Wednesday, 19 November 2014

ಹುಣ್ಣಿಮೆಯ ನಿಶಬ್ಧ ಭಾಗ-9

     ಕತೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

     ತಾನು ಪ್ರೀತಿಸಿದ ಹಿಮಾಂಶು ಆಗ ತಾನೇ ತನ್ನ ಪರ ಒಲಿಯುತ್ತಿದ್ದ. ಅದೊಂದು ರಾತ್ರಿ, ಯಾರು ಅವರನ್ನು ಕರೆದಿರಲಿಲ್ಲದಿದ್ದರೆ ಶಾಲಿನಿ ತನ್ನ ಮನಸ್ಸಿನ ಅಷ್ಟು ವಿಚಾರವನ್ನು ಹಿಮಾಂಶುವಿಗೆ ತಿಳಿಸಿಬಿಡುತಿದ್ದಳೇನೊ . It just happened . ಅವನೊಡನೆ ಕಾಡುವ ಮೌನದಲ್ಲೆ ಭರ್ತಿ ಒಂದು ಗಂಟೆ ಕೂತು ಎದ್ದು ಹೋಗಿದ್ದ ಶಾಲಿನಿಯ ಹೃದಯದಲ್ಲಿ ಇಂದೆಂದೂ ಕಾಣದ  ಸಂತೋಷ .  ಕತ್ತಲ ರಾತ್ರಿಯಲ್ಲಿ ಗಡಿಯ ರೇಕೆಯಿಲ್ಲದೆ ಹಕ್ಕಿಯಂತೆ ಇಡೀ ಪ್ರಪಂಚವನ್ನ ಸುತ್ತಿ ಬಂದಿತ್ತು . ಹಿಮಾಂಶು ತನ್ನೊಡನೆ ಕಳೆದಿದ್ದ ಪ್ರತಿ ಸೆಕೆಂಡ್‌ನ್ನು ನೆನಪಿಸಿಕೊಳ್ಳುತ್ತಿದ್ದಳು ಶಾಲಿನಿ. ಆ ರಾತ್ರಿ ಅವಳಿಗೆ ನಿದ್ದೆ ಬಂತೋ ಏನೋ ಅದರೆ ಹಿಮಾಂಶುವಿನೊಡನೆ ಸಾವಿರ ಸಾವಿರ ವರ್ಷ ಕಳೆಯುವ ಕನಸಂತು ಬಿದ್ದಿತ್ತು .ಬೆಳಗಿನ ನಿಚ್ಚಳ ಸೂರ್ಯ ಅದಗಲೇ ತನ್ನ presence  ತೋರಿಸಿದ್ದ.ಎಷ್ಟು ಬೇಗ ಬೆಳಕಾಯಿತು!

    ಇದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಮನೆಗೆ ಹೋಗುವ ಸಂಭ್ರಮ ಅರಣ್ಯವನ್ನು ಬಿಟ್ಟು ಹೊರಡುವ ತಳಮಳದಲ್ಲಿ ಕೂಡಿದ್ದರೆ . ಹಿಮಾಂಶು-ಶಾಲಿನಿಗೆ ಮತ್ತೇನೋ ಸಂಭ್ರಮ!  ಅದು ಮಾತುಗಳಿಲ್ಲದ ನಿಚ್ಚಳ ಮೌನ , ಬರೀ ಕಣ್ಣಲ್ಲೆ ಗಂಟೆಗಟ್ಟಲೇ ಮಾತಾಡಿದರು ಸಾಲದಷ್ಟು ಭವನೆಗಳು ಹೊರಡುತ್ತಿದ್ದವು . ಅಲ್ಲಿ ಇದ್ದದ್ದು ನೂರಾರು ದಿನಗಳ ಆರಾಧನೆ , ಮೌನದಲ್ಲೆ ಕೂಡಿದ್ದ ಮಾತುಗಳು , ಭಾವನೆಗಳು ತುಂಬಿದ್ದ ಕಣ್ಣುಗಳು , ಪ್ರೀತಿ ತುಂಬಿದ್ದ ಹೃದಯಗಳು . ನಲ್ಲಮಲ ಅರಣ್ಯದ ಮರಗಳೇ ಕೆಲಕಾಲ ನಾಚಿ ನಲಿದವು , ಮೌನದಿಂದಲೇ ಅಷ್ಟು ಮರಗಳು ಇವರ ಪ್ರೀತಿ ಫಲಿಸಲಿ ಅನ್ನುತ್ತೀವೆ ಎಂದು ಭಾಸವಾಗಿತ್ತು..

    ಕಾಲ ಸ್ತಬ್ಧವಾಗಿತ್ತು!!

           ಸಮಯ 12 ಗಂಟೆ 10 ನಿಮಿಷ
           ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್‌ ಶ್ರೀಕಾಕುಳಂ ರೈಲು ನಿಲ್ದಾಣಕ್ಕೆ ಬಂದು ನಿಂತಿತ್ತು . ಹಿಮಾಂಶು - ಶಾಲಿನಿ ಎದುರು ಬದರು ಸೀಟಿನಲ್ಲೆ ಕೂತಿದ್ದರು . ಅವರ ನಾಲಿಗೆಯಿಂದ ಮಾತು ಮರಿಚಿಕೆಯಾಗೆಯಿತ್ತು . ಆಗ ಬಂದವರೇ DYSP ಶಿವರಾಮಪ್ಪ ಹಿಮಾಂಶುನನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದರೆ . ಶಾಲಿನಿ ಆಘತದಿಣದ ಕಿರುಚಿದಳು . ಬೆಂಗಳೂರಿಗೆ ಬಂದವಳೇ ತನ್ನ ವೈಭವೋಪೇತ ಮನೆಯ ಬೆಡ್‌ರೂಮಿಗೆ ಹೋದವಳೇ ಒಂದೇ ಸಮನೆ ಆಳುತ್ತಿದ್ದಳು . ಭರ್ತಿ ಐದು ದಿನದ ನಂತರ ತನ್ನ ಹಡಗಿನಂತ BMW  ಕಾರ್‌ ಹತ್ತಿದವಳೇ ಹಿಮಾಂಶುನನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಹೋಗಲು ಅಣಿಯಾದಳು . ಕಾರ್‌ ಮಲ್ಲೆಶ್ವರ ಏಳನೇ ಕ್ರಾಸ್‌ನಿಂದ ಹೊರಬಿದ್ದು ಶೇಶಾದ್ರಿಪುರಂ ರೋಡ್‌ ದಾಟಿ ಮೆಜಸ್ಟಿಕ್‌ ತಲುಪಿತ್ತು ಅಷ್ಟರಲ್ಲಗಲೇ ಶಾಲಿನಿಯ ಮನಸ್ಸು ಬದಲಾಗಿತ್ತು . ಅವಳ ಮನಸ್ಸು ಹಿಮಾಂಶು ಕೊಲೆಗಾರನಲ್ಲ ಇನ್ನು ಕೇಲವೆ ದಿನದಲ್ಲಿ ನನ್ನ ಬಳಿ ಬರುತ್ತಾನೆ ಎಂದು ತೀರ್ಮಾನ ಮಾಡಿದವಳೇ ಯಾವುದೋ ಯೋಚನೆಯಲ್ಲಿ ಅಲ್ಲೆ ಬಳಿಯಿದ್ದ ಪಾರ್ಕ್‌ನಲ್ಲಿ ಮೌನದಿಂದ ಕುಳಿತುಬಿಟ್ಟಳು..

                                                                  **** *** ****
     ( ರವಿ ಬೆಳಗೆರೆಯವರ ಬರಹಗಳ ಪ್ರೇರಣೆಯಲ್ಲಿ)

     ಮೊದಲ ಪೂಜೆ ಆರಂಭಸಿದ್ದ ಮಾಟಗಾತಿಗೆ 14 ವರ್ಷಗಳ ಹಿಂದಿನ ನೆನಪುಗಳು ಕಾಡ ತೋಡಗಿತು.

   ಅಂದು!

  ನಿವೇದಿತಾ ಸತ್ತ ವಿಷಯವನ್ನು ಪ್ರಶಾಂತಿನಿ ಬಂದು ಮಾಟಗಾತಿ ಸುಬ್ಬಮ್ಮನಿಗೆ ಹೇಳಿದ್ದೆ ತಡ . ತನ್ನ ಗುರಿ ಸಾಧನೆಗೆ ಸಮಯ ಬಂದಿದೆ ಎಂದು ತಿಳಿದವಳೆ ಅವಳ ಪ್ರಯಾಣ ಆಂರಭವಾಗಿಬಿಟ್ಟಿತ್ತು!

  ಧೇನಿಸು ತಾಯೇ...! ಎಂದು ಹೇಳುತ್ತಾ ಹೊರಟ ಸುಬ್ಬಮ್ಮ ಅಂಧ್ರದ ಗಡಿ ದಾಟಿ ಒಡಿಶಾದ ಕಾಮಾಕ್ಯ ದೇಗುಲಕ್ಕೆ ಬರುವಷ್ಟರಲ್ಲಿ ಹುಣ್ಣಿಮೆಯಾಗಿತ್ತು . ಅಲ್ಲಿ ಆಕೆಗೆ ಸಿಗುತ್ತಾನೆ ಅಘೋರಿ ಸಾಧನೆಗೈದ ಪ್ರಜ್ವಲನಾಥ . ಕಾಮಕರ್ಣ ಪಿಶಾಚಿಯನ್ನು ಹೋಲಿಸಿ ಕೊಳ್ಳಬೇಕಾದರೆ ಏನು ಮಾಡಬೇಕು ಎಂದು ವಿವರ ನೀಡುತ್ತಿದ್ದ ಪ್ರಜ್ವಲನಾಥನಿಗೂ ಕಾಣಿಸಿದ್ದು ಅದೇ "ಸರ್ವನಾಶ!"

    ಇಲ್ಲೆ ಪಶ್ವಿಮ ಬಂಗಾಳದ ಕಾಡಿನಲ್ಲಿ ಕಾಮಕರ್ಣ ಪಿಶಾಚಿಯನ್ನು ಸಾಧಿಸಿರುವ ಏಕೈಕ ಮಾಂತ್ರಿಕನಿದ್ದಾನೆ . ಅವನ ಬಳಿ ಹೋದರೆ ನಿನ್ನ ಗುರಿ ಮುಟ್ಟ ಬಹುದೆಂದು ಹೇಳುತ್ತಿದ್ದ ಪ್ರಜ್ವಲನಾಥ ಇದ್ದಕ್ಕಿದ್ದಂತೆ ಪಶ್ಚಿಮ ದಿಕ್ಕಿನೆಡೆಗೆ ದಾವಿಸಿ ಬಿಟ್ಟ.. ಅವನಿಗೆ ಸುಬ್ಬಮನ ಭವಿಷ್ಯ ಕಾಣಿಸಿತ್ತಾ..??

    ಅದು ಹುಲಿಗಳಿಗೆ ತಾಣವಾಗಿದ್ದ ಪಶ್ಚಿಮ ಬಂಗಾಳದ ರುದ್ರ ಕಾಡು! 14 ವರ್ಷ ಬಾಬಾ ಹೇಳಿದ ಎಲ್ಲಾ ಪೂಜೆಗಳನ್ನು ಮಾಡಿ ಅವನ ಎದುರಿಗೆ ನಿಲ್ಲುತ್ತಾಳೆ ಮಾಟಗಾತಿ ಸುಬ್ಬಮ್ಮ . ಅವನ ಕಣ್ಣಗಳಲ್ಲೆ ಒಂದು ರುದ್ರ ಭಯಂಕರ ನೋಟ . ಡೊಡ್ಡದಾಗಿ ಬೆಳೆದಿರುವ ಗಡ್ಡ , ಹಸಿರು ಜುಬ್ಬಾ ಧರಿಸಿ ಸಶ್ಮಾನ ಮೌನದಲ್ಲಿ ಕುಳಿತಿರುವವನ ಹೆಸರು ಅಯಾಮಾನ್‌ ಅಲ್‌ ಅರಿಫ್‌ !
    ಅರಿಫ್‌ ಬಾಬಾ!!

 ಮಾಟಗಾತಿ ಸುಬ್ಬಮ್ಮನ ಮುಖದಲ್ಲಿ ಹಿಂದೆಂದೂ ಕಾಣದ ಕಾಟಿಣ್ಯತೆ ಮತ್ತು ಏಕಾಗ್ರಾತೆಗಳು ಜಮೆಯಾಗಿದ್ದವು . ಅದು ಅವಳಲ್ಲಿ ಕಾಣಲರಂಭಿಸಿದ ಮೊದಲ Ruthlessnessನ ಅನುಭವ . ಸತ್ತ ಹೆಂಗಸೊಬ್ಬಳ ಗೋರಿ ಮುಂದೆ ಕುತ್ತಿದ್ದ ಮಾಟಗಾತಿ ಮತ್ತು ಅರಿಫ್‌ ಬಾಬಾ ಇಬ್ಬರಿಗೂ ನಿರ್ದಯತೆ ಜಮೆಯಾಗಿದ್ದವು . ನಿಧಾನವಾಗಿ ಸಣ್ಣ ದನಿಯಲ್ಲಿ ಆರಂಭವಾದ ಮಂತ್ರಗಳು ಹತ್ತು ನಿಮಿಷ ಕಳೆಯುವಷ್ಟರಲ್ಲಿ ಕಿವಿಯ ಟಿಂಪ್ಯಾನಮ್‌ ಒಡೆದು ಹೋಗುವಷ್ಟು ತೀಕ್ಷ್ಣವಾಗಿಬಿಟ್ಟವು . ಹುಣ್ಣಿಮೆಯ ಆ ಕತ್ತಲ ರಾತ್ರಿಯಲ್ಲೆ ಭಯನಕತೆ ಸೃಷ್ಟಿಯಾಗಿತ್ತು .ಬಾಬಾ ಮೊದಲಿಗೆ ಸುಬ್ಬಮ್ಮನಿಂದ ದಿಗ್ಬಂಧನ ಪೂಜೆ ಮಾಡಿಸೊದರು . ಗೋರಿಯ ಮುಂದೆ ಪಶ್ಚಿಮಾಭಿಮುಖವಾಗಿ ಕುಳಿತ ಅವಳ ಹಣೆಗೆ ಬಾಬಾ ತಮ್ಮ ಬಲಗೈ ಬೆರಳಿನಿಂದ ಕತ್ತರಿಸಿದ ರಕ್ತ ಕುಂಕುಮ ತಿಲಕ ವಿವರಿಸಿದರು
.
   " ಧೇನಿಸು ಮಗಳೇ... ಬದುಕುವ ಆಸೆಯನ್ನು ಕೂಡ ಬಿಟ್ಟು ಧೇನಿಸು . ಕ್ಷುದ್ರ ಲೋಕದಲ್ಲಿ ಆಸೆಗಳಿಗೆ ಜಾಗವಿಲ್ಲ . ಕರ್ಣ ಪಿಶಾಚಿಯ ಮುಂದೆ ಕಾಮನೆಗಳಿಗೆ ಸ್ಥಳವಿಲ್ಲ . ಇಲ್ಲಿ ಎಲ್ಲವನ್ನೂ , ಎಲ್ಲರನ್ನೂ ತ್ಯಜಿಸಬಲ್ಲೆ . ಆಕೆಯ ಪಾದಗಳಿಗೆ ಶಿರವಿಟ್ಟು ಅದನ್ನೂ ಒಪ್ಪಿಸಿಕೋ ಅನ್ನಬಲ್ಲೆ ಎಂಬಂತಹ ಮುಕ್ತತೆ ಬೇಕು .ನೀನು ನೀನೆಂಬುದನ್ನೂ ಮರೆತು ಕರ್ಣಪಿಶಾಚಿಯನ್ನು ಪ್ರಾರ್ಥಿಸು .ಹೇಳು ಮಗಳೇ... ನನ್ನೊಂದಿಗೆ ಹೇಳು..."

    ಆರಿಫ್‌ ಬಾಬಾ ದೊಡ್ಡ ದನಿಯಲ್ಲಿ ಸುಬ್ಬಮ್ಮನಿಗೆ ಆದೇಶ ನೀಡುತ್ತ ಮಂತ್ರ ಪಠಣ ಮುಂದುವರೆಸಿದರು .ಆದರೆ ದೊಡ್ಡ ದನಿಯಲ್ಲಿ ಅವರು ಹೇಳುತ್ತಿದ್ದ ಮಂತ್ರಗಳ ಪೈಕಿ ಒಂದೇ ಒಂದು ಚಿಕ್ಕ ಶಬ್ದವೂ ಅರ್ಥವಾಗಿರಲಿಲ್ಲ . ಆಗ ಇದ್ದಕ್ಕಿದಂತೆ ನೆಲೆಗೊಂಡ ಮೌನ , ಆ ಸ್ಮಶಾನದ ಕಾವಳದಲ್ಲಿ ಮತ್ತೂ ಭಯಾನಕವೆನ್ನಿಸತೊಡಗಿತು . ಗೋರಿಯ ಮೈ ಬಿರುಕು ಬಿಡತೊಡಗಿದೆ . ಬಾಬಾ ಯಾವುದನ್ನೂ ಗಮನಿಸಿದಂತೆ ಮಂತ್ರಪಠಣ ಮಾಡುತ್ತಲೇ ಇದ್ದಾರೆ . ಗೋರಿಯ ಆಳದಲ್ಲಿ ಅದು ಕದಲತೊಡಗಿದೆ... ಕದಲುತ್ತಿರುವುದು ಹಸೀ ಬಾಣಂತಿಯ ದೇಹ ಎಂಬುದು ಗೊತ್ತಾಗುತ್ತಿದ್ದಂತೆಯೇ ಸುಬ್ಬಮ್ಮನ ದೇಹದಲ್ಲಿ ಕೆಲವು ಬದಲಾವಣೆಗಳಾದವು . ಕೈ ಬೆರಳುಗಳಿಗೆ ದೇಹದ ನೆತ್ತರೆಲ್ಲ ಹರಿದು ಬಂತೇನೋ ಎಂಬಂತೆ ಅವೆಲ್ಲವೂ ರಕ್ತವರ್ಣಕ್ಕೆ ತಿರುಗಿದವು . ನಾಲಗೆ ಕಳಚಿಕೊಂಡು ಹೊರ ಚಾಚಿಕೊಂಡಿತು . ಕಣ್ಣ ದೇದೀಪ್ಯಮಾನವಾದ ಪ್ರಕಾಶದಿಂದ ಪ್ರಜ್ವಲಿಸತೊಡಗಿತು , ಹಣೆಯ ಕುಂಕುಮ ಈಶ್ವರನ ಫಾಲನೇತ್ರದಂತೆ ಉರಿಯತೊಡಗಿತು .

   ಆಕಾಶದಲ್ಲಿ ಎರಡು ಬಾರಿ ಕೋಲ್ಮಿಂಚು ಕಾಣಿಸಿಕೊಂಡು , ಆಗಷ್ಟೆ ಬೀಸತೊಡಗಿದ್ದ ಚಿಕ್ಕ ಮಾರುತವೂ ಸ್ತಬ್ಧವಾಗಿ ಹೋಗಿ, ಸ್ಮಶಾನದಲ್ಲಿ ಆಘಾತಕರ ಮೌನ ಸ್ಥಾಪಿತವಾಗುತ್ತಿದ್ದಂತೆಯೇ ಗೋರಿಯೊಳಗಿನ ಬಾಣಂತಿಯ ಹೆಣ ಅತ್ಯಂತ ಸ್ಪಷ್ಟವಾಗಿ , ನಿಖರವಾಗಿ ಮತ್ತು ನೆಟ್ಟಗೆ ನಿಟಾರಾಗಿ ಎದ್ದು ಕುಳಿತುಕೊಂಡಿತ್ತು!
   ಅದು ಸುಬ್ಬಮ್ಮನ ಕಡೆ ಮುಖ ಮಾಡಿತ್ತು.

 ಶಾಸ್ತ್ರಿಗಳ ಮಂತ್ರಗಳು ಮತಷ್ಟು ಉಧೃತವಾದವು . ಎರಡನೇ ಆವೃತ್ತಿಯ ಆರಂಭವಾದವು . ಮಾಟಗಾತಿ ಸುಬ್ಬಮ್ಮ ಶವದ ಕೊರಳಿಗೆ ದೇವ ಕಣಗಲೆಯ ರಕ್ತಗೆಂಪು ಬಣ್ಣದ ಹಾರವನ್ನು ತೊಡಿಸಿ ತನ್ನ ಬಲ ಮುಂಗೈನ ನರವನ್ನು ಸಟಕ್ಕನೆ ಕುಯ್ದುಕೊಂಡು , ಶವದ ಅಂಗೈಗಳ ಮೇಲಕ್ಕೆ ರಕ್ತ ತರ್ಪಣ ನೀಡಿ ಮಂತ್ರ ಪಠಣ ಮಾಡುತ್ತಿದ್ದಂತೆಯೇ...

      ಹೊತ್ತಿಕೊಂಡಿತು ಜ್ವಾಲೆ !  

       ಆಗ ಬಿತ್ತು ಒಂದು ಹನಿ ಜ್ವಾಲೆ...
       ಅವಳ ಅಂಗೈ ಮಧ್ಯದ ಗೆರೆಯ ಮೇಲೆ!


      ಕಾಮಕರ್ಣ ಪಿಶಾಚಿನಿ ಮಾಟಗಾತಿ ಸುಬ್ಬನಿಗೆ ಹೋಲಿದಗಿತ್ತು... ಕ್ಷುದ್ರ ಸಾಧನೆಯ ಉತ್ಕೃಷ್ಟ ಅಂತ ಸಾಧಿಸಿಯಾಗಿತ್ತು!! ಕ್ಷುದ್ರ ಲೋಕದ ಅತಿದೊಡ್ಡ ಮಾಟಗಾತಿ ಬೆಂಗಳೂರಿಗೆ ಹಿಂತಿರುಗಿದವಳೇ ಮೊದಲಿಗೆ ಭೇಟಿನೀಡಿದ್ದು ಹಿಮಾಂಶುವಿನ ತಾಯಿ ಪ್ರಶಾಂತಿನಿ ಮನೆಗೆ!
        ಪ್ರಶಾಂತಿನಿ!!?
                                                           (ಮುಂದುವರೆಯುತ್ತದೆ-To be continued)

No comments:

Post a Comment