15 Nov 2014

ಹುಣ್ಣಿಮೆಯ ನಿಶಬ್ಧ ಭಾಗ-8

    ಕತೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



       ಅದು ಮಾರ್ಚ್ ೩!
 
          ಹಿಮಾಂಶು ಬಂಧನವಾಗಿ ಅದಗಲೇ ೯೫ ದಿನಗಳು ಉರುಳಿದ್ದವು . ಪೋಲಿಸರು ನಿಯಮದಂತೆ ೯೦ ದಿನಗಳಲ್ಲಿ ಚಾರ್ಚ್‌ಶೀಟ್‌ ಸಲ್ಲಿಸಿ ಆಗಿತ್ತು . ಆತನ ಸೌಮ್ಯ ಕಣ್ಣುಗಳನ್ನು ಗಮನಿಸಿದ್ದ DYSP ಶಿವರಾಮಪ್ಪ ಆ ರಾತ್ರಿಯೆಲ್ಲ ಅವನೊಂದಿಗೆ ಮಾತಾಡಿದ್ದರು . ಎಷ್ಟು ಕೇಳಿದರು ಹಿಮಾಂಶು ತಾನೇ ಕೊಲೆ ಮಾಡಿರುವುದಾಗಿ ಹೇಳುತ್ತಿದ್ದನೆ . ಅದಕ್ಕೆ ಸಕ್ಷಿ ಎಂಬಂತೆ ಹಿಮಾಂಶು ಕೊಲೆಯಾಗಿದ್ದ ೧೬ ಜನರ ವಿವರದ ಸಮೇತ ಹೇಗೆ ಕೊಲೆಯಾಗಿತ್ತೆಂದು ಎತವತ್ತು forensic report ನೀಡಿದ ಆಗೆ ಹೇಳುತ್ತಿದ್ದ . ಮಾತು ಎರಡು ಗಂಟೆಗೂ ಹೆಚ್ಚು ನಡೆದಿತ್ತು ತೀರ ಹೋಗುವ ಮುನ್ನ ಶಿವರಾಮಪ್ಪ , ಹಿಮಾಂಶು ಕಡೆ ತಿರುಗಿ " ಹಿಮಾಂಶು, ಕೊಲೆ ನೀನು ಮಾಡಿರಲು ಸಾಧ್ಯವೆ ಇಲ್ಲ ಎಂದು ನಿನ್ನ ಕಣ್ಣುಗಳು ಸಾರಿ ಸಾರಿ ಹೇಳುತ್ತಿವೆ!, ನೀನು ನೆನಪಿಟ್ಟುಕೋ ಹಿಮಾಂಶು ' I'm not an ordinary Police ಅದು ನಿನಗೂ ಗೊತ್ತು , ನಿಜವಾದ ಹಂತಕನನ್ನು ನಾನು ತಂದು ನಿನ್ನ ಮುಂದೆ ನಿಲ್ಲಿಸುತ್ತೇನೆ.. Take it as a challenge " ಎಂದವರೆ ಅವನ ಉತ್ತರಕ್ಕೂ ಕಾಯದೆ ನಡೆದು ಹೋದರು . ಗಂಟೆ ಬೆಳಗಿನ ಜಾವ ನಾಲ್ಕಗಿತ್ತು .

   ಅದು ಅವನ ಪ್ರಕರಣಕ್ಕೆ ತೀರ್ಪು ನೀಡುವ ದಿನ . ಹಿಮಾಂಶು ಇದಗಾಲೆ ಇಂಡಿಯನ್‌ ಪಿನಲ್‌ ಕೊಡ್‌ ಸೇರಿದಂತೆ ಹಲವಾರು ಬುಕ್‌ಗಳನ್ನು ಓದಿ ಅರಿತಿದ್ದ. ಈ ಕೊಲೆಗಳಿಗೆ ಅವನಿಗೆ ನೂರಕ್ಕೆ ನೂರರಷ್ಟು ಜೀವವಾದಿ ಇಲ್ಲವೇ ಮರಣದಂಡನೆ ! ಅದರೂ ಅವನಿಗೆ ಆಳುಕಿರಲಿಲ್ಲ.

   ಗಾಢ ನಿಲಿಬಣ್ಣದ ಬಸ್ಸಿಗೆ ಹಿಮಾಂಶುನನ್ನು ಹತ್ತಿಸಿಕೊಂಡದ್ದೆ ಬಸ್ಸು ಪರಪ್ಪನ ಅಗ್ರಹಾರ ಡಾಟಿ ಅದಗಲೇ ಹೊಸುರು ಮೇನ್‌ ರೋಡ್‌ ಹೊಕ್ಕಿತ್ತು . ಸುಮಾರು ಎರಡು ಗಂಟೆಗಲ ಬೆಂಗಳೂರು ಟ್ರಾಫಿಕ್‌ ಸರಿಸಿ ಬರುತ್ತಿದ್ದರೆ BTM ಲೇವೊಟ್‌ನ ಅಡ್ಡರಸ್ತೆಯಲ್ಲಿ ಕಾಫಿ ಕುಡಿಯುತ್ತಿದ್ದ ಸೂರಿಯನ್ನ ಕಣ್ಣಲ್ಲೆ ಗಮನಿಸಿದ್ದ ಹಿಮಾಂಶು! ಬಸ್ಸು ಕೆಂಪೇಗೌಡ ರಸ್ತೆಯ ಕಾವೇರಿ ಭವನದ ಹಿಂಭಾಗದಲ್ಲಿದ್ದ ಹೆಚ್ಚುವರಿ ಸಿವಿಲ್‌ ಕೋರ್ಟ್‌ ಗೆ ಬಂದು ನಿಂತಿತ್ತು. ಎರಡು ಗಂಟೆಯಲ್ಲಿ ಹಿಮಾಂಶುವಿನ ಮನಸ್ಸು ಕರ್ನಾಟಕದ ಗಾಡಿ ದಾಟಿ ಪಶ್ಚಿಮ ಬಂಗಾಲದ ಆ ದಾಟ್ಟ ಕಾಡುಗಳನ್ನು ಸುತ್ತಿ ಬಂದಿತ್ತು!!
  
   ಮಾಧ್ಯಮಗಳಲ್ಲಿ ಬ್ರೇಕಿಂಗ್‌ ನ್ಯೂಸ್‌!!

 "೧೬ ಬರ್ಬರ ಕೊಲೆಗಳನ್ನು ಮಾಡಿದ ಹಂತಕನ ಪ್ರಕರಣಕ್ಕೆ ಇಂದು ತೀರ್ಪು ಬಾರುವ ಸಾಧ್ಯತೆ , ಸೌಮ್ಯ ಕಣ್ಣುಗಳ ಹಿಮಾಂಶು ನಿಜಕ್ಕೂ ಕೊಲೆಗಾರನ?!"

  ಆತ ಇದೇ ಮೊದಲ ಬಾರಿಗೆ ಕೊರ್ಟಿಗೆ ಬಂದದ್ದು , ಇಷ್ಟು ದಿನ ಅವನ ವಿಚಾರಣೆ ಸ್ವತಃ ನ್ಯಾಯಧೀಶರ ಮನೆಯಲ್ಲೆ ನಡೆಯುತ್ತಿತ್ತು , ಕೊರ್ಟ್ ಹಾಲ್‌ನಲ್ಲಿ ಜನ ಕಿಕ್ಕಿರಿದು ಸೇರಿದ್ದರು , ಅದು ಮಾಧ್ಯಮಗಳ ಪಾಲಿಗೆ ದೊಡ್ಡ ಸುದ್ದಿ! ರಾಜ್ಯದ ಎಲ್ಲಾ ದಿನ ಪತ್ರಿಕೆಗಳ ಮುಖಪುಟವನ್ನು ಅವರಿಸಿಕೊಂಡಿತ್ತು ಹಿಮಾಂಶುವಿನ ಭಾವಚಿತ್ರ . ಪ್ರತಿಯೊಬ್ಬರು ಆ ಕೇಸಿನ ಬಗ್ಗೆ ಕುತೂಹಲ ಹೊಂದಿದ್ದರು . ಒಬ್ಬ ಶಾಲಿನಿಯನ್ನು ಹೊರತುಪಡಿಸಿ!!!

   ಹಿಮಾಂಶು ಕಟಕಟೆಗೆ ಬಂದು ನಿಂತ. ಗ್ಯಾಲರಿಯಲ್ಲಿ ಕೇವಲ ಮಾಧ್ಯಮ ಲೋಕದ ದಿಗ್ಗಜರು . ಅಷ್ಟು ಆಗಿದ್ದರು ಹಿಮಾಂಶುವಿನ ಕಣ್ಣಿನಲ್ಲಿ ಸೌಮ್ಯತೆ ಮಾಯಾವಾಗಿರಲಿಲ್ಲ. ನ್ಯಾಯಧೀಶರು ಬಂದದ್ದೆ ತಡ ಕೋಟ್‌ ನಿಶಬ್ಧವಾಗಿತ್ತು . ಮೊದಲು ಯಾರು ಮಾತಾಡಬೇಕು ನಾನಾ? ಪಬ್ಲಿಕ್‌ ಪ್ರಸಿಕ್ಯೂಟರ? ಅಥವಾ ನ್ಯಾಯಧೀಶರ? ಅವನಿಗೆ ತಿಳಿಯಾದಾದಿತು , ಚಾರ್ಚ್‌ಶೀಟ್‌ನಲ್ಲದ್ದ ಭರ್ತಿ ೩೧೫ ಪುಟವನ್ನು ನ್ಯಾಯಧೀಶರು ಅದಗಲೆ ಓದಿ ಬಂದಿದ್ದರು . ಹಿಮಾಂಶು ನ್ಯಾಯಧೀಶರುನ್ನು ನೋಡುತ್ತಾ ಒಂದೇ ಸಮನೇ ಅಷ್ಟು ವಿವರವನ್ನು ಸ್ಫುಟವಾಗಿ ನೀಡಿದ್ದ. ಎಲ್ಲೊ ಮರೆಯಾಗಿದ್ದ ಮಳೆ ಗುಡುಗಿನ ಸಮೇತ ಬಂದು ನಿಂತಂತೆ ಭಾಸವಾಗಿತ್ತು .

   ಹಿಮಾಂಶು ಹಂತಕನೆಂದು ಸಾಕ್ಷಿಗಳು ಸಾರಿ ಸಾರಿ ಹೇಳಿದ್ದವು. ಅದಗಲೇ ದೃಶ್ಯ ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಗಿತ್ತು "  ರೈಲ್‌ ರೋಡ್‌ ಹಂತಕನಿಗೆ ಕಠಿಣ ಶಿಕ್ಷೆ!" ನ್ಯಾಯಧೀಶರು ತಮ್ಮ ಪೆನ್‌ ತೆಗೆದು ತೀರ್ಪಿನ ಕಾಪಿ ಬರೆಯುತ್ತಿದ್ದರೆ.... ಕಡುಕಪ್ಪು ಸ್ಯೂಟ್‌ ಧರಿಸಿದ ಆಕೃತಿ ನ್ಯಾಯಾಲಯದ ಹೊಳ ಹೊಕ್ಕು ಜಡ್ಜ್‌ಗೆ ಯಾವುದೊ ಒಂದು ಫೈಲ್‌ ನೀಡಿ ಹಿಮಾಂಶುವೆಡೆಗೆ ಸೌಜನ್ಯಕ್ಕೂ ಕೂಡ ತಲೆಯತ್ತದೆ  
     " ಇತ ನಿರಪರಾಧಿ!!"
   ಎಂದು ಹೇಳುತ್ತಿದ್ದಾರೆ ಕೋರ್ಟ್‌ನಲ್ಲಿದ್ದ ಅಚ್ಟು ಮಂದಿಗೂ ಒಂದು ಕ್ಷಣ ಅಚ್ಚರಿ! ಆ ಗಾಡ ಕಡು ಕಪ್ಪು ಕೊಟ್‌ ಧರಿಸಿ ಮಾತಿಗಿಳಿದವರು ಕೀಶೊರ್‌ಚಂದ್ರ ಕರ್ನಾಟಕ ರಾಜ್ಯ ಕಂಡ ಹಿರಿಯ ಕ್ರೀಮಿನಲ್‌ ಲಾಯಾರ್‌ " ಟಿ ಎನ್‌  ಕೀಶೊರ್‌ಚಂದ್ರ ವಾರ್ಮ"
                                   *    *   *

    "ಸರ್ವನಾಶ ಕಂಡು ಬರುತ್ತಿದೆ"
  ಆ ಹುಣ್ಣಿಮೆಯ ರಾತ್ರಿ ಬೆಂಗಳೂರಿನ ತಲಘಟ್ಟಪುರದ ಸ್ಮಶಾನದಲ್ಲಿ ಮಾಟಗಾತಿ ಪೂಜೆ ಆರಂಭಿಸುತ್ತಿದ್ದರೆ , ಪುತ್ತೂರು ಜಮ್ಮ ಮಸೀದಿಯಲ್ಲಿ ಕುತ್ತಿದ್ದ ಮಾಂತ್ರಿಕ ಎದ್ದು ನಿಂತು ಕಿರುಚಿದ್ದ.

