22 Dec 2014

ನನ್ನ ಪ್ರೀತಿಯ ಹುಡುಗಿ

ನನ್ನ ಬದುಕಿನ ಬದುಕೇ,

      ಬೆಳಗಿನ ಜಾವದ ಮೊದಲ ಸೂರ್ಯ ಕಿರಣ ಇನ್ನೂ ಭೂಮಿಗೆ ತಲುಪಿರಲಿಲ್ಲ, ಎಷ್ಟೊ ವರ್ಷಗಳ ನಂತರ ಇಷ್ಟು ಬೇಗನೆ long walk ಹೋಗ್ತಯಿದ್ದಿನಿ. ಅದೂ ಒಬ್ಬಂಟಿಯಾಗಿ! ಅಲ್ಲಿ ನೀನು ನೆನಪಾದೆ ಅಂದರೆ ಹೇಗೆ ಸರಿ? ನೀನು ನನ್ನೊಳಗೆ ಜೀವಿಸುವ ಜೀವತಂತು, ಕರುಳ ವೀಣೆ, ಬದುಕಿನ ಮಾತು, ಎದೆಯ ಡವಡವ. "ನೆನಪು ಮಾಡಿಕೊಳ್ಳುವ" outsider ಅಲ್ಲ ಕಣೇ ನೀನು. ನನಗೆ ನೆನಪಾಗಿದ್ದು ಇವತ್ತಿನ ತಾರೀಕು dec 29. ನನ್ನ ನಿನ್ನ ಈ ಅಪೂರ್ವವಾದ ಹಂಬಲಕ್ಕೆ, ಮಾತಿಗೆ, ಮೌನಕ್ಕೆ, ಕನಿಸಿಗೆ, ಪ್ರೀತಿಗೆ ಭರ್ತಿ 7 ವರ್ಷ.   ಒಂದು ಹಬ್ಬದಂತೆ, ಒಂದು ಉತ್ಸವದಂತೆ, ಒಂದು ಮೆರವಣಿಗೆಯಂತೆ, ಒಂದು ಮಳೆಯಂತೆ, ಒಂದು ವಸಂತ ಋತುವಿನಂತೆ ನನ್ನ ಬದುಕಿನಲ್ಲಿದ್ದ ನೀನು ಅದೃಶ್ಯಳಾಗಿಬಿಟ್ಟೆ. But I know, ನಂಗೊತ್ತು! ನೀನು ಪುನಃ ಬರುತ್ತಿ, ನೀನಗಿಷ್ಟವಿಲ್ಲದ ನನ್ನ ಬೈಕ್‌‌ನಲ್ಲೆ ಕುರುತ್ತಿ, ನಾನು ಜಗತ್ತಿನ ಅಷ್ಟು ಯೋಚನೆ ಬಿಟ್ಟು ನಿನ್ನೊಂದಿಗೆ ಬರುತ್ತೀನಿ. ನಿನ್ನೊಂದಿಗೆ ಹೆಜ್ಜೆಯಿಡುತ್ತ ಹೃದಯದ ಕೋಟೆಯೊಳಗೆ ಸಾವಿರ ಸಾವಿರ ಕನಸುಗಳನ್ನು ಕಾವಲಿಡುತ್ತೀನಿ. ಮತ್ತೆ ನನ್ನಿಂದ ದೂರ ಆಗಲ್ಲ ತಾನೇ......??
    
       ಸುಮ್ಮನೆ ಒಬ್ಬಂಟಿಯಾಗಿ ಇನ್ನೂ ಬೆಳಕಾರಿಯಾದ ರಸ್ತೆಯಲ್ಲಿ ನಡೆಯುತ್ತಾ, ನಡೆಯುತ್ತಾ ಅವತ್ತು ನಾವು New year ದಿನ ಹೋಗಿದ್ವಲ್ಲ ಅ ಪುಟ್ಟ walk. ಅದೇ ರಸ್ತೆಗೆ ನನಗೆ ಅರಿವಿಲ್ಲದಂತೆ ಬಂದುಬಿಟ್ಟೆ. ಯಾಕೋ ನೆನಪಿನ Idiot box.... Dec 29ರ ಅ ರಾತ್ರಿಗೆ ಕರೆದುಕೊಂಡು ಹೋಗ್ತಿದೆ. ಸುಮ್ಮನೆ ನಡೆದುಕೊಂಡು ಹೋಗ್ತಯಿರುವ ನನಗೆ ಅದೊಂದು ಮೇಸೆಜ್‌‌ ಕಾಡುತ್ತಿದೆ.

   " I'm in love with a young smart intelligent guy
        who is loving me from past 3 years.
            That is none other than you
"

      ಆಗ ರಾತ್ರಿ 9 ಗಂಟೆ 12 ನಿಮಿಷ!

         ನನ್ನ ಕಣ್ಣಿಗಲ್ಲ, ನನ್ನ ಮನಸ್ಸಿಗೂ ಅದೊಂದು ಮೇಸೆಜ್‌ ಮರೆಯಲು ಸಾಧ್ಯವೇ ಇಲ್ಲ. ನೆನಪಿದಿಯಾ ಅವಾಗ ನೀನು call ಮಾಡಿದ್ದೆ, ನಾನು ಮಾತಾಡಿದಕ್ಕಿಂತ ನಿಡುಸ್ಯುದದ್ದೆ ಜಾಸ್ತಿ. ಬೆಚ್ಚಿಬಿದ್ದಿದ್ದೂ phoneಗೂ ಗೋತ್ತಾಗಿತ್ತು. ಆಗ " ಎನ್‌ಮಾಡ್ತಿದಿಯ್ಯಾ?" ಅಂತ ನೀನು ಕೇಳಿದಾಗ. ನಾನು ಕೊಟ್ಟಂತ funny answer ನೆನಪಿದಿಯಾ "................." ಬೇಡ ಬೀಡು ಈ ಪತ್ರದಲ್ಲಿ ಹೇಳೊದು. I was in cloudnine for a week. ಮತ್ತೆ ನಾವು ಮೀಟ್‌ ಮಾಡಿದ್ದು ಹೊಸ ವರ್ಷದ ದಿನ. ಡಿಸೆಂಬರ್‌ನ ಚಳಿ ಸ್ವಲ್ಪ ಹೆಚ್ಚೆ ಇತ್ತು. ಸುತ್ತ universityಯ ಸಾಲು ಸಾಲು ಮರಗಳು.  ಬೆಂಗಳೂರಂತ ಬೆಂಗಳೂರಿನಲ್ಲಿ ಇಬ್ಬನಿ ಬಿಳುತ್ತಿದ್ದ ರಸ್ತೆಯದು, ಬೆಳಗಿನ ಮೊದಲ ಸೂರ್ಯ ಕಿರಣ ಆಗ ತಾನೇ ತನ್ನ ಇರುವಿಕೆಯನ್ನು ತೋರ್ಪಡಿಸಿದ್ದ ನಿರ್ಮಾನುಷ್ಯ ರಸ್ತೆಯಲ್ಲಿ ನಡೆದು ಹೋಗ್ತಯಿದದ್ದು ಕೇವಲ ನಾವಿಬ್ಬರೇ. wooow!  ಆ ಚಳಿಯಲ್ಲು you were looking gorgeous!!

