Saturday, 11 October 2014

ಹುಣ್ಣಿಮೆಯ ನಿಶಬ್ದ ಭಾಗ-೪

    (Romantic thriller ಹುಣ್ಣಿಮೆಯ ನಿಶಬ್ದದ ಹಿಂದಿನ ಮೂರು ಭಾಗವನ್ನು ಓದಲು ಇಲ್ಲಿ click ಮಾಡಿ)

        ಭಾಗ-೪

  ಆಶ್ಚರ್ಯವಾಗಬಹುದು! ಸಹಸ್ರಾರು ಚದರಮೈಲಿ ವಿಸ್ತಾರದ ಕಾಡಿನ ನಟ್ಟನಡುವೆ ಯಾವುದೇ ದಾರಿಯಿಲ್ಲದ ಈ  ಸ್ಥಳದಲ್ಲಿ ಯಾರು ಈ ಅಧ್ಯಯನ ಕೇಂದ್ರವನ್ನು ಕಟ್ಟಿರಬಹುದೆಂದು??   ಹಿಂದೆ ತಿರುಗಿದರೆ ಭೊರ್ಗರೆಯಿತ್ತಿರುವ ಕೃಷ್ಣೆ ಮುಂದೆ ಕತ್ತಲಿಗು ಬೆಚ್ಚಿಬಿಳಿಸಿವ ಕಾಡು. ನಲ್ಲಮಲ ಅರಣ್ಯಪ್ರದೇಶ ತನ್ನ ಬೆರನ್ನ ಅಂಧ್ರದ ಉದ್ದಗಲಕ್ಕು ಚಾಚಿ ತಮಿಳುನಾಡು ತಲುಪಿತ್ತು , ಶ್ರೀಶೈಲಂ ಡ್ಯಾಮ್ನಲ್ಲಿ ಕೃಷ್ಣೆ ರೌದ್ರರಮಣೀಯವಾಗಿ ತನ್ನ ಶಕ್ತಿಯನ್ನು ತೋರಿಸುತ್ತಿದ್ದಳೆ , ದೂರದಲ್ಲೆಲ್ಲೊ ಹುಲಿಗಳ ಗರ್ಜನೆ ಆನೆಯ ಕೂಗು ಅವುಗಳಿಗೆ ಪೈಪೋಟಿ ನಿಡುವಂತೆ ಶಬ್ದಮಾಡುತ್ತ ಹರಿಯುತ್ತಿರುವ ಕೃಷ್ಣ ನದಿ , ಪ್ರಕೃತಿಯ ಸೋಬಗನ್ನು ಸಾರಿ ಸಾರಿ ಹೇಳುತ್ತಿತ್ತು . ನಲ್ಲಮಲ ಅರಣ್ಯದ ಆ ಭೀಕರ ಸೌಂದರ್ಯ ಕಂಡ ಬೆಂಗಲೂರಿನ ಸೆಂಟ್ ಡೇವಿಡ್ ಕಾಲೇಜಿನ ವಿದ್ಯಾರ್ಥಿಗಳ ಕಣ್ಣು ಆಶ್ಚರ್ಯಪಟ್ಟಿತ್ತು . ಪ್ರಕೃತಿಯ ಸೌಂದರ್ಯ , ಕಣ್ಣುಹಯಿಸಿದಷ್ಟು ದೂರ ಡಟ್ಟವಾಗಿ ಬೆಳದಿದ್ದ ದೊಡ್ಡ ದೊಡ್ಡ ಮರಗಳು , ಅದರೊಳಗೆ ಹಾಸುಹೊಕ್ಕಗಿದ್ದ ಪ್ರಾಣಗಳ ದಂಡು , ಕೃಷ್ಣನದಿಯ ಭೊರ್ಗರೆತ... ಇದರ ಸೌಂದರ್ಯ ಕಂಡು ಅವರ ಮನಸಲಿದ್ದ ಸಂತೋಷ , ಸಂಭ್ರಮ ಮತ್ತಷ್ಟು ಹೆಚ್ಚಿಸಿತು , ನಲ್ಲಮಲ ಹುಲಿ ಸಂರಕ್ಷಣ ಹಾಗೂ ಶ್ರೀಶೈಲಂ ಡ್ಯಾಮ್ನ Hydroelectric power station ಬಗ್ಗೆ ಅಧ್ಯಯನ ಮಾಡಲು ಬಂದಿದ್ದೆವೆ ಎನ್ನುವುದು ಮರೆತುಹೋಗುವಷ್ಟು ಸುಂದರವಾಗಿತ್ತು ಆ ನೋಟ...
    ಎಲ್ಲರೂ ಆ ಸೌಂದರ್ಯವನ್ನು ಒಂದು split secondನಷ್ಟು ಹೊತ್ತು ಮಿಸ್ ಮಾಡದೆ ನೋಡುತ್ತಿದ್ದರೆ ಇತ್ತ ಶಾಲಿನಿಗೇನೊ ತಳಮಳ . ಹಿಮಾಂಶು ತಾನು ನೀಡಿದ್ದ ಪತ್ರಕ್ಕೆ ಇನ್ನ ಉತ್ತರಿಸಿಲ್ಲವೆಂದು!!  ಪ್ರತಿ ನಿಮಿಷ , ಪ್ರತಿ ಕ್ಷಣ ಶಾಲಿನಿ ಅದರ ಬಗ್ಗೆಯೆ ಯೋಚಿಸುತ್ತಿದ್ದಳು . ಹಿಮಾಂಶು ಇದಾವುದರ ಬಗ್ಗೆಯು ಅರಿವಿಲ್ಲದೆ ಪೂ.ತೇಜಸ್ವಿಯ ಕಾಡಿನ Romantic thriller 'ಜುಗಾರಿ ಕ್ರಾಸ್ ' ಕಾದಂಬರಿಯನ್ನು ಓದುತ್ತ ಪ್ರತಿ ನಿಮಿಷವನ್ನು ಆ ಅರಣ್ಯದಲ್ಲಿ enjoy ಮಾಡ್ತಿದ್ದ...

