12 Dec 2014

ಹುಣ್ಣಿಮೆಯ ನಿಶಬ್ಧ ಕೊನೆಯ ಭಾಗ!

 " ಹಿಮು, ನನ್ನ ಜೊತೆ ಜೀವನ ಪೂರ್ತಿ ಇರುತ್ತಿಯಾ?" ಶಾಲಿನಿ ತನ್ನ ಮೌನ ಮುರಿದು ಈ ಮಾತು ಹೇಳುತ್ತಿದಂತೆ ಸ್ತಂಭಿಭೂತನಾಗಿ , ಅಚ್ಚರಿಯಾಗಿ , ರೊಮಾಂಚನವಾಗಿ ಶಾಲಿನಿಯನ್ನು ನೋಡುತ್ತಾ ನಿಂತುಬಿಟ್ಟ.

    ಆಗ ರಾತ್ರಿ 10 ಗಂಟೆ!

    ಹುಣ್ಣಿಮೆಯ ಚಂದ್ರ ತನ್ನ ಸೌಂದರ್ಯವನ್ನು ಕೇವಲ ಮಲ್ಲೇಶರಂನ 7ನೇ ಕ್ರಾಸ್‌ನ ಆ ಮನೆಯ ಮೇಲೆಯೆ ಬೀರುತ್ತಿದ್ದನೆನೋ ಎಂದು ಭಾಸವಾಗುತ್ತಿತ್ತು. ಅದು ಡಿಸೆಂಬರ್‌ನ ಆರಂಭದ ದಿನಗಳು ಚಳಿ ಮೈ ಕೊರೆಸುತ್ತಿತ್ತು . ಬೆಳಗ್ಗೆಯಿಂದ ಗಿಜಿಗುಡುತ್ತಿದ್ದ ಮಲ್ಲೇಶರಂನ ರಸ್ತೆಗಳು ಶಾಂತವಾಗಿತ್ತು , ಸಂಪಿಗೆ ಹೂವಿನ ಘಮ ಮುಗಿಗೆ ನಾಟುತ್ತಿತ್ತು , ಅಲ್ಲಿ ಶಾಲಿನಿ-ಹಿಮುವಿನ ನಡುವೆ ಮೌನ ಮಾತಡಿತ್ತು , ತನ್ನ ನಗುವಿನಲ್ಲೆ ,ಕಣ್ಣಲ್ಲೆ ಒಪ್ಪಿಗೆ ಸೂಚಿಸಿದ್ದ ಹಿಮಾಂಶು.

   ಆಗ ಶಾಲಿನಿಗೆ ನೆನಪುಗಳ ಸೊನೆಮಳೆ ಬಂದಂತ್ತಿತ್ತು . ಸೇಂಟ್‌ ಡೇವಿಡ್‌ ಕಾಲೇಜಿನಲ್ಲಿ ಮೃದುವಾದ ಕಣ್ಣುಗಳಲ್ಲಿ ಆಸೆಯನ್ನು ಹೊತ್ತು ಬಂದಿದ್ದ ಹಿಮಾಂಶು ನೆನಪಾದ , " can you mind your own work " ಅಂತ ರೇಗಿದ್ದ ಹಿಮಾಂಶು ನೆನಪಾದ, ಸ್ಯಾಂಕಿ ರಸ್ತೆಯ ಬದಿಯಲ್ಲಿ ಕಾಫಿ ಕೊಡಿಸಿದ್ದ ಹಿಮು ನೆನಪಾದ , ನಲ್ಲಮಲ ಅರಣ್ಯದ ಅ ಕತ್ತಲಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ ಪ್ರೀತಿಯ ಹಿಮು ನೆನಪಾಗಿಬಿಟ್ಟ . ಶಾಲಿನಿಯ ಮನಸ್ಸು ಒಮ್ಮೆಲೆ ತುಂಬಿ ಬಂದಿತ್ತು . 96 ದಿನಗಳಿಂದ ನೋಡದೆ ಅವನನ್ನು ಪ್ರೀತಿಸಿದ ಹಿಮಾಂಶು ಪಕ್ಕದಲ್ಲಿದ್ದಾನೆ . ಅವಳ ಕಣ್ಣುಗಳಲ್ಲಿ ಪ್ರೀತಿ ಬೆರೆತ ಆಶರ್ಯ!!

   ಶಾಂತವಾದ ಆ ರಸ್ತೆಯಲ್ಲಿ ಮೌನ ಮಾತಾಗಿ , ಮಾತು ಪ್ರೀತಿಯಾಗಿ ಹಿಮಾಂಶುವಿನ ಹೆಗಲ ಮೇಲೆ ತನ್ನ ತಲೆಯಿಟ್ಟು  ಶಾಲಿನಿ ಕನಸ್ಸಿನ ಕೋಟೆ ಕಟ್ಟತ್ತ ಅವರಿಬ್ಬರು ನಡೆಯುತ್ತಾ ನಡೆಯುತ್ತಾ ಕನಸ್ಸಿನ ಕೋಟೆಯೊಳಗೆ ಕಣ್ಮರೆಯಾಗಿ ಬಿಟ್ಟರು.
   ಕಾಲ ಸ್ತಬ್ಧವಾಯ್ತು!! ಹುಣ್ಣಿಮೆಯಲ್ಲಿ ನಿಶಬ್ಧ ಅವರಿಸಿತು.....

                                        ******************************

  ಸುಬ್ಬಮ್ಮನೆಂಬ ಅತಿ ಕ್ರೂರ ಮಾಟಗಾತಿ ತನ್ನ ಶಕ್ತಿ , ಸಾಧನೆಯಾದ ಕಾಮಕರ್ಣ ಪಿಶಾಚಿಯನ್ನು ಬಳಸಿ ಸರ್ವನಾಶಕ್ಕೆ ಅಣಿಯಾಗಿ , ಆಲ್ಗೆಜಂಡರ್‌ ರಾಜನಾಥ ಚಟರ್ಜಿ ನಾಶಕ್ಕೆ ನಿಂತಾಗ ಕರ್ಣ ಪಿಶಾಚಿ ಕೋಪಗೊಂಡಿದ್ದಳು . ಅದು ಕರ್ಣ ಪಿಶಾಚಿಯ ಸಾಧನೆಯ ವಿರುದ್ಧದ ಬಳಕೆ . ಬೆಂಗಳೂರು ತಲಘಟ್ಟಪುರದ ಸ್ಮಶಾನದಲ್ಲಿ ಮಾಟಗಾತಿ ಪೂಜೆ ಆರಂಭಿಸಿದರೆ ಪ್ರಶಾಂತಿನಿ ಅದೆಲ್ಲೊ ದೂರದಲ್ಲಿ ಕೊಲೆ ಮಾಡುವ ಹೊತ್ತಿಗೆ ಕರ್ಣ ಪಿಶಾವಿನಿ ತಿರುಗಿ ಬಿಳುತ್ತಾ ಬಂದಳು ಅದರ ಜೊತೆಗೆ ಕರೀಂ ಬಾಬಾ ಎಂಬ ಮುಸ್ಲಿಂ ಮಾಂತ್ರಿಕ ಸೇಡಿಗಾಗಿ ಆತೊರೆದ . ಸುಬ್ಬಮ್ಮ ಯಾರದೋ ಸರ್ವನಾಶಕ್ಕೆ ನಿಂತವಾಳು ಅವಳ ಸರ್ವನಾಶಕ್ಕೆ ಬೇರೊಬ್ಬರು ನಿಂತಿದಿದ್ದಾರೆಂನುದು ಮರೆತೆ ಬಿಟ್ಟಳು . 8ನೇ ವಾರದಲ್ಲಿ ಸುಬ್ಬಮ್ಮನ ಅಷ್ಟು ಬಲವು ಉದುಗಿ ಹೋಗಿತ್ತಿತ್ತು.
                                                               *  * *
   
    ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್‌  ತನ್ನ ಇಂಜಿನ್‌ ಆನ್‌ ಮಾಡಿಕೊಂಡು ಡಿಸೇಂಬರ್‌ನ ಚಳಿಯಲ್ಲಿ ಸಾಧಾರಣ ಎನ್ನಿಸುವಷ್ಟು ಪ್ರಯಾಣಿಕರನ್ನು ಬೆಂಗಳೂರಿನಿಂದ ಹೊತ್ತೊಯ್ತಿತ್ತು . ಆ ಕೊಲೆಗಳ ಭಯ ಇನ್ನ ಪೋಲಿಸರಿಗೆ ಹಾಗೇಯೆ ಇತ್ತು , ಬೋಗಿ ಬೋಗಿಯಲ್ಲು ಪೋಲಿಸರ ಸದ್ದು , ಹುಣ್ಣಿಮೆಯೆ ದಿನವದು ಟ್ರೇನ್‌‌ ಬೆಂಗಳೂರು ಅಂಧ್ರ ದಾಟಿ ಒಡಿಶಾದ ಭುಭನೇಶ್ವರ ತಲುಪಿತ್ತು . ಕಪ್ಪು ಸುಂದರಿ ಮತ್ತೆ ಮತ್ತೆ ತನ್ನ ಸೌಂದರ್ಯ ಸೂಚಿಸುತ್ತಿದ್ದಳು. ಹುಣ್ಣಿಮೆಯ ರಾತದರಿಯಲ್ಲಿ ಕರ್ಬೊಗೆಯು ಆಕಾಶಕ್ಕೆ ಸೇರುವ ಅ  ಕಪ್ಪು ಬಿಳುಪು ಆಟ ಮನಮೋಹಕವಾಗುತ್ತಿತ್ತು . 16 ಭರ್ಬರ ಹತ್ಯೆ ಕಂಡಿದ್ದ ಪ್ರಶಾಂತಿ ಎಕ್ಸ್‌ಪ್ರೇಸ್‌ ಭರ್ತಿ 3 ತಿಂಗಳ ನಂತರ ಶಾಂತವಾಗುತ್ತಾ ಬಂತು . ಅಷ್ಟು ಹತ್ಯೆಗಳನ್ನು ಮರೆತು ತನ್ನ ದೈನಿಕ ಓಡಾಟ ಪ್ರಾರಂಭಿಸಿತ್ತು ಕರ್ನಾಟಕ-ಅಂಧ್ರದ ಜೀವನಾಡಿ ಪ್ರಶಾಂತಿ ಎಕ್ಸ್‌ಪ್ರೇಸ್‌.
  ಪ್ರಶಾಂತಿ  ಎಕ್ಸ್‌ಪ್ರೇಸ್‌‌‌ನಲ್ಲಿ ಹಿಂದಿನ ಪ್ರಶಾಂತತೆ ಕಾಣಿಸಿತ್ತು !ಹುಣ್ಣಿಮೆಯಲ್ಲಿ ನಿಶಬ್ಧ ಅವರಿಸಿತ್ತು......

                                                               *****************


    ಸುಬ್ಬಮ್ಮ ತನ್ನ ಮೊದಲ ಪೂಜೆ ಆರಂಭಿಸಿದ ದಿನದಿಂದಲೇ ಗೆಲುವು ಸಾಧಿಸುತ್ತಾ ಹೋದಳು , ಅದು ಸ್ವತಃ ಕರ್ಣ ಪಿಶಾಚಿಯನ್ನು ಬಳಸಿ ಪಡೆಯುತ್ತಿದ್ದ ಗೆಲುವು .ಕರ್ಣ ಪಿಶಾಚಿಗೆ ಅಷ್ಟು ವಾರಗಳು ನೆತ್ತರು ಅರ್ಪಿಸಿ ತಣಿಸಿದ್ದಳು ಅದರೂ ಕರ್ಣ ಪಿಶಾಚಿಯ ಉಗ್ರರೂಪ ತಣಿಸಲಾಗಲಿಲ್ಲ ಅವಳಿಗೆ, ಜೊತೆಗೆ ಕರೀಂ ಬಾಬಾನ ಶಕ್ತಿ , ಮುಸ್ಲಿಂ ವಾಮಾಚಾರ ಲೋಕವೇ ಹಾಗೆ ಅದು ತಕ್ಷಣ ತನ್ನ ಕಾರ್ಯ ಶುರುಮಾಡದೆಯಿದ್ದರು . ಭರ್ತಿ ತನ್ನೆಲ್ಲ ಶಕ್ತಿಯನ್ನು ತೋರಿಸಲು ಹಪಹಪಿಸುತ್ತದೆ . ಕೇವಲ ಎಂಟೊಂಬತ್ತು ವಾರದಲ್ಲಿ ಮಾಟಗಾತಿ ಸುಬ್ಬಮ್ಮ 16 ಬಲಿ ಪಡೆದು ಬೀಗುತ್ತಿದ್ದಳು . ಆಗಲೇ ನೋಡಿ ಕರೀಂ ಬಾಬಾ ಹಿಮಾಂಶುವಿನ ನೆರವು ಪಡೆದಿದ್ದು . ಹಿಮು ಅರೆಷ್ಟ್‌ ಆಗಿ , 17ನೇ ಬಲಿಯಾಗಲು ಅವಕಾಶ ನೀಡದೆ ಇದ್ದದ್ದು . ಅದು ಹುಣ್ಣಿಮೆಯ ದಿನ ಕರ್ಣ ಪಿಶಾಚಿಗೆ ಒಂದು ಬಲಿ ಅರ್ಪಿಸಿಲ್ಲವೆಂದರೆ ಉಗ್ರರೂಪಿಯಾಗಿ ತನ್ನೆನ್ನೆ ಬಲಿ ಪಡೆಯುತ್ತಾಳೆ ಎಂದು ಗೊತ್ತಾಗುತ್ತೆ . ಮುಸ್ಲಿಂ ಮಾಂತ್ರಿಕ ಕರೀಂ ಬಾಬಾ ಪುತ್ತೂರಿನಿಂದಲೇ ತನ್ನ ಪೂಜೆ ಆರಂಭಿಸಿದ್ದ . ಮೆಲ್ಲನೆ ಧ್ವನಿಯಲ್ಲಿ ಆರಂಭವಾಗಿದ್ದ ಈ ಸಾಲು ಮುಗಿಯುವಷ್ಟರಲ್ಲಿ ಕಿವಿ ಹೊಡೆದು ಹೋಗುವಷ್ಟು ಜೋರಾಗುತ್ತಿತ್ತು .

   "ಯೋಮಾಯುನ್‌ ಪಿಕ್ಕ್‌ ಫಿಸೂರಿ ಪತುತೂನಾ ಆಫ್‌ ವಾಜಾ!"

  " ಈ ದಿನವೂ ಶಂಕವು ಊದಲಾಗುತ್ತದೆ . ಆಕಾಶ ತೆರೆಯಲ್ಪಡುತ್ತದೆ , ಆಗ ಶವಗಳು ಗುಂಪು ಗುಂಪಾಗಿ ಎದ್ದು ಬರುತ್ತವೆ "


   ತಾನು ಸಾದಿಸಿದ್ದ ಕರ್ಣ ಪಿಶಾಚಿಯಿಂದಲೇ ಸುಬ್ಬಮ್ಮನ ಅಂತಿಮದ ಆರಂಭವಾಗಿತ್ತು . 16 ಶವಗಳು ಗುಂಪು ಗುಂಪಾಗಿ ಎದ್ದು ಬಂದು ಸುಬ್ಬಮ್ಮನೆಂಬ ಅತಿಕ್ರೂರ ಮಾಟಗಾತಿಯನ್ನು ಅಷ್ಟೆ ಕ್ರೂರವಾಗಿ ಬಲಿ ಪಡೆದುಬಿಟ್ಟವು.

  ಕಾಲ ಸ್ತಬ್ಧವಾಯ್ತು!! ಹುಣ್ಣಿಮೆಯಲ್ಲಿ  ನಿಶಬ್ಧ ಅವರಿಸಿಕೊಳ್ಳುತ್ತಾಲೆ ಅದೆಲ್ಲೊ  ದೂರದ ಪುತ್ತೂರಿನ ಜಮೀಯ ಮಸೀದಿಯ ಪಕ್ಕದಲ್ಲಿದ್ದ ಶವ ಕಂಪಿಸಿದಂತಾಯ್ತು. ಮಲ್ಲೇಶರಂ ಏಳನೇ ಕ್ರಾಸ್‌ನ ಬೀದಿಯ ತಿರುವಿನಲ್ಲಿ ಪ್ರಶಾಂತಿನಿ ಕಾಣಿಸಿಕೊಳ್ಳುತ್ತಾಳೆ . ಅದನ್ನು ಗಮನಿಸಿದ ಕರೀಂ ಬಾಬಾ ಬೆಚ್ಚಿಬಿದ್ದ .
ಅಲ್ಲಿಂದ ಆರಂಭವಾದದ್ದೆ ಮತ್ತೊಂದು ಕಥೆ

"ಹುಣ್ಣಿಮೆಯ ರಹಸ್ಯ!"

