" ಹಿಮು, ನನ್ನ ಜೊತೆ ಜೀವನ ಪೂರ್ತಿ ಇರುತ್ತಿಯಾ?" ಶಾಲಿನಿ ತನ್ನ ಮೌನ ಮುರಿದು ಈ ಮಾತು ಹೇಳುತ್ತಿದಂತೆ ಸ್ತಂಭಿಭೂತನಾಗಿ , ಅಚ್ಚರಿಯಾಗಿ , ರೊಮಾಂಚನವಾಗಿ ಶಾಲಿನಿಯನ್ನು ನೋಡುತ್ತಾ ನಿಂತುಬಿಟ್ಟ.
ಆಗ ರಾತ್ರಿ 10 ಗಂಟೆ!
ಹುಣ್ಣಿಮೆಯ ಚಂದ್ರ ತನ್ನ ಸೌಂದರ್ಯವನ್ನು ಕೇವಲ ಮಲ್ಲೇಶರಂನ 7ನೇ ಕ್ರಾಸ್‌ನ ಆ ಮನೆಯ ಮೇಲೆಯೆ ಬೀರುತ್ತಿದ್ದನೆನೋ ಎಂದು ಭಾಸವಾಗುತ್ತಿತ್ತು. ಅದು ಡಿಸೆಂಬರ್‌ನ ಆರಂಭದ ದಿನಗಳು ಚಳಿ ಮೈ ಕೊರೆಸುತ್ತಿತ್ತು . ಬೆಳಗ್ಗೆಯಿಂದ ಗಿಜಿಗುಡುತ್ತಿದ್ದ ಮಲ್ಲೇಶರಂನ ರಸ್ತೆಗಳು ಶಾಂತವಾಗಿತ್ತು , ಸಂಪಿಗೆ ಹೂವಿನ ಘಮ ಮುಗಿಗೆ ನಾಟುತ್ತಿತ್ತು , ಅಲ್ಲಿ ಶಾಲಿನಿ-ಹಿಮುವಿನ ನಡುವೆ ಮೌನ ಮಾತಡಿತ್ತು , ತನ್ನ ನಗುವಿನಲ್ಲೆ ,ಕಣ್ಣಲ್ಲೆ ಒಪ್ಪಿಗೆ ಸೂಚಿಸಿದ್ದ ಹಿಮಾಂಶು.
ಆಗ ಶಾಲಿನಿಗೆ ನೆನಪುಗಳ ಸೊನೆಮಳೆ ಬಂದಂತ್ತಿತ್ತು . ಸೇಂಟ್ ಡೇವಿಡ್ ಕಾಲೇಜಿನಲ್ಲಿ ಮೃದುವಾದ ಕಣ್ಣುಗಳಲ್ಲಿ ಆಸೆಯನ್ನು ಹೊತ್ತು ಬಂದಿದ್ದ ಹಿಮಾಂಶು ನೆನಪಾದ , " can you mind your own work " ಅಂತ ರೇಗಿದ್ದ ಹಿಮಾಂಶು ನೆನಪಾದ, ಸ್ಯಾಂಕಿ ರಸ್ತೆಯ ಬದಿಯಲ್ಲಿ ಕಾಫಿ ಕೊಡಿಸಿದ್ದ ಹಿಮು ನೆನಪಾದ , ನಲ್ಲಮಲ ಅರಣ್ಯದ ಅ ಕತ್ತಲಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ ಪ್ರೀತಿಯ ಹಿಮು ನೆನಪಾಗಿಬಿಟ್ಟ . ಶಾಲಿನಿಯ ಮನಸ್ಸು ಒಮ್ಮೆಲೆ ತುಂಬಿ ಬಂದಿತ್ತು . 96 ದಿನಗಳಿಂದ ನೋಡದೆ ಅವನನ್ನು ಪ್ರೀತಿಸಿದ ಹಿಮಾಂಶು ಪಕ್ಕದಲ್ಲಿದ್ದಾನೆ . ಅವಳ ಕಣ್ಣುಗಳಲ್ಲಿ ಪ್ರೀತಿ ಬೆರೆತ ಆಶರ್ಯ!!
ಶಾಂತವಾದ ಆ ರಸ್ತೆಯಲ್ಲಿ ಮೌನ ಮಾತಾಗಿ , ಮಾತು ಪ್ರೀತಿಯಾಗಿ ಹಿಮಾಂಶುವಿನ ಹೆಗಲ ಮೇಲೆ ತನ್ನ ತಲೆಯಿಟ್ಟು ಶಾಲಿನಿ ಕನಸ್ಸಿನ ಕೋಟೆ ಕಟ್ಟತ್ತ ಅವರಿಬ್ಬರು ನಡೆಯುತ್ತಾ ನಡೆಯುತ್ತಾ ಕನಸ್ಸಿನ ಕೋಟೆಯೊಳಗೆ ಕಣ್ಮರೆಯಾಗಿ ಬಿಟ್ಟರು.
ಕಾಲ ಸ್ತಬ್ಧವಾಯ್ತು!! ಹುಣ್ಣಿಮೆಯಲ್ಲಿ ನಿಶಬ್ಧ ಅವರಿಸಿತು.....
******************************
ಸುಬ್ಬಮ್ಮನೆಂಬ ಅತಿ ಕ್ರೂರ ಮಾಟಗಾತಿ ತನ್ನ ಶಕ್ತಿ , ಸಾಧನೆಯಾದ ಕಾಮಕರ್ಣ ಪಿಶಾಚಿಯನ್ನು ಬಳಸಿ ಸರ್ವನಾಶಕ್ಕೆ ಅಣಿಯಾಗಿ , ಆಲ್ಗೆಜಂಡರ್ ರಾಜನಾಥ ಚಟರ್ಜಿ ನಾಶಕ್ಕೆ ನಿಂತಾಗ ಕರ್ಣ ಪಿಶಾಚಿ ಕೋಪಗೊಂಡಿದ್ದಳು . ಅದು ಕರ್ಣ ಪಿಶಾಚಿಯ ಸಾಧನೆಯ ವಿರುದ್ಧದ ಬಳಕೆ . ಬೆಂಗಳೂರು ತಲಘಟ್ಟಪುರದ ಸ್ಮಶಾನದಲ್ಲಿ ಮಾಟಗಾತಿ ಪೂಜೆ ಆರಂಭಿಸಿದರೆ ಪ್ರಶಾಂತಿನಿ ಅದೆಲ್ಲೊ ದೂರದಲ್ಲಿ ಕೊಲೆ ಮಾಡುವ ಹೊತ್ತಿಗೆ ಕರ್ಣ ಪಿಶಾವಿನಿ ತಿರುಗಿ ಬಿಳುತ್ತಾ ಬಂದಳು ಅದರ ಜೊತೆಗೆ ಕರೀಂ ಬಾಬಾ ಎಂಬ ಮುಸ್ಲಿಂ ಮಾಂತ್ರಿಕ ಸೇಡಿಗಾಗಿ ಆತೊರೆದ . ಸುಬ್ಬಮ್ಮ ಯಾರದೋ ಸರ್ವನಾಶಕ್ಕೆ ನಿಂತವಾಳು ಅವಳ ಸರ್ವನಾಶಕ್ಕೆ ಬೇರೊಬ್ಬರು ನಿಂತಿದಿದ್ದಾರೆಂನುದು ಮರೆತೆ ಬಿಟ್ಟಳು . 8ನೇ ವಾರದಲ್ಲಿ ಸುಬ್ಬಮ್ಮನ ಅಷ್ಟು ಬಲವು ಉದುಗಿ ಹೋಗಿತ್ತಿತ್ತು.