                      *  *  *

      ACP ಲೂಹಿಸ್ ವಿನ್ಸೆಂಟ್ ತನ್ನ ಇಡೀ ಜೀವಮಾನದ ದೊಡ್ಡ ಮೀಷನ್ ಆಗಿದ್ದ ರೈಲ್ವೆ ಹಂತಕನ ಸೇರೆಯಲ್ಲಿ ವಿಫಲವಾಗಿದ್ದರು . ಮಾಧ್ಯಮಗಳಲ್ಲಿ ಸಾಲು ಸಾಲು ವರದಿಗಳು ಬರುತ್ತಾ ಇದ್ದವು .   ವಿನ್ಸೆಂಟ್ನ ಕಾರ್ಯಶಮತೆಯ ಬಗ್ಗೆಯು ಪ್ರಶ್ನಿಸತೋಡಗಿದವು , ಅಂಧ್ರದ ಪೋಲಿಸ್ ಕಾಮಿಷ್ನರ್‍್ತಲೆಯತ್ತಿ ಮಾತನಾಡದಂತಾಯ್ತು . ಇತ್ತ ಬೆಂಗಳೂರಿನಲ್ಲಿ ಒತ್ತಡ ಹೆಚ್ಚುತ್ತಿತ್ತು... ಇದಕ್ಕೆ ಪುಷ್ಟಿನೀಡುವಂತೆ ಅಂದು ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಕಾರ್ಯಚರಣೆ ನಡೆಸಿದ ದಿನ ಧರ್ಮವರಂ-ಅನಂತಪುರ ಜಂಕ್ಷನ್ ಅದರೂ ಕೊಲೆಯಾಗದನ್ನು ಕಂಡು , ಕೊಲೆಗಾರ ಸಿಕ್ಕಿಲದ ಕಂಡು ಪೋಲಿಸರು ಕಾರ್ಯಚರಣೆ ಸ್ಥಗಿತಗೊಳಿಸಿದರು ಆದರೆ ಅಲ್ಲಿ ಅವರ ಊಹೆಗೆ ನಿಲುಕದ ಘಟನೆ ನಡೆದಿತ್ತು . ಅನಂತಪುರ ಕೇಂದ್ರ ರೈಲ್ವೆ ಸ್ಟೆಷನಿಂದ ನಿದಾನವಾಗಿ ಹೊರಡುತ್ತಿದ್ದ    ಪ್ರಶಾಂತಿ ಎಕ್ಸಪ್ರೇಸ್ನಲ್ಲಿ  ಯಾರಿಗೂ ತಿಳಿಯದೆ ಕೊಲೆನಡೆದು ಹೋಗಿತ್ತು . ಆ ಕೊಲೆಯಲ್ಲಿದದ್ದು ಕೂಡ ಅದೇ ಭೀಕರತೆಯಲ್ಲಿ ಕರ್ನೂಲ್ ಜಿಲ್ಲೆಯ ಮಧ್ಯ ವಯಸ್ಸಿನ ಹೆಣ್ಣುಮಗಳ ಗಂಟಲನ್ನು ಕುಯ್ದು ಹೊತ್ತುಹೋಗಿದ್ದರು ಹಂತಕರು . ರಕ್ತ ಅ ಬೋಗಿಯಲ್ಲಿ ನೀರು ಹರಿದಂತೆ ಹರಿದಿತ್ತು .  