                                                                                    (ಮುಗಿಯುತ್ತದೆ)

6 Dec 2014

ಹುಣ್ಣಿಮೆಯ ನಿಶಬ್ಧ ಭಾಗ-10

      ಹಿಮಾಂಶು ಬಂಧನವಾಗಿ ಅದಗಲೇ 95 ದಿನಗಳಾಗಿದ್ದವು , ಕೋರ್ಟ್‌‌ನಲ್ಲಿ ವಿಚಾರಣೆ ನಡೆಯುತ್ತಿತ್ತು... ಇನ್ನೇನೂ ನ್ಯಾಯಧೀಶರು ತೀರ್ಪು ನೀಡಬೇಕು ಆಗ ಬಂದವರೆ ಕ್ರೀಮಿನಲ್‌ ಲಾಯರ್‌   ಟಿ.ಎನ್‌. ಕೀಶೊರ್‌ ಚಂದ್ರ.. "ಇತ ನಿರಪರಾಧಿ" ಅಂದಕ್ಷಣ ಕೋರ್ಟ್‌‌ನಲ್ಲಿದ್ದ ಅಷ್ಟು ಜನಕ್ಕೆ ಅಚ್ಚರಿಯಾಗಿತ್ತು  ಒಬ್ಬ ಶಿವರಾಮಪ್ಪರನ್ನು ಬಿಟ್ಟು. DYSP ಶಿವರಾಮಪ್ಪ !
 ಸ್ವತಃ ಹಿಮಾಂಶುವೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು ನಿಜ ಏನೆಂಬುದು ಶಿವರಾಮಪ್ಪರಿಗೆ ಗೊತ್ತಿತ್ತು..!! ಆಗ ಸಿಗುತ್ತೆ ಕತೆಗೆ ಹೊಸ ತಿರುವು..

       ವಕೀಲ ಕೀಶೊರ್‌ ಚಂದ್ರ ತಮ್ಮ ವಾದ ಪ್ರಾರಂಭಿಸಿದ್ದೆ ತಡ ಕೋರ್ಟ್‌ನೊಳಕ್ಕೆ ಹೊಕ್ಕಿದ ಒಬ್ಬ Constable ಮುಖದಲ್ಲಿ ಅಚ್ಚರಿ ಬೇರೆತ ಭಯ ಅವರಿಸಿರುತ್ತೆ.
"ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ಮತ್ತೊಂದು ಕೊಲೆ" ಬೆಚ್ಚಿಬಿದ್ದರು ಪೋಲಿಸರು . ಹಿಮಾಂಶು ಕಣ್ಣಲ್ಲಿ ದುಃಖ, ಭಯ ಮತ್ತು ನಿರಾಕರಣೆ!.. ಭರ್ತಿ ಒಂದು ಗಂಟೆಯ ವಿಚಾರಣೆಯ ಬಳಿಕ ಹಿಮಾಂಶುವಿಗೆ ಜಾಮೀನು ಮಂಜುರಾಗಿತ್ತು . ಕೀಶೊರ್‌ ಚಂದ್ರರ ಮುಖದಲ್ಲಿ ಗೆಲುವು ಸಾಧಿಸಿದ ನಗೆ!

   ಅಂದು ಸಂಜೆ 5 ಗಂಟೆ!
    ಹಿಮಾಂಶೂ ಜೈಲಿನಿಂದ ಹೊರಬಂಧವನೇ ಆ ನಿರ್ಮನುಷ್ಯ ರಸ್ತಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುವಾಗ ಅವನಿಗೆ ಆ 14 ವರ್ಷದ ಹಿಂದಿನ ಕ್ರೂರ ನೆನಪುಗಳು ಕಣ್ಣಮುಂದೆ ಬಂತು. ಅದು ಮಾಟಗಾತಿ ಸುಬ್ಬಮ್ಮ ದೊಡ್ಡ ಸಾಧನೆಗೈದ ದಿನ . ಕಾಮಕರ್ಣ ಪಿಶಾಚಿಯನ್ನು ಓಲಿಸಿಕೊಂಡ ದಿನ . ಕ್ಷುದ್ರ ಲೋಕದಲ್ಲೆ ಅತಿದೊಡ್ಡ ಸಾಧನೆಯದು ಅದ್ಕೆ ತನ್ನ ಗುರುವಾದ ಅರೀಫ್‌ ಬಾಬಾನ ಆರ್ಶಿವಾದ ಎಷ್ಟಿತೆಂದರೆ ಆತ ತನ್ನ ಬದುಕನ್ನ ಆರ್ಪಿಸಿಬಿಟ್ಟಿದ್ದ.
* "ಧೇನಿಸು ಮಗಳೇ .... ಬದುಕುವ ಆಸೆಯನ್ನು ಕೂಡ ಬಿಟ್ಟು ಧೇನಿಸು . ಕ್ಷುದ್ರ ಲೋಕದಲ್ಲಿ ಆಸೆಗಳಿಗೆ ಜಾಗವಿಲ್ಲ . ಕರ್ಣ ಪಿಶಾಚಿಯನ ಮುಂದೆ ಕಾಮನೆಗಳಿಗೆ ಸ್ಥಳವಿಲ್ಲ . ಇಲ್ಲಿ ಎಲ್ಲವನ್ನೂ , ಎಲ್ಲರನ್ನೂ ತ್ಯಜಿಸಬಲ್ಲೆ. ಆಕೆಯ ಪಾದಗಳಿಗೆ ಶಿರವಿಟ್ಟು ಅದನ್ನೂ ಒಪ್ಪಿಸಿಕೋ ಅನ್ನಬಲ್ಲೆ ಎಂಬತಹ ಮುಕ್ತತೆ ಬೇಕು . ನೀನು ನೀನೆಂಬುದನ್ನೂ ಮರೆತು ಆಸೆಗಳನ್ನು ತೆಜಿಸು "* ಎಂದು ಬಾಬಾ ಹೇಳಿದ್ದರು. ಅದರೆ ಅವಳು ಆಸೆಯನ್ನು ತೇಜಿಸಿರಲಿಲ್ಲ . ಕೋಪವನ್ನು ತೆಜಿಸಿರಲಿಲ್ಲ . ದ್ವೇಷವನ್ನು ಕೂಡ.. ಅವಳ ಗುರಿ ಸರ್ವನಾಶ ಮಾಡುವುದಿತ್ತು..  ಕಾಮಕರ್ಣ ಪಿಶಾಚಿಯನ್ನು ಹೋಲಿಸಿಕೊಂಡ ಮೇಲೆ ಅದು ಅವಳ ಸರ್ವನಾಶಕ್ಕೆ ದಾರಿಯಾಗುತ್ತೆ ಅಂತ ಅವಳು ಕೂಡ ಊಹಿಸಿರಲಿಲ್ಲ . ಅದು ಉರ್ಗ ಕೋಪಿಯಾದ ಕರ್ಣ ಪಿಶಾಚಿಯ ಶಕ್ತಿ!
  
ಸರ್ವನಾಶದ ಮೊದಲ ಬಲಿ ಸ್ವತಃ ಅರೀಫ್‌ ಬಾಬಾ. ತನ್ನ ಗುರುವನ್ನು ಬಲಪಡೆದು ಉಗ್ರವಾಗಿ ನಗಲಾರಂಭಿಸಿದಳು ಸುಬ್ಬಮ್ಮ . ಅಂದೆ ಸರ್ವನಾಶದ ಮುನ್ನುಡಿಯಾಗಿ ಆಕೆ ಪ್ರಶಾಂತಿನಿ ಮನೆಗೆ ಬರುತ್ತಾಳೆ..... ತನ್ನ ತಾಯಿಯ ಮನೆಗೆ ಎಂದು ನೆನೆಯುತ್ತಾ ಒಮ್ಮೆಲೆ ಗದ್ಗತಿತನಾಗುತ್ತಾನೆ .

   ಅಷ್ಟರಲ್ಲಗಲೇ ಹಿಮಾಂಶು ಮಲ್ಲೇಶರಂ 7ನೇ ಕ್ರಾಸ್‌ಗೆ ತಲುಪಿದ್ದ. ವೈಭವೊಪೇತ ಮೊಲ ಬಿಳುಪಿನ ಬಂಗಲೆ ನೋಡುತ್ತಿದಂತೆ ಆ ಶ್ರೀಮಂತಿಕೆ ಕಣ್ಣು ಕುಕ್ಕುತ್ತಿತ್ತು. ಬಂಗಲೇ ಮುಂದೆಯೆ ಸಾಲು ಸಾಲು ಕಾರುಗಳು ಆದರೆ ಅದ್ಯವುದನ್ನು ಗಮನಿಸಿರಲಿಲ್ಲ ಆತನ ಮನಸ್ಸು ಆ ಬಂಗಲೇಯ ಎರಡನೇ ಮಹಡಿಯ ಕೊಣೆಯತ್ತ ನೆಟ್ಟಿತ್ತು . ಅದು ಶಾಲಿನಿಯ ರೂಮ್‌ . ಅವನು ಬರುವುದು ಅವಳಿಗೆ ಹೇಗೆ ತಿಳಿಯಿತೊ ಗೊತ್ತಿಲ್ಲ ಒಮ್ಮೆಲೆ ಓಡಿ ಬಂದು ಹಿಮಾಂಶುವಿನ ಮುಂದೆ ಬಿಕ್ಕಿ ಬಿಕ್ಕಿ ಆತ್ತುಬಿಟ್ಟಳು ಶಾಲಿನಿ . ಅದು 96 ದಿನಗಳಿಂದ ಬಚ್ಚಿಟ್ಟಿದ್ದ ಕಣ್ಣಿರು. ನಲ್ಲಮಲ ಅರಣ್ಯದ ಆ ಕತ್ತಲ ರಾತ್ರಿಯಲ್ಲಿ ಅಂದು ಅವರಿಸಿದ ಮೌನ ಇಲ್ಲು ಅವರಿಸಿತು . ಅವರಿಬ್ಬರಲ್ಲೂ ಮಾತು ಹೊರಡಲಿಲ್ಲ . ನಿಶಬ್ಧವೇ ನಾಚುವಂತಹ ನಿಚ್ಚಳ ಮೌನ . ಅವರಿಬ್ಬರು ಅದೊಂದು ಮಾತು ಹೇಳದಿದ್ದರು ಇಬ್ಬರ ಮನಸ್ಸಿಗೂ ಅದು ತಿಳಿದೆ ಇತ್ತು . ಅರಣ್ಯದ ಆ ಕತ್ತಲ ರಾತ್ರಿಯಲ್ಲಿ ಬಚ್ಚಿಟ್ಟಿದ್ದ ಮಾತು ಅವರಿಸುತ್ತಾ ಬಂತು . ಅವರಿಬ್ಬರು ದೂರದಲ್ಲಿದ್ದರಿಂದ ಪ್ರೀತಿ ಸಾವಿರ ಪಟ್ಟು ಹೆಚ್ಚಗಿತ್ತು . ಆಗ ಮೊಳೆಯಿತು ಮಾತು .
 "ಹಿಮು , ನನ್ನೊಂದಿಗೆ ಜೀವನ ಪೂರ್ತಿ ಇರುತ್ತೀಯಾ???" ಎಂದು ಶಾಲಿನಿ ಕೇಳುತ್ತಿದ್ದಂತೆ ಸ್ತಂಭೀಭೂತನಾದ ಹಿಮಾಂಶು.
ಅಲ್ಲಿ ಕಾಲ ಸ್ತಬ್ದವಾಯಿತು!!

                                                   *  *  *  *

    ಮಾಟಗಾತಿ ಸುಬ್ಬಮ್ಮ ಅರೀಫ್‌ ಬಾಬಾನನ್ನು ಬಲಿ ಪಡೆದ ಮರುಕ್ಷಣ ಪುತ್ತೂರಿನ ಜಮ್ಮಿಯ ಮಸೀದಿಯಲ್ಲಿದ್ದ ಅರೀಫ್‌ ಬಾಬಾನ ಶಿಷ್ಯ ಎಚ್ಚೆತ್ತ. ಅವನಿಗೆ ಸಾವಿರರು ಕೀಲೊ ಮೀಟರ್‌ ದೂರದಿಂದಲೇ ಗುರುವಿನ ಮಾತು ಕೇಳಿಸಿತ್ತು . " ನಾಶ ಮಾಡು ಅವಳನ್ನ , ಇಲ್ಲದಿದ್ದರೆ ಸರ್ವನಾಶಕ್ಕೆ ಅಣಿಯಾಗುತ್ತಾಳೆ " ಆಗಲೇ  ಮಾಟಗಾತಿ ಬೆಂಗಳೂರಿನಲ್ಲಿ ಪೂಜೆ ಪ್ರಾರಂಭಿಸಿದ್ದು . ಆಗಲೇ " ಸರ್ವನಾಶ ಕಂಡು ಬರುತ್ತಿದೆ " ಎಂದು ಕರೀಂ ಬಾಬಾ ಎದ್ದು ಕೂಗಿದ್ದು . 
ಮತ್ತು ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ಹಿಮಾಂಶುವಿನ ತಾಯಿ ಪ್ರಶಾಂತಿನಿ ಹುಣ್ಣಿಮೆಯ ದಿನ ಮೊದಲ ಬಲಿ ಪಡೆದಿದ್ದು...

   ಹಿಮಾಂಶುವಿನ ತಾಯಿ ಪ್ರಶಾಂತಿನಿ ಬರ್ಬರ ಹತ್ಯಗೆ ರೂಪಿಸಿ ಬಿಟ್ಟಿದ್ದಳು ಮಾಟಗಾತಿ. ಟ್ರೇನ್‌ಗೆ ಹೊಕ್ಕವಳೇ ಮಧ್ಯವಯಸ್ಕ ಹೆಂಗಸಿನ ಗಂಟಲ ಭಾಗವನ್ನು ಕಿತ್ತು ಹೋಗಿದ್ದಳು ಅದು ಕರ್ಣ ಪಿಶಾಚಿಯಾ ಅರ್ಪಣೆಗೆ! . ಪ್ರಶಾಂತಿನಿಯ ಮೊದಲ Ruthlessness ಆರಂಭವಾಗಿದ್ದೆ ಅವಾಗ. ಆಗಲೇ ಕಾಲೇಜಿನಲ್ಲಿ  ಹಿಮಾಂಶು ನಿಗೂಢನಾಗಿದ್ದು . ತಾಯಿಯನ್ನು ಹುಣ್ಣಿಮೆಯ ದಿನ ನೋಡಿ ಬೆಚ್ಚಿಬಿದ್ದದ್ದು. ಭರ್ತಿ 16 ಕೊಲೆಗಳನ್ನು ಮಾಡಿದ್ದಳು ಪ್ರಶಾಂತಿನಿ.... And that is only because of black magic.. ಅದೆಲ್ಲ ಕಾಮಕರ್ಣ ಪಿಶಾಚಿನಿಗೆ ಎಂದು ನಂಬಿಸುತ್ತಾ ಬಂದಳು ಮಾಟಗಾತಿ ಸುಬ್ಬಮ್ಮ . 17ನೇ ಬಲಿ ಶಾಲಿನಿಯೆಂದು ತಿಳಿದಿದ್ದೆ ತಡ ಹಿಮಾಂಶು ತನ್ನ ಆಟ ಪ್ರಾರಂಭಿಸಿದ್ದ.
   " Himamshu played an intellectual game!"

  ಸ್ವತಃ ತಾನೇ ಕೊಲೆಗಾರನೆಂದು ಪೋಲಿಸರಿಗೆ ತಿಳಿಸಿ ಬಂಧನಕ್ಕೊಳಗಾಗುವಂತೆ ಮಾಡಿಕೊಳ್ಳುತ್ತಾನೆ . ಅದು ಶಾಲಿನಿಯನ್ನು ರಕ್ಷಿಸುವ ತಂತ್ರ ಎಂದು ಸ್ವತಃ ಮಾಟಗಾತಿಗೂ ತಿಳಿದಿರಲಿಲ್ಲ . ಹಿಮಾಂಶು ಶಾಲಿನಿಯನ್ನು ಉಳಿಸಿಕೊಳ್ಳಲು ಸ್ವತಃ ತಾನೇ ಜೈಲಿಗೆ ಹೋಗಿಬಿಟ್ಟಿದ್ದ .... ಹಿಮಾಂಶು ತನ್ನ ಪ್ಲಾನ್‌ನಲ್ಲಿ ಗೆಲುವು ಸಾಧಿಸಿದ್ದನಾ?????? 
                                                                     -(ಮುಂದುವರೆಯುತ್ತದೆ-To be continued)

4 Dec 2014

A humming wednesday evening

Amazing and beautiful
not a flower or a tree
Much prettier than that
and only I can see

Loving and caring
right down to the core
Filling me with happiness
and so much more

Eyes are so stunning
cannot look away
Gorgeous and shining
all throughout the day

Here in your arms
is where I belong
The beating of your heart
is like a beautiful song

     Yes, It was the day I was waiting for, It was the day even she waited for . I was waiting  for her arrival in the bus stop.. with lots of joy and happiness in my heart coz I'm seeing her after 10 loooooooog days.

    while waiting my mind went back to the day.. the day she sent that text to me "Shall we go together for the function ,  will you be with me"...... yeaaaa definitely I replied . From that movement to now we both were curiously waited for this day and guess what she arrived .

