Wednesday, 8 October 2014

ಅವಳ ನೆನಪಲ್ಲಿ!

 ಮರೆಯಲ್ಲಿ ಮಾತಗುತ್ತೆ
ನೆನಪಲ್ಲಿ ಪ್ರೀತಿ ಹುಟ್ಟುತ್ತೆ
ದೂರದಲ್ಲಿದ್ದಳೆ ಅವಳು
ಅದಾರೂ ಹುಟ್ಟಿಸುತ್ತಾಳೆ ಅಮಲು!!

ಅವಳಿಗವನ ಹಾಡಿನ ಪಾಡು
ಇವಳಿಗವನ ಕಾಡಿಗೆ ಬೊಟ್ಟು
ಅವಳನ್ನು ಭಾವನೆಗೆ ಭರಿಸಿ ಬಣ್ಣ ಹಚ್ಚುತ್ತಾನೆ
ಅವನು ಬರೆಯುವ ಹಾಡಿಗೆ ಸ್ವರವಾಗುತ್ತಾಳೆ!!

ಅವನಿಗಲ್ಲಿ ಕಾಡೋ ಜ್ವರ
ಅವಳ ನೆನಪಲ್ಲೊ , ಆ ಮೈಯಲ್ಲೊ;
ಉಕ್ಕುವ ನೆನಪನ್ನು ಒತ್ತೆ ಇಟ್ಟು
ಅವನ ನೆನೆದಳು ಅವಳು!!
ನೆನಪು ನೆನಪಾಗೇ ಉಳಿದಿತ್ತು....
      (ರಾಜೇಶ್ ಶೆಟ್ಟಿಯವರ ಕವನಗಳ ಸ್ಪೂ ರ್ತಿಯಲ್ಲಿ)

No comments:

Post a Comment