಾಕೋ ನಿನ್ನ ಮೇಲೆ ನನಗೆ ಅನುಮಾನ , ನೀನು ಏನೋ ಮಾಡ್ತಯಿದ್ಯ??!" ಎಂದು ಅನುಮಾನದಿಂದ ಕೇಳಿದ್ದ..   ಹಿಮಾಂಶು ಅವನನ್ನೆ ದಿಟ್ಟಿಸಿ ನೋಡಿದ, ಅವನ ಕಣ್ಣುಗಳಲ್ಲಿ ಏನೋ ಶಕ್ತಿಯಿದೆ ಎನಿಸಿದ ಚಿರಂತ್ ಗೆ ದಂಗುಬಡಿಸಿತ್ತು , ಭಯಗೊಂಡವನೆ ಅಲ್ಲಿಂದ ಎದ್ದುಹೋಗಿದ್ದ ಚಿರಂತ್ , ಆಗ ನಡೆಯುತ್ತಿದ್ದ ಕ್ಲಾಸ್ನಿಂದ ಅತ್ಯಂತ  ಭಯಗೊಂಡು ನಡುಗುತ್ತ ಹೋಡಿಹೋಗಿದ್ದ ಚಿರಂತ್ ರೋಡಿನಲ್ಲಿ ಯಾವುದೋ ಲಾರಿಗೆ ಸಿಕ್ಕು ಸತ್ತನೆಂಬ ಸುದ್ದಿ ಕಾಲೇಜಿನಲ್ಲಿ ಹರಿದಾಡಿತ್ತು..ಅವನ ಸಾವು ದಾರುಣವೇನಿಸಿದ್ದೆ ಇದಕ್ಕೆ..ತನ್ನ ಪಾಡಿಗೆ ಕಾಲೇಜು ರೋಡಿನ ಫುಟ್ ಬಾತ್ ಮೇಲೆ ಒಂದು ಸಿಗರೇಟ್ ಸೇದುತ್ತ ಏನೋ ಚಿಂತಿಸುತ್ತಿದ್ದ ಚಿರಂತ್ ಮೇಲೆ ಅತಿವೇಗವಾಗಿ ದನದ ಚರ್ಮವನ್ನು ಹೊತ್ತು ತರುತಿದ್ದ ಲಾರಿ ಬ್ರೇಕ್ ಫೇಲ್ ಆಗಿ ಯಾವುದೇ ಕಷ್ಟವಿಲ್ಲದೆ  ಚಕ್ರಗಳು ಅವನ ದೇಹದ ಮೇಲೆ ಅರಿದಿತ್ತು.. ರಕ್ತ ರೋಡಿನ ಇಕ್ಕೆಲಗಳಿಗು ಹರಿದಿತ್ತು , ಎದುರಿಗೆ ನಿಂತಿದ್ದ ಶಾಲಿನಿ ಗೆಳತಿ ಪ್ರಾರ್ಥನ ಮೇಲೆ ರಕ್ತ ಚಿಮ್ಮಿತ್ತು. ವಿಷಯ ತಿಳಿಯುತ್ತಿದಂತೆ ಕ್ಲಾಸಿನ ಅಷ್ಟು ಜನ ಓಡಿ ಬಂದಿದ್ದರು , ಹಿಮಾಂಶುವನ್ನ ಹೊರತುಪಡಿಸಿ... ಕಾರಣವಿಲ್ಲದೆ ಸತ್ತು ಹೋಗಿದ್ದ ಚಿರಂತ್. ಹಿಮಾಂಶು ಆ ಹುಣ್ಣಿಮೆಯ ದಿನ ಬಂದಿದ್ದಕ್ಕು ಒಂದು ಕಾರಣವಿತ್ತು!!!
                                                    * * *    * * *    * * *
     ಆಗ ತಾನೆ ಬಿದ್ದಿದ್ದ  ಅಲ್ಪ ಮಳೆ ಭಾನುವಾರದ ಸಂಜೆಯನ್ನು ಮತ್ತಷ್ಟು ತಂಪುಗೊಳಿಸಿತ್ತು , ಆ ನಿಚ್ಚಳ ಸಂಜೆಯನ್ನು enjoy ಮಾಡುತ್ತ ಹೋಗುತ್ತಿದ್ದ ಹಿಮಾಂಶು, ಶಾಲಿನಿಯ ಕಣ್ಣಗೆ ಬಿದ್ದಿದ್ದ..  ಬ್ಲೂ ಜಿಂನ್ಸ್ ಮೇಲೆ ಬಿಳಿ ಜುಬ್ಬ ಧರಿಸಿ , ಕ್ರಾಪ್ ತೆಗದ ತಲೆ , ಮುಗ್ಲ್ನಗೆ ಬಿರುತ್ತಿದ್ದ ತುಟಿಗಳು , ತಣ್ಣನೆಯಾ ಪ್ರಶಾಂತವಾದ ಕಣ್ಣಗಳು , ಇದೆ ಮೊದಲ ಬಾರಿಗೆ ಇಷ್ಟು ಸುಂದರವಾದ ಹಿಮಾಂಶುನನ್ನು ಮೊದಲ ಬಾರಿಗೆ ನೋಡಿದ್ದಳು ಶಾಲಿನಿ , ತಡೆಯಾಲಾಗದೆ ತನ್ನ ಕೈನಿಯನ್ನು ಹಿಮುವಿನ ಕಡೆ ತಿರುಗಿಸಿದಳು.
   ಶಾಲಿನಿ, ಹೇಳಿಮಾಡಿಸಿದ ದುಂಡನೆಯ ತಲೆಗೆ ಬಿಗಿಯಾಗಿ ಕಟ್ಟಿದ ತುರುಬು , ಅದರ ಹಿಂಬದಿಗೊಣದು ಚಿಟ್ಟೆಯಾ ಕ್ಲಿಪ್ , ಉತ್ತರಾಷಡದ ಮಳೆಯಂತೆ ಹೊಳೆಯುವ ವಜ್ರದ ಹರಳಿನ ಬೆಂಡೋಲೆ , ಅವಳ ಬಿಳಿ ಬಿಂದಿ, ಆ ನಗು ಹಿಮಾಂಶುನನ್ನು ಹೊಟ್ಟೆಕಿಚ್ಚಿಸುತ್ತಿತ್ತು..
  ಕೈನಿಯನ್ನು ನಿಲ್ಲಿಸಿದವಳೆ "hi" ಅಂದಿದ್ಲು.
 ಒಂದು ತೆಳುವಾದ ನಗೆ ಬೇರಿದ್ದ ಹಿಮಾಂಶು.
 "where are you going handsome " ಎಂದು ಕಿಲಕಿಲ ನಕ್ಕಿದ್ಲು.
 "ನಿನ್ನಷ್ಟು ಸುಂದರವಾಗೆನಿಲ್ಲ ನಾನು ,  i am just a normal man , ನೀನು ಸುಂದರಿ " ಎಂದಿದ್ದ ಅವನು  ಅವಳ ನಗುವನ್ನು ಕಣ್ತುಂಬ ತುಂಬಿಕೊಂಡ.
"ಹಿಮು , is that you talking   ನಿನಗೆ ಮಾತಡಕ್ಕೂಡ ಬರುತ್ತ " ಎಂದು ಅಚ್ಚರಿ ಪಟ್ಟಿದ್ದಳು ಶಾಲಿನಿ.
" ಅವತ್ತು ನಾನು ಹಾಗೆ ಮಾತಡಿರಬಾರದಿತ್ತು I'm sorry ಶಾಲಿನಿ " ಎಂದು ವಿನಂತಿಸಿಕೊಂಡ.
"chill ಹಿಮು ಅದ್ಯಾವುದನ್ನು ನಾನು ಮನಸ್ಸಿನಲ್ಲಿಟ್ಟುಕೊಂಡಿಲ್ಲ , at least ಇವತ್ತಾದರೂ ನಿನ್ನ ಜೊತೆ ಕಾಫಿ ಕುಡಿಬಹುದ?? " ಎಂದಳು .
"off course " ಎಂದವನೇ ಅಲ್ಲೆ ಪಕ್ಕದಲ್ಲಿದ್ದ ಕಾಫಿ ಡೇಗೆ ಕರೆದ್ಹೊದ..
"Thanks a lot Himu , its getting late I'll meet you tommorow " ಎಂದವಳೆ ತನ್ನ ಕೈನಿಯನ್ನು ಯಾವತ್ತು ಇಲ್ಲದ ಸಂತೋಷದಲ್ಲಿ ಓಡಿಸುತ ಹೋದಳು ಶಾಲಿನಿ , ಹಿಮುನನ್ನ ಮನಸ್ಸಿನಲ್ಲಿಟ್ಟುಕೊಂಡು.
                                                        *   *   *   *   *   *   *

      ಬೆಂಗಳೂರಿನಿಂದ ಭಬನೆಶ್ವರ ತಲುಪುತಿದ್ದ ಟ್ರೇನ್ ನಂ.೧೮೪೬೪ ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಇಂದಿನ ಆ ಪ್ರಶಾಂತತೆ ಇರಲಿಲ್ಲ , ಅಷ್ಟು busy ಹಾಗಿದ್ದ ಟ್ರೇನ್ ಕ್ರಮೇಣ ತನ್ನ ಪ್ರಯಣಿಕರು ಕಡಿಮೆಯಾಗುತ್ತಿರುವುದನ್ನು ನಿಶಬ್ಧದಿದಂದಲೆ ಗಮನಿಸಿತ್ತು , ಇದಕ್ಕಿಂತ ಹೆಚ್ಚು ತಲೆಕೆಡಿಸಿಕಂಡಿದ್ದು ಒಂದೀಡಿ ಪೋಲಿಸರ ದಂಡು.. ಬೆಂಗಳೂರು , ಅಂಧ್ರ ಮತ್ತು ರೈಲ್ವೆ ಪೋಲಿಸರು ... ಪ್ರಶಾಂತತೆ ಕೂಡಿದ್ದ ಪ್ರಶಾಂತಿ ಎಕ್ಸಪ್ರೇಸ್ ಬೆಂಗಳೂರು ಸಿಟಿ ಜಂಕ್ಷನ್ ಬಿಟ್ಟು ಕಂಟೋನ್ಮೇಟ್ , ಯಲಹಂಕ , ಗೌರಿಬಿದನೂರು ಡಾಟುತ್ತಿದಂತೆ ಕರ್ನಾಟಕ- ಅಂಧ್ರ ಗಾಡಿಯಾದ ಹಿಂದುಪುರದಲ್ಲಿ ಸಂಭವಿಸುತ್ತಿದ್ದ ಸಾವು ಮಧ್ಯವಯಸ್ಕ ಹೆಣ್ಣುಮಕ್ಕಳೆ ಸಾಯುತ್ತಿದ್ದದ್ದು ಮತ್ತಷ್ಟು ಆತಂಕಗೊಳ್ಳುವಂತೆ ಮಾಡಿತ್ತು ಬೆಂಗಳೂರು ಪೋಲಿಸರಿಗೆ.... ಇದರೊಂದಿಗೆ ರೈಲು   ಕರ್ನಾಟಕ ಗಡಿ ದಾಟಿ ಸತ್ಯಸಾಯಿಬಾಬನ ಆಶ್ರಮ ಬಿಟ್ಟು ದಾರ್ಮವಾರಂ ಜಂಕ್ಷನ್  ತಲುಪಿ ಇನ್ನೆನು ಅನಂತಪುರ ಸಮೀಪಿಸಬೇಕು ಅನ್ನುವಷ್ಟರಲ್ಲೆ ಬಿಳುತ್ತಿತ್ತು ಮತ್ತೊಂದು ಹೆಣ , ೧೧೦kmನ ಹಿಂದುಪುರ ಮತ್ತು ೨೨೦kmನ  ದಾರ್ಮವಾರಂ  ಮತ್ತು ಅನಂತಪುರ ಜಂಕ್ಷನ್ ನಡುವೆ....

 ಪ್ರತಿ ಅದಿನೈದು ದಿನಕ್ಕೊಮ್ಮೆ ಸಂಭವಿಸುತ್ತಿದ್ದ ಈ ಸಾವು ಪೋಲಿಸ್ ಇಲಾಖೆಯ ಪ್ರಮುಖರನ್ನು ನಿದ್ದೆಗೆಡಿಸಿತ್ತು , ಎರಡು ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳ ತಂಡವನ್ನು ಕಟ್ಟಿ ಕಾರ್ಯಚರಣಕ್ಕೆ ಇಳಿಸಲಾಯಿತು.. ಹಿಂದುಪುರದ assistant commissioner vinciet ಅತ್ಯಂತ ಕ್ಲಷ್ಟವಾದ ಈ ಕೇಸ್ನ ನೇತೃತ್ವವಾಯಿಸಿದರು , ಬರ್ಬರ ಹತ್ಯಗಳ , ಸಾಲು ಸಾಲು ಕೊಲೆಗಳ ಜಾಡು ಇಡಿದು ಹೊರಟರು... ಅ ಎಲ್ಲಾ ಕೊಲೆಗಳು ಒಂದೇರೀತಿಯಾಗಿತ್ತು..ಕತ್ತನ್ನು ಕುಯ್ದು ಗಂಟಲ ಭಾಗವನ್ನು ಹೊತ್ತು ಹೊಯುತ್ತಿದ್ದರು ಹಂತಕರು... ವಿಚಾರಣೆ ಕೈಗೆತ್ತಿಕೊಂಡ ಕೇಲವೆ ದಿನದಲ್ಲಿ hint ಸಿಕಿದ್ದ ಖುಷಿಯಲ್ಲಿದ್ದ AC Vincient , commissioner  ಬಳಿ ಹೊದವರೆ..
 "sir ,  we got a hint , ಹಂತಕರು ಬೆಂಗಳೂರಿನವರೆ ಮತ್ತು ಬೆಂಗಳೂರಿನಲ್ಲಿ ಪ್ರಶಾಂತಿ ಎಕ್ಸಪ್ರಸ್ ಟ್ರೇನ್ ನಂ.೧೮೪೬೪ ಹತ್ತುತ್ತಿದ್ದವರೆ ಕೊಲೆಯಾಗುತ್ತಿದ್ದರು Sir, I need a full force ನಮ್ಮ ಮತ್ತು ಬೆಂಗಳೂರು ಪೋಲಿಸರು ಮಫ್ತಿಯಲ್ಲಿ  ಕಾರ್ಯಚರಣೆ ನಡೆಸಿದರೆ we can trap them " ಅಂತ ವರದಿನೀಟಿದ್ದ ...
 ಯಾವುದೇ ಮರು ಯೊಚನೆ ಇಲ್ಲದೆ "go ahead ಅಂದಿದ್ದರು " commissioner  ಎಂ , ಎನ್ , ಪ್ರಕಾಶ್ ನಾಯ್ಡು..
ಎಲ್ಲದಕ್ಕಿಂತ ಅತಿ ಪ್ರಮುಖವಾಗಿ  assistant commissioner viencient  ಗಮನಿಸಿದ್ದು....ಮದ್ಯವಯಸ್ಕ ಹೆಣ್ಣುಮಕ್ಕಳೆ ಹಂತಕರ ಟಾರ್ಗೆಟ್ ಅಗಿತ್ತು ಮತ್ತು ಈ ಸರಣಿ ಕೊಲೆ ನಡೆಯುತ್ತಿದೂ ಕೂಡ ಹುಣ್ಣಿಮೆಯ ದಿನದಂದೆ..
                                                                 (ಮುಂದುವರೆಯುತ್ತದೆ-to be continued)

No comments:

Post a Comment