6 Dec 2014

ಹುಣ್ಣಿಮೆಯ ನಿಶಬ್ಧ ಭಾಗ-10

      ಹಿಮಾಂಶು ಬಂಧನವಾಗಿ ಅದಗಲೇ 95 ದಿನಗಳಾಗಿದ್ದವು , ಕೋರ್ಟ್‌‌ನಲ್ಲಿ ವಿಚಾರಣೆ ನಡೆಯುತ್ತಿತ್ತು... ಇನ್ನೇನೂ ನ್ಯಾಯಧೀಶರು ತೀರ್ಪು ನೀಡಬೇಕು ಆಗ ಬಂದವರೆ ಕ್ರೀಮಿನಲ್‌ ಲಾಯರ್‌   ಟಿ.ಎನ್‌. ಕೀಶೊರ್‌ ಚಂದ್ರ.. "ಇತ ನಿರಪರಾಧಿ" ಅಂದಕ್ಷಣ ಕೋರ್ಟ್‌‌ನಲ್ಲಿದ್ದ ಅಷ್ಟು ಜನಕ್ಕೆ ಅಚ್ಚರಿಯಾಗಿತ್ತು  ಒಬ್ಬ ಶಿವರಾಮಪ್ಪರನ್ನು ಬಿಟ್ಟು. DYSP ಶಿವರಾಮಪ್ಪ !
 ಸ್ವತಃ ಹಿಮಾಂಶುವೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು ನಿಜ ಏನೆಂಬುದು ಶಿವರಾಮಪ್ಪರಿಗೆ ಗೊತ್ತಿತ್ತು..!! ಆಗ ಸಿಗುತ್ತೆ ಕತೆಗೆ ಹೊಸ ತಿರುವು..

       ವಕೀಲ ಕೀಶೊರ್‌ ಚಂದ್ರ ತಮ್ಮ ವಾದ ಪ್ರಾರಂಭಿಸಿದ್ದೆ ತಡ ಕೋರ್ಟ್‌ನೊಳಕ್ಕೆ ಹೊಕ್ಕಿದ ಒಬ್ಬ Constable ಮುಖದಲ್ಲಿ ಅಚ್ಚರಿ ಬೇರೆತ ಭಯ ಅವರಿಸಿರುತ್ತೆ.
"ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ಮತ್ತೊಂದು ಕೊಲೆ" ಬೆಚ್ಚಿಬಿದ್ದರು ಪೋಲಿಸರು . ಹಿಮಾಂಶು ಕಣ್ಣಲ್ಲಿ ದುಃಖ, ಭಯ ಮತ್ತು ನಿರಾಕರಣೆ!.. ಭರ್ತಿ ಒಂದು ಗಂಟೆಯ ವಿಚಾರಣೆಯ ಬಳಿಕ ಹಿಮಾಂಶುವಿಗೆ ಜಾಮೀನು ಮಂಜುರಾಗಿತ್ತು . ಕೀಶೊರ್‌ ಚಂದ್ರರ ಮುಖದಲ್ಲಿ ಗೆಲುವು ಸಾಧಿಸಿದ ನಗೆ!

   ಅಂದು ಸಂಜೆ 5 ಗಂಟೆ!
    ಹಿಮಾಂಶೂ ಜೈಲಿನಿಂದ ಹೊರಬಂಧವನೇ ಆ ನಿರ್ಮನುಷ್ಯ ರಸ್ತಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುವಾಗ ಅವನಿಗೆ ಆ 14 ವರ್ಷದ ಹಿಂದಿನ ಕ್ರೂರ ನೆನಪುಗಳು ಕಣ್ಣಮುಂದೆ ಬಂತು. ಅದು ಮಾಟಗಾತಿ ಸುಬ್ಬಮ್ಮ ದೊಡ್ಡ ಸಾಧನೆಗೈದ ದಿನ . ಕಾಮಕರ್ಣ ಪಿಶಾಚಿಯನ್ನು ಓಲಿಸಿಕೊಂಡ ದಿನ . ಕ್ಷುದ್ರ ಲೋಕದಲ್ಲೆ ಅತಿದೊಡ್ಡ ಸಾಧನೆಯದು ಅದ್ಕೆ ತನ್ನ ಗುರುವಾದ ಅರೀಫ್‌ ಬಾಬಾನ ಆರ್ಶಿವಾದ ಎಷ್ಟಿತೆಂದರೆ ಆತ ತನ್ನ ಬದುಕನ್ನ ಆರ್ಪಿಸಿಬಿಟ್ಟಿದ್ದ.
* "ಧೇನಿಸು ಮಗಳೇ .... ಬದುಕುವ ಆಸೆಯನ್ನು ಕೂಡ ಬಿಟ್ಟು ಧೇನಿಸು . ಕ್ಷುದ್ರ ಲೋಕದಲ್ಲಿ ಆಸೆಗಳಿಗೆ ಜಾಗವಿಲ್ಲ . ಕರ್ಣ ಪಿಶಾಚಿಯನ ಮುಂದೆ ಕಾಮನೆಗಳಿಗೆ ಸ್ಥಳವಿಲ್ಲ . ಇಲ್ಲಿ ಎಲ್ಲವನ್ನೂ , ಎಲ್ಲರನ್ನೂ ತ್ಯಜಿಸಬಲ್ಲೆ. ಆಕೆಯ ಪಾದಗಳಿಗೆ ಶಿರವಿಟ್ಟು ಅದನ್ನೂ ಒಪ್ಪಿಸಿಕೋ ಅನ್ನಬಲ್ಲೆ ಎಂಬತಹ ಮುಕ್ತತೆ ಬೇಕು . ನೀನು ನೀನೆಂಬುದನ್ನೂ ಮರೆತು ಆಸೆಗಳನ್ನು ತೆಜಿಸು "* ಎಂದು ಬಾಬಾ ಹೇಳಿದ್ದರು. ಅದರೆ ಅವಳು ಆಸೆಯನ್ನು ತೇಜಿಸಿರಲಿಲ್ಲ . ಕೋಪವನ್ನು ತೆಜಿಸಿರಲಿಲ್ಲ . ದ್ವೇಷವನ್ನು ಕೂಡ.. ಅವಳ ಗುರಿ ಸರ್ವನಾಶ ಮಾಡುವುದಿತ್ತು..  ಕಾಮಕರ್ಣ ಪಿಶಾಚಿಯನ್ನು ಹೋಲಿಸಿಕೊಂಡ ಮೇಲೆ ಅದು ಅವಳ ಸರ್ವನಾಶಕ್ಕೆ ದಾರಿಯಾಗುತ್ತೆ ಅಂತ ಅವಳು ಕೂಡ ಊಹಿಸಿರಲಿಲ್ಲ . ಅದು ಉರ್ಗ ಕೋಪಿಯಾದ ಕರ್ಣ ಪಿಶಾಚಿಯ ಶಕ್ತಿ!
  
ಸರ್ವನಾಶದ ಮೊದಲ ಬಲಿ ಸ್ವತಃ ಅರೀಫ್‌ ಬಾಬಾ. ತನ್ನ ಗುರುವನ್ನು ಬಲಪಡೆದು ಉಗ್ರವಾಗಿ ನಗಲಾರಂಭಿಸಿದಳು ಸುಬ್ಬಮ್ಮ . ಅಂದೆ ಸರ್ವನಾಶದ ಮುನ್ನುಡಿಯಾಗಿ ಆಕೆ ಪ್ರಶಾಂತಿನಿ ಮನೆಗೆ ಬರುತ್ತಾಳೆ..... ತನ್ನ ತಾಯಿಯ ಮನೆಗೆ ಎಂದು ನೆನೆಯುತ್ತಾ ಒಮ್ಮೆಲೆ ಗದ್ಗತಿತನಾಗುತ್ತಾನೆ .

   ಅಷ್ಟರಲ್ಲಗಲೇ ಹಿಮಾಂಶು ಮಲ್ಲೇಶರಂ 7ನೇ ಕ್ರಾಸ್‌ಗೆ ತಲುಪಿದ್ದ. ವೈಭವೊಪೇತ ಮೊಲ ಬಿಳುಪಿನ ಬಂಗಲೆ ನೋಡುತ್ತಿದಂತೆ ಆ ಶ್ರೀಮಂತಿಕೆ ಕಣ್ಣು ಕುಕ್ಕುತ್ತಿತ್ತು. ಬಂಗಲೇ ಮುಂದೆಯೆ ಸಾಲು ಸಾಲು ಕಾರುಗಳು ಆದರೆ ಅದ್ಯವುದನ್ನು ಗಮನಿಸಿರಲಿಲ್ಲ ಆತನ ಮನಸ್ಸು ಆ ಬಂಗಲೇಯ ಎರಡನೇ ಮಹಡಿಯ ಕೊಣೆಯತ್ತ ನೆಟ್ಟಿತ್ತು . ಅದು ಶಾಲಿನಿಯ ರೂಮ್‌ . ಅವನು ಬರುವುದು ಅವಳಿಗೆ ಹೇಗೆ ತಿಳಿಯಿತೊ ಗೊತ್ತಿಲ್ಲ ಒಮ್ಮೆಲೆ ಓಡಿ ಬಂದು ಹಿಮಾಂಶುವಿನ ಮುಂದೆ ಬಿಕ್ಕಿ ಬಿಕ್ಕಿ ಆತ್ತುಬಿಟ್ಟಳು ಶಾಲಿನಿ . ಅದು 96 ದಿನಗಳಿಂದ ಬಚ್ಚಿಟ್ಟಿದ್ದ ಕಣ್ಣಿರು. ನಲ್ಲಮಲ ಅರಣ್ಯದ ಆ ಕತ್ತಲ ರಾತ್ರಿಯಲ್ಲಿ ಅಂದು ಅವರಿಸಿದ ಮೌನ ಇಲ್ಲು ಅವರಿಸಿತು . ಅವರಿಬ್ಬರಲ್ಲೂ ಮಾತು ಹೊರಡಲಿಲ್ಲ . ನಿಶಬ್ಧವೇ ನಾಚುವಂತಹ ನಿಚ್ಚಳ ಮೌನ . ಅವರಿಬ್ಬರು ಅದೊಂದು ಮಾತು ಹೇಳದಿದ್ದರು ಇಬ್ಬರ ಮನಸ್ಸಿಗೂ ಅದು ತಿಳಿದೆ ಇತ್ತು . ಅರಣ್ಯದ ಆ ಕತ್ತಲ ರಾತ್ರಿಯಲ್ಲಿ ಬಚ್ಚಿಟ್ಟಿದ್ದ ಮಾತು ಅವರಿಸುತ್ತಾ ಬಂತು . ಅವರಿಬ್ಬರು ದೂರದಲ್ಲಿದ್ದರಿಂದ ಪ್ರೀತಿ ಸಾವಿರ ಪಟ್ಟು ಹೆಚ್ಚಗಿತ್ತು . ಆಗ ಮೊಳೆಯಿತು ಮಾತು .
 "ಹಿಮು , ನನ್ನೊಂದಿಗೆ ಜೀವನ ಪೂರ್ತಿ ಇರುತ್ತೀಯಾ???" ಎಂದು ಶಾಲಿನಿ ಕೇಳುತ್ತಿದ್ದಂತೆ ಸ್ತಂಭೀಭೂತನಾದ ಹಿಮಾಂಶು.
ಅಲ್ಲಿ ಕಾಲ ಸ್ತಬ್ದವಾಯಿತು!!

                                                   *  *  *  *

    ಮಾಟಗಾತಿ ಸುಬ್ಬಮ್ಮ ಅರೀಫ್‌ ಬಾಬಾನನ್ನು ಬಲಿ ಪಡೆದ ಮರುಕ್ಷಣ ಪುತ್ತೂರಿನ ಜಮ್ಮಿಯ ಮಸೀದಿಯಲ್ಲಿದ್ದ ಅರೀಫ್‌ ಬಾಬಾನ ಶಿಷ್ಯ ಎಚ್ಚೆತ್ತ. ಅವನಿಗೆ ಸಾವಿರರು ಕೀಲೊ ಮೀಟರ್‌ ದೂರದಿಂದಲೇ ಗುರುವಿನ ಮಾತು ಕೇಳಿಸಿತ್ತು . " ನಾಶ ಮಾಡು ಅವಳನ್ನ , ಇಲ್ಲದಿದ್ದರೆ ಸರ್ವನಾಶಕ್ಕೆ ಅಣಿಯಾಗುತ್ತಾಳೆ " ಆಗಲೇ  ಮಾಟಗಾತಿ ಬೆಂಗಳೂರಿನಲ್ಲಿ ಪೂಜೆ ಪ್ರಾರಂಭಿಸಿದ್ದು . ಆಗಲೇ " ಸರ್ವನಾಶ ಕಂಡು ಬರುತ್ತಿದೆ " ಎಂದು ಕರೀಂ ಬಾಬಾ ಎದ್ದು ಕೂಗಿದ್ದು . 
ಮತ್ತು ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ಹಿಮಾಂಶುವಿನ ತಾಯಿ ಪ್ರಶಾಂತಿನಿ ಹುಣ್ಣಿಮೆಯ ದಿನ ಮೊದಲ ಬಲಿ ಪಡೆದಿದ್ದು...

   ಹಿಮಾಂಶುವಿನ ತಾಯಿ ಪ್ರಶಾಂತಿನಿ ಬರ್ಬರ ಹತ್ಯಗೆ ರೂಪಿಸಿ ಬಿಟ್ಟಿದ್ದಳು ಮಾಟಗಾತಿ. ಟ್ರೇನ್‌ಗೆ ಹೊಕ್ಕವಳೇ ಮಧ್ಯವಯಸ್ಕ ಹೆಂಗಸಿನ ಗಂಟಲ ಭಾಗವನ್ನು ಕಿತ್ತು ಹೋಗಿದ್ದಳು ಅದು ಕರ್ಣ ಪಿಶಾಚಿಯಾ ಅರ್ಪಣೆಗೆ! . ಪ್ರಶಾಂತಿನಿಯ ಮೊದಲ Ruthlessness ಆರಂಭವಾಗಿದ್ದೆ ಅವಾಗ. ಆಗಲೇ ಕಾಲೇಜಿನಲ್ಲಿ  ಹಿಮಾಂಶು ನಿಗೂಢನಾಗಿದ್ದು . ತಾಯಿಯನ್ನು ಹುಣ್ಣಿಮೆಯ ದಿನ ನೋಡಿ ಬೆಚ್ಚಿಬಿದ್ದದ್ದು. ಭರ್ತಿ 16 ಕೊಲೆಗಳನ್ನು ಮಾಡಿದ್ದಳು ಪ್ರಶಾಂತಿನಿ.... And that is only because of black magic.. ಅದೆಲ್ಲ ಕಾಮಕರ್ಣ ಪಿಶಾಚಿನಿಗೆ ಎಂದು ನಂಬಿಸುತ್ತಾ ಬಂದಳು ಮಾಟಗಾತಿ ಸುಬ್ಬಮ್ಮ . 17ನೇ ಬಲಿ ಶಾಲಿನಿಯೆಂದು ತಿಳಿದಿದ್ದೆ ತಡ ಹಿಮಾಂಶು ತನ್ನ ಆಟ ಪ್ರಾರಂಭಿಸಿದ್ದ.
   " Himamshu played an intellectual game!"

  ಸ್ವತಃ ತಾನೇ ಕೊಲೆಗಾರನೆಂದು ಪೋಲಿಸರಿಗೆ ತಿಳಿಸಿ ಬಂಧನಕ್ಕೊಳಗಾಗುವಂತೆ ಮಾಡಿಕೊಳ್ಳುತ್ತಾನೆ . ಅದು ಶಾಲಿನಿಯನ್ನು ರಕ್ಷಿಸುವ ತಂತ್ರ ಎಂದು ಸ್ವತಃ ಮಾಟಗಾತಿಗೂ ತಿಳಿದಿರಲಿಲ್ಲ . ಹಿಮಾಂಶು ಶಾಲಿನಿಯನ್ನು ಉಳಿಸಿಕೊಳ್ಳಲು ಸ್ವತಃ ತಾನೇ ಜೈಲಿಗೆ ಹೋಗಿಬಿಟ್ಟಿದ್ದ .... ಹಿಮಾಂಶು ತನ್ನ ಪ್ಲಾನ್‌ನಲ್ಲಿ ಗೆಲುವು ಸಾಧಿಸಿದ್ದನಾ?????? 
                                                                     -(ಮುಂದುವರೆಯುತ್ತದೆ-To be continued)
close