24 Dec 2014

ನನ್ನ ಪ್ರೀತಿಯ ಹುಡುಗನಿಗೆ!

                 ಹುಡುಗಾ, ಹೇ ಹುಡುಗಾ ಹೇಗಿದ್ದಿ? ನಾನು ಕಣೋ.... ಗುರ್ತು ಸಿಗಲಿಲ್ಲವಾ ?   ಜಲಪಾತದ ಕೆಳಗೆ ನಿಂತು ನಿನ್ನ ಜತೆ ಆಡಿದವಳು. ಕಡಲ ತೀರದ ಹಸಿ ಮರಳಿನ ಮೇಲೆ ಬೆರಳಿಟ್ಟುನಿನ್ನ ಹೆಸರು ಬರೆದವಳು. ತೆರೆಗಳುರುಳಿ ನಿನ್ನ ಹೆಸರು ಅಳಿಸಿದಾಗ ಆತಂಕಪಟ್ಟವಳು. ನಾನು ಕಣೋ ಹುಡುಗಾ. ನಾನು ನಿನ್ನ ಹುಡುಗಿ..

     ಹುಡುಗಾ........ ಹೇಗಿದ್ದಿ? ಕೆನ್ನೆಯ ಕೆಂಪೇನಾಯಿತೋ? ನಂಗೊತ್ತು ನೀನು blush  ಮಾಡ್ತಯಿರುತ್ತಿ. I love that ಕಣೋ...  ಅವತ್ತು ಹೀಗೆ ಬೆಳಬೆಳಗೆ ವಿಜಯನಗರದಲ್ಲಿ ನಂಗೊಂದು ವಾಕ್‌ ಕರೆದ್‌ಕೊಂಡು ಹೋಗ್ತ ಹೀಗೆನೆ ಬ್ಲಷ್‌ ಮಾಡ್ತಯಿದ್ದೆ.. ಎಷ್ಟು ಮುದ್ದು ಮದ್ದಾಗಿ ಕಂಡಿದ್ದೆ ನೀನು. ನಿನ್ನೊಂದಿಗೆ ಅದೆಷ್ಟು ಸ್ಥಿರವಾಗಿ ಬಂದಿದ್ದೆ. ನಿನ್ನ ಜತೆ ನಡೆಯುವದರಲ್ಲೆ ಅತಿದೊಡ್ಡ ಕಂಫರ್ಟ್‌ ಅನುಭವಿಸುತ್ತಿದ್ದೆ. ನನಗೆ ಮತ್ತೆನೇನೂ ಬೇಕಿರಲಿಲ್ಲ. I love you! ಅನ್ನಬೇಕಿರಲಿಲ್ಲ. ಮಾತನಾಡಿ react ಮಾಡಬೇಕಿರಲಿಲ್ಲ. ನಿನ್ನ ಕಣ್ಣುಗಳು ನನಗೊಂದು ಭದ್ರತಾ ಭಾವ ನೀಡಿತ್ತು. ಅದು ಶಾಶ್ವತ ಪ್ರೀತಿಯ ಕಣ್ಣು!

    ಜಗತ್ತಿನ ಪ್ರತಿ ಹುಡುಗಿಯೂ ಬಯಸುವ ಕಂಫರ್ಟ್ ಇದೇ ಕಣೋ Genius! ಕಾಮವಿಲ್ಲದ ಸಾಮೀಪ್ಯ. ಅವಸರವಿಲ್ಲದ ಅಪ್ಪುಗೆ. ಇಲ್ಲದಿದ್ದರೂ ಇದೆ ಎಂಬಂತೆ feel ಆಗುವ space. "ಪ್ರೀತಿಸ್ತಿಯಾ?" ಅಂತ ಬಾಯಿಬಿಟ್ಟು ಕೇಳದೆ "ಪ್ರೀತಿಸ್ತಾನೆ ಬಿಡು" ಅಂತ ತನಗೆ ತಾನೇ ತಂದುಕೊಳ್ಳುವ confidence ಮಾತೇ ಆಡದೆ ಸಾವಿರ ಭಾವ ತಿಳಿಸಿಕೊಡುವ ಸೌಮ್ಯ ಉಸಿರಾಟ.