    In her best black attire which I love the most . She was like the first sun ray in the morning of mid winter morning . She was like the lightning in the humming wednesday evening . She was so beautifully beautiful that I could take my eyes of her. She took all my attention . She attracted my attention that I just loved her in that black beautiful dress.

    It was the third ride with her but this one is something special for both of us . Actually it was the ride which we both waited for.. She sat in my bike behind me , we just went  talking something , something and everything . When we reached the function hall we thought of a walk . The walk which we loved the most that day . She was sooo beautiful that all the people around us was staring at her . Did he recognized (?) . I don't know . The short walk was soo long ;) . I enjoyed every second of it! . The cool breeze in the evening added still more lovely moment to us . She still looked much more attractive under the light in that dark chill and lovely evening..


   She was with me throughout the function . She talked with me , she sat with me , she laughed with me , hope she enjoyed with me & I still  remember her small dimple which adds more beauty when she smiles . I just love to see her smile .It was 9:15 I think she was getting late & again it was my favorite part . THE RIDE WITH HER . The weather was very chill . The evening breeze was killing both of us . I was cursing the time ."Why today its racing very fastly .


    Yes, time was running very fastly , I thought why don't this day , this evening , this moment remains the same forever & ever... The same chill evening , same ride , me & she nothing else other than that . but it was 10 I dropped her in a hard heart we both went home by keeping the lovely memories in heart which would last forever... LOVED THE DAY WITH YOU... Thank you :)

29 Nov 2014

ನೆನಪಿನ ಚಳಿಯಲ್ಲಿ!!

     ಎಲ್ಲಿ೦ದಲೋ ತುರಿಬ೦ದ ನಿನ್ನ ಹೆಸರು ನನ್ನ ಮನಸ್ಸಿನೊಳಗೆ ನುಗ್ಗಿ , ಕೊ೦ಚ ಹೊತ್ತಿನಲ್ಲಿ ಆ ಹೆಸರು ವಿಚಾರವಾಗಿ , ಭಾವನೆಯಾಗಿ , ಪ್ರಶ್ನೇಯಾಗಿ ಕಾಲೂರಿ ನಿ೦ತುಬಿಟ್ತು. ನೀನು ಬೇಕು ಅನಿಸ್ತಿಯಾ ನನ್ನ ಮಾತಿಗೆ , ನನ್ನ ಮೌನಕ್ಕೆ , ನನ್ನ ಉಸಿರಿಗೆ , ನನ್ನ ಬದುಕಿಗೆ... ಎಷ್ಟು ತಿಂಗಳಾಯ್ತು ನಿನ್ನ ನೋಡಿ..

   ನಾನು ಇದು ನಿನಗಾಗಿ ಬರೆಯುತ್ತಿರುವ 26ನೇ ಪತ್ರವಿರಬಹುದು.. I know ಇದು ಕೂಡ ನೀನು ಓದಲ್ಲ ಅಂತ , ಆದರೆ ನಾನು ನಿನಗಾಗಿ ಇಂತಹಃ ಎಷ್ಟು ಪತ್ರ ಬೇಕಾದರೂ ಬರೆದು ಕಾಯ್ತ ಇರ‍್ತೀನಿ ಡಿಯಾರ್‌.

    ಯಾಕೋ ಇವತ್ತು ಆ ದಿನ ನಾನು ನೀನು ಆ ಕತ್ತಲ ರಾತ್ರಿಯ ಚುಮು ಚುಮು ಚಳಿಯಲ್ಲಿ ನಾಗರಭಾವಿಯಿಂದ ಕೆಂಗೇರಿವರೆಗೂ ಹೋಗಿದ್ವಲ್ಲ ಆ ಪುಟ್ಟ ರೈಡ್‌ ತುಂಬಾ ನೆನಪಾಗ್ತಯಿದೆ . ಅವತ್ತು SEP 11 ನನ್ನ ಬರ್ತ್‌ಡೇ ಬೆಳಗ್ಗೆನೆ ಯಾಕೋ ಫೋನ್‌ ಮಾಡಿ ಮಲ್ಲೆಶ್ವರಂಗೆ ಬಾ ಅಂದ್ಯಲ್ಲ ಅದಕ್ಕೆ ಕಾಲೇಜ್‌ ಬಂಕ್‌ ಮಾಡಿ ಬಂದು ನಿಂತವನಿಗೆ ಅಷ್ಟು ದೊಡ್ಡ ಶಾಕ್‌ ಕೋಡೊದ ನೀನು ? ತುಂಬಾ ಭಯವಾಗಿತ್ತು ಅವತ್ತು . ಹಳ್ಳಿಮನೆಯ ನುಂದೆ ಸುಮ್ಮನೆ ನಿನಗಾಗಿ ಕಾಯುತ್ತ ನಿಂತಿದ್ದಾಗ ಅಪ್ಪನ ಜೊತೆ ಬಂದಿದ್ಯಲ್ಲ . I was shocked . " ಅಪ್ಪ ಇವನು ನನ್ನ ಕೋತಿಮರಿ ಫ್ರೇಂಡ್‌ ಮಂಜು , ಇವತ್ತು ಇವ್ನ ಬರ್ತ್‌‌‌ಡೇ , Let's make it special " ಅಂತ ಅಪ್ಪನಿಗೆ ಪರಿಚಯಾ ಮಾಡಿಸಿದಲ್ಲಾ . I was surprised!!

   ಅವತ್ತು ಇಡಿ ದಿನ ನಿನ್ನೊಂದಿಗೆ ಕಳೆದುಬಿಟ್ಟಿದ್ದೆ . ಅದೇ ದಿನ ರಾತ್ರಿ 9 ಗಂಟೆಗೆ ಹೋಗಿದ್ವಲ್ಲ ಆ ಪುಟ್ಟ ರೈಡ್‌ ಎಷ್ಟು ಚೆನ್ನಾಗಿತ್ತಲ್ವ . ಎಷ್ಟು ಚಳಿ ಇತ್ತು ಅವತ್ತು . ಆಗ University ಗೇಟ್‌ ಬಳಿ ಇದ್ದ ಗಣೇಶನ ಗುಡಿಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಪೂಜೆ ಮಾಡಿಸಿದಲ್ಲ . I felt blessed . ಪುಟ್ಟ ಮಗುವಂತೆ ನನಗೆ ಕುಂಕುಮ ಇಟ್ಟು " ಕೋತಿ ಯಾವಗಲು ಚೆನ್ನಗೀರೊ , don't forget your dreams.. just chase them . I love you ಕಣೋ " ಅಂತ ಎಷ್ಟು ಪ್ರೀತಿಯಿಂದ ಹೇಳ್ತಯಿದ್ದೆ. ನಿನ್ನ ಆ ಮಾತುಗಳು ಇನ್ನ ನನಗೆ ಹಾಗೇ ನೆನಪಿದೆ.. ಮುದ್ದು ಮುದ್ದುಗಿ ಕಣ್ಣು ಮಿಟುಕಿಸುತ್ತಾ ಪಟಪಟ ಅಂತ ಮಾತಡ್ತಾ ಇದ್ದೆ .  ನಾನು ಮಾತಿಗಿಂತ ನಿನ್ನ ಮೋಡಿದ್ದೆ ಜಾಸ್ತಿ . You were soo affordable that day . universityಯ  ಬೆಳಕಿಲ್ಲದ ಆ ಕತ್ತಲ ರಸ್ತೆಯಲ್ಲಿ " ಹೋಗೊ ನಿನ್ನ bike ಚೆನ್ನಾಗಿಲ್ಲ , Its not comfortable to sit , ನಡೆದುಕೊಂಡು ಹೋಗಣ ಬಾರೋ " ಅಂತ ಹೇಳಿದಲ್ಲ . ನಂಗೊತ್ತು ಪ್ರೀತಿಯ ಆ ಕತ್ತಲ ರಾತ್ರಿಯಲ್ಲಿ ನೀನು ನನ್ನ ಜೊತೆ ನಡೆದುಕೊಂಡು ಹೋಗ ಆಸೆ ಇತ್ತು ಅಂತ. ಅಲ್ಲಿದ್ದದ್ದೂ ನಾನು , ನೀನು , ನಮ್ಮ ಪ್ರೀತಿ , ಅ ಚಂದ್ರ ಮತ್ತು ಹಾಗೊಮ್ಮೆ - ಇಗೊಮ್ಮೆ ವಾಹನಗಳ ಬೆಳಕಿನಲ್ಲಿ ಬೆಳಗುತಿದ್ದ ರಸ್ತೆ . ಅಲ್ಲಿ ಮಾಗಳಿಲ್ಲದ ನಿಚ್ಚಳ ಮೌನ , ಬರೀ ಕಣ್ಣಲ್ಲೆ ಗಂಟೆಗಟ್ಟಲೆ ಮಾತಡಿಸಿದರು ಸಾಲದಷ್ಟು ಭವನೆಗಳು , ಅಲ್ಲಿ ಇದ್ದದ್ದು ನೂರಾರು ದಿನಗಳ ಅರಾಧನೆ , ಮೌನದಲ್ಲೆ ಕೂಡಿದ್ದ ಮಾತುಗಳು , ಭಾವನೆಗಳೇ ತುಂಬಿದ್ದ ಕಣ್ಣುಗಳು . ಸುಮ್ಮನೆ ಅಷ್ಟು ಚಳಿಯ ರಾತ್ರಿಯಲ್ಲಿ ನಡೆದು ಹೋಗಿದ್ದವು . It was just me & You ..

    Woooow!! ಇಗಲು ಅದೇ ರೀತಿ ಚಳಿಯಿದೆ , ನೀನಗಿಷ್ಟವಿಲ್ಲದ ಅ ಬೈಕ್‌‌ ಹಾಗೆ ಇದೇ . ಕತ್ತಲ ರಸ್ತೆ , ಗಣೇಶನ ಗುಡಿ ಎಲ್ಲವೂ ಹಾಗೆ ಇದೆ . Dear let's go far a walk ಅಲ್ವ ;)


ಚಳಿಯ ಬಿಸುಪೋ , ನಿನ್ನ ನೆನಪೋ ;  
ಕಾಡಿಗೆಯ ಕಣ್ಣು ,ಕಾಡುತ್ತಿದೆ ಇನ್ನೂ ;
ನೆನಪಿನ ಚಳಿಯಲ್ಲಿ , ರಾತ್ರಿಯ ಕತ್ತಲಲ್ಲಿ ;
ನಿನ್ನ ನಗುವ ಅಮಲಿನಲ್ಲಿ ;
ಕಾಡುತ್ತಿದೆ ನಿನ್ನದೆ ಬಿಂಬ
ಜನ್ಮದ ಮೈತ್ರಿಯೋ , ಜೀವನ ಪ್ರೀತಿಯೋ
ಕಾಯುತ್ತಿರುವೆ ನಾನಿನ್ನ
ಕಾಡಿಗೆ ಹಚ್ಚಿದ ಮುದ್ದು ಚಿನ್ನ ;)

19 Nov 2014

ಹುಣ್ಣಿಮೆಯ ನಿಶಬ್ಧ ಭಾಗ-9

     ಕತೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

     ತಾನು ಪ್ರೀತಿಸಿದ ಹಿಮಾಂಶು ಆಗ ತಾನೇ ತನ್ನ ಪರ ಒಲಿಯುತ್ತಿದ್ದ. ಅದೊಂದು ರಾತ್ರಿ, ಯಾರು ಅವರನ್ನು ಕರೆದಿರಲಿಲ್ಲದಿದ್ದರೆ ಶಾಲಿನಿ ತನ್ನ ಮನಸ್ಸಿನ ಅಷ್ಟು ವಿಚಾರವನ್ನು ಹಿಮಾಂಶುವಿಗೆ ತಿಳಿಸಿಬಿಡುತಿದ್ದಳೇನೊ . It just happened . ಅವನೊಡನೆ ಕಾಡುವ ಮೌನದಲ್ಲೆ ಭರ್ತಿ ಒಂದು ಗಂಟೆ ಕೂತು ಎದ್ದು ಹೋಗಿದ್ದ ಶಾಲಿನಿಯ ಹೃದಯದಲ್ಲಿ ಇಂದೆಂದೂ ಕಾಣದ  ಸಂತೋಷ .  ಕತ್ತಲ ರಾತ್ರಿಯಲ್ಲಿ ಗಡಿಯ ರೇಕೆಯಿಲ್ಲದೆ ಹಕ್ಕಿಯಂತೆ ಇಡೀ ಪ್ರಪಂಚವನ್ನ ಸುತ್ತಿ ಬಂದಿತ್ತು . ಹಿಮಾಂಶು ತನ್ನೊಡನೆ ಕಳೆದಿದ್ದ ಪ್ರತಿ ಸೆಕೆಂಡ್‌ನ್ನು ನೆನಪಿಸಿಕೊಳ್ಳುತ್ತಿದ್ದಳು ಶಾಲಿನಿ. ಆ ರಾತ್ರಿ ಅವಳಿಗೆ ನಿದ್ದೆ ಬಂತೋ ಏನೋ ಅದರೆ ಹಿಮಾಂಶುವಿನೊಡನೆ ಸಾವಿರ ಸಾವಿರ ವರ್ಷ ಕಳೆಯುವ ಕನಸಂತು ಬಿದ್ದಿತ್ತು .ಬೆಳಗಿನ ನಿಚ್ಚಳ ಸೂರ್ಯ ಅದಗಲೇ ತನ್ನ presence  ತೋರಿಸಿದ್ದ.ಎಷ್ಟು ಬೇಗ ಬೆಳಕಾಯಿತು!

    ಇದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಮನೆಗೆ ಹೋಗುವ ಸಂಭ್ರಮ ಅರಣ್ಯವನ್ನು ಬಿಟ್ಟು ಹೊರಡುವ ತಳಮಳದಲ್ಲಿ ಕೂಡಿದ್ದರೆ . ಹಿಮಾಂಶು-ಶಾಲಿನಿಗೆ ಮತ್ತೇನೋ ಸಂಭ್ರಮ!  ಅದು ಮಾತುಗಳಿಲ್ಲದ ನಿಚ್ಚಳ ಮೌನ , ಬರೀ ಕಣ್ಣಲ್ಲೆ ಗಂಟೆಗಟ್ಟಲೇ ಮಾತಾಡಿದರು ಸಾಲದಷ್ಟು ಭವನೆಗಳು ಹೊರಡುತ್ತಿದ್ದವು . ಅಲ್ಲಿ ಇದ್ದದ್ದು ನೂರಾರು ದಿನಗಳ ಆರಾಧನೆ , ಮೌನದಲ್ಲೆ ಕೂಡಿದ್ದ ಮಾತುಗಳು , ಭಾವನೆಗಳು ತುಂಬಿದ್ದ ಕಣ್ಣುಗಳು , ಪ್ರೀತಿ ತುಂಬಿದ್ದ ಹೃದಯಗಳು . ನಲ್ಲಮಲ ಅರಣ್ಯದ ಮರಗಳೇ ಕೆಲಕಾಲ ನಾಚಿ ನಲಿದವು , ಮೌನದಿಂದಲೇ ಅಷ್ಟು ಮರಗಳು ಇವರ ಪ್ರೀತಿ ಫಲಿಸಲಿ ಅನ್ನುತ್ತೀವೆ ಎಂದು ಭಾಸವಾಗಿತ್ತು..

    ಕಾಲ ಸ್ತಬ್ಧವಾಗಿತ್ತು!!