ಪ್ರಶಾಂತಿ ಎಕ್ಸಪ್ರೇಸ್ನ ೧೬ನೇ ಬೋಗಿ ಸ್ತಬ್ದವಾಗಿತ್ತು , ಅ ಹುಣ್ಣಿಮೆಯ ರಾತ್ರಿಯಲ್ಲಿ ಅನಂತಪುರದಿಂದ ೪೦ ಕೀಲೊ ದೂರದಲ್ಲಿ  ಪ್ರಶಾಂತಿ ಎಕ್ಸಪ್ರೇಸ್ ನಿಶಬ್ದವಾಗಿತ್ತು . ಅಂದು  ಪ್ರಶಾಂತಿ ಎಕ್ಸಪ್ರೇಸ್ ೧೫ನೇ ಹತ್ಯೆಕಂಡಿತ್ತು . ಒಂದಿಡಿ ರೈಲ್ವೆ ಸಿಬಂದಿ ಬೆಚ್ಚಿಬಿದ್ದರು ! ಪತ್ರಿಕೆಗಳಲ್ಲಿ ೩-೪ ಪುಟ ಈ ಸರಣಿ ಹತ್ಯಗಳ ವರದಿ ಇರುತ್ತಿತ್ತು . ಹಿರಿಯ ಪರ್ತಕರ್ತರು ಸಂಪಾದಕೀಯ ಬರೆದರು . ಗಂಟೆಗಟ್ಟಲೆ ಟಿವಿಗಳಲ್ಲಿ , ರಸ್ತೆಯಲ್ಲಿ , ಸರ್ಕಾರಿ ಕಚೇರಿಯಲ್ಲಿ ಚರ್ಚೆ ನಡೆಯಿತ್ತು...  ಕರ್ನಾಟಕ-ಅಂಧ್ರ ವಿಧಾನಸಭೆಗಳಲ್ಲಿ ಅಲ್ಲೊಲ-ಕಲ್ಲೊಲ . ಪರೆದ್ತಿಯ ಭೀಕರತೆ ಮರೆತು ಅಡಲಿತ ರೂಡ ಪಕ್ಷಕ್ಕೆ ಹೀಯಳಿಸುತ್ತಿತ್ತು ಪ್ರತಿಪಕ್ಷಗಳು!!
    ಸಾಲು ಸಾಲು ಕೊಲೆಗಳು ಭೀಕರತೆ , ಕೇಸಿನ ಗಾಂಬಿರ‍್ಯವರೆತ ಎರೆಡು ರಾಜ್ಯದ ಮುಖ್ಯಮಂತ್ರಿಗಳು ಒಟ್ಟಾಗಿ , ಒಮ್ಮತವಾಗಿ ಒಂದು ನಿರ್ಧಾರ ಕೈಗೊಂಡರು , ಅದೇ special task forceನ ರಚನೆ ....."Operation Railroad Killer "  ಜಂಟಿಯಾಗಿ  ಪ್ರಾರಂಭವಾಗೇ ಬಿಟ್ಟಿತ್ತು..
   ಕರ್ನಾಟಕ-ಅಂಧ್ರದ ಪ್ರಮುಖ ಹಿರಿಯ ಪೋಲಿಸ್ ಅಧಿಕಾರಿಗಳು ಒಂದಾಗಿ Special Task Forceನ ರಚನೆಯಾಯಿತು... ಇದರ ನೇತೃತ್ವ ವಯಿಸಿದ್ದು.... ಹೆಸರು ಕೇಳಿದರೆ ಭೂಗತ ಲೋಕವೆ ನಡುಗುವ ಹಾಗೆ ಮಾಡುತ್ತಿದ್ದ ಕರ್ನಾಟಕದ Daring ಅಧಿಕಾರಿ tiger ಪ್ರತಪ್... ೧೬ ಜನರಿದ್ದ ಹಿರಿಯ ಪೋಲಿಸ್ ತಂಡ , ಜೊತೆಗೆ ೧೨ ACP , ೧೦ DCP , ೪೫ SI , ೧೫೦ PCಗಳು.. "Operation Rail Road Killer " ಕಾರ್ಯಚರಣೆಗೆ ಇಳಿದಿತ್ತು ದೊಡ್ಡ ಪೋಲಿಸ್ ತಂಡ.
                 *  *  *

