Thursday, 13 November 2014

ಹುಣ್ಣಮೆಯ ನಿಶಬ್ಧ ಭಾಗ-7

          ಕತೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
  ಹುಣ್ಣಿಮೆಯ ನಿಶಬ್ಧ ಭಾಗ -1 
 ಹುಣ್ಣಿಮೆಯ ನಿಶಬ್ಧ ಭಾಗ -5
 ಹುಣ್ಣಿಮೆಯ ನಿಶಬ್ಧ ಭಾಗ-6
           ಹಿಮಾಂಶು ತಲೆಗೆ ತನ್ನ ಗನ್‌ ಪಯಿಂಟ್‌ ಮಾಡಿ ಅದಗಲೇ 16 ಗಂಟೆ ಕಳೆದಿತ್ತು . ಮಾಧ್ಯಮಗಳಲ್ಲಿ ರೈಲ್‌ ರೋಡ್‌ ಹಂತಕ ಸೇರೆಯಾದ ಯಶಸ್ಸು, ವಿಜಯೋತ್ಸವದ ವರದಿಗಳು ಬರತೊಡಗಿದವು . ಒಮ್ಮೆಲೆ DYSP ಶಿವರಾಮಪ್ಪರಿಗೆ ಗೊತ್ತಾಗಿದ್ದು ತಾನು ನಿದ್ದೆ ಮಾಡಿ ಭರ್ತಿ 34 ಗಂಟೆಗಳಗಿವೆ ಎಂದು . 'ಎಷ್ಟು ದೊಡ್ಡ ಕಾರ್ಯಚರಣೆಗೆ ಅಣಿಯಾಗಿದ್ದವುನಾವು ಆದರೆ ಹಿಮಾಂಶು ಇಷ್ಟು ಸಲೀಸಾಗಿ ಸಿಕ್ಕಿಬಿಟ್ಟನ??' No... ಅವರ ಮನಸ್ಸಿನ ಯಾವುದೊ ಒಂದು ಮೂಲೆಯಲ್ಲಿ ಪುಟ್ಟ ಅನುಮಾನ , ಕಾಲ ಉರಿಳಿದಂತೆ ಅ ಅನುಮಾನ ಡೊಡ್ಡದಗ್ತ ಹೊಯ್ತು.. ಹೆಮ್ಮರವಾಗಿ ಸ್ವತಃ ತಮ್ಮನ್ನೆ ನುಂಗಿಬಿಡುತ್ತೇನೋ ಅಂದುಕೊಂಡರು . ಆಗ ಮಾಧ್ಯಹ್ನ 2 ಗಂಟೆ 30 ನಿಮಿಷ.

     ನಿಶಬ್ಧವಾಗಿದ್ದ ಉಪ್ಪಾರಪೇಟೆ ಪೋಲಿಸ್‌ ಠಾಣೆಯ ಸೆಲ್‌ನೊಳಕ್ಕೆ ಕಾಲಿಟ್ಟರು ಶಿವರಾಮಪ್ಪ. ಭರ್ತಿ 16 ಕೊಲೆಗಳನ್ನು . ಅದು ಬರ್ಬರ ಕೊಲೆಗಳನ್ನು ತಾನೇ ಮಾಡಿದ್ದೇನೆ ಎಂದು ಹೇಳಿ ಒಂದಿಷ್ಟು ಅಳುಕಿಲ್ಲದೆ, ಭಯವಿಲ್ಲದೆ ಹಿಮಾಂಶುವಿನ ಕಣ್ಣುಗಳನ್ನು ನೋಡಿ ಸ್ವತಃ ಶಿವರಾಮಪ್ಪರೆ ಬೆಚ್ಚಿಬಿದ್ದರು , ಆತ ರಾತ್ರಿಯೆಲ್ಲ ನಿದ್ದೆ ಮಾಡಿರಲಿಲ್ಲ . ತನ್ನೊಂದಿಗೆ ತಂದಿದ್ದ ಗೋಪಲಕೃಷ್ಣ ಅಡಿಗರ ಕಾವ್ಯವನ್ನು ಸ್ಪುಟವಾಗಿ ಓದುತ್ತಾ . ಯಾವುದೋ ಯೊಚನೆಯಲ್ಲಿ ತೊಡಗಿದ್ದಾನೆ .