           ಸಮಯ 12 ಗಂಟೆ 10 ನಿಮಿಷ
           ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್‌ ಶ್ರೀಕಾಕುಳಂ ರೈಲು ನಿಲ್ದಾಣಕ್ಕೆ ಬಂದು ನಿಂತಿತ್ತು . ಹಿಮಾಂಶು - ಶಾಲಿನಿ ಎದುರು ಬದರು ಸೀಟಿನಲ್ಲೆ ಕೂತಿದ್ದರು . ಅವರ ನಾಲಿಗೆಯಿಂದ ಮಾತು ಮರಿಚಿಕೆಯಾಗೆಯಿತ್ತು . ಆಗ ಬಂದವರೇ DYSP ಶಿವರಾಮಪ್ಪ ಹಿಮಾಂಶುನನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದರೆ . ಶಾಲಿನಿ ಆಘತದಿಣದ ಕಿರುಚಿದಳು . ಬೆಂಗಳೂರಿಗೆ ಬಂದವಳೇ ತನ್ನ ವೈಭವೋಪೇತ ಮನೆಯ ಬೆಡ್‌ರೂಮಿಗೆ ಹೋದವಳೇ ಒಂದೇ ಸಮನೆ ಆಳುತ್ತಿದ್ದಳು . ಭರ್ತಿ ಐದು ದಿನದ ನಂತರ ತನ್ನ ಹಡಗಿನಂತ BMW  ಕಾರ್‌ ಹತ್ತಿದವಳೇ ಹಿಮಾಂಶುನನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಹೋಗಲು ಅಣಿಯಾದಳು . ಕಾರ್‌ ಮಲ್ಲೆಶ್ವರ ಏಳನೇ ಕ್ರಾಸ್‌ನಿಂದ ಹೊರಬಿದ್ದು ಶೇಶಾದ್ರಿಪುರಂ ರೋಡ್‌ ದಾಟಿ ಮೆಜಸ್ಟಿಕ್‌ ತಲುಪಿತ್ತು ಅಷ್ಟರಲ್ಲಗಲೇ ಶಾಲಿನಿಯ ಮನಸ್ಸು ಬದಲಾಗಿತ್ತು . ಅವಳ ಮನಸ್ಸು ಹಿಮಾಂಶು ಕೊಲೆಗಾರನಲ್ಲ ಇನ್ನು ಕೇಲವೆ ದಿನದಲ್ಲಿ ನನ್ನ ಬಳಿ ಬರುತ್ತಾನೆ ಎಂದು ತೀರ್ಮಾನ ಮಾಡಿದವಳೇ ಯಾವುದೋ ಯೋಚನೆಯಲ್ಲಿ ಅಲ್ಲೆ ಬಳಿಯಿದ್ದ ಪಾರ್ಕ್‌ನಲ್ಲಿ ಮೌನದಿಂದ ಕುಳಿತುಬಿಟ್ಟಳು..

                                                                  **** *** ****
     ( ರವಿ ಬೆಳಗೆರೆಯವರ ಬರಹಗಳ ಪ್ರೇರಣೆಯಲ್ಲಿ)

     ಮೊದಲ ಪೂಜೆ ಆರಂಭಸಿದ್ದ ಮಾಟಗಾತಿಗೆ 14 ವರ್ಷಗಳ ಹಿಂದಿನ ನೆನಪುಗಳು ಕಾಡ ತೋಡಗಿತು.

   ಅಂದು!

  ನಿವೇದಿತಾ ಸತ್ತ ವಿಷಯವನ್ನು ಪ್ರಶಾಂತಿನಿ ಬಂದು ಮಾಟಗಾತಿ ಸುಬ್ಬಮ್ಮನಿಗೆ ಹೇಳಿದ್ದೆ ತಡ . ತನ್ನ ಗುರಿ ಸಾಧನೆಗೆ ಸಮಯ ಬಂದಿದೆ ಎಂದು ತಿಳಿದವಳೆ ಅವಳ ಪ್ರಯಾಣ ಆಂರಭವಾಗಿಬಿಟ್ಟಿತ್ತು!

  ಧೇನಿಸು ತಾಯೇ...! ಎಂದು ಹೇಳುತ್ತಾ ಹೊರಟ ಸುಬ್ಬಮ್ಮ ಅಂಧ್ರದ ಗಡಿ ದಾಟಿ ಒಡಿಶಾದ ಕಾಮಾಕ್ಯ ದೇಗುಲಕ್ಕೆ ಬರುವಷ್ಟರಲ್ಲಿ ಹುಣ್ಣಿಮೆಯಾಗಿತ್ತು . ಅಲ್ಲಿ ಆಕೆಗೆ ಸಿಗುತ್ತಾನೆ ಅಘೋರಿ ಸಾಧನೆಗೈದ ಪ್ರಜ್ವಲನಾಥ . ಕಾಮಕರ್ಣ ಪಿಶಾಚಿಯನ್ನು ಹೋಲಿಸಿ ಕೊಳ್ಳಬೇಕಾದರೆ ಏನು ಮಾಡಬೇಕು ಎಂದು ವಿವರ ನೀಡುತ್ತಿದ್ದ ಪ್ರಜ್ವಲನಾಥನಿಗೂ ಕಾಣಿಸಿದ್ದು ಅದೇ "ಸರ್ವನಾಶ!"

    ಇಲ್ಲೆ ಪಶ್ವಿಮ ಬಂಗಾಳದ ಕಾಡಿನಲ್ಲಿ ಕಾಮಕರ್ಣ ಪಿಶಾಚಿಯನ್ನು ಸಾಧಿಸಿರುವ ಏಕೈಕ ಮಾಂತ್ರಿಕನಿದ್ದಾನೆ . ಅವನ ಬಳಿ ಹೋದರೆ ನಿನ್ನ ಗುರಿ ಮುಟ್ಟ ಬಹುದೆಂದು ಹೇಳುತ್ತಿದ್ದ ಪ್ರಜ್ವಲನಾಥ ಇದ್ದಕ್ಕಿದ್ದಂತೆ ಪಶ್ಚಿಮ ದಿಕ್ಕಿನೆಡೆಗೆ ದಾವಿಸಿ ಬಿಟ್ಟ.. ಅವನಿಗೆ ಸುಬ್ಬಮನ ಭವಿಷ್ಯ ಕಾಣಿಸಿತ್ತಾ..??

    ಅದು ಹುಲಿಗಳಿಗೆ ತಾಣವಾಗಿದ್ದ ಪಶ್ಚಿಮ ಬಂಗಾಳದ ರುದ್ರ ಕಾಡು! 14 ವರ್ಷ ಬಾಬಾ ಹೇಳಿದ ಎಲ್ಲಾ ಪೂಜೆಗಳನ್ನು ಮಾಡಿ ಅವನ ಎದುರಿಗೆ ನಿಲ್ಲುತ್ತಾಳೆ ಮಾಟಗಾತಿ ಸುಬ್ಬಮ್ಮ . ಅವನ ಕಣ್ಣಗಳಲ್ಲೆ ಒಂದು ರುದ್ರ ಭಯಂಕರ ನೋಟ . ಡೊಡ್ಡದಾಗಿ ಬೆಳೆದಿರುವ ಗಡ್ಡ , ಹಸಿರು ಜುಬ್ಬಾ ಧರಿಸಿ ಸಶ್ಮಾನ ಮೌನದಲ್ಲಿ ಕುಳಿತಿರುವವನ ಹೆಸರು ಅಯಾಮಾನ್‌ ಅಲ್‌ ಅರಿಫ್‌ !
    ಅರಿಫ್‌ ಬಾಬಾ!!

 ಮಾಟಗಾತಿ ಸುಬ್ಬಮ್ಮನ ಮುಖದಲ್ಲಿ ಹಿಂದೆಂದೂ ಕಾಣದ ಕಾಟಿಣ್ಯತೆ ಮತ್ತು ಏಕಾಗ್ರಾತೆಗಳು ಜಮೆಯಾಗಿದ್ದವು . ಅದು ಅವಳಲ್ಲಿ ಕಾಣಲರಂಭಿಸಿದ ಮೊದಲ Ruthlessnessನ ಅನುಭವ . ಸತ್ತ ಹೆಂಗಸೊಬ್ಬಳ ಗೋರಿ ಮುಂದೆ ಕುತ್ತಿದ್ದ ಮಾಟಗಾತಿ ಮತ್ತು ಅರಿಫ್‌ ಬಾಬಾ ಇಬ್ಬರಿಗೂ ನಿರ್ದಯತೆ ಜಮೆಯಾಗಿದ್ದವು . ನಿಧಾನವಾಗಿ ಸಣ್ಣ ದನಿಯಲ್ಲಿ ಆರಂಭವಾದ ಮಂತ್ರಗಳು ಹತ್ತು ನಿಮಿಷ ಕಳೆಯುವಷ್ಟರಲ್ಲಿ ಕಿವಿಯ ಟಿಂಪ್ಯಾನಮ್‌ ಒಡೆದು ಹೋಗುವಷ್ಟು ತೀಕ್ಷ್ಣವಾಗಿಬಿಟ್ಟವು . ಹುಣ್ಣಿಮೆಯ ಆ ಕತ್ತಲ ರಾತ್ರಿಯಲ್ಲೆ ಭಯನಕತೆ ಸೃಷ್ಟಿಯಾಗಿತ್ತು .ಬಾಬಾ ಮೊದಲಿಗೆ ಸುಬ್ಬಮ್ಮನಿಂದ ದಿಗ್ಬಂಧನ ಪೂಜೆ ಮಾಡಿಸೊದರು . ಗೋರಿಯ ಮುಂದೆ ಪಶ್ಚಿಮಾಭಿಮುಖವಾಗಿ ಕುಳಿತ ಅವಳ ಹಣೆಗೆ ಬಾಬಾ ತಮ್ಮ ಬಲಗೈ ಬೆರಳಿನಿಂದ ಕತ್ತರಿಸಿದ ರಕ್ತ ಕುಂಕುಮ ತಿಲಕ ವಿವರಿಸಿದರು
.
   " ಧೇನಿಸು ಮಗಳೇ... ಬದುಕುವ ಆಸೆಯನ್ನು ಕೂಡ ಬಿಟ್ಟು ಧೇನಿಸು . ಕ್ಷುದ್ರ ಲೋಕದಲ್ಲಿ ಆಸೆಗಳಿಗೆ ಜಾಗವಿಲ್ಲ . ಕರ್ಣ ಪಿಶಾಚಿಯ ಮುಂದೆ ಕಾಮನೆಗಳಿಗೆ ಸ್ಥಳವಿಲ್ಲ . ಇಲ್ಲಿ ಎಲ್ಲವನ್ನೂ , ಎಲ್ಲರನ್ನೂ ತ್ಯಜಿಸಬಲ್ಲೆ . ಆಕೆಯ ಪಾದಗಳಿಗೆ ಶಿರವಿಟ್ಟು ಅದನ್ನೂ ಒಪ್ಪಿಸಿಕೋ ಅನ್ನಬಲ್ಲೆ ಎಂಬಂತಹ ಮುಕ್ತತೆ ಬೇಕು .ನೀನು ನೀನೆಂಬುದನ್ನೂ ಮರೆತು ಕರ್ಣಪಿಶಾಚಿಯನ್ನು ಪ್ರಾರ್ಥಿಸು .ಹೇಳು ಮಗಳೇ... ನನ್ನೊಂದಿಗೆ ಹೇಳು..."

    ಆರಿಫ್‌ ಬಾಬಾ ದೊಡ್ಡ ದನಿಯಲ್ಲಿ ಸುಬ್ಬಮ್ಮನಿಗೆ ಆದೇಶ ನೀಡುತ್ತ ಮಂತ್ರ ಪಠಣ ಮುಂದುವರೆಸಿದರು .ಆದರೆ ದೊಡ್ಡ ದನಿಯಲ್ಲಿ ಅವರು ಹೇಳುತ್ತಿದ್ದ ಮಂತ್ರಗಳ ಪೈಕಿ ಒಂದೇ ಒಂದು ಚಿಕ್ಕ ಶಬ್ದವೂ ಅರ್ಥವಾಗಿರಲಿಲ್ಲ . ಆಗ ಇದ್ದಕ್ಕಿದಂತೆ ನೆಲೆಗೊಂಡ ಮೌನ , ಆ ಸ್ಮಶಾನದ ಕಾವಳದಲ್ಲಿ ಮತ್ತೂ ಭಯಾನಕವೆನ್ನಿಸತೊಡಗಿತು . ಗೋರಿಯ ಮೈ ಬಿರುಕು ಬಿಡತೊಡಗಿದೆ . ಬಾಬಾ ಯಾವುದನ್ನೂ ಗಮನಿಸಿದಂತೆ ಮಂತ್ರಪಠಣ ಮಾಡುತ್ತಲೇ ಇದ್ದಾರೆ . ಗೋರಿಯ ಆಳದಲ್ಲಿ ಅದು ಕದಲತೊಡಗಿದೆ... ಕದಲುತ್ತಿರುವುದು ಹಸೀ ಬಾಣಂತಿಯ ದೇಹ ಎಂಬುದು ಗೊತ್ತಾಗುತ್ತಿದ್ದಂತೆಯೇ ಸುಬ್ಬಮ್ಮನ ದೇಹದಲ್ಲಿ ಕೆಲವು ಬದಲಾವಣೆಗಳಾದವು . ಕೈ ಬೆರಳುಗಳಿಗೆ ದೇಹದ ನೆತ್ತರೆಲ್ಲ ಹರಿದು ಬಂತೇನೋ ಎಂಬಂತೆ ಅವೆಲ್ಲವೂ ರಕ್ತವರ್ಣಕ್ಕೆ ತಿರುಗಿದವು . ನಾಲಗೆ ಕಳಚಿಕೊಂಡು ಹೊರ ಚಾಚಿಕೊಂಡಿತು . ಕಣ್ಣ ದೇದೀಪ್ಯಮಾನವಾದ ಪ್ರಕಾಶದಿಂದ ಪ್ರಜ್ವಲಿಸತೊಡಗಿತು , ಹಣೆಯ ಕುಂಕುಮ ಈಶ್ವರನ ಫಾಲನೇತ್ರದಂತೆ ಉರಿಯತೊಡಗಿತು .

   ಆಕಾಶದಲ್ಲಿ ಎರಡು ಬಾರಿ ಕೋಲ್ಮಿಂಚು ಕಾಣಿಸಿಕೊಂಡು , ಆಗಷ್ಟೆ ಬೀಸತೊಡಗಿದ್ದ ಚಿಕ್ಕ ಮಾರುತವೂ ಸ್ತಬ್ಧವಾಗಿ ಹೋಗಿ, ಸ್ಮಶಾನದಲ್ಲಿ ಆಘಾತಕರ ಮೌನ ಸ್ಥಾಪಿತವಾಗುತ್ತಿದ್ದಂತೆಯೇ ಗೋರಿಯೊಳಗಿನ ಬಾಣಂತಿಯ ಹೆಣ ಅತ್ಯಂತ ಸ್ಪಷ್ಟವಾಗಿ , ನಿಖರವಾಗಿ ಮತ್ತು ನೆಟ್ಟಗೆ ನಿಟಾರಾಗಿ ಎದ್ದು ಕುಳಿತುಕೊಂಡಿತ್ತು!
   ಅದು ಸುಬ್ಬಮ್ಮನ ಕಡೆ ಮುಖ ಮಾಡಿತ್ತು.

 ಶಾಸ್ತ್ರಿಗಳ ಮಂತ್ರಗಳು ಮತಷ್ಟು ಉಧೃತವಾದವು . ಎರಡನೇ ಆವೃತ್ತಿಯ ಆರಂಭವಾದವು . ಮಾಟಗಾತಿ ಸುಬ್ಬಮ್ಮ ಶವದ ಕೊರಳಿಗೆ ದೇವ ಕಣಗಲೆಯ ರಕ್ತಗೆಂಪು ಬಣ್ಣದ ಹಾರವನ್ನು ತೊಡಿಸಿ ತನ್ನ ಬಲ ಮುಂಗೈನ ನರವನ್ನು ಸಟಕ್ಕನೆ ಕುಯ್ದುಕೊಂಡು , ಶವದ ಅಂಗೈಗಳ ಮೇಲಕ್ಕೆ ರಕ್ತ ತರ್ಪಣ ನೀಡಿ ಮಂತ್ರ ಪಠಣ ಮಾಡುತ್ತಿದ್ದಂತೆಯೇ...

      ಹೊತ್ತಿಕೊಂಡಿತು ಜ್ವಾಲೆ !  

       ಆಗ ಬಿತ್ತು ಒಂದು ಹನಿ ಜ್ವಾಲೆ...
       ಅವಳ ಅಂಗೈ ಮಧ್ಯದ ಗೆರೆಯ ಮೇಲೆ!


      ಕಾಮಕರ್ಣ ಪಿಶಾಚಿನಿ ಮಾಟಗಾತಿ ಸುಬ್ಬನಿಗೆ ಹೋಲಿದಗಿತ್ತು... ಕ್ಷುದ್ರ ಸಾಧನೆಯ ಉತ್ಕೃಷ್ಟ ಅಂತ ಸಾಧಿಸಿಯಾಗಿತ್ತು!! ಕ್ಷುದ್ರ ಲೋಕದ ಅತಿದೊಡ್ಡ ಮಾಟಗಾತಿ ಬೆಂಗಳೂರಿಗೆ ಹಿಂತಿರುಗಿದವಳೇ ಮೊದಲಿಗೆ ಭೇಟಿನೀಡಿದ್ದು ಹಿಮಾಂಶುವಿನ ತಾಯಿ ಪ್ರಶಾಂತಿನಿ ಮನೆಗೆ!
        ಪ್ರಶಾಂತಿನಿ!!?
                                                           (ಮುಂದುವರೆಯುತ್ತದೆ-To be continued)
close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →