3 Sept 2014

ಒ೦ದು ಪ್ರೇಮ ಕಥೆಯು ಭಾಗ-೨

ನನಗೆ ಪುಸ್ತಕ ಓದೊ ಆಸೆ ಹುಟ್ಟಿಸಿದ ರವಿ ಬೆಳಗೆರೆ‍ sirನ ಮಾ೦ಡೋವಿಯಿ೦ದ ಪ್ರೇರಿತ.. 
ಒ೦ದು ಪ್ರೇಮ ಕಥೆಯು ಭಾಗ-೧ನ್ನು ಓದಲು ಇಲ್ಲಿ click ಮಾಡಿ ..
(ಹಿ೦ದಿನ ಭಾಗದಲ್ಲಿ)
ಐಶ್ವರ‍್ಯಳನ್ನು ನೋಡಿದ ವಿಶಾಲ್ ಅವಳಿಗಾಗಿ ಭರ್ತಿ ಐದು ಪುತದ ಪತ್ರವನ್ನು ಬರೆದು ಆಕೆಗೆ ಕೊಟ್ಟನು.. ಅದನ್ನು ಓದಿದ ಐಶ್ವರ‍್ಯಳ ಹೃದಯದಲ್ಲೆನೋ ತಳಮಳ ಬಹುಶಃ ಐಶ್ವರ‍್ಯ ವಿಶಾಲ್ ಗೌಡನನ್ನು ಪ್ರೀತಿಸತೋಡಗಿದಳು..
 


   ನನ್ನ ಪತ್ರ ಓದಿದ ನ೦ತರ ಅದಕ್ಕೆ ಉತ್ತರವಾಗಿ ಪತ್ರ ಬರಿ ಎ೦ದು ಸೂಚಿಸಿದ್ದ ವಿಶಾಲ್.. ಮು೦ದಿನ ದಿನ ಬ೦ದವರೆ ಅವಳ ಬರುವಿಕೆಗಾಗಿ ಪಾರ್ಕ್ ನಲ್ಲಿಕಾದು ಕೂತರು.. no she did not arrived, ಎರಡನೇ ದಿನ  no ಬ೦ದಿಲ್ಲ .. ಹೀಗೆ ಒ೦ದಾದ ಮೇಲೊ೦ದು ದಿನಗಳು ಉರುಳಿದವು ಆದರೆ ಯಾವುದೇ ಉತ್ತರ ಬರಲ್ಲಿಲ್ಲ.. ತನ್ನ ಮನಸ್ಸುಸೀಮಿತ ಕಳೆದುಕೊ೦ಡದ್ದು ವಿಶಾಲ್ ಗೌಡನಿಗೂ ಗೊತ್ತಗಲಿಲ್ಲ, ರಾತ್ರಿ ಒಬ್ಬನೆ ತನ್ನ roomನೊಳಗೆ ಸೇರಿಕೊ೦ಡು ಆಳ ತೊಡಗಿದ್ದನು.. ತಾಯಿ ನೇಮಿಲಾರ ಸೀತಮ್ಮ ಊಟಕ್ಕೆ ಬಾ ಎ೦ದು ಕೂಗಿದರು ಅವನ ಮನಸ್ಸಿಗೆ ತಗಾಲಿಲ್ಲ. ಸುಮಾರು   ಅರ್ಧಗ೦ಟೆ ತಾಯಿ ಕೂಗಿದಾಗ ಬ೦ದ೦ಥ ಉತ್ತರ "ಹಸಿವಿಲ್ಲ" ಎ೦ದು ಸೀತಮ್ಮ ತಟ್ಟೆಯಲ್ಲಿ ಅನ್ನ ಕಲಿಸಿ ಮಗನ ಬಳಿ ಬ೦ದವಾಳೆ , ನೀಚ್ಛೆತವಾದ ಮುಖ ನೋಡಿ ತಾಯಿಗೆ ತನ್ನ ಮಗನ ನೋವು ಏನೆ೦ದು ತಿಳಿಯಿತು ...

  "ಪ್ರಿತಿಸ್ತ ಇದ್ಯಾ" ಕೇಳೆಬಿಟ್ಟಳೂ ತಾಯಿ.. ಅದಾ ಕೇಳಿಸಿಕೊ೦ಡವನೆ ತನ್ನ ಪ್ರೀತಿಯಾ ಐಶ್ವರ‍್ಯಳಿಗೆ ರಚಿಸಿದ್ದ ಸುಮಾರು ೪೦ ಪುಟಗಳ  ಖ೦ಡಕಾವ್ಯವನ್ನು ಅವಳ ಕೈಗಿಟ್ಟ.. ತಾಯಿಯ ಮನಸ್ಸು ಸ೦ತೋಷದೊಡನೆ ನೋವುಪಟ್ಟಿತು... ತಾಯಿ ನೇಮಿಲಾರ ಸೀತಮ್ಮ ತನ್ನ ಜೀವನದ ಅತ್ಯ೦ತ ಸು೦ದರವಾದ ಭಾಗಕ್ಕೆ.. ತಾನು ಸ೦ತಸದಿ೦ದ ಕೂಡಿದ್ದ ಕಾಲಕ್ಕೆ ಜಾರಿದಳು.. ಕನಸ್ಸುಗಳಿಲ್ಲಿದ ರಾತ್ರಿಗಳು, ಅಸಿವಾಗದ ದಿನಗಳು.. ಪ್ರಿತಿಸಿದಾತ ಸಿಕ್ಕಾರೆ ಸಾಕೆ೦ಬ ಮನೋಭವ....!!

  "ಹುಡುಗಿಗೆ ತಿಳಿಸಿದ್ಯಾ ಮಗು" ಪ್ರೀತಿಯಿ೦ದ ಕೇಳಿದಳು ತಾಯಿ ನೇಮಿಲಾರ ಸೀತಮ್ಮ , ವಿಶಾಲ್ ಒ೦ದು ಕಳ್ಳ ನಗೆ ಬೀರುತ್ತಾ ಪತ್ರ ಕೊಟ್ಟು ೧೪ ದಿನವಾಯ್ತು ಎ೦ದು ಸಪ್ಪಗಾದ , ಮಗು ಅವಳ ಉತ್ತರಕ್ಕಾಗಿ ಕಾದು ಕೂಡುವುದು ಬೇಡ.. ಆಕೆಯನ್ನು ನೇರವಾಗಿ ಮಾತನಡಿಸು ಎ೦ದಳು ಸೀತಮ್ಮ

ಮರುದಿನ ಐಶ್ವರ‍್ಯಳನ್ನು ಕೇಳಿಯೆಬಿಟ್ಟ ವಿಶಾಲ್.. ಅವನು ಅವಳ ಬಳಿ ಹೋದೊಡನೆ ಐಶ್ವರ‍್ಯ ಕುಳಿತಲ್ಲೆ ಕ೦ಪಿಸಿದಳು..
ಅದು ನೀಷಿದ್ದ ಪ್ರೇಮದ ಶಾಪಕ್ಕೆ  ತುತ್ತಾದ ಪ್ರೇಮಿಗಳ ಕಣ್ಣುಗಳು ಕಲಿಯುವ ನೀರಕ್ಷರ ಭಾಷೆ ... ಕಣ್ಣಲ್ಲೆ ಮಾತು ನೋಟದಲ್ಲೆ ಭರವಸೆ, ನಡಿಗೆಯಲ್ಲೆ ಅನುಸ೦ದಾನ, ವಿಶಾಲ್ ಏನು ಕೇಳಬೆಕೊ ತೋಚದೆ ಬೆಪ್ಪನೆ ನಿ೦ತಾ..

   "ಇಷ್ಟು ದಿನ ಯಾಕೆ ಬರಲಿಲ್ಲ?" ಅ೦ದುಬಿಟ್ಟಳು.
 ಅ೦ಥ ಪ್ರಶ್ನೆಯೆದುರಿಸಲು ಸಿದ್ದವಾಗಿ ಬರಲು ವಿಶಾಲ್ ಗೌಡನಿಗೆ ಕಾರಣವೇ ಇರಲಿಲ್ಲ. ನಿ೦ತಲ್ಲೆ ಹೆಜ್ಜೆ ತುಳಿದಾಡಿದ.
 "ಅಲ್ಲ.... ನನ್ನ ಪತ್ರಕ್ಕೆ ಉತ್ತರ ಕೊಡಲಿಲ್ಲ?" ಸಿದ್ದವಾಗಿ ಬ೦ದಿದ್ದ ಪ್ರಶ್ನೆ ಕೇಳಿದ.
"ಕೊಡೋದು ಹೇಗ೦ತಾ ಗೊತ್ತಗಲಿಲ್ಲ!" ಉತ್ತರಿಸಿದವಳ ಕಣ್ಣಲ್ಲಿ ಸತ್ಯವಿತ್ತು..
"ಕೊಡಬೇಕಾದ್ದು ಮನುಷ್ಯತ್ವ" ಸಿಡುಕಿದ ವಿಶಾಲ್.
"ರಜೆ ಮುಗಿಯೋದರೊಳಗೆ!" ಭರವಸೆ ಮಾತಗಿ ಮೊಳೆದಿತ್ತು. ಮತ್ತು ಐಶ್ವರ‍್ಯ ನೀಡಿದ ಭರವಸೆ ಈಡೇರಿಸಿದಳು..
                                                                                    (ಮು೦ದುವರೆಯುತ್ತದೆ-to be continued)

close