* * *
ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್ ತನ್ನ ಇಂಜಿನ್ ಆನ್ ಮಾಡಿಕೊಂಡು ಡಿಸೇಂಬರ್‌ನ ಚಳಿಯಲ್ಲಿ ಸಾಧಾರಣ ಎನ್ನಿಸುವಷ್ಟು ಪ್ರಯಾಣಿಕರನ್ನು ಬೆಂಗಳೂರಿನಿಂದ ಹೊತ್ತೊಯ್ತಿತ್ತು . ಆ ಕೊಲೆಗಳ ಭಯ ಇನ್ನ ಪೋಲಿಸರಿಗೆ ಹಾಗೇಯೆ ಇತ್ತು , ಬೋಗಿ ಬೋಗಿಯಲ್ಲು ಪೋಲಿಸರ ಸದ್ದು , ಹುಣ್ಣಿಮೆಯೆ ದಿನವದು ಟ್ರೇನ್ ಬೆಂಗಳೂರು ಅಂಧ್ರ ದಾಟಿ ಒಡಿಶಾದ ಭುಭನೇಶ್ವರ ತಲುಪಿತ್ತು . ಕಪ್ಪು ಸುಂದರಿ ಮತ್ತೆ ಮತ್ತೆ ತನ್ನ ಸೌಂದರ್ಯ ಸೂಚಿಸುತ್ತಿದ್ದಳು. ಹುಣ್ಣಿಮೆಯ ರಾತದರಿಯಲ್ಲಿ ಕರ್ಬೊಗೆಯು ಆಕಾಶಕ್ಕೆ ಸೇರುವ ಅ ಕಪ್ಪು ಬಿಳುಪು ಆಟ ಮನಮೋಹಕವಾಗುತ್ತಿತ್ತು . 16 ಭರ್ಬರ ಹತ್ಯೆ ಕಂಡಿದ್ದ ಪ್ರಶಾಂತಿ ಎಕ್ಸ್‌ಪ್ರೇಸ್ ಭರ್ತಿ 3 ತಿಂಗಳ ನಂತರ ಶಾಂತವಾಗುತ್ತಾ ಬಂತು . ಅಷ್ಟು ಹತ್ಯೆಗಳನ್ನು ಮರೆತು ತನ್ನ ದೈನಿಕ ಓಡಾಟ ಪ್ರಾರಂಭಿಸಿತ್ತು ಕರ್ನಾಟಕ-ಅಂಧ್ರದ ಜೀವನಾಡಿ ಪ್ರಶಾಂತಿ ಎಕ್ಸ್‌ಪ್ರೇಸ್.
ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ಹಿಂದಿನ ಪ್ರಶಾಂತತೆ ಕಾಣಿಸಿತ್ತು !ಹುಣ್ಣಿಮೆಯಲ್ಲಿ ನಿಶಬ್ಧ ಅವರಿಸಿತ್ತು......
*****************
ಸುಬ್ಬಮ್ಮ ತನ್ನ ಮೊದಲ ಪೂಜೆ ಆರಂಭಿಸಿದ ದಿನದಿಂದಲೇ ಗೆಲುವು ಸಾಧಿಸುತ್ತಾ ಹೋದಳು , ಅದು ಸ್ವತಃ ಕರ್ಣ ಪಿಶಾಚಿಯನ್ನು ಬಳಸಿ ಪಡೆಯುತ್ತಿದ್ದ ಗೆಲುವು .ಕರ್ಣ ಪಿಶಾಚಿಗೆ ಅಷ್ಟು ವಾರಗಳು ನೆತ್ತರು ಅರ್ಪಿಸಿ ತಣಿಸಿದ್ದಳು ಅದರೂ ಕರ್ಣ ಪಿಶಾಚಿಯ ಉಗ್ರರೂಪ ತಣಿಸಲಾಗಲಿಲ್ಲ ಅವಳಿಗೆ, ಜೊತೆಗೆ ಕರೀಂ ಬಾಬಾನ ಶಕ್ತಿ , ಮುಸ್ಲಿಂ ವಾಮಾಚಾರ ಲೋಕವೇ ಹಾಗೆ ಅದು ತಕ್ಷಣ ತನ್ನ ಕಾರ್ಯ ಶುರುಮಾಡದೆಯಿದ್ದರು . ಭರ್ತಿ ತನ್ನೆಲ್ಲ ಶಕ್ತಿಯನ್ನು ತೋರಿಸಲು ಹಪಹಪಿಸುತ್ತದೆ . ಕೇವಲ ಎಂಟೊಂಬತ್ತು ವಾರದಲ್ಲಿ ಮಾಟಗಾತಿ ಸುಬ್ಬಮ್ಮ 16 ಬಲಿ ಪಡೆದು ಬೀಗುತ್ತಿದ್ದಳು . ಆಗಲೇ ನೋಡಿ ಕರೀಂ ಬಾಬಾ ಹಿಮಾಂಶುವಿನ ನೆರವು ಪಡೆದಿದ್ದು . ಹಿಮು ಅರೆಷ್ಟ್ ಆಗಿ , 17ನೇ ಬಲಿಯಾಗಲು ಅವಕಾಶ ನೀಡದೆ ಇದ್ದದ್ದು . ಅದು ಹುಣ್ಣಿಮೆಯ ದಿನ ಕರ್ಣ ಪಿಶಾಚಿಗೆ ಒಂದು ಬಲಿ ಅರ್ಪಿಸಿಲ್ಲವೆಂದರೆ ಉಗ್ರರೂಪಿಯಾಗಿ ತನ್ನೆನ್ನೆ ಬಲಿ ಪಡೆಯುತ್ತಾಳೆ ಎಂದು ಗೊತ್ತಾಗುತ್ತೆ . ಮುಸ್ಲಿಂ ಮಾಂತ್ರಿಕ ಕರೀಂ ಬಾಬಾ ಪುತ್ತೂರಿನಿಂದಲೇ ತನ್ನ ಪೂಜೆ ಆರಂಭಿಸಿದ್ದ . ಮೆಲ್ಲನೆ ಧ್ವನಿಯಲ್ಲಿ ಆರಂಭವಾಗಿದ್ದ ಈ ಸಾಲು ಮುಗಿಯುವಷ್ಟರಲ್ಲಿ ಕಿವಿ ಹೊಡೆದು ಹೋಗುವಷ್ಟು ಜೋರಾಗುತ್ತಿತ್ತು .
"ಯೋಮಾಯುನ್ ಪಿಕ್ಕ್ ಫಿಸೂರಿ ಪತುತೂನಾ ಆಫ್ ವಾಜಾ!"
" ಈ ದಿನವೂ ಶಂಕವು ಊದಲಾಗುತ್ತದೆ . ಆಕಾಶ ತೆರೆಯಲ್ಪಡುತ್ತದೆ , ಆಗ ಶವಗಳು ಗುಂಪು ಗುಂಪಾಗಿ ಎದ್ದು ಬರುತ್ತವೆ "
ತಾನು ಸಾದಿಸಿದ್ದ ಕರ್ಣ ಪಿಶಾಚಿಯಿಂದಲೇ ಸುಬ್ಬಮ್ಮನ ಅಂತಿಮದ ಆರಂಭವಾಗಿತ್ತು . 16 ಶವಗಳು ಗುಂಪು ಗುಂಪಾಗಿ ಎದ್ದು ಬಂದು ಸುಬ್ಬಮ್ಮನೆಂಬ ಅತಿಕ್ರೂರ ಮಾಟಗಾತಿಯನ್ನು ಅಷ್ಟೆ ಕ್ರೂರವಾಗಿ ಬಲಿ ಪಡೆದುಬಿಟ್ಟವು.
ಕಾಲ ಸ್ತಬ್ಧವಾಯ್ತು!! ಹುಣ್ಣಿಮೆಯಲ್ಲಿ ನಿಶಬ್ಧ ಅವರಿಸಿಕೊಳ್ಳುತ್ತಾಲೆ ಅದೆಲ್ಲೊ ದೂರದ ಪುತ್ತೂರಿನ ಜಮೀಯ ಮಸೀದಿಯ ಪಕ್ಕದಲ್ಲಿದ್ದ ಶವ ಕಂಪಿಸಿದಂತಾಯ್ತು. ಮಲ್ಲೇಶರಂ ಏಳನೇ ಕ್ರಾಸ್‌ನ ಬೀದಿಯ ತಿರುವಿನಲ್ಲಿ ಪ್ರಶಾಂತಿನಿ ಕಾಣಿಸಿಕೊಳ್ಳುತ್ತಾಳೆ . ಅದನ್ನು ಗಮನಿಸಿದ ಕರೀಂ ಬಾಬಾ ಬೆಚ್ಚಿಬಿದ್ದ .
ಅಲ್ಲಿಂದ ಆರಂಭವಾದದ್ದೆ ಮತ್ತೊಂದು ಕಥೆ
"ಹುಣ್ಣಿಮೆಯ ರಹಸ್ಯ!"
(ಮುಗಿಯುತ್ತದೆ)