                                    ಹಾಡಿ ಹಾಡಿ ಬೇಸರಾಗಿ
                                   ನೆಲಕೆಸೆದಳು ಕೊಳಲನು;
                                 ಇಂದು ಮೌನದುಸುಬಿನಲ್ಲಿ
                                  ಹುಗಿದಳೆನ್ನ ಮನವನು.


ನಾಲ್ಕು ಸಾಲುಗಳಲ್ಲಿ ಸಾವಿರ ಸಾವಿರ ಅರ್ಥ!!

       ಆತನ ಕಣ್ಣಗಳನ್ನು ಗಮನಿಸಿದ ಶಿವರಾಮಪ್ಪ "ಹಿಮಾಂಶು ನಿಜಕ್ಕೂ ಕೊಲೆಗಾರನೆ?" ಅವರೊಬ್ಬರಿಗೆ ಕೇಳುವಂತೆ ಅಚ್ಚರಿಯಿಂದ , ಆತಂಕದಿಂದ , ಅನುಮಾನದಿಂದ ಕೇಳಿಕೊಂಡರು . ಅಂದು ಸಂಜೆ ನಾಲ್ಕನೆ ಹೆಚ್ಚುವರಿ ನ್ಯಾಯಧೀಶರ ಮುಂದೆ ಅಜರುಪಡಿಸಿ ಅವರ ಆಜ್ಞೆಯಂತೆ ಕೇಂದ್ರ ಕಾರಗೃಹಕ್ಕೆ ಕರೆದೊಯ್ಯುವಷ್ಟರಲ್ಲಿ ಹಿಮಾಂಶು ಕುಸಿದುಬಿದ್ದಿದ್ದ!!
                                                      ** ** **

         14 ವರ್ಷಗಳ ಸಾಧನೆಯ ನಂತರ ಮಾಟಗಾತಿ ಸುಬ್ಬಮ್ಮ ಬೆಂಗಳೂರಿಗೆ ಹಿಂತಿರುಗಿದ್ದಳು . ಅವಳು ಈಗ ಕೇವಲ ವಶೀಕರಣ ಮಾಡುವ ಮಾಟಗಾತಿಯಲ್ಲ ಅವಳು ಕಾಮಕರ್ಣ ಪಿಶಾಚಿಯನ್ನು ಒಲಿಸಿಕೊಂಡಿರುವ , ವಾಮಾಚಾರ ಲೋಕದ ಅತಿದೊಡ್ಡ ಮಾಟಗಾತಿ! ಮಾಟಗಾತಿ ಸುಬ್ಬಮ್ಮ . ಬೆಂಗಳೂರಿಗೆ ಬಂದವಳೆ ತನ್ನ ಗುರಿಯ ಬಗ್ಗೆ ನೆನೆಯುತ್ತಾಳೆ . ಅದರಲ್ಲಿ ಒಂದು ಸಾಧಿಸಿ ಆಗಿತ್ತು ಅದರೆ ಅವಳ ಹೊಟ್ಟೆಯ ಆಳದಲ್ಲೆಲ್ಲೊ ಮತ್ತೊಂದು ಗುರಿ ನೆನಪಿಗೆ ಬಂದದ್ದೆ ಕ್ರೂರಿಯಾಗಿದ್ದಳು ಅದು Alexander ರಾಜನಾಥ ಚಟರ್ಜಿಯ ಸಾವು! ಕೇವಲ ಸಾವಲ್ಲ ತಾನು ಸಾಧಿಸಿರುವ ಕರ್ಣಪಿಶಾಚಿಗೆ ನಿಡುತ್ತಿರುವ ಅತ್ಯಂತ ಕ್ರೂರ ಬಲಿ .ಹುಣ್ಣಿಮೆಯನ ನಿಶಬ್ಧ ರಾತ್ರಿಯಲ್ಲಿ ಬನಶಂಕರಿ ಸಮೀಪವಿರುವ ತಲಘಟ್ಟಪುರ ರಸ್ತೆಯ ಎಡ ಭಾಗದಲ್ಲಿದ್ದ ಸಶ್ಮಾನ ಹೊಕ್ಕಿದಳು . ತನ್ನ ಯುದ್ಧದ ಮೊದಲ ಪೂಜೆಯ ಆರಂಭ. ನಡು ವಯಸ್ಸಿನ ಹೆಂಗಸ ನೆತ್ತರಿಂದ ತಾನು ಸಾಧಿಸಿ ತಂದ ತಲೆ ಬೂರುಡೆಗಡ ಅಭಿಷೇಕ ಮಾಡಿ ಯುದ್ಧಕ್ಕೆ ಆಣಿಯಾಗುತ್ತಿದ್ದರೆ ಅದೆಲ್ಲೊ ದೂರದ ಪುತ್ತೂರಿನ ಕಾಬಕ ಕ್ರಾಸ್‌ನ ದಾಟಿದೊಡನೆ ಬಲಕ್ಕೆ ಕಾಣುವ ಜಮ್ಮ ಮಸೀದಿಯ ಕಾಳೇಗದಲ್ಲಿ ಕುತ್ತಿದ್ದ ಮುಸ್ಲಿಂ ಮಾಂತ್ರಿಕ ಅದೇಕೊ ಎರಡು ನಿಮಿಷ ನಿಶಬ್ಧವಾಗಿ ಕಣ್ಣು ಮುಚ್ಚಿದ್ದ.
  "ತಬಾಹೀ ನಜರ್‌ ಆ ರಹಾಹೈ " ಅಂತ ತನಗೊಬ್ಬನಿಗೆ ಕೇಳಿಸುವಂತೆ ಹೇಳಿಕೊಂಡ!
"ತಬಾಹೀ ನಜರ್‌ ಆ ರಹಾಹೈ " ಎರಡನೇ ಬಾರಿ ನಿಶಬ್ಧದಿಂದ ಹೊರಬಂದು ಉಗ್ರಕೋಪದಿಂದ ಇಡೀ ಮಸಿದೀಯೆ ನಡುಗುವಂತೆ ಕಿರಿಚಿಕೊಂಡ . ಬೆಂಗಳೂರಿನ ಹುಣ್ಣಮೆ ಕತ್ತಲಲ್ಲಿ ಮಾಟಗಾತಿ ತನ್ನ ಮೊದಲ ಪೂಜೆ ಪ್ರಾರಂಬಿಸಿ್ದದಳೆ . ಯುದ್ಧದ ಆರಂಭ! ತನ್ನ ಕೆಲಸ ಶುರುವಾಯ್ತು ಅಂದುಕೊಂಡವನೆ ಕಣ್ಣಮುಚ್ಚಿ ಒಂದೇ ಸಮ ಯಾವುದೋ ಮಂತ್ರವನ್ನು ಸ್ಫುಟವಾಗಿ ಹೇಳಿ ಎದ್ದು ನಿಂತು ಮತ್ತೊಮ್ಮೆ ಹೇಳಿಕೊಂಡ

 "ತಬಾಹೀ ನಜರ್‌ ಆ ರಹಾಹೈ "

   "ಸರ್ವನಾಶ ಕಂಡು ಬರ‍್ತಿದೆ!!" 

                                                                                               ( ಮುಂದುವರೆಯುತ್ತದೆ-to be continued)

No comments:

Post a Comment