18 Oct 2014

ಹುಣ್ಣಿಮೆಯ ನಿಶಬ್ಧ ಭಾಗ - ೫

          ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ನಡೆಯುತ್ತಿದ್ದ ಸರಣಿ ಕೊಲೆಗಳ ರಹಸ್ಯ ಭೇದಿಸಲು ಸ್ಥಾಪಿಸಿದ special task force ಕೇವಲ ಹತ್ತು ದಿನಗಳಲ್ಲೆ ಮೊದಲ ಯಶಸ್ಸು ಪಡೆದಿತ್ತು , ಹುಣ್ಣಮೆಯ ದಿನದಂದು ನಡೆಯುತ್ತಿದ್ದ ಕೊಲೆಗಳಿಗೆ ಸಂಭದಿಸಿದಂತೆ ನಾಲ್ಕರು ಸಕ್ಷಿ ಸಿಕ್ಕಿತ್ತು.. ಅದಕ್ಕಿಂತ್ತ ಹೆಚ್ಚಾಗಿ ಅವರಿಗೆ ಸಿಸಿಟಿವಿ ದೃಶ್ಯವಳಿಗಳು ಸಿಕ್ಕಿತ್ತು! ಕೂಡಲೇ ಮುಖ್ಯಮಂತ್ರಿ , ಗೃಹಸಚಿವ ಮತ್ತು DGPಗೆ ವರದಿ ಒಪ್ಪಿಸಿ 'operation railroad killer' ಕಾರ್ಯಚರಣೆ ಆರಂಭಿಸಿದರು ಟೈಗರ್‍  ಪ್ರತಾಪ್‌ಕುಮಾರ್‍್ನೇತೃತ್ವದ STF ತಂಡ..
                                                           *  *  *

  ಹಿಮಾಂಶು ಕೊಟ್ಟಿದ್ದ ಪತ್ರವನ್ನು ಮೂರು ನಿಮಿಷದಲ್ಲಿ ಹತ್ತು ಬಾರಿ ಓದಿಕೊಂಡಿದ್ದಳು , ಆ ಪತ್ರದಲ್ಲಿ ಬರೆದ ಪ್ರತಿ ಪದಗಳಿಂದೆ ಅಡಗಿದ್ದ ಭಾವ ಅರಿತಿದ್ದಳು ಶಾಲಿನಿ , ಆಗ ರಾತ್ರಿ ೧೦:೪೫ ನಿಮಿಷ ಆ ನಿರ್ಜನ ನಲ್ಲಮಲ ಅರಣ್ಯ ಪ್ರದೇಶದ ನಡುವೆ ಇದ್ದ ಅಧ್ಯಯನ ಕೇಂದ್ರಲ್ಲಿದ್ದದ್ದು ೧೩ ಮಂದಿ ಮಾತ್ರ . ಆ ಭಯಂಕರ ಕತ್ತಲ ರಾತ್ರಿಯಲ್ಲಿ ಹಿಮಾಂಶು ರೂಮಿಗೆ ನಡೆದು ಹೋದವಳೆ ಬಾಗಿಲು ತಟ್ಟಿದ್ದಳು . ಜಗತ್ತಿನ ಅರಿವಿಲ್ಲದ ಹಾಗೆ ಗೋಪಲ ಕೃಷ್ಣ ಅಡಿಗರ ಕವಿತೆ ಓದಿ ಕುಳಿತ್ತಿದ್ದ ಹಿಮಾಂಶು...
            " ಒಡೆದು ಬಿದ್ದ ಕೊಳಲು ನಾನು
         ನಾದ ಬರದು ನನ್ನಲ್ಲಿ!!"

                                                                                                ಎರಡು ಸಾಲಿನಲ್ಲಿ ಅದೆಷ್ಟು ಅರ್ಥ!!
ಬಾಗಿಲು ತಟ್ಟಿದ ಶಬ್ದ ಕೇಳಿದವನೆ ಪುನಃ ವಾಸ್ತವ ಜಗತ್ತಿಗೆ ಇಳಿದ , ಶಾಲಿನಿ ಬಾಗಿಲಲ್ಲಿ ನಿಂತದ್ದು ನೋಡಿ ಸಂತೋಷದೊಡನೆ ಅಚ್ಚರಿಪಟ್ಟ ಹಿಮಾಂಶು !!!
  " Himu , Shall we go for a walk " ಅಂದಿದ್ದ ಶಾಲಿನಿಯ ಕಣ್ಣುಗಳಲ್ಲಿ ವಿನಂತಿಯಿತ್ತು.
ತಲೆಯಾಡಿಸಿದವನೆ ಅ ನೀರವ ರಾತ್ರಿಯಲ್ಲಿ ಮುದ್ದು ಮುದ್ದು ಹುಡಿಗಿ ಶಾಲಿನಿಯೊಂದಿಗೆ ಹೆಜ್ಜೆ ಇಡುತ್ತ ಹೊರಟ ಹಿಮಾಂಶು.. ೧೦ ನಿಮಿಷ ಯಾವುದೇ ಮಾತಿಲ್ಲದೆ ನಡೆಯುತ್ತಾ ಹೋಗುತ್ತಿದವರಲ್ಲಿ ಶಾಲಿನಿಯು ಹಾಡಿದ ಹಾಡು ಮೌನ ಮುರಿದಿತ್ತು..  "ಓಲವೇ ಜೀವನ ಸಾ‍ಷತ್‌ಕಾರ , ಓಲವೇ ಮರೆಯಾದ ಮಮಾಕರ "
ಶಾಲಿನಿಯೊಂದಿಗೆ ನಲ್ಲಮಲ ಅರಣ್ಯದಲ್ಲಿ ರಾತ್ರಿ ೧೧.೦೦ ಗಂಟೆಗೆ ಆ ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರನನ್ನು ಹುಡುಕುತ್ತಾ ಹೋಗುತ್ತಿದ್ದ ಹಿಮಾಂಶುವಿಗೆ ಈ ಹಾಡು ೧೪ ವರ್ಷಗಳ ಹಿಂದಕ್ಕೆ ಕರೆದೊಯ್ತು !! ಅದು ಇಂತಹುದೆ ಒಂದು ಹುಣ್ಣಿಮೆಯ ರಾತ್ರಿ ಚಂದ್ರನೇಕೊ ಮರೆಯಾಗಿದ್ದ.. ಸದಾಶಿವನಗರದ ಎರಡನೇ ಕ್ರಾಸಿನ ಮನೆಮೇಲಿನ Terraceನಲ್ಲಿ ಕುತ್ತಿದ್ದ ಹಿಮಾಂಶು ಮತ್ತು ಅವನ ತಾಯಿ ಪ್ರಶಾಂತಿನಿ ಮೌನದಿಂದಲೇ ಈ ಹಾಡು ಕೇಳಿಸಿಕೊಂಡಿದ್ದರು...

      ಓಲವೇ ಜೀವನ ಸಾಷತ್‌ಕಾರ....ಓಲವೇ ಮರೆಯಾದ ಮಮಾಕರ...!!

  ಐದು ವರ್ಷದ ಪುಟ್ಟ ಹಿಮಾಂಶು , ಅಮ್ಮನಿಗೆ ಕೇಳುತ್ತಾನೆ , " ಅಮ್ಮ , ಅಪ್ಪ ಏಲ್ಲಿಗ್‌ಗೊಗಿದ್ದಾನೆ... ನಂಗೆ , ಅಪ್ಪ ಬೇಕು " ಅಂತ ಭಾವಪೂರ್ವಕಾವಾಗಿ ಕೇಳಿದ್ದ.... ಅಪ್ಪ !! ಮರೆತುಹೋಗಿದ್ದ ಪ್ರೋಫೆಸರ್‌ ಪ್ರಶಾಂತಿನಿಗೆ ನೆನಪಾದ , ಅತನ ಪ್ರತಿಯೊಂದು ಭಾವಗಳು ನೆನಪಾಗಿದ್ದವು ನಿಷ್ಕಲಮಶವಾಗಿದ್ದ ತನ್ನ ಅಕ್ಕನ ಮೇಲಾದ ದೌರ್ಜನ್ಯಗಳು ನೆನಪದವು , ಮೋಸ ನೆನಪಾದವು , ನಿವೇಧಿತಾ ನೆನಪದಳು !!!! ಎಲ್ಲದಿಕ್ಕಿಂತ ಮಿಗಿಲಾಗಿ ಮರೆತುಹೋಗಿದ್ದ ತನ್ನ ದ್ವೇಷ ನೆನಪಾಯ್ತು , REVENGE ಎಂಬ ಪದ ನೆನಪಾಗಿತ್ತು...
      ಮೂಡಬಿದರೆಯ ಅಳ್ವಸ್ ಕಾಲೇಜಿನಲ್ಲಿ ಮೊದಲ ಬಿಎ ಓದುತ್ತಿದ್ದ ಹುಡುಗಿ ನಿವೇಧಿತಾ , ಕಪ್ಪು ಕಾಡಿಗೆಗೆ ರೆಪ್ಪೆಯೊಡ್ಡಿ ಇಣಕು ನೋಡುತ್ತಿದ್ದ ಕಣ್ಣುಗಳು ಬೆಳಗಿನ ಜಾವದ ಮೊದಲ ಸೂರ್ಯಕಿರಣಗಳು ಕಿಟಕಿಯ ಮೂಲಕ ಇಣುಕಿ ನೋಡುತ್ತಿದ್ದ ಹಾಗೆ ಕಾಣಿಸಿತು , ಎತ್ತರವಾದ ನಿಲುವು , ಹಾಲು ಬಿಳುಪು ಬಣ್ಣದ ಕೆನ್ನೆ , ಕಾಲೇಜಿನಲ್ಲಿ ಅತೀ ಮುದ್ದು ಮುದ್ದುಗಿದ್ದ ಹುಡುಗಿ ನಿವೇಧಿತಾ... ಬಿಎ ಓದುತ್ತಿದ್ದ ಅವಳು ಅದೇಕೊ ವಾಮಚಾರದ ಬಗ್ಗೆ ಆಸಕ್ತಿ , ಮಾಟಗಾತಿ ಸುಬ್ಬಮ್ಮನ ಬಗ್ಗೆ ಆಸಕ್ತಿ . ಪ್ರತಿ ಅಮಾವಾಸೆ , ಹುಣ್ಣಿಮೆಯ ದಿನ ಸುಬ್ಬಮ್ಮ ಮಾರ್ಕಂಡಿಯನ್ನು ಓಲಿಸಿಕೊಳ್ಳುತ್ತಿದ್ದ ಬಗ್ಗೆ ವಿಪರೀತ ಆಸಕ್ತಿ ತೋರುತ್ತಿದ್ದಳು .. ಯಾರನ್ನು ನಂಬುತ್ತಿರದ , ಭಾವನೆಗಳೇ ಇಲ್ಲದ , ಸೆಂಟಿಮೆಂಟ್ ಅವಳ ಭ್ರೂ ಮಧ್ಯದ ರಕ್ತಕುಂಕುಮದಲ್ಲೂ ಜಾಗವಿಲ್ಲದ ಸುಬ್ಬಮ್ಮ ನಿವೇಧಿತಾಳನ್ನು ಅಚ್ಚುಕೊಂಡಿದ್ದಳು . ಆಕೆಗೆ ಪ್ರತಿವಿದ್ಯಯ ಬಗ್ಗೆಯೂ ಮಾಹಿತಿ ನೀಡುತ್ತಿದ್ದಳು... ಅಷ್ಟು Ruthless ಅಗಿದ್ದ ಮಾಟಗಾತಿ ಸುಬ್ಬಮ್ಮ ಆಕೆಯ ಬದುಕಿನ ಕಟ್ಟಕಡೆಯ ಗುರಿಯನ್ನು ನಿವೇಧಿತಾಗೆ ತಿಳಿಸಿದ್ದಳು.. ಅದು ಮಾರ್ಕಂಡಿಯನ್ನು ಒಲಿಸಿಕೊಳ್ಳುವುದು , ಕ್ಷುದ್ರವಿದ್ಯಯಲ್ಲಿ ಪರಂಗತವಾಗುವುದು , ಕಾಮ ಪಿಶಾಚಿಯನ್ನು ಪ್ರತ್ಯಕ್ಷಿಸುವುದು . ಇದೆಲ್ಲ ನೋಡುತ್ತಿದ್ದ ನಿವೇಧಿತಾಗೆ ಭಯವಾಗಲಿ , ಅಳುಕಗಲಿ ಇರಲಿಲ್ಲ ಅದರೆ ಅವಳಿಗೆ ಮತ್ತಷ್ಟು ಅಸಕ್ತಿ ಹೆಚ್ಚುತ್ತಿತ್ತು...
