7 Nov 2014

ನೆನಪುಗಳ ನಡುವೆ..

      ಜಿಡಿ ಜಿಡಿ ಮಳೆ ಬಿಟ್ಟುಬಿಡದೇ ತನ್ನ ಸೌಂದರ‍್ಯವನ್ನು ತೋರುತ್ತಿತ್ತು. ಮಳೆಯ ನಡುವೆ ಕಾಲೇಜಿನಿಂದ ಮನೆಗೆ ಬರಲು ಅದೇ ೬೧ 'ಬಿ' ಬಸ್ಸ್ ಹತ್ತಿದ್ದೆ ತಡ ಯಾಕೋ ನಿನ್ನ ನೆನಪುಗಳು ಸಮುದ್ರ ಅಲೆಯಂತೆ ಒಂದೆ ಸಮ ತುರಿಬಂದು ನನ್ನ ಮನಸ್ಸಿನಲ್ಲಿ ನೆಲೆಸಿತು . ನಿನ್ನ ನೋಡಿ ಭರ್ತಿ ಒಂದು ವರ್ಷವಾಗಿತ್ತು ಎಂದು ಅರಿತ್ತದ್ದೆ ತಡ ನನ್ನ ಕಣ್ಣಹನಿ ನೆಲದ ಮೇಲೆ ಬಿದ್ದು ಹಿಂಗುಹೋಗಿತ್ತು . ಅದೆಕೋ ಗೊತ್ತಿಲ್ಲ ತುಂಬಾ ಭಾವುಕನಾಗಿಬಿಟ್ಟೆ . ಬಸ್ಸಿನಲ್ಲಿ ಪುಟ್ಟ ಮಗು ಅಳುವಂತೆ ಕಣ್ಣಿರಾಕುತ್ತಾ ಈ ಜಗತ್ತಿಗೆ ನಾಚಿ ತಲೆತಗ್ಗಿಸಿದೆ.....

      ನಿನ್ನ ಮುದ್ದು ಮದ್ದು ನಗು , ಕೆನ್ನೆಯ ಮೇಲೆ ಬಿಳುತ್ತಿದ್ದ ಪುಟ್ಟ ಗುಳಿ , ನಿನ್ನ ಮುಂಗುರುಳು , ನಿನ್ನ ಹಣೆಯಮೇಲೆ ಇದ್ದ ಪುಟ್ಟ ಬಿಂದಿ ನನ್ನ ಕಣ್ಣಮುಂದೆ ಬಂದು ಅಣಕಿಸುತ್ತಿದ್ದವು . ಭಾವನೆಗಳ ಮಹಾಪೂರ ತಡೆಯಾಲಾಗದೆ ಬಸ್ಸಿನಲ್ಲೆ ಈ ಪತ್ರ ಬರೆಯಲು ಶುರುಮಾಡಿದೆ.. ನೀನು ಓದುತ್ತೀಯಾ ? No , never.. ನಾನು ನಿನಗಾಗಿ ಬರೆದ ಒಂದು ಪತ್ರ , ಒಂದೇ ಒಂದು ಕವನವನ್ನು ಕೂಡ ಓದಲಿಲ್ಲ ನೀನು... ಬರೆಯುವುದುಬಿಟ್ಟು ನನಗೇನು ಗೋತ್ತು ಜಸ್ಟ್ ನನಗಾಗಿ(?) ಬರೆಯಬೇಕಷ್ಟೆ . ಆರು ವರ್ಷಗಳ ಹಿಂದೆ ಇಂತಹುದೆ ಜಿಡಿ ಜಿಡಿ ಮಳೆ ಬರುತ್ತಿತ್ತೇನೊ, ಸ್ಕೂಲ್ ಬಿಟ್ಟು ಇದೇ ೬೧'ಬಿ' ಬಸ್ ಹತ್ತಿ ಮನೆಗೆ ಬರುತ್ತಿದ್ದಾಗ ನೀ ಕಂಡಿದ್ದೆ . ಇದೆ ಡಿಸೆಂಬರ್‍ ಬಂದರೆ ನನ್ನ ನಿನ್ನ ಈ ಅಪೂರ್ವವಾದ ಹಂಬಲಕ್ಕೆ ಆರು ವರ್ಷ ತುಂಬು ಹರಿಯ.. ಅದರೆ ನಿನಗೊಂದು Thnaks ಹೇಳಲೆಬೇಕು ನಾನು ಮೊದಲಬಾರಿಗೆ ಇಂತಹುದೇ ಒಂದು ಪತ್ರ ಕೇವಲ ನಿನಗಾಗಿ ಬರೆದಿದ್ದೆ , ಈಗ ಇಂತಹುದೇ ೨೦ ಪತ್ರ ಬರೆದಿರಬಹುದು ಅದರಲ್ಲಿ ಒಂದು ಕೂಡ ನೀನು ಓದಿಲ್ಲ.

      ಈ ಜಡಿ ಮಳೆ ಯಾಕೋ ಒಂದೇ ಸಮನೇ ಬಿಳುತ್ತಿತ್ತು, ವಿಜಯನಗರದಲ್ಲಿ ಇಳಿಯಬೇಕಾದ ನಾನು ಅದೇಕೊ ಇಂದು ಇಳಿಯಲಿಲ್ಲ , ಬಸ್ಸು ಸೀದ ನಾವಿಬ್ಬರು ಕೂತು ಮಾತಾಡುತ್ತಿದ್ದ ಸರಸ್ವತಿ ನಗರ್‌ ಬಸ್‌ಸ್ಟಾಪಿಗೆ ಬಂದು ನಿಂತಿತು. ಅದೇ ಬಸ್‌ಸ್ಟಾಪ್ , ಅದೇ ಮರ , ಅದೇ ಬೇಂಚೂ ಅದೆಷ್ಟು ಸಾಲಿ ಈ ಹಿಂದೆ ನೋಡಿದ್ದೆನೋ , ಅದರೇ ಇಂದೆಕೋ ಅವುಗಳ ಮೇಲೆ ಭಾವನೆಗಳು ಉಕ್ಕಿ ಬರುತ್ತಿತ್ತು . ನಿನ್ನ ಸಾವಿರ ಸಾವಿರ ನೆನಪುಗಳು ಒಂದೇ ಸಮನೇ ಕಾಡುತ್ತಿತ್ತು .

                                             ಕಾಡುವ ಗೆಳತಿ ಕಾದಿರುವೆ ನಿನಗಾಗಿ,
                                       ಕಾದು ಕಾದು ಸಾಕಾಯ್ತು ಮನದ ಮಾಯಾವಿ..


 -ಮಳೆಯನ್ನೂ ಲೆಕ್ಕಿಸದೆ ನಾವಿಬ್ಬರೂ ನಡೆದುಹೋಗುತ್ತಿದ್ದ ಖಾಲಿ ರಸ್ತೆಯಲ್ಲಿ ನಿನ್ನ ನೆನಪಿನ ಭಾವಗಳ ಜೊತೆ ಹೆಜ್ಜೆ ಹಾಕುತ್ತಿದ್ದೆ . ಅದೆಲ್ಲೊ ನನ್ನ ಮನಸ್ಸಿನಲ್ಲಿ ಕಳೆದುಹೋಗಿದ್ದ ಕವಿತೆ ನೆನಪಿಗೆ ಬಂದದ್ದೆ ತಡ ಮತ್ತಷ್ಟು ಭಾವುಕನಾದೆ , ಮಳೆಯ ಜೊತೆ ನನ್ನ ಕಣ್ಣಹನಿ ನೆಲಕ್ಕೆ ಬಿದ್ದು ಮರೆಯಾಗಿತ್ತು... ಅದರೇ ನಿನ್ನ ನೆನಪುಗಳು????

ಹೇಳದೇ ಉಳಿದ ಮಾತುಗಳು
ಬರೆಯದೇ ಉಳಿದ ಪದಗಳು
ಜೋಡಿಸಿ ಬರೆಯಲೇ ನಾಕು ಸಾಲು
ವರ್ಣಿಸಿ ಗೆಜ್ಜೆ ಧರಿಸಿದ ನಿನ್ನ ಕಾಲು 

ಬರೆದು ಬಿಟ್ಟ ಕವಿತೆ ಇದು..
ಹೇಗೆ ನಿಡಲಿ ನಿನಗೆ!!
ಎಲ್ಲಿ ಮರೆಯಾಗಿದ್ದಿ ಹುಡುಗಿ ನನ್ನ ಬಿಟ್ಟು..
ನನ್ನೀ ಕವಿತೆಗಳ ಬಿಟ್ಟು!!

ಕಾಡೋ ಚಳಿಗೂ ಅರೆಪಾವು
ಹೆಚ್ಚು ಕಾಡುವ ನಿನ್ನ ನೆನಪುಗಳಿಗೆ
ರೂಪ ನೀಡಿ ಬರೆಯುತ್ತಿದ್ದೆನೆ ಈ ಕವಿತೆಗಳನ್ನು...

                                                                      -ಮಂಜುನಾಥ್
close