       ಶಾಲಿನಿ ,
            ನನ್ನ ಜೀವನದಲ್ಲಿ ಅತೀ ಸಂತೋಷದದಿಂದ ಮಾತನಾಡಿಸಿದ ಹುಡುಗಿಯಂದರೆ ಅದು ನೀನೆ . ಎಲ್ಲ ನನ್ನನ್ನ ಹೊರಗಿನವನು , ನಿಗೂಢವಾಗಿ ಏನೋ ಮಾಡುತ್ತಿದ್ದನೆ ಎಂದು ದೂರ ತಳ್ಳಿದರು . ಅದರೆ ನೀನು ನನ್ನನ್ನ ಅಚ್ಚಿಕೊಂಡೆ , ಕಾಫಿ ಕುಡಿಸಿದೆ , ನನ್ನ ಜೊತೆಯಿದ್ದ ಆ ಕ್ಷಣ ನಿನ್ನ ಕಣ್ಣಗಳಲಿದ್ದ ಗೆಲುವುಕಂಡಿದ್ದೆ .. ಸ್ಯಾಂಕಿ ರೋಡ್ನಲ್ಲಿ ನಡೆದು ಹೋಗಿತ್ತಿರುವಾಗ ನಿನ್ನ ಆ ಕಿರುನಗೆ ಪ್ರೀತಿಬಿರಿದ್ದನ್ನು ಗಮನಿಸಿದ್ದೆ... I'm greatfull to you , ಅದರೆ ಶಾಲಿನಿ ನನ್ನ ಬಗ್ಗೆ ನೀನು ತಿಳಿದುಕೊಂಡಿಲ್ಲ ಅನಿಸುತ್ತೆ , I'm not a nice man to know.. ನಾನು ತುಂಬಾ ಮನುಷ್ಯನಲ್ಲ...ನಾನು ದೊಡ್ಡ ಕನಸನ್ನ ಹೊತ್ತಿದ್ದೆನೆ , ಸಾಧಿಸುವುದು ಬಹಳಷ್ಟಿವೆ..
   What do you know about me , ನನ್ನ ಬಗ್ಗೆ ಏನು ಗೊತ್ತು..ನನ್ನ ಕುಟುಂಬವೇ ವಿಚಿತ್ರ , ನಿನ್ನಂತ ಶ್ರೀಮಂತರ ಮಗಳು ಈ ಬೀಕರಿಯನ್ನು ಪ್ರೀತಿಸುವುದೆ , NO ಸಮಾಜ ಒಪಲ್ಲ.. ಸಮಾಜ ಏಕೆ ನಾನೇ ಒಪ್ಪುವುದಿಲ್ಲ..
              ಕ್ಷಮೆ ಇರಲಿ,                                   
                                                                                                     
                                                                                                                 - ನಿನ್ನ ಹಿಮು

   ಯಾವುದೆ ಎರಡನೇ ಯೋಚನೆ ಇಲ್ಲದೆ ಕೇವಲ ೩೦ secondನಲ್ಲಿ ಪತ್ರ ಬರೆದು ಮುಗಿಸಿ ಎರಡನೇ ಬಾರಿಯು ಹೋದದೆ ಸ್ವತಃ ಶಾಲಿನಿಗೆ ಕೊಟ್ಟುಬಂದಿದ್ದ ಹಿಮಾಂಶುವಿನ ಮನಸ್ಸಿನಲ್ಲಿ ಒಂದು ಚಿಂತೆ. "ನಿನ್ನ ಹಿಮು" ಅಂತ ನನಗೆ ತಿಳಿಯದೆ ಬರೆದುಬಿಟ್ಟೆನಲ್ಲ! , ಆ ಪದ ಮನಸ್ಸಿನಿಂದ ನೆರವಾಗಿ ಅಕ್ಷರ ರೂಪದಲ್ಲಿ ಪೇಪರ್‍್ಮೇಲೆ ಇಳಿದಿತ್ತು . ಹಿಮಾಂಶು ಮತ್ತಷ್ಟು ಯೋಚಿಸ ತೊಡಗಿದ . ಶಾಲಿನಿಯ ಆ ನಗು , ಅವಳ ಮುಂಗುರುಳು ಈಗ ತಾನೆ ಹಚ್ಚಿದ ದೀಪದಂತೆ ಕನುತ್ತಿದ್ದ ಕಣ್ಣುಗಳು ಹಿಮಾಂಶುವನ್ನು ಕಾಡತೋಡಗಿದವು , ಒಂದು ಕ್ಷಣ ತಾನೆ ಏನು ಮಾಡುತ್ತಿದೆನೆಂದು ಅರಿವು ಕೂಡ ಬಂದಿರಲಿಲ್ಲ ಶಾಲಿನಿಯ ಹಿಮುವುಗೆ!!
                                             *   *   *  *

       ಅತ್ತ ಬೆಂಗಳೂರಿನಿಂದ ಭಬನೆಶ್ವರಕ್ಕೆ ತಲುಪುತ್ತಿದ್ದ ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಕಾರ್ಯಚರಣೆ ತಿರ್ವಗೊಂಡಿತ್ತು..   ಕರ್ನಾಟಕ-ಅಂಧ್ರದ ಅಷ್ಟು ರೈಲ್ವೆ ರೂಟುಗಳಲ್ಲು ಭೀಗಿ ಬಂದೊಬಸ್ತ್. ಅಷ್ಟು ಗಿಜಿಗುಡುತ್ತಿದ್ದ  ಪ್ರಶಾಂತಿ ಎಕ್ಸಪ್ರೇಸ್ನಲ್ಲಿ  ಪೋಲಿಸ್ ಬೂಟುಗಳ ಶಬ್ದ ಹೊರತುಪಡಿಸಿದರೆ ನೀರವ ಮೌನ . ನಿಶ್ದವಲ್ಲಿ ಜೀವ ಪಡೆದಿತ್ತು . special task forceನ Operation Rail Road Killer ಕಾರ್ಯಚರಣೆ ಶುರುವಾದಗಲಿಂದ ಯಾವುದೆ ಹತ್ಯೆಯಾಗಿರಲಿಲ್ಲ , ಇತ್ತ Investigation ಟೀಮ್ ಮೈಕೊಡವಿ  ನಿಂತಿತ್ತು . ಕಳೆದ ನಾಲ್ಕು ತಿಂಗಳಿಂದ record ಆದ CC  cameraಗಳ ದೃಶ್ಯ , mobile phone network ಮತ್ತು ಟ್ರೇನ್ನಲ್ಲಿ ಸಿಕ್ಕಿದ್ದ ಕೆಲವು ದೃಶ್ಯಗಳ ಬಗ್ಗೆ ವಿಸ್ತೃತವಾದ ಅಧ್ಯಯನ ಮಾಡ ತೊಡಗಿತ್ತು . Especially ಹುನ್ನಿಮೆಯ ಹಿಂದು ಮುಂದು  ಮೂರು ದಿನಗಳ ದೃಶ್ಯ ಮತ್ತು ಟೀಕೆಟ್ ಗಳ details ಪ್ರತಿಯೊಂದನ್ನು ಕಲೆಯಾಕಲಾಗಿತ್ತು ಹತ್ತು ದಿನಗಳ ನಂತರ investigation team ವರದಿಯನ್ನು tiger ಪ್ರತಪ್ ಗೆ ನೀಡಲಾಗಿತ್ತು . They had a first susscess in this operation... they got a hint.. the big hint ...ಹಂತಕರ ಬಗ್ಗೆ ಸಕ್ಷಿಗಳ ಜೊತೆ ಕೆಲವು ದೃಶ್ಯಗಳು ಸಿಕ್ಕಿಬಿಡ್ತು. ಹುಣ್ಣಿಮೆಯ ಕೊಲೆಗಳ ರಹಸ್ಯ ಭೇದಿಸಲು ಅಣಿಯಾದರು STF ತಂಡ!!
                                                                           (ಮುಂದುವರೆಯುತ್ತದೆ-to be continued)

No comments:

Post a Comment