   Yes, ಇವತ್ತು ಕೂಡ ನಡೆಯುತ್ತಾ ನಡೆಯುತ್ತಾ...  ಇದೇ ರಸ್ತೆಗೆ ಬಂದ್ದಿದಿನಿ. ಚಳಿ ಇನ್ನೂ ಸ್ವಲ್ಪ ಹೆಚ್ಚೆ ಇದೆ, ಆದರೆ ಜೊತೆಗೆ ನೀನಿಲ್ಲ. ನಿನ್ನ ನೆನಪಿದೆ! ನೀನಿಲ್ಲದ ನೀರವ ಗಳಿಗೆಯನ್ನು ಕೂಡ ನಾನು enjoy ಮಾಡಿಲ್ಲ ಕಾಣೇ. ನನ್ನ ನಗುವಿನಲ್ಲೂ ನೀ ಇರುತ್ತಿ. ನನ್ನ ದುಃಖದಲ್ಲೂ ನೀ ಹಾದು ಹೋಗುವೇ. Let it be... ಈ ಸಂತೋಷದ ದಿನದಂದು ದುಃಖ ಏಕೆ ಅಲ್ವ..

     ...... ನಿನ್ನ ಧ್ಯಾನಿಸಲು ಕುಳಿತು 7ನೇ ವರ್ಷಕ್ಕೆ ಬಂದಿದ್ದೇನೆ.. ಅಂದರೆ 314 ವಾರ , 2190 ದಿನಗಳು , 52560 ಗಂಟೆಗಳು ಅಲ್ಲಿಗೆ ನಿನ್ನನ್ನು ಧ್ಯಾನಿಸಿದ ನಿಮಿಷಗಳು 3153600!!

     ನಾಗತಿಹಳ್ಳಿ ಚಂದ್ರಶೇಖರಣ್ಣ ಹಾಡಿದ್ದು. " ನೂರು ಜನ್ಮಕು... ನೂರಾರು ಜನ್ಮಕು" ಎಂದು... ಅದರೆ ಇದೊಂದು ಜನ್ಮದಲ್ಲೇ ಪೂರ್ಣನನ್ನವಳಾಗದ ನಿನಗೆ ನೂರು ಜನ್ಮಕ್ಕಾಗಿ ಆರ್ಜಿಕೊಡುವ ಹಟಮಾರಿ ಭಕ್ಷುಕ ಕಣೇ ನಾನು.! ಆ ರಾತ್ರಿ ನೆನಪಿದೆಯೆ? ನಿನ್ನ ಎರಡೂ ಕೈಗಳಿಗೆ ಮೆಹಂದಿ ಹಾಕಿದ್ದು? ನೀನು  ಹಾಗೆ ಹಸ್ತವನ್ನೊಪ್ಪಿಸಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ಕೂತಿದ್ದು. ನೀನು ಕೂತ ಭಂಗಿಯಿಂದ ಹಿಡಿದು ನಿನ್ನ ಹಸ್ತದ ಮಾಯಾವಿ ರೇಖೆಗಳ ಆಳ ಉದ್ದಗಳ ಜಾಡಿನಿಂದ ಹಿಡಿದು, ಅವುಗಳ ನಡುವೆ ಸಣ್ಣಗೆ ಒಸರಿದ ಬೆವರ ಹನಿಗಳಿಂದ ಹಿಡಿದು, ನನ್ನ ಹಿಡಿತಕ್ಕೆ ಹಸ್ತದ ಕಂಪನದ ಸವಿ ಅನುಭವದಿಂದ ಹಿಡಿದು..... ಹೌದು, ನನಗೆ ಎಲ್ಲ ನೆನಪಿದೆ. ಅದು ಹೊಸವರುಷದ ಮುನ್ನಾದಿನ. ಯಾರೋ ಹಾಡುತ್ತಿದ್ದರು. ಇನ್ನಾರೋ ತೂಕಡಿಸುತ್ತಿದ್ದರು. ಅದಾರೋ ಕುಡಿಯುತ್ತಿದ್ದರು. ಅದಿನ್ನಾರದೋ ಗೊರಕೆ. ಜನಜಂಗುಳಿಯಲ್ಲಿ ರಾತ್ರಿ ಅರಳುತ್ತಾ ಹೋಗುತ್ತಿತ್ತು. ಸುತ್ತ ಜನರಿದ್ದರೂ ನಮ್ಮಿಬ್ಬರದೇ ಒಂದು ಲೋಕ ನಿರ್ಮಾಣವಾಗಿತ್ತು. ಇಡೀ ರಾತ್ರಿ ಮೆಹಂದಿ ಹಾಕುತ್ತ, ಹಾಗೆ ಹಾಕುತ್ತಲೇ ನಿನ್ನ ಸಂಗದಲ್ಲಿ, ನಿನ್ನ ಸ್ಪರ್ಶದಲ್ಲಿ ಕುಳಿತು ಬಿಡುವ ಆಸೆ! ಈ ಕ್ಷಣಗಳು ಅನಂತವಾಗಬಾರದೆ ಎಂದು ಹಲುಬುತ್ತಿದ್ದೆ. ಕ್ಷಣ ಎಂಬ ಶಬ್ದದ ಮೂಲಭಾವವೇ ಕ್ಷಣಿಕ. 'ಕ್ಷಣಿಕ'ವೆಂಬುದು ಹೇಗೆ 'ಅನಂತ'ವಾದೀತು?

   ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೆ
ಸುತ್ತೆಳು ಲೋಕದಲಿ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೆ!!


    ನನ್ನ ಕತೆಯೊಳಡಗಿದ ಕಾವ್ಯವೇ ಹೇಗಿದ್ದಿ ಈಗ. ನಿನ್ನ 'ಅನು'ರೂಪವನ್ನು ನನ್ನ ಕಣ್ಣಗೊಂಬೆಯೊಳಗೆ ತುಂಬಿಕೊಂಡು ಭರ್ತಿ ವರ್ಷವಾಗೊಯ್ಯು ಕಾಣೇ. ನೀನಿಲ್ಲದೆ ನೀನಿರುವ ಎರಡು ಹುಟ್ಟುಹಬ್ಬ ಆಚರಿಸಿದೆನೇ(?) ಆಚರಿಸಿದ್ದಿನಾ ಗೊತ್ತಿಲ್ಲ. ಬೇಗನೆ ಬಂದು ನನ್ನೆದೆಗೆ ಅವಚಿ  ಕುಳಿತುಕೊಳ್ಳೆ. ಬೆಳಗಿನ ಜಾವದ sweet ನಿದ್ದೆಯಲ್ಲಿ ಕನಸು ಕಣೋಣ. ನಮ್ಮಿಬ್ಬರ ಕನಸುಗಳಿಗೆ ಬಣ್ಣ ತುಂಬೋಣ. ಹೊಸ ವರುಷದಿಂದ ಒಟ್ಟಾಗಿ ಕಾಲೇಜಿಗೆ ಹೋಗೊಣ, ಚಳಿಯಿಂದ ಕೂಡಿದ್ದ university roadನ ಸಂಜೆಯಲ್ಲಿ ಮಾತಿಲ್ಲದೆ ಮೌನದಿಂದ ನಡೆಯೋಣ,  Get ready for a surprise ಹುಡುಗಿ,

  ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ
ಇರುವಂಥ ನೂರು ಕಹಿ ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗು ಕಣ್ಣಾಗಿ


   ಎಂದೋ ನಿನಗಾಗಿ , ನಿನ್ನ ನೆನಪಲ್ಲಿ ಬರೆದ ಶುಭಾಶಯ ಅಂತಾದರೂ ಅಂದುಕೋ; ಮತ್ತೊಂದು ಕಾಗದ ಅಂತಾದರೂ ಅಂದುಕೋ ನಿನ್ನ ಮಡಿಲಿಗೆ ಹಾಕಿ ಸುಮ್ಮನಾಗುತ್ತೇನೆ;  ಬೆಚ್ಚಗಿರಿಸಿಕೋ ಇದನ್ನ!

                                                                                                   -   ಸಾಯುವವರೆಗೂ ಕಾಯುತ್ತಾ 
                                                                                                                                ನಿನ್ನ ಮಂಜು
close