Saturday, 20 December 2014

ನನ್ನ ಪ್ರೀತಿಯ ಹುಡುಗಿಗೆ!

     ಹುಡುಗೀ,

                 ರಾತ್ರಿ ಮನೆಗೆ ಲೇಟಾಗಿ ಬಂದೆ, ಆಚೆ ಆಕಾಶವನ್ನು ದಿಟ್ಟಿಸುತ್ತ ಕುಳಿತವನಿಗೆ... ನಿನಗೆ ಪತ್ರ ಬರೆದು ಎಷ್ಟು ದಿನವಾಗೊಯ್ತು ಅಂತ ಅನ್ನಿಸದೆ ತಡ. ಬರೆಯುತ್ತ ಬರೆಯುತ್ತ ಅಕ್ಷರಗಳಲ್ಲಿ ಕಳೆದುಹೋಗಿ ಬಿಟ್ಟಿದ್ದಿನಿ. ಹೊರಗೆ ಕತ್ತಲು ಬಿದ್ದು ಬೆಳಕಾರೆಯುತ್ತಿರುವುದೂ ಅರಿವಿಗೆ ಬಂದಿಲ್ಲ. ಈಗ ಬೆಳಗಿನ ಜಾವ 4 ಗಂಟೆ . ಸಣ್ಣ ದನಿಯಲ್ಲಿ ಹಾಡುತ್ತಿದ್ದ ರೇಡಿಯೋ ಯಾವಾಗಲೋ ನಿಂತು ಹೋಗಿದೆ. ಸೂತಕದ ಮನೆಯಂತಹ ಆಕಾಶದಲ್ಲಿ ಎಲ್ಲೋ ಒಂದು ಮಿಣುಕು ನಕ್ಷತ್ರ: ನಿನ್ನ ಕಣ್ಣು ಹೊಳೆದಂತೆ. ನ್ನ ಸಣಿವು , ನನ್ನ ನೋವು ಹಂಚಿಕೊಳ್ಳಬಹುದಾದ್ದಲ್ಲ. ಅದು ಪುರಾತನ ವಿಷಾದದಂತಹುದು . ಒಬ್ಬನೆ ಅನುಭವಿಸಬೇಕು.

ಮನ್‌ ರೇ ತೂ
ಕಾಹೇ ನ ಧೀರ್‌ ಧರೆ.....


             ಇವತ್ತು ನೀನು ನನಗಾಗಿ ಗಾಂಧಿಬಜಾರ್‌ ಬಸ್‌ಸ್ಟಾಪ್‌ನಲ್ಲಿ ಸುಮ್ಮನೆ ಕಾಯುತ್ತ ನಿಂತುರಿತ್ತಿ. ಆಟೋಗೆ ಕೈ ತೋರುವುದಿಲ್ಲ . ಬಸ್ಸು ಕಂಡರೆ ನಿನಗೆ ತಿರಸ್ಕಾರ. ಎಷ್ಟು ಹೊತ್ತದಾರೂ ನನಗಗಾನಿ ಕಾಯುತ್ತಿ ಅಲ್ವ . ಅವತ್ತು ಕೂಡ ನಿನ್ನ ಮೊದಲ ಬಾರಿ ಅಲ್ಲೆ ನೋಡಿದ್ದು. ಗಾಂಧಿಬಜಾರ್‌ನ ಗಿಜಿಗುಡುವ ರಸ್ತೆಯ ಸಾವಿರಾರು ಮಂದಿಯ ಮಧ್ಯದಲ್ಲಿ . ಎಷ್ಟು ಚೆಂದ ಕಂಡಿದ್ದೆ ಅವತ್ತು , Black jeans  ಮೇಲೆ yellow color top. ಕಿವಿಯಲ್ಲಿ ಆಕರ್ಶಿಸುತ್ತಿದ್ದ ಬ್ಲೆಕ್‌ ಮೆಟಲ್‌ ಓಲೆ , ಇದಿಯೋ ಇಲ್ಲವೋ ಎನ್ನುವಷ್ಟಿದ್ದ ಪುಟ್ಟ ಬಿಂದಿ... My God! , ಮೊದಲ ನೋಟದಲ್ಲೆ ನನ್ನ ಅಷ್ಟು Attention ಕದ್ದೆಬಿಟ್ಯಲ್ಲ. ನಿನ್ನ ಕಣ್ಣು ನನ್ನ ಕಣ್ಣ ಗೊಂಬೆಯೊಳಗೆ ಅಚ್ಚೆಯಾಗಿ ಕುಳಿತುಬಿಟ್ಟಿದೆ.
 ಅದು ಅದ ಮೇಲೆ ಎಷ್ಟು ಬಾರಿ ನಿನ್ನ ನೋಡಿರಬೇಕು I tink its just 3 times... ನಿನ್ನ ಕಾಲೇಜ್‌ ಡೇನಲ್ಲಿ , ಮತ್ತದೆ ಗಾಂಧಿಬಜಾರ್‌ ಬಸ್‌ಸ್ಟಾಪಿನಲ್ಲಿ 2 ಬಾರಿ.... ನನ್ನದು ಮಾತಿಲ್ಲದ ನೀರವ ಮೌನ ಎಷ್ಟು ರೇಗಿಸಿದ್ದೆ " ಏನು ಮಾತಾಡೋದೆ ಇಲ್ವ ನೀನು" ಅಂತ ಕೇಳಿದಾಗ ಬಸ್‌ಸ್ಟಾಪಿನಲ್ಲಿ ಆಕಿದ್ದ ಪಾರ‍್ಲೆ ಜಿ ಆಡ್‌‌ನ ಪುಟ್ಟ ಹುಡುಗಿ ನನ್ನ ನೋಡಿ ನಕ್ಕಂತೆ ಭಾಸವಾಗಿತ್ತು. ಅವತ್ತು ಇಡೀಯಾಗಿ ವಿದ್ಯಾರ್ಥಿ ಭವನ್‌ನಲ್ಲಿ ದೋಸೆ ತಿಂದಿದ್ದೆ ಕಡೆ ಮತ್ತೆ ನಾನು ನೀನು ಒಮ್ಮೆಯು ಭೇಟಿಯಾಗಿಲ್ಲ...
  
                ಈ ರಾತ್ರಿ ಎಷ್ಟೋ ಹೊತ್ತಿಗೆ ಸೋತ ಕಙಯಗಳಲ್ಲಿ ಚಹ ಮಾಡಿಕೊಂಡು ಕುಡಿಯುತ್ತಿದ್ದೇನೆ. ಆಸೆಗಳು ಕೆರಳುವ ಮಧ್ಯರಾತ್ರಿ ಇದು. ಮನಸು ನಿನಗೋಸ್ಕರ ಚಡಪಡಿಸುತ್ತಿದೆ. ನನಗೆ ಬೇಳಕು ಹರಿದು , ಹಗಲು ಬೀದಿಗೆ ಬೀಳುವ ಹೊತ್ತಾದರೂ ನಿನ್ನೊಂದಿಗೆ ಮಾತುಬೇಕು. ನಿನ್ನೊಂದಿಗೆ ಮೌನ ಬೇಕು. ಜೊತೆಗೆ ಕೂತು ಕೇಳುವ ಹಾಡು ಬೇಕು. ಉಳಿದೆಲ್ಲರೂ ಎದ್ದು ಬದುಕಿನತ್ತ ಹೆಜ್ಜೆಯಿಡುವ ಹೊತ್ತಿಗೆ ನನಗೊಂದು ಸಾವು ಬೇಕು. ಆಗಷ್ಟೆ ಮಾತು ಕಲಿತ ಮಗು ಓಡಿ ಬಂದು ಅಮ್ಮನನ್ನಾ, ಅಮ್ಮನ ಮಡಿಲನ್ನಾ? ನಂಗೆ ನೀನು ಇಡಿಯಾಗಿ ಬೇಕು.

ಮುಝೆ ಜಾ ನ ಕಹೋ
ಮೇರೀ ಜಾನ್‌‌....


              ಇವತ್ತು ಮತ್ತದೆ ಸಂಕಲ್ಪ; ನಂಗೊತ್ತು, ನೀನು ಮತ್ತದೆ ರಸ್ತೆಯಲ್ಲಿ ನಿಂತಿತುತ್ತಿ. ಕಣ್ಣು ಕಾಯುತ್ತಿರುತ್ತವೆ. ರಸ್ತೆಯುದ್ದಕ್ಕೂ ಓಡುವ ನೋಟಕ್ಕೆ ಗೆಜ್ಜೆಯೊಂದೇ ಕಡಿಮೆ. ಒಂದು ಸಾಯಂಕಾಲ ಒಟ್ಟಿಗೆ ಕಳೆಯೋಣ. ನಿನಗಿಷ್ಟವಾಗುವ ಜಾಗವೇ ಆಗಲಿ. ಹನಿಯುವ ಗಾಂಧಿಬಜಾರ್‌ ಸಂಜೆಯಲ್ಲಿ ಭುಜ ತಾಕಿಸುತ್ತ ನಡೆಯೋಣ. ಸುಟ್ಟ ಮುಸುಕಿನ ಜೋಳ, ರುಚಿಯಾದ ಪಾನಿಪುರಿ , ವಿದ್ಯಾರ್ಥಿ ಭವನಿನ ದೋಸೆ, ಕಲ್ಮನೆ ಹೌಸ್‌ನಲ್ಲಿ ಅದ್ಭುತ ಕಾಫಿ! ನಿನ್ನ ಕಡುಗಪ್ಪು ಕಣ್ಣುಗಳ ತೀವ್ರತೆ ಕೊಂಚ ಕಡಿಮೆ ಮಾಡಿ ನನ್ನ ಪ್ರೀತಿಸೆ ಹುಡುಗೀ....

ತುಮ್‌ಸೇ ಮಿಲ್‌ ಕೇ
ನಾ ಜಾನೇ ಕ್ಯೂಂಮ, ಔರ್‌
ಬೀ ಕುಚ್‌ ಯಾದ್‌ ಆತಾ ಹೇನ್‌.....

                                       
                                                                                                       -ನಿನ್ನವನು

No comments:

Post a Comment