       ತನ್ನ ಓದು , ಮನೆ , ಮಾಟದ ಬಗ್ಗೆ ಆಸಕ್ತಿಯಿದ್ದ ನಿವೇಧಿತಾಗೆ ಹುಡುಗನೊಬ್ಬ ಪ್ರೀತಿಯ ಬಯಕೆಯಿಟ್ಟ ತುಂಬಾ ಸ್ಪುರದೃಪಿಯಾದ ಯುವಕನನ್ನು ನಿವೇಧಿತಾ ಮರುಪ್ರೀತಿಸದೆ ಇರಲಿಲ್ಲ... ಇದು ತನ್ನ ಬದುಕಿಗೆ Brutal ಅಗಬಹುದು , ನನ್ನ destroy ಮಾಡಬಹುದೆಂದು ಊಹೇ ಕೂಡ ಮಾಡಿರಲಿಲ್ಲ ಅವಳು!!
ಪ್ರೀತಿ ಎರಡು ವರ್ಷಗಳ ಕಾಲ ಮುಂದುವರೆದಿತ್ತು , ಮರಗಳನ್ನು ಸುತ್ತಿಯಾಗಿತ್ತು , ಸಿನಿಮಾ long ride ಹೀಗೆ ಎಂಜಾಯ್‌ ಮಾಡಿದ್ದರು... ನಿವೇಧಿತಾ ಅವನನ್ನು ತುಂಬಾ ನಂಬಿದ್ದಳು , ಪ್ರೀತಿಸಿದಳು , ಅರದಿಸಿದ್ದಳು .... ಎರಡು ಧರ್ಮದ ದಂಪತಿಗಳ ಮಗನಗಿದ್ದರಿಂದ ನಿವೇಧಿತಾಳನ್ನು ಅವನೊಂದಿಗೆ ಮದುವೆ ಮಾಡಿಕೊಳ್ಳಲು ಅವಳ ತಂದೆ ಓಪ್ಪಿಕೊಂಡಿರಲಿಲ್ಲ... ಅದರೆ ಶ್ರೀಮಂತರ ಮಗಳಳಾಗಿದ್ದ ನಿವೇಧಿತಾ ಓಡಿ ಹೋಗಿ ಮದುವೆಯಾಗಿದ್ದರು.. ಅದರೆ..?? ಅದರೆ ನಿವೇಧಿತಾಳ ಅಸ್ತಿಯನ್ನು ನೋಡಿ ಪ್ರೀತಿಸಿದ್ದ ಅತ ಅವಳನ್ನ ಜಸ್ಟ್ ಯೂಸ್ ಮಾಡಿ ಎಸೆದಿದ್ದ.. ಕಷ್ಟ ಕೊಟ್ಟ , ಬರುಬರುತ್ತಾ ತುಂಬಾ brutalಅಗಿ behave ಮಾಡಿದ್ದ ಆತ ಅವಳನ್ನ ಕೊಲೆಮಾಡಿಬಿಟ್ಟಿದ್ದ... ಅವನು  Alexander ರಾಜನಾಥ ಚಟರ್ಜಿ...  
  ಆಗ ತಾನೇ national ಕಾಲೇಜಿನಲ್ಲಿ  I pu ಓದುತ್ತಿದ್ದ ಮುಗ್ದ ಹುಡುಗಿ ಪ್ರಶಾಂತಿನಿಗೆ ಈ ವಿಷಯ ತಿಳಿಯದೆ ಇರಲಿಲ್ಲ !! ಅಕ್ಕನನ್ನು ಕೊಂದವನ ಬಗ್ಗೆ ಉಗ್ರ ಕೋಪ ಮಾಡಿಕೊಂಡಳು . ಮನೆಯಲ್ಲಿ ವಿಷಯ ತಿಳಿಸಿದರೆ ಏನು ಆಗದು ಎಂದು ಅರೆತ ಪ್ರಶಾಂತಿನಿ ಮಾಟಗಾತಿ ಸುಬ್ಬಮ್ಮನಿಗೆ ವಿಷಯ ತಿಳಿಸಿಲು ಅಣಿಯದಳು...
   ಅದು ಮೆಜೆಸ್ಟಿಕ್ಕಿನ ಎದುರು , ಆಯುರ್ವೇದದ ಆಸತ್ರೆಯ ಪಕ್ಕ ರಾಜ್‌ಮಹಲ್ ಹೊಟೇಲೆಂಬ ಮುಗಿಲೆತ್ತರದ ಕಟ್ಟಡದ ಮುಂದೆಯೇ , ಮೆಜೆಸ್ಟಿಕ್ಕಿನಿಂದ ಮಲ್ಲೇಸ್ವರಕ್ಕೆ ಹೋಗುವ ಅಂಡರ್‍್ಬ್ರಿಡ್ಜ್ ರಸ್ತೆಯ ಒಂದು ಪಾರ್ಶದ ಮೇಲೆ ಹರಡಿಕೊಂಡಿರುವ ಮಹಾ ಕೊಳಕು ಸ್ಲಮ್ಮೇ ಲಕ್ಷಣಪುರಿ!! ಅದು ಇವತ್ತಿಗೂ ಇದೆ. ಮೆಜೆಸ್ಟಿಕ್ಕಿನ ಎಲ್ಲ ಪಾಪವೂ ಘನೀಭವಗೊಂಡು ಈ ಲಕ್ಷಣಪುರಿ ಸೃಷ್ಟಿಯಾದಂತಿದೆ . ಅಂತಹ ಕೆಟ್ಟಾಕೊಳಕು ಸ್ಲಮ್ಮೆನಲ್ಲಿ ಒಂದೇ ಒಂದು ಬ್ರಾಹ್ಮಣರ ಮನೆ!
   ಅದು ಮಾಟಗಾತಿ ಸುಬ್ಬಮ್ಮನದು !!
 ಜಗತ್ತಿನಲ್ಲಿ ತಾನು ಪ್ರೀತಿಸಿದ , ಗೌರವಿಸಿ , ನಂಬಿದ್ದ ಹುಡುಗಿ ನಿವೇಧಿತಾ ಸಾವು ಮಾಟಗಾತಿ ಸುಬ್ಬಮ್ಮನಿಗೆ ವಿಚಲಿತಗೊಳಿಸಿತು . ಭಾವನೆಗಳೇ ಮರೆತುಹೋಗಿದ್ದ ಸುಬ್ಬಮ್ಮ ಒಂದು ಕ್ಷಣ ನಿವೇಧಿತಾಳಿ ಗೋಸ್ಕರ ಮರುಗಿದ್ದಳು . ತನ್ನ ಬದುಕಿನ ಗುರಿ ಒಂದಲ್ಲ ಎರಡು!! ಎಂದು ತೀರ್ಮಾನ ಮಾಡಿದಳು... ಒಂದು ಕರ್ಣ ಪಿಶಾಚಿ-ಮಾರ್ಕಂಡಿಯನ್ನು ಒಲಿಸಿಕೊಳ್ಳುವುದು ಎರಡನೇಯದು alexander ರಾಜನಾಥ ಚಟರ್ಜಿಯನ್ನು ತನ್ನ ದಿವ್ಯ ಶಕ್ತಿಯಿಂದಲೆ ಸಾಯುಸುವುದು.... ಅದು ಮಾರ್ಕಂಡಿಗೆ ಬಲಿ ನಿಡುವುದು!!