    ಹುಡುಗಾ, ಇದೀಷ್ಟು ಭಾವವನ್ನೂ ಮತ್ತೆ ಅನಿಭವಿಸಬೇಕು ಕಣೋ.. ನೀನು I love you ಅಂತ ಹೇಳಲ್ಲ. ಅಸಲಿಗೆ ಮಾತೇ ಆಡಲ್ಲ ನೀನು. ದೇವಾಸ್ಥನದಲ್ಲಿ ಇರೋ ದೇವರ ಮೌನ ಕಣೋ ನಿಂದು.. ದೇವನಾದರು ಕಾದು ಕಾದು ಬೇಸರಾಗಿ ಮಾತಿಗಿಳಿದು ಹೊರಟೆ ಹೋಗುತ್ತಾನೆ, ಆದರೆ ನೀನಗಲ್ಲ. ನನ್ನ ಪ್ರೀತಿಯ ಹುಡುಗ ನೀನು. ನಾನು ಬರುವವರೆಗೂ ಕಾಯುತ್ತಿ. ಒಂದಿಷ್ಟು ಮಾತು ಆಡದೇ ಕಾಯುತ್ತಿ. ಬಂದ ಮೇಲಾದರೂ ಮಾತನಾಡುತ್ತಿ ತಾನೇ...?

  ಹೇ ಹುಡುಗಾ ನನಗೆ ನಿನ್ನ ಮೇಲೆ ತುಂಬಾ ಕೋಪವಿದೆ ಕಣೋ. ಅಷ್ಟು ವರ್ಷ ನಿನ್ನ ಜೊತೆಗಿದ್ದಿನಿ, ನಿನ್ನೊಂದಿಗೆ ಗಂಡೆಗಟ್ಟಲೆ ಮಾತಡಿದ್ದೀನಿ ಏರ್‌ಟೆಲ್‌ ಕಾಂಪನಿನ ಉದ್ದಾರ ಮಾಡುತ್ತಾ ಪ್ರತಿ ಮೇಸೆಜ್‌ಗೆ ಒಂದು ರೂಪಾಯಿ ಕೊಟ್ಟಿ ಮಾಡಿದ್ದೀನೊ.. ಒಮ್ಮೆ ಅದರೂ just once.... I love you ಅಂತ ಹೇಳಿದ್ಯೆನೋ.. At least ಪ್ರಯತ್ನ ಅದರೂ ಮಾಡಿದ್ದಿಯಾ? ನಂಗೊತ್ತು You never tried, ನಾನು ಹೇಳೊವರೆಗೂ ನೀ ಹೇಳಲ್ಲ.. ನೀ ಕೇಳೊವರೆಗೂ ನಾ ಹೇಳಲ್ಲ.. Let's wait ಕಣೋ..

   ನಂಗೊತ್ತು ನೀನು ನನ್ನದೆ ಸ್ಥಿತಿಯಲ್ಲಿದ್ದಿಯಾ. ಪ್ರೀತಿಸ್ತಿದೀನಿ ಅಂತ ಇಬ್ಬರೂ ಹೇಳಿಕೊಳ್ಳದೆ ಇರುವ, ಆದರೆ ಇಬ್ಬರಿಗೂ ಅದುಗೊತ್ತಾಗಿರುವ, ಅಲ್ಲಿ ಹೇಳಿಕೊಂಡು ಬಿಡುತ್ತೇವೋ ಅಂತ ಇಬ್ಬರೂ ಆತಂಕ ಪಡುವ ವಿಚಿತ್ರ ಸ್ಥಿಯಿದೆಯಲ್ಲ? ಪ್ರೇಮದಲ್ಲಿ ಅದಕ್ಕಿಂತ ಮಧುರವಾದುದು ಮತ್ತೊಂದಿಲ್ಲ. ಮಾತು ಆಡಿದರೇ ಹೋಯ್ತು ಎಂಬ ಭಯ. ಆಡಿಬಿಡುತ್ತೇನೇನೋ ಎಂಬ ಆತಂಕ. ಆಡದೆ ಹೀಗೆ ದಿನ ಕಳೆದು ಬಿಡುತ್ತೀನೇನೋ ಎಂಬ ದುಗುಡ. ಅದೂ ಆಡಿಬಿಟ್ಟರೆ, ಅದೆಲ್ಲ ಮಾಧುರ್ಯ ಮುಗಿದು ಹೋದಿತು ಎಂಬ ಎಚ್ಚರಿಕೆ! ಎಂತ ಮಧುರಭಾವ ಅಲ್ವೆನೋ ಇದು. ನಾನಿನ್ನೂ ಕಾಯಲ್ಲ "I LOVE YOU" ಅಂತಹೇಳುತ್ತೀಯಾ ತಾನೇ.. Yes, ಹೊಸ ವರ್ಷ ಬರುತ್ತಿದೆ..  get ready for a surprise ಹುಡುಗಾ..
                                                                                                            ನಿನ್ನ ಪತ್ರವನ್ನು ಕಾಯುತ್ತಾ,
                                                                                                                      ನಿನ್ನವಳು 
close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →