11 Nov 2014

ಹುಣ್ಣಮೆಯ ನಿಶಬ್ಧ ಭಾಗ- 6

        ಕತೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡ   ಹುಣ್ಣಿಮೆಯ ನಿಶಬ್ಧ ಭಾಗ -1  
 ಹುಣ್ಣಿಮೆಯ ನಿಶಬ್ಧ ಭಾಗ -5

        ಓಲವೇ ಜೀವನ ಸಾಕ್ಷತ್‌ಕಾರ...! ಹಾಡು ಕೇಳಿದೊಡನೆ ದಶಕಗಳ ಹಿಂದಿನ ನೆನಪಿಗೆ ಹೋಗಿದ್ದ ಹಿಮಾಂಶು ಪುನಃ ವಾಸ್ತವಕ್ಕೆ ಇಳಿಯುತ್ತಾನೆ , ರೌದ್ರ ರಮಣೀಯವಾಗಿದ್ದ ನಲ್ಲಮಲ ಅರಣ್ಯದಲ್ಲಿ ರಾತ್ರಿ 11 ಗಂಟೆ 15 ನಿಮಿಷದ ಕತ್ತಲೆಯಲ್ಲಿ ಅವರಿಬ್ಬರು ಕರಗಿ ಹೋಗಿದ್ದರು..

   ಇತ್ತ ರಾತ್ರಿ 11  ಗಂಟೆ 17 ನಿಮಿಷ ನಿದ್ದೆಯಿಲ್ಲದ ಕಣ್ಣುಗಳಲ್ಲೆನೊ ಯಶಸ್ಸು ಸಿಕ್ಕಿದ ಸಂತೋಷ ನಲಿಯುತ್ತಿತ್ತು.. ಕೇವಲ 22 ಗಂಟೆ.. Just 22 hours! ಇಡೀ ಅಂಧ್ರ-ಕರ್ನಾಟಕ ಪೋಲಿಸರಿಗೆ ತಲೆ ನೋವಗಿದ್ದ ಹಂತಕ ಸೆರೆಯಾಗುತ್ತಾನೆ ಅಂತ ACP ಪ್ರತಾಪ್‌ ಕುಮಾರ್‌ ಯೋಚಿಸುತ್ತಿದ್ದರೆ ಎದುರಿಗೆ ಕುತ್ತಿದ್ದ ಬೆಂಗಳೂರು ಇತಿಹಾಸ ಕಂಡ ಅತ್ಯಂತ ಟಾಫ್‌ ಕಾಪ್‌ DYSP ಶಿವರಾಮಪ್ಪ ನಾಳಿನ ಪ್ಲೆನ್‌ಗಳ ಸಂಪೂರ್ಣ ವಿವರಗಳನ್ನು ನೀಡುತ್ತಿದ್ದರು.. ಕೇವಲ ಇನ್ನು 7 ಗಂಟೆಯಲ್ಲಿ ಪೋಲಿಸರೆಲ್ಲ ತಮ್ಮ ಕಾರ್ಯಚರಣೆಗೆ ಸಜ್ಜಗಬೇಕು . ಅದರೆ  DYSP ಶಿವರಾಮಪ್ಪ  ಬೇರೆನೊ ಪ್ಲೆನ್‌ನಲ್ಲಿದ್ದರು. ಅದು ಕೇವಲ ACP ಪ್ರತಾಪ್‌ ಕುಮಾರ್‌ ಮತ್ತು ಅವರು ಈ ಕಾರ್ಯಚರಣೆಯಲ್ಲಿ ತೊಡಗುವುದು ಎಂದು ಕರ್ನಾಟಕ ಮುಖ್ಯಮಂತ್ರಿಗಳ ಮುಂದೆ ವಿವರಿಸುತ್ತಿದ್ದರೆ . ಮುಖ್ಯಮಂತ್ರಿಗಳಿಗೆ ಒಂದು ಕ್ಷಣ ದಿಗಿಲು ಬಡಿದಿತ್ತು... ಕೇಲವೆ ನಿಮಿಷದಲ್ಲಿ ಅವರ ಕಾರ್ಯಚರಣೆಯ ಶೈಲಿ ಬದಲಾಗಿತ್ತು.. DYSP ಶಿವರಾಮಪ್ಪ ಎಲ್ಲಾರ ಊಹೆಗೂ ನಿಲುಕದ ದೊಡ್ಡ ಕಾರ್ಯಚರಣೆಗೆ ಅಣಿಯಾಗಿದ್ದರು..

     ತಮಗೆ ಸಿಕ್ಕಿದ ಸಿಸಿ-ಟಿವಿ ದೃಶ್ಯಗಳಲ್ಲಿ ಅವರು ಕಂಡಿದ್ದು ಒಂದು ನಾಯಿ.. ಹುಲಿ ಗಾತ್ರದ ನಾಯಿ ಕೊಲೆಯಾದ ದಿನವೆಲ್ಲ ರೈಲ್ವೆ ನಿಲ್ದಾಣದಲ್ಲಿ ಓಡಡುತ್ತಿತ್ತು... ಸಿಸಿ-ಟಿವಿಯಲ್ಲಿ ಅವರಿಗೆ ಸಿಕ್ಕ ಮತ್ತೊಂದು ದೃಶ್ಯದಲ್ಲಿ ಕಂಡಿದ್ದು ಒಂದು ಆಕೃತಿ.. ಮತ್ತೆ ಮತ್ತೆ ಹಲವು ಸಿಸಿ-ಟಿವಿಯಲ್ಲಿ ಕೊಲೆಯಾದ  ಅಷ್ಟು ದಿನದಲ್ಲಿ ರೈಲಿನಲ್ಲಿ ಕಾಣಿಸಿಕೊಂಡಿದ್ದ ಆಕೃತಿ ಯಾರು ಎಂದು ತಿಳಿಯಲು ಕಷ್ಟವಾಗಿರಲಿಲ್ಲ.. ಅ ಆಕೃತಿಯ ಹೆಸರು "ಹಿಮಾಂಶು!!"
  
                    ಒಡೆದು ಬಿದ್ದ ಕೊಳಲು ನಾನು
                    ನಾದ ಬರದು ನನಲ್ಲಿ..!!

       ವಾಸ್ತವಕ್ಕೆ ಇಳಿದ ಹಿಮಾಂಶುವಿಗೆ ಆಗ ತಾನೇ ತಾನು ಓದುತ್ತಿದ್ದ ಅಡಿಗರ ಕಾವ್ಯ ನೆನಪಾಗಿ ಗದ್ಗತಿತನಾದ.. ಅಷ್ಟು ರುದ್ರ ನಲ್ಲಮಲ ಅರಣ್ಯದಲ್ಲೆನೊ ನೀರವ ಮೌನ..! ಅಲ್ಲಿ ಇದ್ದದ್ದು ಹಿಮಾಂಶು , ಶಾಲಿನಿ ಮತ್ತು ಮೊಡದ ಮರೆಯಲ್ಲಿ ಮರೆಯಾಗಿ ನಾಳಿನ ಹುಣ್ಣಿಮೆಗೆ ಸಿದ್ದನಾಗಿದ್ದ ಚಂದ್ರ! ಹಿಮಾಂಶುವಿಗೆ ಭಾವನೆಗಳು ಉಕ್ಕಿ ಸುನಾಮಿ ಅಲೆಗಳು ಅಪ್ಪಳಿಸುವ ಹಾಗೆ ಒಮ್ಮೆಲೆ ಅಪ್ಪಳಿಸಿದವು... ತನಗೆ ತಿಳಿಯದಂತೆ ಹಿಮಾಂಶು ಶಾಲಿನಿಯನ್ನು ಅ ಕತ್ತಲ ಕಠೋರ ರಾತ್ರಿಯಲ್ಲಿ ತಬ್ಬಿ ಅತ್ತುಬಿಟ್ಟಿದ್ದ. ನಲ್ಲಮಲ ಅರಣ್ಯದಲ್ಲಿ ಕಾಲ ಸ್ತಭ್ದಗೊಂಡಿತ್ತು..!    ನಿರವ ಮೌನ ಅವರಿಸಿತು . ಅದು ಅವರು ಶೈಕ್ಷಣಿಕ ಪ್ರವಾಸಕ್ಕೆ ಬಂದ ಕೊನೆಯದಿನ . ಮರುದಿನ ಅವರು ಪುನಃ ಟ್ರೇನ್‌ನಲ್ಲಿ ಬೆಂಗಳೂರಿಗೆ ತಲುಪಬೇಕಿತ್ತು .

   ಅ ಕತ್ತಲ ರಾತ್ರಿಯಲ್ಲಿ ಅವರೇನು ಮಾತಾಡದೆ ಸುಮ್ಮನೆ ಕುಳಿತುಬಿಟ್ಟರು . ಕಣ್ಣಗಳೊಳಗಿನ ಅವನ ಮೃದುತ್ವ ಶಾಲಿನಿಯ ಅಪರೂಪ ಸೌಂದರ್ಯವನ್ನು ಸುಮ್ಮನೆ ದಿಟ್ಟಿಸುತ್ತಿತ್ತು . ಅದರಲ್ಲಿ ಆಸೆಯಿರಲಿಲ್ಲ , ಅವಸರದ ಛಾಯೆ ಇರಲಿಲ್ಲ . ಆಸಲು ಪ್ರಶ್ನೆಗಳೇ ಇರಲಿಲ್ಲ.. ಅಲ್ಲಿ ಇದ್ದಿದ್ದು ಕೇವಲ ಆರಾದನೆ.. ಶಾಲಿನಿಯ ಆರಾದನೆ... ಅವಳ ಪ್ರೀತಿಯ ಆರಾದನೆ. ಮಾತೆ ಮರೆಸುವ ನೀರವ ಮೌನ ರಾತ್ರಿ 12:10 ರವರೆಗು ಸುಮ್ಮನೆ ಕುಳಿತು ಒಬ್ಬರನೊಬ್ಬರು ನೋಡುತ್ತಿದ್ದರು . ನಂತರ ಅವರಿದ್ದ ರೂಮಿನಿಂದ ಬಂದ ಶಬ್ದದಿಂದಾಗಿ ಇಬ್ಬರು ಆತುರಾತುರವಾಗಿ ಕಣ್ಣಿನಲ್ಲೆ ಬೆಳಗ್ಗೆ ಸಿಗುತ್ತೆನೆಂದು ಮಿಂಚಂತ್ತೆ ಮಾಯಾವಾಗುತ್ತಾರೆ
..
    ಸಾಲು ಸಾಲು ಸಾವುಗಳಿಗೆ ಸಾಕ್ಷಿಯಾಗಿದ್ದ ಪ್ರಶಾಂತಿ ಎಕ್ಸ್‌ಪ್ರೇಸ್‌ ಒಡಿಶಾದ ಭುಭನೇಶ್ವರದಿಂದ ಅಂಧ್ರದ ಮೂಲಕ ಬೆಂಗಳೂರಿಗೆ ಬರಲು ಸಜ್ಜಗುತ್ತಿತ್ತು . ಸಮಯ ಬೆಳಗ್ಗೆ 8 ಗಂಟೆ 30 ನಿಮಿಷ ಕಪ್ಪು ಸುಂದರಿ  ಪ್ರಶಾಂತಿ ಎಕ್ಸ್‌ಪ್ರೇಸ್‌ ಹೊಗೆಯನ್ನು ಹೊರಹಾಕುತ್ತ ಬೆಂಗಳೂರಿನೆಡೆಗೆ ಬರುತ್ತಿತ್ತು .ಅಷ್ಟು ಜನರ ಮಧ್ಯ ಶಾಲಿನಿ ಮತ್ತು ಹಿಮಾಂಶು ನಿಚ್ಚಳ ಮೌನದಿಂದ ಏನು ಮಾತಾಡಿರಲಿಲ್ಲ . ಭುಭನೇಶ್ವರದಿಂದ ಟ್ರೇನ್‌ ಬಿಟ್ಟೊಡನೆ ಪೋಲಿಸರು ಆಲರ್ಟ್ ಆಗುತ್ತಾರೆ . ಮಫ್ತಿಯಲ್ಲಿದ್ದ ಪೋಲಿಸರು ಕ್ಷಣ ಕ್ಷಣದ ಮಾಹಿತಿಯನ್ನು ವಿಶಾಕಪಟ್ಟಣದಲ್ಲಿದ್ದ ಇಬ್ಬರು ದೈತ್ಯ ಪೋಲಿಸರಿಗೆ ನೀಡುತ್ತಾ ಅವರ ಗಮನಕ್ಕೆ ಬಂದದ್ದು ಇಂದು ಹುಣ್ಣಿಮೆಯಂತ! ಭುಭನೇಶ್ವರದಿಂದ ಭ್ರಮ್ಮಪುರ ದಾಟಿ ಅಂಧ್ರದ ಗಡಿಹೊಕ್ಕು ಸುಮಾರು ಮದಾಹ್ನ 12:10ಕ್ಕೆ ಶ್ರೀಕಾಕುಳಂಗೆ ಟ್ರೇನ್‌ ಬಂದು ನಿಂತಿತ್ತು , ಅದೇ ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ಬೆಂಗಳೂರಿನ ಸೆಂಟ್‌ ಡೇವಿಡ್‌ ಕಾಲೇಜು ವಿದ್ಯಾರ್ಥಿಗಳಲ್ಲೆ ಪ್ರಯಾಣ ಬೆಳೆಸಿದರು.. ಅದರಲ್ಲಿ ಹಿಮಾಂಶು ಅಂತ ಒಬ್ಬ ಹಂತಕನಿದ್ದ ಎಂದು ಗೊತ್ತಿದ್ದು ಕೇವಲ ಇಬ್ಬರಿಗೆ ACP ಪ್ರತಾಪ್‌ ಕುಮಾರ್‌ ಮತ್ತು DYSP ಶಿವರಾಮಪ್ಪ ! 

   ಟ್ರೇನ್‌ ಶ್ರೀಕಾಕುಳಂನಿಂದ ಒಂದು ಗಂಟೆಯೊಳಗೆ ವಿಶಾಕಪಟ್ಟಣಕ್ಕೆ ಬಂದಿತ್ತು . ಅಷ್ಟು ಹೀನಾಯ ಕೊಲೆಗಳನ್ನು ಕಂಡಿದ್ದ ಟ್ರೇನ್‌  ಒಳಕ್ಕೆ ಆಗ ಹತ್ತುತ್ತಾರೆ ACP ಪ್ರತಾಪ್‌ ಕುಮಾರ್‌ ಮತ್ತು DYSP ಶಿವರಾಮಪ್ಪ . ಟ್ರೇನ್‌ ನಿಚ್ಚಳವಾಗಿ ತನ್ನ ಪಥದಲ್ಲಿ ಸಮುದ್ರ ಗಾಂಭಿರ್ಯ ಮರೆಯುತ್ತಾ ಹೋಗುತ್ತಿದ್ದರೆ ಅಲ್ಲಿದ್ದ ನಾಲ್ಕು ಜನರ ತಲೆಯಲ್ಲಿ ಲಕ್ಷ ಲಕ್ಷ ಯೋಚನೆ.. ಪ್ರಶಾಂತಿ ಎಕ್ಸ್‌ಪ್ರೇಸ್‌ ಗುಂಟುರು ತಲುಪುವಷ್ಟರಲ್ಲಿ ಕತ್ತಲು ಕವಿದಿತ್ತು . ಹುಣ್ಣಿಮೆಯ ಚಂದ್ರ ತನ್ನ ಸೌಂದರ್ಯವನ್ನು ಬಿರುತ್ತಿದ್ದ . ಕತ್ತಲ ರಾತ್ರಿಯಲ್ಲಿ ಟ್ರೇನ್‌ ಗುಂಟುರು ದಾಟಿದರು ಶಾಲಿನಿ-ಹಿಮಾಂಶುವಿನ ನಡುವೆ ಒಂದೇ ಒಂದು ಮಾತಿರಲಿಲ್ಲ . ನಿಶಬ್ಧವಾಗಿದ್ದ ಹಿಮಾಂಶು . ಅವನೊಳಗಿದ್ದ ಹಂತಕ ಸತ್ತುಹೋಗಿದ್ದಾನ.?? ಟ್ರೇನ್‌ ಧರ್ಮವರಂ ಜಂಕ್ಷಣ್‌ ದಾಟಿ ಅನಂತಪುರಕ್ಕೆ ತಲುಪಲು ಐದು ನಿಮಿಷ ಬಾಕಿಯಿತ್ತು. ಹಿಮಾಂಶುವಿನ ತಲೆಗೆ ತನ್ನ ಗನ್‌ point ಮಾಡ್ತ ನಿಂತುಬಿಟ್ಟಿದ್ದರು DYSP ಶಿವರಾಮಪ್ಪ.. ತಾವು ಊಹಿಸಿದಂತೆ ಹಿಮಾಂಶು ಮರು ಹೊರಟ ಮಾಡುತ್ತಿಲ್ಲ ಅಂತ ಹೊತ್ತಗಿದ್ದೆ ತಡ ಅವನನ್ನು ನಯಾವಾಗಿ ಅರೆಷ್ಟ್ ಮಾಡಿದ್ದರು ACP ಟೈಗರ್‌ ಪ್ರತಾಪ್‌ ಕುಮಾರ್‌ . ರಣಹದ್ದಿನಂತೆ ಕಾಯುತ್ತಿದ್ದ ಮಾಧ್ಯಮಗಳಲ್ಲಿ ಬ್ರೇಕಿಂಗ್‌ ನ್ಯೂಸ್‌  ಬರುತ್ತಿದ್ದರೆ ಪ್ರಶಾಂತಿ ಎಕ್ಸ್‌ಪ್ರೇಸ್‌ ಖುಷಿಪಡುತ್ತಿತ್ತೆನೋ...??

 Gun point ಮಾಡಿಸಿಕೊಂಡು ಕುಳಿತ್ತಿದ್ದ ಹಿಮಾಂಶುನನ್ನು ನೋಡಿ ಶಾಲಿನಿ ಬೆಚ್ಚಿಬಿದ್ದಿದ್ದಳು! "ಹಿಮು...." ಅಂತ ಚಿರಲು ಪ್ರಯತ್ನಿಸಿದಳಾದರು ಅವಳ ಬಾಯಿಯಿಂದ ಶಬ್ದ ಹೊರಬರಲಿಲ್ಲ . ಶಾಲಿನಿಯ ಹಿಮು ಅರೆಷ್ಟ್‌ ಆಗಿದ್ದ . ಎರಡು ಕೈಗಳನ್ನು ಮೆಲೆತ್ತಿ ಶಾರಣಾಗಿ ಬಿಟ್ಟಿದ್ದ ಹಿಮಾಂಶು..! ಅಷ್ಟು ಕೊಲೆಗಳನ್ನು ತಾನೆ ಮಾಡಿದ್ದು ಎಂದು ಮೇಜಸ್ಟಿಕ್‌ನ ಕೂಗಳತೆಯಲ್ಲೆ ಇದ್ದ ಉಪ್ಪಾರಪೇಟೆ ಪೋಲಿಸ್‌ ಸ್ಟೇಷನ್‌ನ ಸೆಲ್‌ನಲ್ಲಿ ಮೌನದಿಂದಲೆ ಹೇಳುತ್ತಿದ್ದಾನೆ ..

  ಹಿಮಾಂಶು ನಿಜಕ್ಕೂ ಕೊಲೆಮಾಡಿದ್ದನಾ..? ಹಿಮಾಂಶು ನಿಜಕ್ಕೂ ಹಂತಕನ...? ಹಿಮಾಂಶು ಶಾರಣಾಗಿದ್ದಾದ್ದರು ಏಕೆ..??


   ನಡೆದಿದ್ದ 16 ಬಲಿಗೆ ಆ ಒಂದು ನಾಯಿ ಸಾಕ್ಷಿಯಾಗಿತ್ತು . 17ನೇ ಬಲಿ ಏಕೋ ಮಾಟಗಾತಿ ಸುಬ್ಬಮ್ಮನಿಗೆ ದೊರೆಯುವಂತಿಲ್ಲ ಅ ಹುಣ್ಣಿಮೆಯಲ್ಲಿ ಆಕೆ ನಡುವಯಸ್ಸಿನ ಹೆಂಗಸ ಬಲಿ ಪಡೆದಿಲ್ಲವೆಂದರೆ ತಾನು  14 ವರ್ಷಗಳಿಂದ ಮಾಡಿದ ಪೂಜೆ ವ್ಯರ್ತವಾಗಿ ಹೋಗಲಿದೆ ಎಂಬುದು ಅವಳಿಗೆ ಅರ್ಥವಾಗಿತ್ತು.. ಹುಲಿಯಂತಿದ್ದ ನಾಯಿ ಶಾಲಿನ ಅಂಧ್ರಕ್ಕೆ ಹೊದಗಲಿಂದಲು ಅವಳ ಮನೆಯ ಮುಂದೆಯೆ ಇತ್ತು..ಇದು ಶಾಲಿನಿ  17ನೇ ಬಲಿಯಾಗುವ ಸೂಚನೆಯಾ...???
                                                                                               (ಮುಂದುವರೆಯುತ್ತದೆ-To be continued)
close