     ಹೀಗೆ ೧೪ ವರ್ಷದ ಹಿಂದಿನ ನೆನಪಿಗೆ ಹೋಗಿದ್ದ ಹಿಮಾಂಶು ವಾಸ್ತವಕ್ಕೆ ಇಳಿದಿದ್ದ , ಮಾಟಗಾತಿ ಸುಬ್ಬಮ್ಮ ಈಗಗಲೇ  ಕರ್ಣಪಿಶಾಚಿ *ಯನ್ನು ಒಲಿಸಿಕೊಳ್ಳಲು ದೊಡ್ಡ ಮಾರಣ ಹೋಮ ಶುರುಮಾಡಿ ೮ ತಿಂಗಳಾಗಿತ್ತು.. ೮ ತಿಂಗಳಲ್ಲಿ ೧೬ ಬಲಿ ; ಇನ್ನು ಕೇವಲ ೪ ತಿಂಗಳಲ್ಲಿ ಭಾರತದ ಕೇಲವೆ ಕ್ಷುದ್ರಸಾಧಕರು ಸಾಧಿಸಿಕೊಂಡಿರುವ ಉಗ್ರ ವಿದ್ಯಾಯನ್ನು ಸಾಧಿಸಿಕೊಳ್ಳಲಿದ್ದಳೆ ಮಾಟಗಾತಿ ಸುಬ್ಬಮ್ಮ... ಅವಳ ೨೪ ಬಲಿ alexander ರಾಜನಾಥ ಚಟರ್ಜಿನ......??
                                                                          (ಮುಂದುವರೆಯುತ್ತದೆ-to be continued)
( ವಿ.ಸೂ - * ಕರ್ಣಪಿಶಾಚಿ : ಇದೊಂದು ದೊಡ್ಡ ಗಾತ್ರದ ಶಕ್ತಿಯುಳ್ಳ ಕ್ಷುದ್ರ ದೇವತೆ. ಜನ ಸರಿಯಾದೆ ಹೆಸರು ಗೊತ್ತಿಲ್ಲದೆ ಕರ್ಣಪಿಶಾಚಿ ಎನ್ನುತ್ತಾರೆ . ಅದರೆ ಆಕೆಯ ನಿಜವಾದ ಹೆಸರು ಕಾಮಕರ್ಣ ಪಿಶಾಚಿ . ವಾಮಾಚಾರದ ಆಳ-ಗಲ ಬಲ್ಲವರಿಗೆ ಅವಳ ತಾಕತ್ತು-ಅಪಾಯಗಳೆರಡೂ ಗೊತ್ತು . ಕ್ಷುದ್ರ ಔಪಸನೇಯ ನಂಬಲಿಕ್ಕಾಗದ ವಾಸ್ತವವೋ ಗೊತ್ತಿಲ್ಲ . ಪ್ರತ್ಯಕ್ಷವಾಗುವಕೆ nude goddess !! ಆಕೆ ಬಟ್ಟೆ ಧರಿಸುವುದಿಲ್ಲ . ಆದರೆ ಅವಳ ಶಕ್ತಿ ಊಹೆಗಿಂತಲು ತುಂಬಾ ಹೆಚ್ಚು.. ಕರ್ಣ ಪಿಶಾಚಿನಿಯೆದುರು ಮಗುವಾಗಬೇಕು . ಕೊಂಚ ಆಯತಪ್ಪದರು ಆಕೆ ರಕ್ತ ಕುಡಿಯುತ್ತಾಳೆ.... ನನ್ನ ಮುಂಬರುವ ವಾಮಾಚಾರದ ಭಾಗದಲ್ಲಿ ಇದರ ಬಗ್ಗೆ ಹೆಚ್ಚು ವಿವರಿಸಲು ಪ್ರಯತ್ನಿಸುತ್ತೆನೆ.. ಕರ್ಣ ಪಿಶಾಚಿನಿಯ ಬಗ್ಗೆ ಹೆಚ್ಚು ತಿಳಿಯಲು ೧೯೦೬ರಲ್ಲಿ ಪ್ರಕಟವಾಗಿರುವ ತಮಿಳು ಗ್ರಂಥವೊಂದನ್ನು ಓದಬಹುದು ಅಥವಾ ಅಂಥ್ರದ ಪಶ್ಚಿಮ ಗೋದವರಿಯ ಚುಂಗುರಿ ಮತ್ತು ನರ‍್ಮಿ ಹಳ್ಳಿಗಳಿಗೆ ಬೇಟಿನಿಡಬಹುದು - ಮಂಜುನಾಥ್ )
close