  ಆ ನಡುರಾತ್ರಿ ತಾನು ಮರೆತುಹೋಗಿರುವ ಕೆಲಸಗಳು ನೆನಪಿಗೆ ಬಂದದ್ದೆ ತಡ ಕಾಬಕ ಕ್ರಾಸ್‌ ಹೊಕ್ಕು ಆಳಿಕೆ ದಾಟಿ ಕಾರಂಜಿಮಳೆ ಕಾಡಿಗೆ ನಡೆದು ಬರುತ್ತಾನೆ . ಅವನದು ಮನಸ್ಸಿನ ವೇಗ . ಉತ್ತಿಟ್ಟಿದ್ದ ಶವವನ್ನು ಹೊರತೆಗೆದು ಮಾಟಗಾತಿಗೆ ಪ್ರತಿರೊದವಾಗಿ ಮತ್ತೊಂದು ಪೂಜೆ ಪ್ರಾರಂಭಿಸಿದ್ದ (ಹಿಂದೂ ಮತ್ತು ಮಸ್ಲಿಂ ಮಾಂತ್ರಿಕರ ಮಾಮಾಚರ ಜಗತ್ತಿನ ಶೈಲಿ  ಬೇರೆಯಿದ್ದರು ಅವರ ಅಂತಿಮ ಗುರಿ ಒಂದೇ ಶುದ್ರ ಸಾಧನೆ!) ತನ್ನ ಗುರುವನ್ನೂ ನೆನಪಿಸಿಕೊಂಡಿದ್ದೆ ತಡ ನೂರಾರು ಕೀಲೊ ದೂರದಲ್ಲಿದ್ದ ಮಾಟಗಾತಿ ಸುಬ್ಬಮ್ಮನ ಮೈ ನಡುಗಿತ್ತು . ಬೆಚ್ಚಿಬಿದ್ದಳು . ಅವಳಿಗೆ ತಾನು ಮಾಡಿದ ೧೪ ವರ್ಷದ ಶುದ್ರ ಸಾಧನೆಯಿಂದ ಅವಳಿಗೆ ಗೋತ್ತಾಗಿದ್ದು ಅವನು ಬಾಬಾ ಶೇಕ್‌ ಕರೀಂ ಎಂದು .

    ಪೂಜೆ ಮಾಡುತ್ತಿದ್ದ ಸುಬ್ಬಮ್ಮ ಅದೇಕೊ ಒಮ್ಮೆಲೆ ತನ್ನ ೧೪ ವರ್ಷಗಳ ಹಿಂದಿನ ಜೀವನಕ್ಕೆ ಮಾರೆಯಾಗಿದ್ದಳು . ದೂರದಲ್ಲಿದ್ದ ಕರೀಂ ಬಾಬಾ ತನ್ನ ಗುರುವನ್ನು ನೆನೆಯುತ್ತಾ ಅದೇ ಪಶ್ಚಿಮ ಬಂಗಾಳದ ಕಾಡಿಗೆ ಹೋಗಿದ್ದ!

  ಅದು  ಅದೇ ದಿನ  ಬೆಳಗಿನ ಜಾವ ೪ ಗಂಟೆ ೫ ನಿಮಿಷ . ಹಿಮಾಂಶು ಭೇಟೆಯಾಡಬೇಕೆಂದು ಕಾಯುತ್ತಿದ್ದ ಹಕ್ಕಿ ತಾನಗೆ ಪಂಜರದೊಳಗೆ ಬಂದಿತ್ತು . ಶಾಲಿನಿಯೇ ಹಿಮಾಂಶುನನ್ನು ಪ್ರೀತಿಸಿ ಅವನ ಪಂಜರದೊಳಕ್ಕೆ ಬಿದ್ದಿದ್ದಳು. ಹಿಮಾಂಶು ತನ್ನ ಗುರಿಯನ್ನು ಸಾಧಿಸೆ ಬಿಟ್ಟ ಎಂದು ಅಂದು ಕೊಳ್ಳುವ ಸಮಯದಲ್ಲಿ ಶಿವರಾಮಪ್ಪ GUN POINT   ಮಾಡಿ ಅವನ ಮುಂದೆ ನಿಂತಿದ್ದ . ಶಾಲಿನಿ ಜಸ್ಟ್‌ ಮೀಸ್‌ ಆಗಿದ್ದಳು.!!!  
                                                                  
( ಮಂದುವರೆಯುತ್ತದೆ)
close